ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತನ್ನ ಸೈನಿಕರ ಬಿಡುಗಡೆಗಾಗಿ ಪಾಕಿಸ್ತಾನದಲ್ಲಿ ಸರ್ಜಿಕಲ್ ಸ್ಟ್ರೈಕ್ ನಡೆಸಿದ ಇರಾನ್

|
Google Oneindia Kannada News

ಇಸ್ಲಾಮಾಬಾದ್, ಫೆಬ್ರವರಿ 4: ಉಭಯ ದೇಶಗಳ ನಡುವಿನ ಗಡಿ ಭಾಗಗಳಲ್ಲಿ ಜಂಟಿ ಮಾರುಕಟ್ಟೆಗಳನ್ನು ಸ್ಥಾಪಿಸುವ ಯೋಜನೆಗಳನ್ನು ಪೂರ್ಣಗೊಳಿಸಲು ಪಾಕಿಸ್ತಾನ ಮತ್ತು ಇರಾನ್ ಒಪ್ಪಂದ ಮಾಡಿಕೊಂಡ ಮರುದಿನವೇ ಪಾಕಿಸ್ತಾನದ ಮೇಲೆ ಇರಾನ್ ಸೇನೆ ಸರ್ಜಿಕಲ್ ಸ್ಟ್ರೈಕ್ ನಡೆಸಿದೆ.

ಪಾಕಿಸ್ತಾನದ ಭೂಪ್ರದೇಶದೊಳಗೆ ಅಪಹರಣಕ್ಕೆ ಒಳಗಾಗಿದ್ದ ತನ್ನ ಇಬ್ಬರು ಸೈನಿಕರನ್ನು ಬಂಧ ಮುಕ್ತಗೊಳಿಸಿರುವುದಾಗಿ ಇರಾನ್‌ನ ಎಲೈಟ್ ರೆವಲ್ಯೂಷನ್ ಗಾರ್ಡ್ಸ್ (ಐಆರ್‌ಜಿಸಿ) ಬುಧವಾರ ತಿಳಿಸಿದೆ.

'ಇದು ಟ್ರೇಲರ್ ಅಷ್ಟೇ': ದೆಹಲಿ ಸ್ಫೋಟ ನಡೆದ ಸ್ಥಳದಲ್ಲಿ ಸಿಕ್ಕ ಕಾಗದದಲ್ಲಿ ಎಚ್ಚರಿಕೆ'ಇದು ಟ್ರೇಲರ್ ಅಷ್ಟೇ': ದೆಹಲಿ ಸ್ಫೋಟ ನಡೆದ ಸ್ಥಳದಲ್ಲಿ ಸಿಕ್ಕ ಕಾಗದದಲ್ಲಿ ಎಚ್ಚರಿಕೆ

'ಜೈಶ್ ಉಲ್ ಅದ್ಲ್ ಸಂಘಟನೆಯು ಎರಡೂವರೆ ವರ್ಷಗಳ ಹಿಂದೆ ಅಪಹರಿಸಿ ಒತ್ತೆಯಾಳಾಗಿ ಇರಿಸಿಕೊಂಡಿದ್ದ ನಮ್ಮ ಇಬ್ಬರು ಗಡಿ ಕಾವಲು ಸೈನಿಕರನ್ನು ಮಂಗಳವಾರ ರಾತ್ರಿ ನಡೆಸಿದ ಯಶಸ್ವಿ ಕಾರ್ಯಾಚರಣೆಯಲ್ಲಿ ರಕ್ಷಿಸಲಾಗಿದೆ' ಎಂದು ಐಆರ್‌ಜಿಸಿ ಹೇಳಿಕೆ ನೀಡಿದೆ.

ಸೊಲೆಮನಿ ಹತ್ಯೆಗೆ ಡೊನಾಲ್ಡ್ ಟ್ರಂಪ್ ವಿರುದ್ಧ ಪ್ರತೀಕಾರ: ಇರಾನ್ ಎಚ್ಚರಿಕೆಸೊಲೆಮನಿ ಹತ್ಯೆಗೆ ಡೊನಾಲ್ಡ್ ಟ್ರಂಪ್ ವಿರುದ್ಧ ಪ್ರತೀಕಾರ: ಇರಾನ್ ಎಚ್ಚರಿಕೆ

ಇರಾನ್ ನಡೆಸಿದ ಈ ದಾಳಿಯಲ್ಲಿ ಪಾಕಿಸ್ತಾನ ಸೇನೆಯೂ ಸೇರಿಕೊಂಡಿತ್ತೇ ಅಥವಾ ಪಾಕ್ ಸೇನೆಗೆ ತಿಳಿಯದಂತೆ ಈ ದಾಳಿ ನಡೆಸಲಾಗಿದೆಯೇ ಎನ್ನುವುದು ಗೊತ್ತಾಗಿಲ್ಲ. ಬಲೂಚ್ ಪ್ರಾಂತ್ಯದಲ್ಲಿ ಈ ದಾಳಿ ನಡೆದಿದೆ ಎನ್ನಲಾಗಿದ್ದು, ಸಾವು ನೋವಿನ ಬಗ್ಗೆ ಸ್ಪಷ್ಟ ಮಾಹಿತಿ ಹೊರಬಂದಿಲ್ಲ. ಮುಂದೆ ಓದಿ.

12 ಸೈನಿಕರ ಅಪಹರಣ

12 ಸೈನಿಕರ ಅಪಹರಣ

2018ರ ಅಕ್ಟೋಬರ್ 16ರಂದು ಜೈಶ್ ಉಲ್ ಅದ್ಲ್ ಭಯೋತ್ಪಾದನಾ ಸಂಘಟನೆಯು ಸಿಸ್ತಾನ್‌ನ ಮೆರ್ಕಾವಾ ನಗರ ಮತ್ತು ಬಲೂಚಿಸ್ತಾನ್ ಪ್ರಾಂತ್ಯದಲ್ಲಿನ ಇರಾನ್ ಹಾಗೂ ಪಾಕಿಸ್ತಾನದ ನಡುವಿನ ಗಡಿಯಲ್ಲಿ ಕಾವಲು ಕಾಯುತ್ತಿದ್ದ 12 ಐಆರ್‌ಜಿಸಿ ಸೈನಿಕರನ್ನು ಅಪಹರಿಸಿ ಪಾಕ್ ನೆಲೆಯೊಳಗೆ ಸಾಗಿಸಿತ್ತು.

ಇರಾನ್-ಪಾಕ್ ಜಂಟಿ ಕಾರ್ಯಾಚರಣೆ

ಇರಾನ್-ಪಾಕ್ ಜಂಟಿ ಕಾರ್ಯಾಚರಣೆ

ಅಪಹೃತ ಸೈನಿಕರನ್ನು ಬಿಡುಗಡೆ ಮಾಡುವ ಸಂಬಂಧ ಇರಾನ್ ಮತ್ತು ಪಾಕಿಸ್ತಾನ ಸೇನಾಧಿಕಾರಿಗಳು ಜಂಟಿ ಸಮಿತಿಯೊಂದನ್ನು ರಚಿಸಿದ್ದರು. 2018ರ ನವೆಂಬರ್ 15ರಂದು ಐವರು ಸೈನಿಕರನ್ನು ಬಿಡುಗಡೆ ಮಾಡಲಾಗಿತ್ತು. 2019ರ ಮಾರ್ಚ್ 21ರಂದು ನಾಲ್ವರು ಸೈನಿಕರನ್ನು ಪಾಕಿಸ್ತಾನ ಸೇನೆ ರಕ್ಷಿಸಿತ್ತು.

ಇರಾನ್ ವಿರುದ್ಧ ಜೈಶ ಸಮರ

ಇರಾನ್ ವಿರುದ್ಧ ಜೈಶ ಸಮರ

ಜೈಶ್ ಉಲ್ ಅದ್ಲ್ ಸಂಘಟನೆಯನ್ನು ಭಯೋತ್ಪಾದನಾ ಗುಂಪು ಎಂದು ಇರಾನ್ ಘೋಷಿಸಿದೆ. ಈ ಸಂಘಟನೆ ಇರಾನ್ ಸರ್ಕಾರದ ವಿರುದ್ಧ ಸಶಸ್ತ್ರ ಕಾದಾಟ ನಡೆಸಿದೆ. ಇರಾನ್‌ನಲ್ಲಿನ ಬಲೂಚ್ ಸುನ್ನಿಗಳ ಹಕ್ಕುಗಳನ್ನು ರಕ್ಷಿಸಲು ತಾನು ಹೋರಾಡುತ್ತಿರುವುದಾಗಿ ಅದು ತಿಳಿಸಿದೆ.

ಕುಲಭೂಷಣ್ ಜಾಧವ್ ಅಪಹರಣ

ಕುಲಭೂಷಣ್ ಜಾಧವ್ ಅಪಹರಣ

ಪಾಕಿಸ್ತಾನದ ಜೈಲಿನಲ್ಲಿರುವ ಭಾರತದ ಕುಲಭೂಷಣ್ ಜಾಧವ್ ಅವರನ್ನು ಕೂಡ ಇದೇ ಸಂಘಟನೆ ಇರಾನ್‌ನಿಂದ ಅಪಹರಿಸಿ ಪಾಕಿಸ್ತಾನದ ಗುಪ್ತಚರ ಸಂಸ್ಥೆಗಳಿಗೆ ಹಣಕ್ಕಾಗಿ ಒಪ್ಪಿಸಿತ್ತು ಎನ್ನಲಾಗಿದೆ. ಕುಲಭೂಷಣ್ ಜಾಧವ್ ಅವರು ಅಕ್ರಮವಾಗಿ ಪಾಕಿಸ್ತಾನ ಪ್ರವೇಶಿಸಿ ಗೂಢಚಾರಿಕೆ ಮಾಡುತ್ತಿದ್ದರು. ಜತೆಗೆ ವಿವಿಧ ಬಾಂಬ್ ದಾಳಿ ಕೃತ್ಯಗಳಿಗೆ ಸಂಚು ರೂಪಿಸಿದ್ದರು ಎಂದು ಪಾಕಿಸ್ತಾನ ಆರೋಪಿಸಿದೆ.

English summary
Iran on Tuesday night conducted a surgical strike kind operation in Pakistan and freed its two soldiers who were kidnapped in 2018 by Jaish ul- Adl.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X