ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕ ಪರ ಬೇಹುಗಾರಿಕೆ: 16 ಅಧಿಕಾರಿಗಳನ್ನು ಬಂಧಿಸಿದ ಇರಾನ್

|
Google Oneindia Kannada News

ಟೆಹರಾನ್, ಜೂನ್ 25: ಇರಾನ್‌ನ ಇಂಧನ ನೀತಿಯ ಮಾಹಿತಿಗಳನ್ನು ಸೋರಿಕೆ ಮಾಡುತ್ತಿದ್ದ ಆರೋಪದಲ್ಲಿ ತನ್ನ ಪೆಟ್ರೋಲಿಯಂ ಸಚಿವಾಲಯದ 16 ಅಧಿಕಾರಿಗಳನ್ನು ಬಂಧಿಸಿರುವುದಾಗಿ ಇರಾನ್‌ನ ಸರ್ಕಾರಿ ಸ್ವಾಮ್ಯದ ಮಾಧ್ಯಮ ವರದಿ ಮಾಡಿದೆ.

ಅಮೆರಿಕದ ಕೇಂದ್ರ ಗುಪ್ತಚರ ಸಂಸ್ಥೆ (ಸಿಐಎ) ಪರ ಕೆಲಸ ಮಾಡುತ್ತಿರುವ ಗುಮಾನಿಯೊಂದಿಗೆ ಕಳೆದ ವಾರ ನಡೆಸಿದ ಕಾರ್ಯಾಚರಣೆಯ ಭಾಗವಾಗಿ ಈ ಬಂಧನ ಮಾಡಲಾಗಿದೆ ಎಂದು ಹೇಳಲಾಗಿದೆ.

ದಾಳಿ ಮಾಡಿದರೆ ತಕ್ಕ ತಿರುಗೇಟು, ಅಮೆರಿಕಕ್ಕೆ ಇರಾನ್ ಖಡಕ್ ವಾರ್ನಿಂಗ್ ದಾಳಿ ಮಾಡಿದರೆ ತಕ್ಕ ತಿರುಗೇಟು, ಅಮೆರಿಕಕ್ಕೆ ಇರಾನ್ ಖಡಕ್ ವಾರ್ನಿಂಗ್

ಬಂಧಿತರೆಲ್ಲರೂ ಇರಾನ್‌ನ ತೈಲ ಉದ್ಯಮದಲ್ಲಿ ಪತ್ತೆ, ಉತ್ಪಾದನೆ, ಪೂರೈಕೆ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಮ್ಯಾನೇಜರ್ ಹುದ್ದೆಯಲ್ಲಿದ್ದಾರೆ ಎಂದು ಫಾರ್ಸ್ ನ್ಯೂಸ್ ಏಜೆನ್ಸಿ ತಿಳಿಸಿದೆ.

iran arrest 16 oil ministry officials for spying CIA

ಈ ಸಚಿವಾಲಯದ ಅಧಿಕಾರಿಗಳು ಮಹಿಳೆಯೊಬ್ಬರ ಮಾರ್ಗದರ್ಶನಲ್ಲಿ ಕೆಲಸ ಮಾಡಿದ್ದಾಳೆ ಎಂದು ಇರಾನ್ ಸಂಸತ್‌ನ ಹಿರಿಯ ಸಂಸದ ಹೊಸೈನ್ ಅಲಿ ಹಾಜಿ ದೆಲಿಗಾನಿ ಹೇಳಿದ್ದಾರೆ.

H-1B ಆಕಾಂಕ್ಷಿಗಳು ನಿರಾಳ, ವೀಸಾ ಕಡಿತದ ಸುದ್ದಿ ಸುಳ್ಳುH-1B ಆಕಾಂಕ್ಷಿಗಳು ನಿರಾಳ, ವೀಸಾ ಕಡಿತದ ಸುದ್ದಿ ಸುಳ್ಳು

ಮಹಿಳೆಯ ಹೆಸರನ್ನು ಅವರು ಬಹಿರಂಗಪಡಿಸಿಲ್ಲ. ಆದರೆ, ಆ ಅಧಿಕಾರಿಗಳು ತೈಲ ಸಚಿವಾಲಯವು ಕೆಲವು ಪ್ರಮುಖ ನಿರ್ಧಾರಗಳನ್ನು ಕೈಬಿಡುವಂತೆ ಪ್ರಭಾವಿಸುವಲ್ಲಿ ಮತ್ತು ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ಮಾಡಲು ಆ ಮಹಿಳೆ ಯಶಸ್ವಿಯಾಗಿದ್ದಳು. ಇದು ಇರಾನ್‌ ವಿರುದ್ಧ ಅಮೆರಿಕ ನಡೆಸುತ್ತಿರುವ ಆರ್ಥಿಕ ಯುದ್ಧಕ್ಕೆ ನೆರವಾಗಿತ್ತು ಎಂದು ತಿಳಿಸಿದ್ದಾರೆ.

ಈ ನಡುವೆ ಇರಾನ್, ಅಮೆರಿಕದ ಮತ್ತಷ್ಟು ವಿಮಾನಗಳನ್ನು ಹೊಡೆದುರುಳಿಸುವುದಾಗಿ ಎಚ್ಚರಿಕೆ ನೀಡಿದೆ. ದೇಶದ ಮೇಲೆ ನಿರ್ಬಂಧ ವಿಧಿಸುವ ಅಮೆರಿಕದ ನಿರ್ಧಾರವು ಉಭಯ ದೇಶಗಳ ನಡುವಿನ ರಾಜತಾಂತ್ರಿಕ ರಹದಾರಿಗಳನ್ನು ಸಂಪೂರ್ಣವಾಗಿ ಮುಚ್ಚಲಿದೆ ಎಂದೂ ಅದು ಹೇಳಿದೆ.

English summary
Iran media on Sunday announced that 16 officials of oil ministry were arrested for allegedly influence the oil ministry to put off important decisions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X