ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾವಿರಾರು ಸವಾಲುಗಳ ಮೆಟ್ಟಿನಿಂತು ಸಾಧನೆ ಮಾಡಿದ ಮಹಿಳೆಯರಿಗೆ ಗೂಗಲ್ ಗೌರವ

|
Google Oneindia Kannada News

ನವದೆಹಲಿ, ಮಾರ್ಚ್ 08: ಗೂಗಲ್ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಗೆ ವಿಶೇಷವಾದ ಡೂಡಲ್ ಮತ್ತು ಆನಿಮೇಟೆಡ್ ವಿಡಿಯೋದೊಂದಿಗೆ ಗೌರವ ಸಲ್ಲಿಸಿದೆ.

ಈ ವಿಡಿಯೋ ಮಹಿಳಾ ದಿನದ ಇತಿಹಾಸ ಪ್ರತಿನಿಧಿಸುವುದು ಮಾತ್ರವಲ್ಲದೆ ವಿವಿಧ ತಲೆಮಾರಿನ ಮಹಿಳೆಯರಿಗೆ ಪ್ರಾಮುಖ್ಯತೆ ನೀಡಿದೆ. ಜಾಗತಿಕವಾಗಿ ಮಹಿಳೆಯರು ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಸಾಧನೆಗಳನ್ನು ಗುರುತಿಸಲು ಪ್ರತಿ ವರ್ಷ ಮಾರ್ಚ್ 8 ರಂದು ಅಂತಾರಾಷ್ಟ್ರೀಯ ಮಹಿಳಾ ದಿನವನ್ನಾಗಿ ಆಚರಿಸಲಾಗುತ್ತಿದೆ.

220ಕ್ಕೂ ಹೆಚ್ಚು ಕೊರೊನಾ ಸೋಂಕಿತ ಗರ್ಭಿಣಿಯರಿಗೆ ಹೆರಿಗೆ ಮಾಡಿಸಿದ್ದ ಡಾ. ಶಾರದಾ220ಕ್ಕೂ ಹೆಚ್ಚು ಕೊರೊನಾ ಸೋಂಕಿತ ಗರ್ಭಿಣಿಯರಿಗೆ ಹೆರಿಗೆ ಮಾಡಿಸಿದ್ದ ಡಾ. ಶಾರದಾ

ಹಾಗೆಯೇ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರು ಮಾಡಿದ ಸಾಧನೆಗಳನ್ನು ಹೈಲೈಟ್ ಮಾಡಲಾಗಿದೆ. ಶಿಕ್ಷಣ, ವಿಜ್ಞಾನ, ಕಲೆ ಎಲ್ಲಾ ಕ್ಷೇತ್ರಗಳಲ್ಲಿಯೂ ಪುರುಷರಷ್ಟೇ ಮಹಿಳೆಯರೂ ಕೂಡಾ ಮುಂದಿದ್ದಾರೆ.

International Womens Day 2021: Google Highlights Womens Firsts With A Doodle

ಹಾಗೆಯೇ ಈ ವಿಡಿಯೋದಲ್ಲಿ ಪುರುಷರ ಕೈಹಿಡಿದಿರುವ ಮಹಿಳೆಯರನ್ನು ನೀವು ನೋಡಬಹುದು, ಇದು ಪುರುಷರ ಸಾಧನೆಯ ಹಿಂದೆ ಮಹಿಳೆ ಇದ್ದಾಳೆ ಎಂದು ಹೇಳುವುದು ಮಾತ್ರವಲ್ಲದೆ, ಪುರುಷರಷ್ಟೇ ಮಹಿಳೆಯು ಕೂಡಾ ಎತ್ತರಕ್ಕೆ ಬೆಳೆದಿದ್ದಾಳೆ ಎಂಬುದನ್ನೂ ಸೂಚಿಸುತ್ತದೆ.

ಬಾಹ್ಯಾಕಾಶಕ್ಕೆ ತೆರಳಿದ ಮೊದಲ ಮಹಿಳೆ, ಸಾಹಿತ್ಯದ ಮೊದಲ ಮಹಿಳೆ, ಹಾಡಿದ ಮೊದಲ ಮಹಿಳೆ, ಕಾನೂನು, ಮತದಾನ, ಪೈಲಟ್ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿರುವ ಮೊದಲ ಮಹಿಳೆಗೆ ಗೂಗಲ್ ಗೌರವ ಸಲ್ಲಿಸಿದೆ.

ಮಹಿಳಾ ದಿನ; ಮಹಿಳಾ ಉದ್ಯೋಗಿಗಳಿಗೆ ವಿಶೇಷ ರಜೆಮಹಿಳಾ ದಿನ; ಮಹಿಳಾ ಉದ್ಯೋಗಿಗಳಿಗೆ ವಿಶೇಷ ರಜೆ

1911 ರಲ್ಲಿ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಅಂದು ಮಹಿಳೆಯರ ಸಾಧನೆಗಳು, ಮಹಿಳೆಯ ಸಮಾನತೆ ಕುರಿತು ಜನರಲ್ಲಿ ಅರಿವು ಮೂಡಿಸಲಾಯಿತು.

ಈ ದಿನ ಮಹಿಳೆಯರ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಸಾಧನೆಗಳಿಗೆ ಮಾನ್ಯತೆಯನ್ನು ಸೂಚಿಸುತ್ತದೆ. ಪ್ರಪಂಚದಾದ್ಯಂತ ಕಾಲೇಜುಗಳು, ಸಂಸ್ಥೆಗಳು ಸೇರಿದಂತೆ ಸಾರ್ವಜನಿಕ ಭಾಷಣಗಳು, ಮೆರವಣಿಗೆಗಳು, ರಸಪ್ರಶ್ನೆ,ಚರ್ಚೆ,ಉಪನ್ಯಾಸ, ವಿಚಾರ ಸಂಕಿರಣಗಳು ನಡೆಯುತ್ತಿವೆ.

English summary
To mark International Women's Day 2021, search giant Google dedicated a doodle video celebrating all the firsts of women in various fields. It shared a doodle video that shows the hands of women who dared to open doors for themselves and 'chose to challenge' society to fulfill their dreams.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X