ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇರಾನ್ ಮಹ್ಸಾ ಅಮಿನಿಯ ಸಾವು ಪ್ರಕರಣ: ಕೂದಲು ಕತ್ತರಿಸಿ ಹಿಜಾಬ್ ಸುಟ್ಟ ಪ್ರತಿಭಟನಾನಿರತ ಮಹಿಳೆಯರು

|
Google Oneindia Kannada News

ಟೆಹ್ರಾನ್ [ಇರಾನ್] ಸೆಪ್ಟೆಂಬರ್ 19: ಇರಾನ್ನ 22 ವರ್ಷದ ಮಹಿಳೆ ಮಹ್ಸಾ ಅಮಿನಿಯ ಹಿಜಾಬ್ ಧರಿಸದೆ ಬಂಧನಕ್ಕೊಳಗಾಗಿ ಸಾವನ್ನಪ್ಪಿದ ಬಳಿಕ ಇರಾನ್‌ನಲ್ಲಿ ಪ್ರತಿಭಟನೆಗಳು ಭುಗಿಲೆದ್ದಿವೆ. ಅಮಿನಿಯ ಕುಟುಂಬಸ್ಥರು ಘಟನೆಯನ್ನು ಖಂಡಿಸಿದ್ದು, ಮಹಿಳೆಯೊಬ್ಬಳು ತಮ್ಮ ಕೂದಲನ್ನು ಕತ್ತರಿಸಿ, ಹಿಜಾಬ್‌ ಅನ್ನು ಸುಟ್ಟು ಹಾಕಿ ಘಟನೆ ವಿರುದ್ಧ ಪ್ರತಿಭಟಿಸಿದ್ದಾರೆ. ಕಡ್ಡಾಯ ಮುಸುಕಿನ ವಿರುದ್ಧ ಪ್ರತಿಭಟಿಸಲು ಮಹಿಳೆಯರು ಹಿಜಾಬ್‌ಗಳನ್ನು ಸುಟ್ಟರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಇರಾನಿನ ಪತ್ರಕರ್ತೆ ಮತ್ತು ಕಾರ್ಯಕರ್ತೆ ಮಸಿಹ್ ಅಲಿನೆಜಾದ್ ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಮಹಿಳೆಯರು ತಮ್ಮ ಕೂದಲನ್ನು ಕತ್ತರಿಸುವ ವಿಡಿಯೊವನ್ನು ಹಂಚಿಕೊಂಡಿದ್ದಾರೆ. "ಹಿಜಾಬ್ ಪೊಲೀಸರಿಂದ ಮಹ್ಸಾ ಅಮಿನಿಯ ಹತ್ಯೆಯನ್ನು ವಿರೋಧಿಸಲು ಇರಾನಿಯನ್ ಮಹಿಳೆಯರು ತಮ್ಮ ಕೂದಲನ್ನು ಕತ್ತರಿಸುವ ಮೂಲಕ ಮತ್ತು ಹಿಜಾಬ್ ಅನ್ನು ಸುಡುವ ಮೂಲಕ ತಮ್ಮ ಕೋಪವನ್ನು ತೋರಿಸಿದ್ದಾರೆ" ಎಂದು ಬರೆದಿದ್ದಾರೆ.

"7 ವರ್ಷದಿಂದ ನಾವು ನಮ್ಮ ಕೂದಲನ್ನು ಮುಚ್ಚಿಕೊಳ್ಳದಿದ್ದರೆ ನಾವು ಶಾಲೆಗೆ ಹೋಗಲು ಅಥವಾ ಉದ್ಯೋಗ ಪಡೆಯಲು ಸಾಧ್ಯವಾಗುವುದಿಲ್ಲ. ಈ ಲಿಂಗ ವರ್ಣಭೇದ ನೀತಿಯಿಂದ ನಾವು ಬೇಸರಗೊಂಡಿದ್ದೇವೆ ಎಂದು ಮಹಿಳೆಯರು ಪ್ರತಿಭಟನೆ ಮಾಡಿದ್ದಾರೆ'' ಎಂದು ಅವರು ಬರೆದಿದ್ದಾರೆ. u

ಪ್ರತಿಭಟನಾಕಾರರ ಮೇಲೆ ಗುಂಡು

ಪ್ರತಿಭಟನಾಕಾರರ ಮೇಲೆ ಗುಂಡು

ಮತ್ತೊಂದು ಟ್ವೀಟ್‌ನಲ್ಲಿ, ಇರಾನ್ ಪತ್ರಕರ್ತರೊಬ್ಬರು ಟೆಹ್ರಾನ್ ವಿಶ್ವವಿದ್ಯಾನಿಲಯದ ದೃಶ್ಯಗಳನ್ನು ಹಂಚಿಕೊಂಡಿದ್ದಾರೆ. ಇನ್ನೂ ಪೊಲೀಸರು ಮಹ್ಸಾ ಅಮಿನಿಯ ಹತ್ಯೆಯ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಸೇರಿಕೊಂಡರು ಎಂದು ಹೇಳಿದರು. ಇರಾನಿಯನ್ನರು ಆಕ್ರೋಶಗೊಂಡಿದ್ದಾರೆ ಎಂದು ಅವರು ಬರೆದಿದ್ದಾರೆ. "ನಿನ್ನೆ ಭದ್ರತಾ ಪಡೆಗಳು ಸಘೇಜ್ ನಗರದಲ್ಲಿ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದವು" ಎಂದು ಅಲಿನೆಜಾದ್ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಸರಣಿ ಟ್ವೀಟ್‌ಗಳಲ್ಲಿ, ಅಲಿನೆಜಾದ್ ತನ್ನ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ಮತ್ತೊಂದು ವಿಡಿಯೊವನ್ನು ಹಂಚಿಕೊಂಡಿದ್ದಾರೆ. "ಧೈರ್ಯಶಾಲಿ ಮಹಿಳೆಯರು" ಎರಡನೇ ದಿನದಲ್ಲಿ ಬೀದಿಗಿಳಿದು "ಭಯಪಡಬೇಡಿ, ನಾವೆಲ್ಲರೂ ಒಗ್ಗಟ್ಟಿನಿಂದ ಇದ್ದೇವೆ" ಎಂದು ಘೋಷಣೆ ಮಾಡಿದರು. ಈ ವೇಳೆ ಭದ್ರತಾ ಪಡೆಗಳು ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದ್ದು ಅವರಲ್ಲಿ ಕೆಲವರನ್ನು ಗಾಯಗೊಂಡಿದ್ದಾರೆ.

ಮಹ್ಸಾ ಅಮಿನಿಯ ಸಾವು

ಮಹ್ಸಾ ಅಮಿನಿಯ ಸಾವು

ಅಲ್ ಜಜೀರಾ ಪ್ರಕಾರ, ಹಿಜಾಬ್ ಧರಿಸಿಲ್ಲವೆಂದು ನೈತಿಕ ಪೊಲೀಸ್ ಘಟಕದಿಂದ ಬಂಧನಕ್ಕೊಳಗಾಗಿದ್ದ 22 ವರ್ಷದ ಯುವತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾಳೆ. ತೆಹ್ರಾನ್‌ನಲ್ಲಿ ಬಂಧಿಸಲ್ಪಟ್ಟ ನಂತರ ಕೋಮಾಕ್ಕೆ ಜಾರಿದ್ದ ಇರಾನ್ ನ ಮಹ್ಸಾ ಅಮಿನಿ ಸಾವನ್ನಪ್ಪಿದ್ದಾಳೆ. ಆಕೆಯ ಅನುಮಾನಾಸ್ಪದ ಸಾವಿಗೆ ಕಾರಣರಾದವರಿಗೆ ಶಿಕ್ಷೆಯಾಗಬೇಕೆಂದು ಕುಟುಂಬಸ್ಥರು ಸೇರಿದಂತೆ ಪ್ರಗತಿಪರರು ಒತ್ತಾಯಿಸಿದ್ದಾರೆ.

ಕುಟುಂಬದೊಂದಿಗೆ ಇರಾನ್ ರಾಜಧಾನಿಗೆ ಭೇಟಿ ನೀಡಿದ್ದ ಅಮಿನಿಯನ್ನು ಇಸ್ಲಾಮಿಕ್ ಗಣರಾಜ್ಯದ ಮಹಿಳೆಯರಿಗೆ ಕಟ್ಟುನಿಟ್ಟಾದ ಡ್ರೆಸ್ ಕೋಡ್ ಅನ್ನು ಜಾರಿಗೊಳಿಸುವ ನೈತಿಕ ಪೊಲೀಸ್ ಘಟಕವು ಮಂಗಳವಾರ ಬಂಧಿಸಿತು. ಇನ್ನು ಇರಾನ್ ನಲ್ಲಿ ಸಾರ್ವಜನಿಕವಾಗಿ ಹಿಜಾಬ್ ಧರಿಸುವುದು ಕಡ್ಡಾಯವಾಗಿದೆ.

ಕುಟುಂಬಸ್ಥರ ಕೊಲೆ ಆರೋಪ

ಕುಟುಂಬಸ್ಥರ ಕೊಲೆ ಆರೋಪ

ಬಂಧನಕ್ಕೊಳಗಾಗಿದ್ದ ಯುವತಿ ದುರದೃಷ್ಟವಶಾತ್ ಮೃತಪಟ್ಟಿದ್ದು ಆಕೆಯ ದೇಹವನ್ನು ವೈದ್ಯಕೀಯ ಪರೀಕ್ಷಕರ ಕಛೇರಿಗೆ ವರ್ಗಾಯಿಸಲಾಯಿತು ಎಂದು ಇರಾನಿನ ರಾಜ್ಯ ದೂರದರ್ಶನ ವರದಿ ಮಾಡಿದೆ. ಪರ್ಷಿಯನ್ ಭಾಷೆಯ ಮಾಧ್ಯಮಗಳು, ಇರಾನ್ ವೈರ್ ವೆಬ್‌ಸೈಟ್ ಮತ್ತು ಶಾರ್ಗ್ ಪತ್ರಿಕೆ ಸೇರಿದಂತೆ ಆಕೆಯ ಕುಟುಂಬವನ್ನು ಉಲ್ಲೇಖಿಸಿ ಈ ಹಿಂದೆ ಆರೋಗ್ಯವಾಗಿದ್ದ ಅಮಿನಿ ಅವರನ್ನು ಬಂಧಿಸಿದ ಕೆಲವೇ ಗಂಟೆಗಳ ನಂತರ ಕೋಮಾಗೆ ಜಾರಿದ್ದು ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಆಕೆ ಮೃತಪಟ್ಟಿದ್ದಾಳೆ. ಕುಟುಂಬಸ್ಥರು ಕೊಲೆ ಆರೋಪ ಮಾಡಿದ್ದಾರೆ.

ಆರೋಗ್ಯವಾಗಿದ್ದ ಮಹಿಳೆಗೆ ಬಂಧನದ ಬಳಿಕ ಅನಾರೋಗ್ಯ

ಆರೋಗ್ಯವಾಗಿದ್ದ ಮಹಿಳೆಗೆ ಬಂಧನದ ಬಳಿಕ ಅನಾರೋಗ್ಯ

ಆಕೆ ಪೊಲೀಸ್ ಠಾಣೆಗೆ ಆಗಮಿಸುವ ಮತ್ತು ಆಸ್ಪತ್ರೆಗೆ ತೆರಳುವ ನಡುವೆ ಏನಾಯಿತು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಇರಾನ್‌ನಲ್ಲಿನ ಉಲ್ಲಂಘನೆಗಳನ್ನು ಮೇಲ್ವಿಚಾರಣೆ ಮಾಡುವ 1500ಟವ್‌ಸಿರ್ ಚಾನೆಲ್ ಆಕೆಯ ತಲೆಗೆ ಪೆಟ್ಟು ಬಿದ್ದಿದೆ ಎಂದು ಹೇಳಿದೆ. 22 ವರ್ಷದ ಯುವತಿ ಮಹ್ಸಾ ಅಮಿನಿಯ ಕಸ್ಟಡಿಯಲ್ಲಿ ಅನುಮಾನಾಸ್ಪದ ಸಾವಿಗೆ ಕಾರಣವಾದ ಸಂದರ್ಭಗಳು, ಕಸ್ಟಡಿಯಲ್ಲಿ ಚಿತ್ರಹಿಂಸೆ ಮತ್ತು ಇತರ ಕೆಟ್ಟ ವರ್ತನೆಯ ಆರೋಪಗಳನ್ನು ಒಳಗೊಂಡಿದ್ದು ಕ್ರಿಮಿನಲ್ ತನಿಖೆಯಾಗಬೇಕು ಎಂದು ಅಮ್ನೆಸ್ಟಿ ಇಂಟರ್‌ನ್ಯಾಶನಲ್ ಹೇಳಿದೆ.

English summary
Iran Mahsa Amini death case: Iranian women protest by cutting hair, burning hijab.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X