ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ರಂಪ್ ಸಲಹೆಗೂ ಮಣಿಯದ ಇರಾನ್, ಕುಸ್ತಿಪಟುವಿಗೆ ಗಲ್ಲು ಶಿಕ್ಷೆ

|
Google Oneindia Kannada News

ಟೆಹರಾನ್, ಸೆ. 13: ಸರ್ಕಾರದ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು, ವ್ಯಕ್ತಿಯೊಬ್ಬನನ್ನು ಹತ್ಯೆಗೈದ ಆರೋಪದ ಮೇಲೆ 27 ವರ್ಷ ವಯಸ್ಸಿನ ಅಂತಾರಾಷ್ಟ್ರೀಯ ಕುಸ್ತಿಪಟು ನವೀದ್ ಅಫ್ಕಾರಿಯನ್ನು ಗಲ್ಲಿಗೇರಿಸಲಾಗಿದೆ ಎಂದು ಹಸನ್ ರೊಹಾನಿ ನೇತೃತ್ವದ ಇರಾನ್ ಸರ್ಕಾರ ಅಧಿಕೃತವಾಗಿ ಪ್ರಕಟಣೆ ಹೊರಡಿಸಿದೆ. ಕುಸ್ತಿಪಟುವಿಗೆ ಗಲ್ಲು ಶಿಕ್ಷೆ ನೀಡದಂತೆ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ್ದ ಸಲಹೆಯನ್ನು ಪಕ್ಕಕ್ಕೆ ಸರಿಸಿ, ತನ್ನ ಕಾನೂನಿನಂತೆ ನಡೆದುಕೊಂಡಿದೆ.

ಶಿರಾಜ್ ಜೈಲಿನಲ್ಲಿದ್ದ ನವೀದ್ ಅಫ್ಕಾರಿಯನ್ನು ಅದೇ ಜೈಲಿನಲ್ಲಿ ಗಲ್ಲಿಗೇರಿಸಲಾಗಿದೆ. 2018ರಲ್ಲಿ ಶಿರಾಝ್ ಪ್ರದೇಶದಲ್ಲಿ ನಡೆದ ಸರ್ಕಾರಿ ವಿರೋಧಿ ಪ್ರತಿಭಟನೆ ವೇಳೆ ಭದ್ರತಾ ಸಿಬ್ಬಂದಿಯನ್ನು ಹತ್ಯೆಗೈದ ಆರೋಪವನ್ನು ನವೀದ್ ಒಪ್ಪಿಕೊಂಡಿದ್ದಾನೆ, ಅಫ್ಕಾರಿ ಸೋದರ ವಹೀದ್(54) ಹಾಗೂ ಅಫ್ಕಾರಿ(27)ರನ್ನು ನೇಣಿಗೇರಿಸಲಾಗಿದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

Navid Afkari: Iran executes young wrestler

ಭಾರಿ ವಿರೋಧ ವ್ಯಕ್ತವಾಗಿತ್ತು
ಸುಮಾರು 85,000 ಅಥ್ಲೀಟ್ ಗಳುಳ್ಳ ಯೂನಿಯನ್ ನಿಂದ ಕುಸ್ತಿಪಟು ನವೀದ್ ಗಲ್ಲಿಗೇರಿಸುವುದಕ್ಕೆ ವಿರೋಧ ವ್ಯಕ್ತವಾಗಿತ್ತು. ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡಾ ಕ್ಷಮಾದಾನದ ಆಲೋಚಿಸುವುದು ಒಳ್ಳೆಯದು ಎಂದಿದ್ದರು. ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ(ಐಒಸಿ) ಕೂಡಾ ಇದು ಅತ್ಯಂತ ದುಃಖಕರ ಸಂಗತಿ ಎಂದಿದೆ.

ಭದ್ರತಾ ಸಿಬ್ಬಂದಿಯನ್ನು ಅಫ್ಕಾರಿ ಸೋದರರೇ ಕೊಂದರು ಎಂಬುದಕ್ಕೆ ಯಾವುದೇ ವಿಡಿಯೋ ಸಾಕ್ಷ್ಯವಿಲ್ಲ. ಅಫ್ಕಾರಿ ಕೊಲೆ ಮಾಡಿದ್ದಕ್ಕೆ ಸಾಕ್ಷಿ ಎನ್ನಲಾದ ವಿಡಿಯೋವನ್ನು ಘಟನೆ ನಡೆದಿದ್ದಕ್ಕೂ ಒಂದು ಗಂಟೆಗೂ ಮೊದಲು ರೆಕಾರ್ಡ್ ಮಾಡಿಕೊಳ್ಳಲಾಗಿತ್ತು. ಅಫ್ಕಾರಿಗೆ ಹಿಂಸೆ ನೀಡಿ ತಪ್ಪೊಪ್ಪಿಗೆ ಹೇಳಿಕೆ ಪಡೆದುಕೊಳ್ಳಲಾಗಿದೆ ಎಂದು ಅಫ್ಕಾರಿ ಪರ ವಕೀಲ ಹೇಳಿದ್ದಾರೆ.

English summary
Iran on Saturday executed wrestling champion Navid Afkari(27), who was convicted of stabbing to death a security guard during the anti-government protests of 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X