ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇರಾನ್ ಗೆ ಪರೋಕ್ಷವಾಗಿ ಎಚ್ಚರಿಕೆ ಸಂದೇಶ ರವಾನಿಸಿದ ಟ್ರಂಪ್

|
Google Oneindia Kannada News

ನ್ಯೂಯಾರ್ಕ್, ಜನವರಿ.08: ವಿಶ್ವದ ದೊಡ್ಡಣ್ಣನ ಎದುರಿಗೇ ಇರಾನ್ ಸೆಡ್ಡು ಹೊಡೆದು ನಿಂತಿದೆ. ಅಮೆರಿಕ ಹಾಗೂ ಇರಾನ್ ದೇಶಗಳ ನಡುವೆ ಯುದ್ಧದ ಕಾರ್ಮೋಡ ಕವಿದಿದೆ. ಇದರ ಮಧ್ಯೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡೆಸಿದ ಸುದ್ದಿಗೋಷ್ಠಿ ಪ್ರಪಂಚದ ಲಕ್ಷ್ಯವನ್ನು ಸೆಳೆದಿದೆ.

Recommended Video

Iran Launches Missiles on Iraq base housing US troops | Oneindia Kannada

ಅಮೆರಿಕಾದ ಸೇನಾ ನೆಲೆಗಳ ಮೇಲೆ ಇರಾನ್ ವಾಯುಪಡೆಗಳು ದಾಳಿ ನಡೆಸಿದ್ದವು. ಇದಾಗಿ ಕೆಲವೇ ಗಂಟೆಗಳಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರವೇ ಇರಾನ್ ದಾಳಿಗೆ ಸಂಬಂಧಿಸಿದಂತೆ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡುತ್ತೇನೆ ಎಂದು ಟ್ವೀಟ್ ಮಾಡಿದ್ದರು.

ಅಮೆರಿಕವನ್ನು ಇಲ್ಲಿಂದ ಒದ್ದೋಡಿಸುವುದೇ ಅಂತಿಮ ಗುರಿ: ಇರಾನ್ಅಮೆರಿಕವನ್ನು ಇಲ್ಲಿಂದ ಒದ್ದೋಡಿಸುವುದೇ ಅಂತಿಮ ಗುರಿ: ಇರಾನ್

ಅಮೆರಿಕದಲ್ಲಿ ಸರಿಯಾಗಿ 11 ಗಂಟೆಗೆ ಅಂದರೆ ಭಾರತದ ಕಾಲಮಾನದ ಪ್ರಕಾರ ರಾತ್ರಿ 10.30ಕ್ಕೆ ಸುದ್ದಿಗೋಷ್ಠಿ ನಡೆಸಲಾಗುತ್ತದೆ ಎಂದು ಟ್ರಂಪ್ ಟ್ವಿಟರ್ ನಲ್ಲಿ ಹೇಳಿಕೊಂಡಿದ್ದರು. ಅದರಂತೆ ನ್ಯೂಯಾರ್ಕ್ ನಲ್ಲಿ ಡೊನಾಲ್ಡ್ ಟ್ರಂಪ್ ಮಾಧ್ಯಮಗಳನ್ನು ಉದ್ದೇಶಿಸಿ ಇರಾನ್ ದಾಳಿ ಬಗ್ಗೆ ಮಾತನಾಡಿದರು.

"ಇರಾನ್ ದಾಳಿಯಲ್ಲಿ ಯಾವುದೇ ಸೈನಿಕರು ಮೃತಪಟ್ಟಿಲ್ಲ"

ಅಮೆರಿಕದ ವಾಯುನೆಲೆಗಳ ಮೇಲೆ ಇರಾನ್ ದಾಳಿ ನಡೆಸಿದ್ದು ನಿಜ. ಆದರೆ, ಇರಾನ್ ಹೇಳಿಕೊಂಡಂತೆ ಅಮೆರಿಕಾದ ಯಾವುದೇ ಯೋಧರು ಮೃತಪಟ್ಟಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ಪಷ್ಟನೆ ನೀಡಿದರು. ಅಲ್ಲದೇ, ಇರಾನ್ ನಡೆಸಿದ ದಾಳಿಯಲ್ಲಿ ಇರಾಕ್ ನ ಯೋಧರು ಕೂಡಾ ಮೃತಪಟ್ಟಿಲ್ಲ ಎಂದು ಹೇಳಿದರು.

"ಭಯೋತ್ಪಾದನೆ ಹೆಚ್ಚುವುದಕ್ಕೆ ಇರಾನ್ ದೇಶವೇ ಕಾರಣ"

ಇಂದು ಜಾಗತಿಕ ಮಟ್ಟದಲ್ಲಿ ಭಯೋತ್ಪಾದನೆ ಹೆಚ್ಚಾಗಲು ಇರಾನ್ ಪ್ರಮುಖ ಕಾರಣ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರೋಪಿಸಿದರು. ಸೇನಾ ಜನರಲ್ ಆಗಿದ್ದ ಖಾಸಿಂ ಸೊಲೈಮನ್ ಉಗ್ರರಿಗೆ ತರಬೇತಿ ನೀಡುತ್ತಿದ್ದನು. ಹೀಗಾಗಿ ಅವನನ್ನು ಅಮೆರಿಕ ಸೇನೆ ದಾಳಿ ನಡೆಸಿ ಹತ್ಯೆಗೈದಿದೆ ಎಂದು ಸ್ಪಷ್ಟನೆ ನೀಡಿದರು.

ಇರಾನ್‌ ಹಿಟ್‌ಲಿಸ್ಟ್‌ನಲ್ಲಿವೆ ಡೊನಾಲ್ಡ್‌ ಟ್ರಂಪ್ ಆಸ್ತಿಗಳು: ಉಪಾಯ ಏನು?ಇರಾನ್‌ ಹಿಟ್‌ಲಿಸ್ಟ್‌ನಲ್ಲಿವೆ ಡೊನಾಲ್ಡ್‌ ಟ್ರಂಪ್ ಆಸ್ತಿಗಳು: ಉಪಾಯ ಏನು?

"ಅಣ್ವಸ್ತ್ರ ಹೊಂದಲು ಇರಾನ್ ಗೆ ಅವಕಾಶ ನೀಡಲ್ಲ"

ಇಂದು ಇರಾನ್ ನಡೆಸಿದ ದಾಳಿಯನ್ನು ಸೂಕ್ಷ್ಮವಾಗಿ ವಿಶ್ವವೇ ಗಮನಿಸುತ್ತಿದೆ. ಹೀಗಾಗಿ ಅಣ್ವಸ್ತ್ರವನ್ನು ಹೊಂದುವ ಇರಾನ್ ಬಯಕೆ ಈಡೇರುವುದಿಲ್ಲ. ನಾನು ಅಮೆರಿಕ ಅಧ್ಯಕ್ಷನಾಗಿರುವವರೆಗೂ ಇರಾನ್ ಗೆ ಅಣ್ವಸ್ತ್ರ ಹೊಂದಲು ಬಿಡುವುದಿಲ್ಲ ಎಂದು ಡೊನಾಲ್ಡ್ ಟ್ರಂಪ್ ಹೇಳಿದರು.

ಇರಾನ್ ಗೆ ಪರೋಕ್ಷವಾಗಿ ಎಚ್ಚರಿಕೆ ಸಂದೇಶ

ಇರಾನ್ ಗೆ ಪರೋಕ್ಷವಾಗಿ ಎಚ್ಚರಿಕೆ ಸಂದೇಶ

ಅಮೆರಿಕ ಮೇಲೆ ದಾಳಿ ನಡೆಸಿದ ಇರಾನ್ ಗೆ ಟ್ರಂಪ್ ಪರೋಕ್ಷವಾಗಿ ಎಚ್ಚರಿಕೆ ನೀಡಿದರು. ಅಮೆರಿಕದ ಸೇನಾಪಡೆಯು ಮೊದಲಿಗಿಂತಲೂ ಈಗ ಬಲಿಷ್ಠವಾಗಿದೆ. ದಾಳಿಗೆ ಮುಂದಾಗುವ ಎದುರಾಳಿಯನ್ನು ಎದುರಿಸುವ ಪರಿ ನಮಗೆ ತಿಳಿದಿದೆ. ಇರಾನ್ ವಿರುದ್ಧ ಹೋರಾಟಕ್ಕೆ ಇದು ಸಕಾಲ ಎನ್ನುವ ಮೂಲಕ ಪರೋಕ್ಷವಾಗಿ ಎಚ್ಚರಿಕೆ ಸಂದೇಶವನ್ನು ಟ್ರಂಪ್ ರವಾನಿಸಿದರು.

"ಶಾಂತಿ ಸ್ಥಾಪನೆಗೆ ಅಮೆರಿಕ ಆದ್ಯತೆ ನೀಡುತ್ತದೆ"

ಇರಾನ್ ನಡೆಸಿರುವ ದಾಳಿ ಬಗ್ಗೆ ಇಡೀ ವಿಶ್ವಕ್ಕೆ ಗೊತ್ತಾಗಿದೆ. ಎಲ್ಲ ರಾಷ್ಟ್ರಗಳು ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿವೆ. ಜಾಗತಿಕ ಮಟ್ಟದಲ್ಲಿ ಇರಾನ್ ವಿರುದ್ಧದ ಹೋರಾಟಕ್ಕೆ ಎಲ್ಲ ರಾಷ್ಟ್ರಗಳು ಕೈಜೋಡಿಸಬೇಕಿದೆ ಎಂದು ಟ್ರಂಪ್ ಕರೆ ನೀಡಿದರು. ಇನ್ನು, ವಿಶ್ವದ ದೊಡ್ಡಣ್ಣ ಎನಿಸಿರುವ ಅಮೆರಿಕ ಶಾಂತಿಪ್ರಿಯವಾಗಿದ್ದು, ಶಾಂತಿಸ್ಥಾಪನೆಗೆ ಮೊದಲ ಆದ್ಯತೆ ನೀಡುತ್ತದೆ ಎಂದು ಹೇಳಿದರು.

English summary
Iran Attack On America: US President Donald Trump Passed The Indirect Warning For Iran.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X