ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಷ್ರಫ್ ಗೆ ಶುರುವಾಯ್ತು ಗಂಡಾಂತರ: ಜಾಗತಿಕ ಮಟ್ಟದಲ್ಲಿ ಒತ್ತಡ

|
Google Oneindia Kannada News

ಇಸ್ಲಾಮಾಬಾದ್, ಡಿಸೆಂಬರ್ 5: ಬಲೋಚಿಸ್ತಾನದ ನಾಯಕಿ ನೈಲಾ ಕ್ವಾದ್ರಿ ಬಲೂಚ್ ನಿನ್ನೆ (ಡಿ.4) ತಾನೇ ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ನನ್ನು ಜಾಗತಿಕ ಉಗ್ರ ಎಂದು ಘೋಷಿಸುವಂತೆ ಅಮರಿಕಕ್ಕೆ ಮನವಿ ಮಾಡಿದ್ದ ವಿಷಯಕ್ಕೆ ಸಂಬಂಧಿಸಿದಂತೆ, ವಿಶ್ವದ ಹಲವು ನಾಯಕರು ಅವರಿಗೆ ಬೆಂಬಲವಾಗಿ ನಿಂತಿದ್ದಾರೆ!

"ಪರ್ವೇಜ್ ಮುಷ್ರಪ್ ನನ್ನು ಜಾಗತಿಕ ಉಗ್ರ ಎಂದು ಘೋಷಿಸಿ"

ಈ ಕುರಿತು ಪ್ರತಿಕ್ರಿಯಿಸಿದ ಜರ್ಮನಿಯ ಪ್ರಮುಖ ಹೋರಾಟಗಾರ, ಕ್ಲಾಡಿಯ ಹೈಡಲ್ ಬರ್ಗ್ ಎನ್ನುವವರು, ಮಾಧ್ಯಮಗಳ ಮುಂದೆ ಘಂಟಾಘೋಷವಾಗಿ ತಾನು ಲಷ್ಕರ್ ಇ ತೊಯ್ಬಾ, ಜೈಶ್ ಇ ಮೊಹಮ್ಮದ್, ಜಮ್ಮತ್ ಉದ್ ದಾವಾ ಸಂಘಟನೆಗಳ ಬೆಂಬಲಿಗ ಎಂದಿರುವ ಅವರನ್ನು ಈ ಕೂಡಲೇ ಜಾಗತಿಕ ಉಗ್ರ ಎಂದು ಘೋಷಿಸಬೇಕು ಎಂದಿದ್ದಾರೆ.

International experts support Naela Quadri Baloch to announce Pervez Musharraf as Global Terrorist

ಮುಷ್ರಫ್ ಗೆ ಈ ಎಲ್ಲಾ ಭಯೋತ್ಪಾದಕ ಸಂಘಟನೆಯೊಂದಿಗೆ ಯಾವ್ಯಾವ ರೀತಿಯಲ್ಲಿ ನಂಟಿದೆ ಎಂಬುದನ್ನು ಮೊದಲು ಪತ್ತೆ ಮಾಡಬೇಕಿದೆ ಎಂದು ಅವರು ಹೇಳಿದ್ದಾರೆ.

ಬಲೂಚಿಸ್ತಾನದಲ್ಲಿ ರಕ್ತದೋಕುಳಿ ಹರಿಸಿದ ಕಟುಕ ಮುಷ್ರಫ್ ಯಾವತ್ತಿದ್ದರೂ ಜಗತ್ತಿಗೆ ಅಪಾಯಕಾರಿಯೇ ಎಂದು ಹಲವರು ಹೇಳಿದ್ದಾರೆ. ಒಟ್ತಿನಲ್ಲಿ ಮುಷ್ರಫ್ ನನ್ನು ಜಾಗತಿಕ ಉಗ್ರ ಎಂದು ಘೋಷಿಸಲು ಎಲ್ಲೆಡೆಯಿಂದ ಒತ್ತಡ ಹೆಚ್ಚುತ್ತಿರುವುದಂತೂ ಸತ್ಯ.

English summary
International experts have come out in support of Prof Naela Quadri Baloch, head of the World Baloch Women Forum (WBWF), who had urged the United States to designate former Pakistan president Pervez Musharraf as Specially Designated Global Terrorist (SDGT).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X