ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಾಳಿ ಮಾಡಿದರೆ ತಕ್ಕ ತಿರುಗೇಟು, ಅಮೆರಿಕಕ್ಕೆ ಇರಾನ್ ಖಡಕ್ ವಾರ್ನಿಂಗ್

|
Google Oneindia Kannada News

ದುಬೈ, ಜೂನ್ 22 : ತಮ್ಮ ಮೇಲೆ ಅಮೆರಿಕ ದಾಳಿ ಮಾಡಿದರೆ ನಾವು ತಕ್ಕ ತಿರುಗೇಟು ನೀಡಬೇಕಾಗುತ್ತದೆ ಎಂದು ಇರಾನ್ ಅಮೆರಿಕಕ್ಕೆ ಶನಿವಾರ ಪ್ರತಿಎಚ್ಚರಿಕೆ ನೀಡಿದೆ. ಅಮೆರಿಕದ ಡ್ರೋಣ್ ಅನ್ನು ಇಸ್ಲಾಮಿಕ್ ರಾಷ್ಟ್ರ ಹೊಡೆದುರುಳಿಸಿದ ಮೇಲೆ ಎರಡೂ ರಾಷ್ಟ್ರಗಳ ನಡುವೆ ಯುದ್ಧಸ್ಥಿತಿ ನಿರ್ಮಾಣವಾಗಿದೆ.

ತಮ್ಮ ಪರಿಧಿಯೊಳಗೆ ಅತಿಕ್ರಮಿಸಿದೆಯೆಂದು ಅಮೆರಿಕದ ಗ್ಲೋಬರ್ ಹಾಕ್ ಸರ್ವೇಲನ್ಸ್ ಡ್ರೋಣ್ ಅನ್ನು ಇರಾನ್ ನ ಮಿಸೈಲ್ ಹೊಡೆದುರುಳಿಸಿತ್ತು. ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಅಮೆರಿಕ, ತಮ್ಮ ಡ್ರೋಣ್ ಅಂತಾರಾಷ್ಟ್ರೀಯ ವಾಯುಪ್ರದೇಶದೊಳಗೆ ಹಾರಿಸಿರುವುದಾಗಿ ಅಮೆರಿಕ ಪ್ರತಿಕ್ರಿಯೆ ನೀಡಿತ್ತು.

ಇರಾನ್-ಇರಾಕ್ ಗಡಿಯಲ್ಲಿ ಭಾರಿ ಭೂಕಂಪ: 400ಕ್ಕೂ ಹೆಚ್ಚು ಜನರಿಗೆ ಗಾಯ ಇರಾನ್-ಇರಾಕ್ ಗಡಿಯಲ್ಲಿ ಭಾರಿ ಭೂಕಂಪ: 400ಕ್ಕೂ ಹೆಚ್ಚು ಜನರಿಗೆ ಗಾಯ

ಇರಾನ್ ಮಾಡಿದ ದಾಳಿಗೆ ಪ್ರತಿಯಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ಮೇಲೆ ಯುದ್ಧ ಸಾರುವ ಹುನ್ನಾರದಲ್ಲಿದ್ದರು. ಒಂದು ವೇಳೆ ದಾಳಿ ಮಾಡಿದ್ದರೆ ಕನಿಷ್ಠ 150 ಜನ ಸಾಯುವ ಆತಂಕವಿದ್ದಿದ್ದರಿಂದ, ದಾಳಿಗೆ ನಿಗದಿಪಡಿಸಿದ ಸಮಯಕ್ಕೆ 10 ನಿಮಿಷ ಮುನ್ನ ದಾಳಿಯ ನಿರ್ಧಾರವನ್ನು ಹಿಂಪಡೆದಿದ್ದರು.

Iran gives stern warning to America if it attacks

ತಾವು ಈ ಕುರಿತು ಟೆಹರಾನ್ ಜೊತೆ ಮಾತುಕತೆ ನಡೆಸಲು ಸಿದ್ಧವಿರುವುದಾಗಿಯೂ ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡಿದ್ದರು. ಅಲ್ಲದೆ, ಇರಾನ್ ಮೇಲೆ ಯುದ್ಧ ಸಾರುವ ಹಪಹಪಿ ತಮಗೇನಿಲ್ಲ ಎಂದು ಹೇಳಿಕೆ ಅವರು ನೀಡಿದ್ದರು, ವಾಷಿಂಗ್ಟನ್ ಮತ್ತು ಟೆಹರಾನ್ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಲೇ ಇದೆ. ತಮಗೂ ಯುದ್ಧ ಬೇಕಾಗಿಲ್ಲ, ಆದರೆ, ದಾಳಿ ಮಾಡಿದರೆ ಹೊಸಕಿ ಹಾಕುತ್ತೇವೆ ಎಂದು ಇರಾನ್ ತಿರುಗೇಟು ನೀಡಿದೆ.

ಇರಾಕ್ ನ ಟೈಗ್ರಿಸ್ ನದಿಯಲ್ಲಿ ದೋಣಿ ದುರಂತ; ಕನಿಷ್ಠ 100 ಮಂದಿ ಸಾವು ಇರಾಕ್ ನ ಟೈಗ್ರಿಸ್ ನದಿಯಲ್ಲಿ ದೋಣಿ ದುರಂತ; ಕನಿಷ್ಠ 100 ಮಂದಿ ಸಾವು

"ಅಮೆರಿಕದ ಅಧಿಕಾರಿಗಳು ಏನೇ ನಿರ್ಧಾರ ತೆಗೆದುಕೊಳ್ಳಲಿ, ಇರಾನ್ ಪರಿಧಿಯೊಳಗೆ ಯಾರೇ ಅತಿಕ್ರಮಿಸಿದರೂ ಅವರನ್ನು ನಾವು ಬಿಡುವುದಿಲ್ಲ. ಅಮೆರಿಕದ ಯಾವುದೇ ಬೆದರಿಕೆ ಅಥವಾ ದಾಳಿಯನ್ನು ಎದುರಿಸಲು ಇರಾನ್ ಸಮರ್ಥವಾಗಿದೆ" ಎಂದು ಇರಾನ್ ನ ವಿದೇಶಾಂಗ ಸಚಿವಾಲಯದ ವಕ್ತಾರ ಅಬ್ಬಾಸ್ ಮೌಸವಿ ಅವರು ತಸ್ನಿಮ್ ಸುದ್ದಿ ವಾಹಿನಿಗೆ ತಿಳಿಸಿದ್ದಾರೆ.

ಇರಾನ್ ನ ಶತ್ರು ರಾಷ್ಟ್ರವಾದ ಅಮೆರಿಕವಾಗಲಿ, ಅದರ ಮಿತ್ರರಾಷ್ಟ್ರ(ಸೌದಿ ಅರೇಬಿಯಾ)ಗಳಾಗಲಿ ನಮ್ಮ ಮೇಲೆ ದಾಳಿ ನಡೆಸುವ ತಪ್ಪು ಎಸಗಿದರೆ, ಅದು ಗಂಧಕದ ಪುಡಿ ತುಂಬಿದ ಪೆಟ್ಟಿಗೆಯ ಮೇಲೆ ಗುಂಡು ಹಾರಿಸಿದಂತೆ, ಅದು ಅಮೆರಿಕವನ್ನೇ ಸುಟ್ಟುಹಾಕುತ್ತದೆ ಎಂದು ಇರಾನ್ ನ ಸೈನ್ಯದ ಹಿರಿಯ ವಕ್ತಾರ ಅಬೋಲ್ ಫಜಲ್ ಶೇಕಾರ್ಚಿ ಅವರು ಅಮೆರಿಕಕ್ಕೆ ಎಚ್ಚರಿಕೆ ನೀಡಿದ್ದಾರೆ.

English summary
Iran has gived stern warning to America, saying it is ready to give befitting reply if Washington attacks Tehran. US president Donald Trump was preparing to wage war on Iran for downing drone belonging to America military.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X