ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೊಮ್ಮೆ ದಾಳಿ ಮಾಡಿದರೆ ಪುಡಿಗಟ್ಟುತ್ತೇವೆ: ಅಮೆರಿಕಕ್ಕೆ ಇರಾನ್ ಎಚ್ಚರಿಕೆ

|
Google Oneindia Kannada News

ಟೆಹರಾನ್, ಜನವರಿ 8: ತನ್ನ ಸೇನಾಧಿಕಾರಿ ಖಾಸಿಂ ಸೋಲೆಮನಿ ಹತ್ಯೆಗೆ ಪ್ರತೀಕಾರವಾಗಿ ಇರಾಕ್‌ನಲ್ಲಿನ ಅಮೆರಿಕದ ಸೇನಾ ನೆಲೆಗಳ ಮೇಲೆ ಇರಾನ್ ಮೊದಲ ದಾಳಿ ನಡೆಸಿದೆ. ಈ ದಾಳಿಯಲ್ಲಿ ಅಮೆರಿಕದ 80 'ಉಗ್ರರು' ಮೃತಪಟ್ಟಿದ್ದಾರೆ ಎಂದು ಇರಾನ್ ಹೇಳಿಕೊಂಡಿದೆ.

ಇರಾಕ್‌ನಲ್ಲಿನ ಅಮೆರಿಕದ ಸೇನಾ ನೆಲೆಯಲ್ಲಿನ ಹೆಲಿಕಾಪ್ಟರ್‌ಗಳು ಮತ್ತು ಸೇನಾ ಸಾಮಗ್ರಿಗಳಿಗೆ ತೀವ್ರ ಹಾನಿಯಾಗಿದೆ. ಇದರಿಂದ ಅಮೆರಿಕ-ಇರಾನ್ ಯುದ್ಧದ ಕಾರ್ಮೋಡ ಮತ್ತಷ್ಟು ದಟ್ಟವಾಗಿದೆ. ಕನಿಷ್ಠ 10 ರಾಕೆಟ್‌ಗಳು ಇರಾಕ್‌ನಲ್ಲಿರುವ ಅಲ್ ಅಸಾದ್ ವಾಯುನೆಲೆಗೆ ಅಪ್ಪಳಿಸಿವೆ.

ತನಗೆ ಸಹಾಯ ಮಾಡಿದ್ದವನನ್ನೇ ಕೊಂದ ಅಮೆರಿಕ: ಯಾರಿದು ಸೋಲೆಮನಿ?ತನಗೆ ಸಹಾಯ ಮಾಡಿದ್ದವನನ್ನೇ ಕೊಂದ ಅಮೆರಿಕ: ಯಾರಿದು ಸೋಲೆಮನಿ?

ಆದರೆ ಈ ದಾಳಿಯಿಂದ ಯಾವುದೇ ಸಮಸ್ಯೆಯಾಗಿಲ್ಲ, ಆಲ್ ಈಸ್ ವೆಲ್ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡಿದ್ದಾರೆ. ಇರಾಕ್‌ನ ಎರಡು ಸೇನಾ ನೆಲೆಗಳ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದೆ. ಸಾವು ನೋವು ಮತ್ತು ಹಾನಿಗಳ ಮಾಹಿತಿಗಳನ್ನು ಸಂಗ್ರಹಿಸಲಾಗುತ್ತಿದೆ. ಇಲ್ಲಿಯವರೆಗೆ ಎಲ್ಲವೂ ಚೆನ್ನಾಗಿದೆ ಎಂದು ಟ್ರಂಪ್ ಹೇಳಿದ್ದಾರೆ.

ಸೇನೆಯನ್ನು ವಾಪಸ್ ಕರೆಸಿಕೊಳ್ಳಲಿ

ಸೇನೆಯನ್ನು ವಾಪಸ್ ಕರೆಸಿಕೊಳ್ಳಲಿ

ದಾಳಿಯ ಬೆನ್ನಲ್ಲೇ ಅಮೆರಿಕಕ್ಕೆ ಇರಾನ್ ಎಚ್ಚರಿಕೆ ನೀಡಿದೆ. ತನ್ನ ಮೇಲೆ ಇನ್ನೊಂದು ದಾಳಿ ನಡೆಸಿದರೆ ನಿಮ್ಮನ್ನು ಹೊಸಕಿಹಾಕುತ್ತೇವೆ ಎಂದು ಹೇಳಿದೆ. ಸೋಲೆಮನಿ ಹತ್ಯೆಯ ಬಳಿಕ ಡೊನಾಲ್ಡ್ ಟ್ರಂಪ್ ಅಮೆರಿಕ ಧ್ವಜವನ್ನು ಟ್ವೀಟ್ ಮಾಡಿದ್ದರು. ಈಗ ಇರಾನ್ ಮೊದಲ ದಾಳಿಯ ಬಳಿಕ ಇರಾನ್ ಅಧಿಕಾರಿಯೊಬ್ಬರು ತಮ್ಮ ದೇಶದ ಧ್ವಜವನ್ನು ಟ್ವೀಟ್ ಮಾಡಿದ್ದಾರೆ.

ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್‌ಜಿಸಿ) ಹೇಳಿಕೆ ಬಿಡುಗಡೆ ಮಾಡಿದ್ದು, 'ಐಆರ್‌ಜಿಸಿ ವಾಯುಪಡೆಯ ಧೈರ್ಯಶಾಲಿ ಸೈನಿಕರು ಹತ್ತಾರು ಖಂಡಾಂತರ ಕ್ಷಿಪಣಿಗಳ ದಾಳಿಯನ್ನು ಯಶಸ್ವಿಯಾಗಿ ನಡೆಸಿದ್ದಾರೆ. ಇನ್ನಷ್ಟು ಹಾನಿಯಾಗದಂತೆ ತಡೆಯಲು ಅಮೆರಿಕ ತನ್ನ ಸೈನಿಕರನ್ನು ವಾಪಸ್ ಕರೆದುಕೊಳ್ಳಲಿ' ಎಂದು ಸಲಹೆ ನೀಡಿದೆ.

ಪ್ರತೀಕಾರ ನಮ್ಮ ಹಕ್ಕು

ಪ್ರತೀಕಾರ ನಮ್ಮ ಹಕ್ಕು

'ಜಗತ್ತಿನ ದೊಡ್ಡ ಸೈತಾನ, ಯುದ್ಧೋನ್ಮಾದಿ ಮತ್ತು ದಾರ್ಷ್ಟ್ಯದ ಅಮೆರಿಕಕ್ಕೆ ಇದು ನಮ್ಮ ಎಚ್ಚರಿಕೆ. ನೀವು ಇನ್ನು ಒಂದು ಹೆಜ್ಜೆ ಮುಂದಿಟ್ಟರೂ ನಾವು ಮತ್ತಷ್ಟು ಕ್ರೂರವಾಗಿ ನಿಮ್ಮನ್ನು ಪುಡಿಗಟ್ಟುವಂತಹ ಪ್ರತಿಕ್ರಿಯೆ ನೀಡಬೇಕಾಗುತ್ತದೆ. ಇದು 'ಹುತಾತ್ಮ ಸೋಲೆಮನಿ ಕಾರ್ಯಾಚರಣೆ' (ಆಪರೇಷನ್ ಮಾರ್ಟೈರ್ ಸೋಲೆಮನಿ). ನಮ್ಮ ನಾಯಕರ ಹತ್ಯೆಗೆ ಸೇಡು ತೀರಿಸಿಕೊಳ್ಳುವುದು ನಮ್ಮ ಹಕ್ಕು. ಹಾಗಾಗಿ ಈ ದಾಳಿ ಮಾಡಿದ್ದೇವೆ' ಎಂದು ಹೇಳಿದೆ.

ಅಮೆರಿಕಾ-ಇರಾನ್ ಯುದ್ಧ ಸ್ಥಿತಿಗೆ ಕಾರಣವೇನು? ಇಲ್ಲಿದೆ ಪೂರ್ಣ ಮಾಹಿತಿಅಮೆರಿಕಾ-ಇರಾನ್ ಯುದ್ಧ ಸ್ಥಿತಿಗೆ ಕಾರಣವೇನು? ಇಲ್ಲಿದೆ ಪೂರ್ಣ ಮಾಹಿತಿ

ಬೇರೆ ದೇಶಗಳಿಗೂ ಎಚ್ಚರಿಕೆ

ಬೇರೆ ದೇಶಗಳಿಗೂ ಎಚ್ಚರಿಕೆ

ಅಮೆರಿಕಕ್ಕೆ ಸಹಾಯ ಮಾಡಲು ಮುಂದಾಗುವ ಯಾವುದೇ ದೇಶ ಕೂಡ ಇರಾನ್‌ನ ದಾಳಿಯನ್ನು ಎದುರಿಸಬೇಕಾಗುತ್ತದೆ ಎಂದು ಇಸ್ರೇಲ್ ಮತ್ತು ಸೌದಿ ಅರೇಬಿಯಾಗಳಿಗೂ ಅದು ಪರೋಕ್ಷ ಎಚ್ಚರಿಕೆ ನೀಡಿದೆ. ವಿಶ್ವಸಂಸ್ಥೆಯ 51ನೇ ನಿಯಮದ ಅನ್ವಯ ಇರಾನ್ ತನ್ನ ಆತ್ಮರಕ್ಷಣೆಯ ಹಕ್ಕು ಚಲಾಯಿಸಿದೆ ಎಂದು ಇರಾನ್ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಜಾವೇದ್ ಜರೀಫ್ ಹೇಳಿದ್ದಾರೆ.

ಅಮೆರಿಕ, ಜಗತ್ತಿಗೆ ಯುದ್ಧ ಬೇಕಾಗಿಲ್ಲ

ಅಮೆರಿಕ, ಜಗತ್ತಿಗೆ ಯುದ್ಧ ಬೇಕಾಗಿಲ್ಲ

ಇರಾನ್ ಜತೆಗಿನ ಸಂಘರ್ಷಕ್ಕೆ ಅಮೆರಿಕದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. 'ಇರಾಕ್‌ನಲ್ಲಿರುವ ಅಮೆರಿಕದ ನೆಲೆಗಳನ್ನು ಗುರಿಯಾಗಿರಿಸಿ ನಡೆದ ಬಾಂಬ್ ದಾಳಿಯ ಘಟನೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ನಾವು ನಮ್ಮ ಸೈನಿಕರ ಸುರಕ್ಷತೆಗೆ ಮೊದಲು ಆದ್ಯತೆ ನೀಡಬೇಕು. ನಮ್ಮ ಸರ್ಕಾರದಿಂದ ಅನಗತ್ಯವಾದ ಪ್ರಚೋದನೆ ಅಂತ್ಯವಾಗಬೇಕು. ಇರಾನ್ ತನ್ನ ಹಿಂಸಾಚಾರಕ್ಕೆ ಅಂತ್ಯ ಹಾಡಬೇಕು. ಅಮೆರಿಕ ಮತ್ತು ಜಗತ್ತು ಯುದ್ಧವನ್ನು ಸಹಿಸಿಕೊಳ್ಳಲಾರವು ಎಂದು ಅಮೆರಿಕದ ಜನಪ್ರತಿನಿಧಿ ಸಭೆಯ ಸ್ಪೀಕರ್ ನ್ಯಾನ್ಸಿ ಪೆಲೋಸಿ ಟ್ವೀಟ್ ಮಾಡಿದ್ದಾರೆ.

ಅದೇ ಸಮಯದಲ್ಲಿ ಸೇಡಿನ ದಾಳಿ

ಸ್ಥಳೀಯ ಕಾಲಮಾನ ರಾತ್ರಿ 1.20ಕ್ಕೆ ಸರಿಯಾಗಿ ದಾಳಿ ನಡೆಸಲಾಗಿದೆ. ಇದೇ ಸಮಯಕ್ಕೆ ಸೋಲೆಮನಿ ಅವರ ಬೆಂಗಾವಲು ಪಡೆಗಳ ಮೇಲೆ ಅಮೆರಿಕ ದಾಳಿ ನಡೆಸಿತ್ತು. ಇರಾಕ್‌ನಲ್ಲಿನ ನೆಲೆಗಳ ಮೇಲೆ ಬುಧವಾರ ಕ್ಷಿಪಣಿ ದಾಳಿ ನಡೆದ ಬಳಿಕ ಬಾಗ್ದಾದ್ ಮೇಲೆ ಸೇನಾ ವಿಮಾನಗಳ ಹಾರಾಟ ಹೆಚ್ಚಳವಾಗಿದೆ. ಯಾವ ದೇಶದ ಯುದ್ಧ ವಿಮಾನಗಳು ಇಲ್ಲಿ ಹಾರಾಟ ನಡೆಸುತ್ತಿವೆ ಎನ್ನುವುದು ತಿಳಿಯುತ್ತಿಲ್ಲ.

ಕಾಲ್ತುಳಿತಕ್ಕೆ 56 ಸಾವು

ಕಾಲ್ತುಳಿತಕ್ಕೆ 56 ಸಾವು

ಅಮೆರಿಕದ ವಾಯುದಾಳಿಯಲ್ಲಿ ಬಲಿಯಾದ ಇರಾನ್ ಸೇನಾಧಿಕಾರಿ ಖಾಸಿಂ ಸೋಲೆಮನಿಯ ಅಂತ್ಯಸಂಸ್ಕಾರದ ಮೆರವಣಿಗೆಯಲ್ಲಿ ಲಕ್ಷಾಂತರ ಜನರು ಭಾಗವಹಿಸಿದ್ದರು. ಈ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಕನಿಷ್ಠ 56 ಮಂದಿ ಮೃತಪಟ್ಟಿದ್ದಾರೆ. 200ಕ್ಕೂ ಅಧಿಕ ಮಂದಿಗೆ ಗಾಯಗಳಾಗಿವೆ. ಸೋಲೆಮನಿ ಅವರ ತವರು ಪಟ್ಟಣ ಕೆರ್ಮನ್‌ಗೆ ಮಂಗಳವಾರ ಮೆರವಣಿಗೆ ಮೂಲಕ ಮೃತದೇಹವನ್ನು ತರಲಾಗಿತ್ತು.

English summary
Iran has claimed that 80 US soldiers were killed in its missile attack on US military base in Iraq.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X