ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ ಇರುವ ಗುಂಪಿಗೆ ಸೇರಲು ಬಯಸುತ್ತಿರುವ ಇರಾನ್, ಅರ್ಜೆಂಟೀನಾ

|
Google Oneindia Kannada News

ದುಬೈ, ಜೂನ್ 28: ವಿಶ್ವದ ಪ್ರಮುಖ ಶಕ್ತಿ ಕೇಂದ್ರವಾಗುವ ಹಾದಿಯಲ್ಲಿರುವ ಬ್ರಿಕ್ಸ್ ದೇಶಗಳ ಗುಂಪು (BRICS Group) ಬಹಳ ದೇಶಗಳ ಗಮನ ಸೆಳೆದಿದೆ. ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ಸೌತ್ ಆಫ್ರಿಕಾ ದೇಶಗಳು ಈ ಗುಂಪಿನಲ್ಲಿವೆ. ಈಗ ಇರಾನ್ ಮತ್ತು ಅರ್ಜೆಂಟೀನಾ ದೇಶಗಳೂ ಬ್ರಿಕ್ಸ್ ಗುಂಪಿಗೆ ಸೇರಲು ಬಯಸುತ್ತಿವೆ.

ಬ್ರಿಕ್ಸ್ ಗುಂಪು ಸೇರಲು ಇರಾನ್ ದೇಶ ಈಗಾಗಲೇ ಅರ್ಜಿ ಸಲ್ಲಿಸಿರುವುದು ತಿಳಿದುಬಂದಿದೆ. "ಬ್ರಿಕ್ಸ್ ಗುಂಪಿಗೆ ಇರಾನ್ ಸೇರಿದರೆ ಮೌಲ್ಯ ಹೆಚ್ಚಾಗುತ್ತದೆ" ಎಂಬುದು ಇರಾನ್‌ನ ವಿದೇಶಾಂಗ ಸಚಿವಾಲಯದ ವಕ್ತಾರರು ಅಭಿಪ್ರಾಯಪಟ್ಟಿದ್ದಾರೆ.

Breaking: ಉಕ್ರೇನ್ ಯುದ್ಧದ ನಂತರ ಮೊದಲ ಬಾರಿ ರಷ್ಯಾ ತೊರೆದ ಪುಟಿನ್! Breaking: ಉಕ್ರೇನ್ ಯುದ್ಧದ ನಂತರ ಮೊದಲ ಬಾರಿ ರಷ್ಯಾ ತೊರೆದ ಪುಟಿನ್!

ಅರ್ಜೆಂಟೀನಾ ಕೂಡ ಈ ಗುಂಪು ಸೇರಲು ಅರ್ಜಿ ಸಲ್ಲಿಸಿದೆ ಎಂದು ರಷ್ಯಾದ ವಿದೇಶಾಂಗ ಸಚಿವಾಲಯದ ವಕ್ತಾರೆ ಮಾರಿಯಾ ಜಕಾರೊವಾ ತಿಳಿಸಿದ್ದಾರೆ. ಅರ್ಜೆಂಟೀನಾ ಅಧ್ಯಕ್ಷ ಆಲ್ಬರ್ಟೊ ಫರ್ನಾಂಡಿಸ್ ಇತ್ತೀಚೆಗಷ್ಟೇ ತಮ್ಮ ದೇಶವನ್ನು ಬ್ರಿಕ್ಸ್‌ಗೆ ಜೋಡಿಸುವ ಬಗ್ಗೆ ಇಚ್ಛೆ ವ್ಯಕ್ತಪಡಿಸಿದ್ದರು.

ಮೂಲಗಳ ಪ್ರಕಾರ, ಇರಾನ್ ಮತ್ತು ಅರ್ಜೆಂಟೀನಾ ದೇಶಗಳನ್ನು ಬ್ರಿಕ್ಸ್ ಗುಂಪಿಗೆ ಸೇರಿಸಿಕೊಳ್ಳಲು ರಷ್ಯಾ ಪ್ರಬಲ ಪ್ರಯತ್ನ ಮಾಡಬಹುದು. ಚೀನಾ ಕೂಡ ಬೆಂಬಲ ನೀಡಬಹುದು. ಭಾರತದ ನಡೆ ಏನಿರುತ್ತದೆ ಎಂಬುದು ಕುತೂಹಲ.

ಬ್ರಿಕ್ಸ್ ವೇದಿಕೆ 2022: ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಭಾಷಣದ ಮುಖ್ಯಾಂಶ ಬ್ರಿಕ್ಸ್ ವೇದಿಕೆ 2022: ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಭಾಷಣದ ಮುಖ್ಯಾಂಶ

ರಷ್ಯಾ ಶಕ್ತಿ ಪ್ರದರ್ಶನಕ್ಕೆ ಬ್ರಿಕ್ಸ್ ವೇದಿಕೆ?

ರಷ್ಯಾ ಶಕ್ತಿ ಪ್ರದರ್ಶನಕ್ಕೆ ಬ್ರಿಕ್ಸ್ ವೇದಿಕೆ?

ಅಮೆರಿಕ ವರ್ಸಸ್ ರಷ್ಯಾ ನಡುವಿನ ಶೀತಲ ಸಮರ ಅಂತ್ಯವಾದ ಬಳಿಕ ಪ್ರಬಲ ವಿಶ್ವಶಕ್ತಿಯಾಗಿ ಉಳಿದಿರುವುದು ಅಮೆರಿಕವೇ. ಈಗ ಚೀನಾ ಗರಿಗೆದರಿ ನಿಂತಿದೆ. ರಷ್ಯಾ ಬಲ ಹೆಚ್ಚಿಸಿಕೊಳ್ಳುತ್ತಿದೆ. ಇಂಥ ಹೊತ್ತಿನಲ್ಲೇ ಅಭಿವೃದ್ಧಿಯತ್ತ ವೇಗದಲ್ಲಿ ಸಾಗುತ್ತಿರುವ ಐದು ಬೃಹತ್ ದೇಶಗಳ ಸಂಯೋಗವೆನಿಸಿದ ಬ್ರಿಕ್ಸ್ ಗುಂಪು ರಚನೆಯಾಗಿದೆ.

ವಿಶ್ವದ ಹೆಚ್ಚಿನ ಭೂಭಾಗ ಮತ್ತು ಆರ್ಥಿಕತೆಯನ್ನು ಹೊಂದಿರುವ ಈ ಐದು ದೇಶಗಳ ಮೂಲಕ ಅಮೆರಿಕ ಮೊದಲಾದ ದೇಶಗಳಿಗೆ ಸೆಡ್ಡು ಹೊಡೆಯಲಾಗುತ್ತಿದೆ. ಅಮೆರಿಕ ವಿರುದ್ಧ ನಿಲ್ಲಲು ರಷ್ಯಾಗೆ ಇದು ಒಳ್ಳೆಯ ವೇದಿಕೆ. ಹೀಗಾಗಿ, ಈ ಗುಂಪನ್ನು ವಿಸ್ತರಿಸಲು, ಬಲವೃದ್ಧಿಸಲು ರಷ್ಯಾ ಆಸಕ್ತವಾಗಿದೆ.

ಅಮೆರಿಕವನ್ನು ಅಣಕಿಸಿದ ಜಕರೋವಾ

ಅಮೆರಿಕವನ್ನು ಅಣಕಿಸಿದ ಜಕರೋವಾ

"ಈ ವಿಶ್ವದಲ್ಲಿ ಏನೇನನ್ನು ನಿಷೇಧಿಸಬೇಕು, ಯಾವ್ಯಾವುದನ್ನು ಹಾಳು ಮಾಡಬೇಕು, ಯಾವುದಕ್ಕೆ ಅಂತ್ಯ ಹಾಡಬೇಕು ಇತ್ಯಾದಿ ಬಗ್ಗೆ ಅಮೆರಿಕ ಯೋಚಿಸುತ್ತಿದ್ದರೆ, ಇತ್ತ ಇರಾನ್ ಮತ್ತು ಅರ್ಜೆಂಟೀನಾ ದೇಶಗಳು ಬ್ರಿಕ್ಸ್ ಸೇರಲು ಅರ್ಜಿ ಸಲ್ಲಿಸಿವೆ" ಎಂದು ರಷ್ಯಾ ವಿದೇಶಾಂಗ ಸಚಿವಾಲಯದ ವಕ್ತಾರೆ ಮಾರಿಯಾ ಜಕರೋವಾ ಹೇಳಿದರು.

ರಷ್ಯಾ ಬಹಳ ವರ್ಷಗಳಿಂದಲೂ ಅಮೆರಿಕ ಮತ್ತು ಯೂರೋಪೇತರ ದೇಶಘಳ ಜೊತೆ ಸ್ನೇಹ ಬೆಳೆಸಲು ಪ್ರಯತ್ನಿಸುತ್ತಲೇ ಇದೆ. ಏಷ್ಯಾ, ದಕ್ಷಿಣ ಅಮೆರಿಕ ಮತ್ತು ಮಧ್ಯ ಪ್ರಾಚ್ಯದ ದೇಶಗಳ ಜೊತೆ ನಿಕಟವಾಗುತ್ತಿದೆ. ಅದು ಇತ್ತೀಚೆಗೆ ಇನ್ನೂ ಹೆಚ್ಚಾಗುತ್ತಿದೆ.

ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮಾಡಿದ ಬಳಿಕ ಅಮೆರಿಕ ಮತ್ತು ಯೂರೋಪ್ ಮತ್ತಿತರ ಹಲವು ದೇಶಗಳು ರಷ್ಯಾ ಮೇಲೆ ದಿಗ್ಬಂಧನ ಹೇರಿವೆ. ಹೀಗಾಗಿ, ಬೇರೆ ದೇಶಗಳ ಬೆಂಬಲ ಪಡೆಯಲು ರಷ್ಯಾ ಹವಣಿಸುತ್ತಿದೆ. ಈಗ ಬ್ರಿಕ್ಸ್ ಗುಂಪು ರಷ್ಯಾಗೆ ಒಳ್ಳೆಯ ವೇದಿಕೆಯಾಗಿ ಸಿಕ್ಕಿದೆ.

ಬ್ರಿಕ್ಸ್ ವಿಶೇಷತೆ

ಬ್ರಿಕ್ಸ್ ವಿಶೇಷತೆ

ಬ್ರಿಕ್ಸ್ ಎಂಬುದು ಐದು ಪ್ರಮುಖ ಅಭಿವೃದ್ಧಿಶೀಲ ಆರ್ಥಿಕತೆಯ ದೇಶಗಳ (Emerging Economies) ಗುಂಪಾಗಿದೆ. 2001ರಲ್ಲಿ ಇದರ ಮೊದಲ ಪ್ರಸ್ತಾವವಾಗಿದ್ದು. ಆಗ ಬ್ರೆಜಿಲ್, ರಷ್ಯಾ, ಭಾರತ ಮತ್ತು ಚೀನಾ ಈ ನಾಲ್ಕು ದೇಶಗಳ ಗುಂಪಾಗಿತ್ತು. 2009ರಲ್ಲಿ ಈ ನಾಲ್ಕು ದೇಶಗಳ ಬ್ರಿಕ್ ಗುಂಪಿನ ಮೊದಲ ಶೃಂಗಸಭೆಯಾಯಿತು. 2010ರಲ್ಲಿ ಸೌತ್ ಆಫ್ರಿಕಾ ಈ ಗುಂಪಿಗೆ ಸೇರಿತು. ಆಗಿನಿಂದ ಇದು ಬ್ರಿಕ್ಸ್ ಆಗಿದೆ.

ಇಡೀ ವಿಶ್ವದ ಒಟ್ಟೂ ಭೂಭಾಗದಲ್ಲಿ ಬ್ರಿಕ್ಸ್ ದೇಶಗಳ ಪಾಲು ಶೇ. 26.7 ಇದೆ. ಶೇ. 41,5ರಷ್ಟು ಜನಸಂಖ್ಯೆ ಇದೆ. ಹೀಗಾಗಿ, ಇದು ವಿಶ್ವದ ಪ್ರಮುಖ ಶಕ್ತಿ ಕೇಂದ್ರಗಳಲ್ಲಿ ಇದೂ ಒಂದೆಂದು ಪರಿಗಣಿಸಲಾಗಿದೆ.

ಬ್ರಿಕ್ಸ್ ದೇಶಗಳ ಮಧ್ಯೆ ವ್ಯವಹಾರ

ಬ್ರಿಕ್ಸ್ ದೇಶಗಳ ಮಧ್ಯೆ ವ್ಯವಹಾರ

ಬ್ರಿಕ್ಸ್ ದೇಶಗಳ ಮಧ್ಯೆ ಆರ್ಥಿಕ ಸಹಕಾರಕ್ಕೆ ಆದ್ಯತೆ ಕೊಡಲಾಗುತ್ತದೆ. ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ಧಿಗೆ ಪೂರಕವಾದ ವ್ಯವಸ್ಥೆ ನಿರ್ಮಿಸುವುದು ಮತ್ತು ಗುಂಪಿನ ದೇಶಗಳ ಪೈಕಿ ದ್ವಿಪಕ್ಷೀಯ ಸಂಬಂಧಗಳ ಸುಧಾರಣೆಗೆ ಒತ್ತುಕೊಡುವುದು ಬ್ರಿಕ್ಸ್ ಗುಂಪಿನ ಪ್ರಮುಖ ಗುರಿಯಾಗಿದೆ. ಹಾಗೆಯೇ. ತಂತ್ರಜ್ಞಾನ ಆವಿಷ್ಕಾರಗಳು, ಭಯೋತ್ಪಾದನೆ ನಿಗ್ರಹ ಕ್ರಮಗಳು ಇತ್ಯಾದಿ ಬಗ್ಗೆಯೂ ಚರ್ಚೆಗಳಾಗುತ್ತವೆ.

2009ರಿಂದ ಇಲ್ಲಿವರೆಗೆ 14s ಶೃಂಗಸಭೆಗಳು ನಡೆದಿವೆ. ಭಾರತದಲ್ಲಿ 2012 ಮತ್ತು 2021ರಲ್ಲಿ ಸಮಿಟ್ ನಡೆದಿತ್ತು. ಕಳೆದ ವರ್ಷ ಚೀನಾದಲ್ಲಿ ಶೃಂಗಸಭೆಯಾಗಿತ್ತು. ಮುಂದಿನ ವರ್ಷ ಸೌತ್ ಆಫ್ರಿಕಾದಲ್ಲಿ ಶೃಂಗಸಭೆ ನಡೆಯಲಿದೆ. ಆದರೆ, ಗಮನಿಸಬೇಕಾದ ಅಂಶವೆಂದರೆ ಅಮೆರಿಕ ನೇತೃತ್ವದ ನ್ಯಾಟೊ ಅಥವಾ ಐರೋಪ್ಯ ಒಕ್ಕೂಟದ ಮಾದರಿಯಲ್ಲಿ ಬ್ರಿಕ್ಸ್ ಗುಂಪು ಒಂದು ಮೈತ್ರಿಕೂಟ ಅಥವಾ ಮೈತ್ರಿಪಡೆ ಆಗಿಲ್ಲ. ಕೆಲವಿಷ್ಟು ವಿಚಾರಗಳ ಚರ್ಚೆ, ಉದ್ಯಮಕ್ಕೆ ಪೂರಕವಾದ ಸಂಗತಿಗಳ ಅವಲೋಕನ, ಒಂದಷ್ಟು ಒಪ್ಪಂದಗಳು ಇವಕ್ಕಷ್ಟೇ ಸೀಮಿತವಾಗಿದೆಯೇ ಹೊರತು ಜಾಗತಿಕ ರಾಜಕೀಯ ಶಕ್ತಿ ಪ್ರದರ್ಶನದ ವೇದಿಕೆ ಆಗಿಲ್ಲ.

(ಒನ್ಇಂಡಿಯಾ ಸುದ್ದಿ)

English summary
Russia has said Iran and Argentina have requested to join BRICS group of emerging economies. If they are allowed, then BRICS will be expanded to 7 nations, including India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X