ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಖಾಸಿಂ ಸೋಲೆಮನಿ ಹತ್ಯೆ: ಅಮೆರಿಕಕ್ಕೆ ಸೆಡ್ಡು ಹೊಡೆದ ಇರಾನ್ ಮತ್ತು ಇರಾಕ್

|
Google Oneindia Kannada News

ಬಾಗ್ದಾದ್, ಜನವರಿ 6: ತನ್ನ ಪ್ರಮುಖ ಸೇನಾಧಿಕಾರಿ, ರಾಷ್ಟ್ರೀಯ ನಾಯಕ ಖಾಸಿಂ ಸೋಲೆಮನಿ ಹತ್ಯೆಯಿಂದ ಆಕ್ರೋಶಗೊಂಡಿರುವ ಇರಾನ್, ಅಂತಾರಾಷ್ಟ್ರೀಯ ಪರಮಾಣು ಒಪ್ಪಂದದಿಂದ ಹಿಂದೆ ಸರಿದಿದೆ. ಈ ನಡುವೆ ಇರಾಕ್ ತನ್ನ ದೇಶದಿಂದ ಅಮೆರಿಕದ ಸೈನಿಕರನ್ನು ಗಡಿಪಾರು ಮಾಡಲು ನಿರ್ಧರಿಸಿದೆ.

ಇರಾಕ್‌ನಲ್ಲಿ ಅಮೆರಿಕದ ಪಡೆಗಳಿಂದ ಹತ್ಯೆಗೀಡಾದ ಖಾಸಿಂ ಸೋಲೆಮನಿ ಅವರ ಮೃತದೇಹದ ಭಾಗಗಳನ್ನು ಭಾನುವಾರ ಟೆಹರಾನ್‌ಗೆ ಕರೆತರಲಾಯಿತು. ಭಾರಿ ಸಂಖ್ಯೆಯಲ್ಲಿ ನೆರೆದಿದ್ದ ಜನರು ಸೋಲೆಮನಿ ಸಾವಿಗೆ ಕಣ್ಣೀರು ಹಾಕಿದರು.

ತನಗೆ ಸಹಾಯ ಮಾಡಿದ್ದವನನ್ನೇ ಕೊಂದ ಅಮೆರಿಕ: ಯಾರಿದು ಸೋಲೆಮನಿ?ತನಗೆ ಸಹಾಯ ಮಾಡಿದ್ದವನನ್ನೇ ಕೊಂದ ಅಮೆರಿಕ: ಯಾರಿದು ಸೋಲೆಮನಿ?

'ಸೋಲೆಮನಿಯ ಹತ್ಯೆಯು ಮಧ್ಯಪ್ರಾಚ್ಯದಲ್ಲಿ ಶಾಂತಿ ಮೂಡಿಸುವ ಪ್ರಯತ್ನಕ್ಕೆ ದೊಡ್ಡ ಹೊಡೆತ ನೀಡಿದೆ. ಅಮೆರಿಕ ಮತ್ತು ಇರಾನ್ ನಡುವೆ ಉದ್ಭವಿಸಿರುವ ಉದ್ವಿಗ್ನ ಪರಿಸ್ಥಿತಿಯನ್ನು ಹತೋಟಿಗೆ ತರಲು ಇತರೆ ದೇಶಗಳೊಂದಿಗೆ ಸೇರಿ ಪ್ರಯತ್ನಿಸಲಿದ್ದೇವೆ' ಎಂದು ಟರ್ಕಿ ವಿದೇಶಾಂಗ ಸಚಿವ ಮೆವ್ಲುಟ್ ಕವುಸೊಗ್ಲು ಹೇಳಿದ್ದಾರೆ.

ಪರಮಾಣು ಉತ್ಪಾದನೆ ಮಾಡುತ್ತೇನೆ ಎಂದ ಇರಾನ್

ಪರಮಾಣು ಉತ್ಪಾದನೆ ಮಾಡುತ್ತೇನೆ ಎಂದ ಇರಾನ್

2015ರಲ್ಲಿ ಇರಾನ್ ಮೇಲೆ ಒತ್ತಡ ಹೇರಿ ಪರಮಾಣು ಒಪ್ಪಂದಕ್ಕೆ ಸಹಿ ಹಾಕಿಸಲಾಗಿತ್ತು. ವಿಶ್ವಸಂಸ್ಥೆಯ ಕಾಯಂ ಸದಸ್ಯ ದೇಶಗಳಾದ ಬ್ರಿಟನ್, ಚೀನಾ, ಫ್ರಾನ್ಸ್, ರಷ್ಯಾ ಮತ್ತು ಅಮೆರಿಕದ ಜತೆಗೆ ಜರ್ಮನಿ ಕೂಡ ಈ ಒಪ್ಪಂದದಲ್ಲಿ ಪಾಲ್ಗೊಂಡಿದ್ದವು. ಆದರೆ ಎರಡು ವರ್ಷಗಳ ಹಿಂದೆ ಅಮೆರಿಕ ಈ ಒಪ್ಪಂದದಿಂದ ಹಿಂದೆ ಸರಿದಿತ್ತು. ಈಗ ಒಪ್ಪಂದ ಮುರಿದುಕೊಂಡಿರುವ ಇರಾನ್, ತನ್ನ ಪರಮಾಣು ಯೋಜನೆಯು ಇನ್ನು ಉತ್ಪಾದನೆಯಲ್ಲಿ ಯಾವುದೇ ಮಿತಿ ಹೊಂದಿರುವುದಿಲ್ಲ. ಅದರ ಸಂಗ್ರಹ ಸಾಮರ್ಥ್ಯವನ್ನೂ ನಿಯಂತ್ರಿಸುವುದಿಲ್ಲ ಎಂದು ಹೇಳಿಕೊಂಡಿದೆ. ಆದರೆ ತನ್ನ ಪರಮಾಣು ಯೋಜನೆಯು ತಾಂತ್ರಿಕ ಅಗತ್ಯಗಳಿಗೆ ಮಾತ್ರ ಮೀಸಲಾಗಿರುವುದು ಮುಂದುವರಿಯಲಿದೆ ಎಂದು ತಿಳಿಸಿದೆ.

ಸೋಲೆಮನಿ ಮಗಳ ಪ್ರತೀಕಾರದ ಪ್ರತಿಜ್ಞೆ

ಸೋಲೆಮನಿ ಮಗಳ ಪ್ರತೀಕಾರದ ಪ್ರತಿಜ್ಞೆ

ಸೋಲೆಮನಿ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಇರಾನ್ ಹೇಳಿದೆ. ತಂದೆಯ ಅಂತ್ಯಸಂಸ್ಕಾರದ ವೇಳೆ ನೆರೆದಿದ್ದ ಅಪಾರ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದ ಸೋಲೆಮನಿ ಮಗಳು ಜೀನಬ್ ಸೋಲೆಮನಿ, ಅಮೆರಿಕ ಮತ್ತು ಇಸ್ರೇಲ್ ಕರಾಳ ದಿನವನ್ನು ಎದುರಿಸಲಿವೆ ಎಂದು ಎಚ್ಚರಿಕೆ ನೀಡಿದ್ದಾರೆ. 'ಹುಚ್ಚಾಟಿಕೆಯ ಟ್ರಂಪ್, ನನ್ನ ತಂದೆಯ ಬಲಿದಾನದಿಂದ ಎಲ್ಲವೂ ಮುಗಿಯಿತು ಎಂದುಕೊಳ್ಳಬೇಡಿ' ಎಂದು ಆಕೆ ಹೇಳಿದ್ದಾರೆ.

ಭಾರತದ ಮೇಲೆ ಉಗ್ರರ ದಾಳಿಗೆ ಸಂಚು ರೂಪಿಸಿದ್ದ ಸೋಲೆಮನಿ: ಡೊನಾಲ್ಡ್ ಟ್ರಂಪ್ಭಾರತದ ಮೇಲೆ ಉಗ್ರರ ದಾಳಿಗೆ ಸಂಚು ರೂಪಿಸಿದ್ದ ಸೋಲೆಮನಿ: ಡೊನಾಲ್ಡ್ ಟ್ರಂಪ್

ಅಮೆರಿಕ ಪಡೆಗಳ ಗಡಿಪಾರು

ಅಮೆರಿಕ ಪಡೆಗಳ ಗಡಿಪಾರು

ಭಾನುವಾರ ಸಭೆ ಸೇರಿದ್ದ ಇರಾಕ್ ಸಂಸತ್ತು, ತನ್ನ ದೇಶದಲ್ಲಿನ ಅಮೆರಿಕದ ಪಡೆಗಳನ್ನು ಗಡಿಪಾರು ಮಾಡುವ ಸಲುವಾಗಿ ನಿರ್ಣಯ ಅಂಗೀಕರಿಸಿದೆ. ಇರಾಕ್‌ನಲ್ಲಿರುವ ಎಲ್ಲ ವಿದೇಶಿ ಪಡೆಗಳನ್ನು ಹೊರ ಹೋಗುವಂತೆ ಸೂಚಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಲಾಗಿದೆ. ಹೀಗಾಗಿ ಇರಾಕ್, ಐಸಿಸ್ ಮತ್ತು ಲೆವ್ಯಾಂಟ್ ಉಗ್ರರ ವಿರುದ್ಧ ಹೋರಾಡಲು ಅಮೆರಿಕ ನೇತೃತ್ವದ ಪಡೆಗಳಿಂದ ತೆಗೆದುಕೊಳ್ಳುತ್ತಿದ್ದ ನೆರವನ್ನು ಅಂತ್ಯಗೊಳಿಸುವ ಸಾಧ್ಯತೆ ಇದೆ.

ನಿರ್ಬಂಧ ಎದುರಿಸಬೇಕಾಗುತ್ತದೆ- ಟ್ರಂಪ್ ಎಚ್ಚರಿಕೆ

ನಿರ್ಬಂಧ ಎದುರಿಸಬೇಕಾಗುತ್ತದೆ- ಟ್ರಂಪ್ ಎಚ್ಚರಿಕೆ

ಇರಾನ್‌ನ ನೆರೆಯ ರಾಷ್ಟ್ರ ಇರಾಕ್‌ನಲ್ಲಿ ಸ್ಥಳೀಯ ಪಡೆಗಳ ಬೆಂಬಲದೊಂದಿಗೆ ಅಮೆರಿಕದ ಸುಮಾರು 5,200 ಸೈನಿಕರು ಇದ್ದಾರೆ. ಅಮೆರಿಕದ ಪಡೆಗಳನ್ನು ಹೊರಗೆ ಕಳಿಸಿದರೆ ಕೆಟ್ಟ ಪರಿಣಾಮಗಳನ್ನು ಅನುಭವಿಸಬೇಕಾಗುತ್ತದೆ ಎಂದು ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ನಾವು ಅಲ್ಲಿ ಭಾರಿ ವೆಚ್ಚದ ವಾಯುನೆಲೆಯನ್ನು ಸ್ಥಾಪಿಸಿದ್ದೆವು. ಬಿಲಿಯನ್‌ಗಟ್ಟಲೆ ಡಾಲರ್ ಹಣ ವ್ಯಯಿಸಿದ್ದೆವು. ಅವರು ನಮ್ಮನ್ನು ಹೊರಹೋಗುವಂತೆ ಹೇಳಿದರೆ ನಾವು ಅದನ್ನು ಸ್ನೇಹಪೂರ್ವಕವಾಗಿ ಮಾಡುವುದಿಲ್ಲ. ಅವರು ಹಿಂದೆಂದೂ ನೋಡದಂತಹ ನಿರ್ಬಂಧಗಳನ್ನು ವಿಧಿಸುತ್ತೇವೆ. ಅದು ಇರಾನ್ ಅನುಭವಿಸುತ್ತಿರುವ ನಿರ್ಬಂಧದಂತೆಯೇ ಇರಲಿದೆ ಎಂದು ಎಚ್ಚರಿಸಿದ್ದಾರೆ.

ಮಧ್ಯಪ್ರಾಚ್ಯದಲ್ಲಿ ಅಮೆರಿಕದ ಹೆಚ್ಚುವರಿ ಸೇನೆ ಜಮಾವಣೆ: ನಡೆಯುತ್ತದೆಯೇ 3ನೇ ಮಹಾಯುದ್ಧ?ಮಧ್ಯಪ್ರಾಚ್ಯದಲ್ಲಿ ಅಮೆರಿಕದ ಹೆಚ್ಚುವರಿ ಸೇನೆ ಜಮಾವಣೆ: ನಡೆಯುತ್ತದೆಯೇ 3ನೇ ಮಹಾಯುದ್ಧ?

English summary
Iran Ends Nuclear Restrictions and Iraq parliament has voted to expel American forces from their country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X