ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಬಾಸ್ಮತಿ ಅಕ್ಕಿ ಆಮದು ಪುನರಾರಂಭಿಸಲಿದೆ ಇರಾನ್

|
Google Oneindia Kannada News

ನವದೆಹಲಿ, ಫೆಬ್ರವರಿ 4: ಇರಾನ್ ಸದ್ಯದಲ್ಲೇ ಭಾರತದ ಬಾಸ್ಮತಿ ಅಕ್ಕಿ ಆಮದಿನ ಮೇಲಿನ ನಿರ್ಬಂಧವನ್ನು ತೆರವುಗೊಳಿಸುವ ಅಧಿಸೂಚನೆ ಹೊರಡಿಸುವ ಸಾಧ್ಯತೆಗಳಿವೆ. ಭಾರತದಿಂದ ಇಪ್ಪತ್ತು ಸದಸ್ಯರ ವಾಣಿಜ್ಯ ನಿಯೋಗವೊಂದು ಕಳೆದ ತಿಂಗಳು ಇರಾನ್ ಗೆ ಭೇಟಿ ನೀಡಿತ್ತು.

"ಇರಾನ್ ಸರಕಾರ ಸದ್ಯದಲ್ಲೇ ಅಕ್ಕಿ ಆಮದು ಪುನರಾರಂಭಿಸಲು ಅನುಮತಿ ನೀಡುವ ಅಧಿಸೂಚನೆ ಹೊರಡಿಸಲಿದೆ" ಎಂದು ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಭಾರತದಿಂದ ತೆರಳಿದ್ದ ನಿಯೋಗವು ಇರಾನ್ ಸರಕಾರದ ವಿವಿಧ ಇಲಾಖೆಗಳನ್ನು ಭೇಟಿ ಮಾಡಿತ್ತು. ಜತೆಗೆ ಇರಾನ್ ನ ಅಕ್ಕಿ ಆಮದು ಒಕ್ಕೂಟವನ್ನು ಸಹ ಭೇಟಿ ಮಾಡಿತ್ತು.[ಪಾಕಿಸ್ತಾನ ಸೇರಿದಂತೆ 5 ದೇಶಗಳ ಪ್ರಜೆಗಳಿಗೆ ಕುವೈತ್ ಪ್ರವೇಶವಿಲ್ಲ]

Iran map

ಭಾರತದ ಅಕ್ಕಿಯಿಂದ ಆರೋಗ್ಯಕ್ಕೆ ತೊಂದರೆ ಆಗುತ್ತದೆ ಎಂದು ಆ ದೇಶದ ಕೆಲ ಭಾಗಗಳಲ್ಲಿ ಮಾಧ್ಯಮಗಳಲ್ಲಿ ಆದ ವರದಿಯಿಂದ ಗೊಂದಲ ಏರ್ಪಟ್ಟಿತ್ತು. ನಿಯೋಗದ ಭೇಟಿಯಿಂದ ಅದು ದೂರವಾಗಿದೆ ಎಂದು ಸಚಿವಾಲಯವು ತಿಳಿಸಿದೆ. ಇಆರ್ನ್ ನ ವಾರ್ಷಿಕ ಅಕ್ಕಿ ಅಗತ್ಯ ಎರಡು ಮಿಲಿಯನ್ ಮೆಟ್ರಿಕ್ ಟನ್. ಆ ಪೈಕಿ ಒಂದು ಮಿಲಿಯನ್ ಮೆಟ್ರಿಕ್ ಟನ್ ಪ್ರತಿ ವರ್ಷ ಆಮದು ಮಾಡಿಕೊಳ್ಳುತ್ತದೆ.

ಅದರಲ್ಲಿ ಭಾರತ ಏಳು ಲಕ್ಷ ಮೆಟ್ರಿಕ್ ಟನ್ ರಫ್ತು ಮಾಡುತ್ತದೆ. ಇತ್ತೀಚಿನ ವರ್ಷಗಳಲ್ಲಿ ಭಾರತದ ಬಾಸ್ಮತಿ ಅಕ್ಕಿ ಅತಿ ಹೆಚ್ಚು ಆಮದು ಮಾಡಿಕೊಳ್ಳುವ ದೇಶಗಳಲ್ಲಿ ಇರಾನ್ ಕೂಡ ಒಂದು. ಕಳೆದ ಆರ್ಥಿಕ ವರ್ಷದಲ್ಲಿ ಇರಾನ್ ಅಮದು ಮಾಡಿಕೊಳ್ಳುವ ಬಾಸ್ಮತಿ ಅಕ್ಕಿಯ ಪ್ರಮಾಣ ಅರ್ಧದಷ್ಟಾಗಿತ್ತು. ಅಂದರೆ 1.1 ಬಿಲಿಯನ್ ಅಮೆರಿಕನ್ ಡಾಲರ್ ನಿಂದ 571 ಮಿಲಿಯನ್ ಅಮೆರಿಕನ್ ಡಾಲರ್ ಗೆ ಇಳಿದಿತ್ತು.[ಟ್ರಂಪ್ ಎಚ್ಚರಿಕೆಗೆ ಕ್ಯಾರೇ ಅನ್ನದೆ ಇರಾನ್ ನಿಂದ ಕ್ಷಿಪಣಿ ಪರೀಕ್ಷೆ]

ಇನ್ನು ಈ ಆರ್ಥಿಕ ವರ್ಷದ ಅರ್ಧ ಭಾಗದ ಲೆಕ್ಕಾಚಾರ ಹೇಳುವುದಾದರೆ ಭಾರತದಿಂದ ಇರಾನ್ 356 ಮಿಲಿಯನ್ ಅಮೆರಿಕನ್ ಡಾಲರ್ ನಷ್ಟು ಬಾಸ್ಮತಿ ಅಕ್ಕಿ ಆಮದು ಮಾಡಿಕೊಂಡಿದೆ.

English summary
Iran may soon issue notification to resume Basmati rice imports from India after a 20 member trade delegation visited the country last month.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X