ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಬಹಾರ್ ರೈಲು ಯೋಜನೆ: ಭಾರತದೊಂದಿಗೆ ಒಪ್ಪಂದವೇ ಆಗಿರಲಿಲ್ಲ ಎಂದ ಇರಾನ್

|
Google Oneindia Kannada News

ಟೆಹ್ರಾನ್, ಜುಲೈ 16: ಭಾರತ ಹಾಗೂ ಇರಾನ್ ನಡುವೆ ಚಬಹಾರ್ ರೈಲು ಯೋಜನೆಯ ಒಪ್ಪಂದವೇ ಆಗಿರಲಿಲ್ಲ ಎಂದು ಇರಾನ್ ಸ್ಪಷ್ಟಪಡಿಸಿದೆ.

Recommended Video

ಕೊರೊನ ವಿರುದ್ಧದ ಯುದ್ಧದಲ್ಲಿ ಗೆದ್ದ Sharath Bacche Gowda | Oneindia Kannada

ಇರಾನ್ ತನ್ನ ಚಬಹಾರ್ ರೈಲು ಯೋಜನೆಯಿಂದ ಭಾರತವನ್ನು ಕೈಬಿಟ್ಟಿದೆ ಎನ್ನುವ ಸುದ್ದಿ ಇತ್ತು. ಆದರೆ ಅಂತಹ ಯಾವುದೇ ಯೋಜನೆಗೂ ಒಪ್ಪಂದ ಮಾಡಿಕೊಂಡಿರಲಿಲ್ಲ ಎಂದು ಹೇಳಿದೆ.

ಭಾರತಕ್ಕೆ ಕೈ ಕೊಟ್ಟ ಇರಾನ್: ಚೀನಾ ಜೊತೆ ಚಬಹಾರ್ ಬಂದರಿನ ರೈಲು ಯೋಜನೆ ಒಪ್ಪಂದಭಾರತಕ್ಕೆ ಕೈ ಕೊಟ್ಟ ಇರಾನ್: ಚೀನಾ ಜೊತೆ ಚಬಹಾರ್ ಬಂದರಿನ ರೈಲು ಯೋಜನೆ ಒಪ್ಪಂದ

ಇರಾನ್ ಬಂದರು ಮತ್ತು ಕಡಲು ಸಂಸ್ಥೆಯ ಹಿರಿಯ ಅಧಿಕಾರಿ ಫರ್ಹಾದ್ ಮೊಂಟಾಸೆರ್ ಮಾಹಿತಿ ನೀಡಿ, ಭಾರತದೊಂದಿಗೆ ಚಬಹಾರ್ ರೈಲು ಯೋಜನೆಯ ಕುರಿತು ಯಾವುದೇ ಒಪ್ಪಂದವಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Iran Clarifies No Deal With India On Chabahar Railway Project

ಆದರೆ ಚಬಹಾರ್-ಜಹದೇನ್ ರೈಲು ಯೋಜನೆಯ ಕುರಿತು ಎರಡೂ ರಾಷ್ಟ್ರಗಳ ನಡುವೆ ಯಾವುದೇ ಒಪ್ಪಂದ ಆಗಿಲ್ಲ ಎಂದು ಮೊಂಟಾಸೆರ್ ಸ್ಪಷ್ಟಪಡಿಸಿದ್ದು, ಈ ಹಿನ್ನೆಲೆಯಲ್ಲಿ ಯೋಜನೆಯಿಂದ ಭಾರತವನ್ನು ಕೈಬಿಡಲಾಗಿದೆ ಎಂಬುದು ಸತ್ಯಕ್ಕೆ ದೂರವಾದ ಸಂಗತಿ ಎಂದು ಹೇಳಿದ್ದಾರೆ.

ಭಾರತದ ಸಾರ್ವಜನಿಕ ವಲಯದ ರೈಲ್ವೆ ಕಂಪನಿ ಇರ್ಕಾನ್ ಇಂಟರ್ನ್ಯಾಷನಲ್ ಈ ಯೋಜನೆಗೆ 1.6 ಬಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆ ಮಾಡಲು ಸಜ್ಜಾಗಿತ್ತು ಎಂದು ಹೇಳಲಾಗುತ್ತಿದೆ.

ಚಬಹಾರ್ ಬಂದರಿಗೆ ಸಂಬಂಧಿಸಿದಂತೆ ಭಾರತದೊಂದಿಗೆ ಕೇವಲ ಎರಡು ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ. ಒಂದು ಬಂದರಿನ ಯಂತ್ರೋಪಕರಣಗಳು ಮತ್ತು ಸಲಕರಣೆಗಳಿಗೆ ಸಂಬಂಧಿಸಿದ್ದಾದರೆ, ಮತ್ತೊಂದು ಬಂದರು ಅಭಿವೃದ್ಧಿಗೆ ಭಾರತದ 150 ಮಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆ ಎಂದು ಮೊಂಟಾಸೆರ್ ಹೇಳಿದ್ದಾರೆ.

English summary
Iran has refuted an Indian newspaper report claiming that New Delhi had been "dropped" from the Chabahar-Zahedan railway project.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X