• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪೇಶಾವರ ಶಾಲೆ ಮೇಲಿನ ದಾಳಿಯಲ್ಲಿ ಭಾರತದ ಕೈವಾಡ: ಪಾಕ್ ಆರೋಪ

|
   ಪೇಶಾವರ ಶಾಲೆ ಮೇಲಿನ ದಾಳಿಯಲ್ಲಿ ಭಾರತದ ಕೈವಾಡ | Oneindia Kannada

   ಹೇಗ್, ಫೆಬ್ರವರಿ 19: ಬೇಹುಗಾರಿಕೆಗೆಂದು ಬಂದು ಶಿಕ್ಷೆಗೆ ಒಳಗಾದವರ ಭೇಟಿಗೆ ರಾಜತಾಂತ್ರಿಕರಿಗೆ ಅವಕಾಶ ನೀಡಲು ಸಾಧ್ಯವಿಲ್ಲ. ಹೀಗಾಗಿ ಭಾರತದ ವಾದವನ್ನು ಒಪ್ಪಲು ಸಾಧ್ಯವಿಲ್ಲ. ಜಾಧವ್ ಅವರನ್ನು ಬಿಡುಗಡೆ ಮಾಡಲು ಸಾಧ್ಯವಿಲ್ಲ. ಭಾರತದ ಬೇಡಿಕೆ ವಿಲಕ್ಷಣವಾಗಿದೆ ಎಂದು ಪಾಕಿಸ್ತಾನ ಹೇಳಿದೆ.

   ಬೇಹುಗಾರಿಕೆ ನಡೆಸಿದ ಆರೋಪದಲ್ಲಿ ಗಲ್ಲುಶಿಕ್ಷೆಗೆ ಗುರಿಯಾಗಿರುವ ಭಾರತದ ಕುಲಭೂಷಣ್ ಜಾಧವ್ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ನೆದರ್ಲೆಂಡ್‌ನ ಹೇಗ್‌ನಲ್ಲಿರುವ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಪಾಕಿಸ್ತಾನದ ವಕೀಲ ಖನ್ವರ್ ಖುರೇಷಿ ಮಂಗಳವಾರ ವಾದ ಮಂಡಿಸಿದರು.

   ಜಾಧವ್ ಗಲ್ಲುಶಿಕ್ಷೆ: ಐಸಿಜೆಯಲ್ಲಿ ಪಾಕ್ ವಿರುದ್ಧ ಭಾರತದ ತೀಕ್ಷ್ಣ ವಾದ

   ಪಾಕಿಸ್ತಾನದ ವಾದದ ಪ್ರಮುಖ ಅಂಶಗಳು ಇಲ್ಲಿವೆ...

   * ಕುಲಭೂಷಣ್ ಜಾಧವ್ ಭಾರತದ ಅತ್ಯಂತ ಕ್ರೂರ ಗುಪ್ತಚರ ಸಂಸ್ಥೆಯಾಗಿರುವ 'ರಾ'ದ ಅಧಿಕಾರಿ.

   * ಭಾರತ ಸರ್ಕಾರದ ಸೂಚನೆ ಮೇರೆಗೆ ಅದು ಬಲೂಚಿಸ್ತಾನದಲ್ಲಿ ದಾಳಿಗಳನ್ನು ನಡೆಸಲು ಉದ್ದೇಶಿಸಿತ್ತು. ಸ್ವತಂತ್ರ ವಿಚಾರಣೆ ಸಂದರ್ಭದಲ್ಲಿ ಜಾಧವ್ ಅದನ್ನು ಒಪ್ಪಿಕೊಂಡಿದ್ದಾರೆ.

   ಕುಲಭೂಷಣ್ ಜಾಧವ್ ಗಲ್ಲು ಶಿಕ್ಷೆ, ಫೆಬ್ರವರಿಯಲ್ಲಿ ಮತ್ತೆ ವಿಚಾರಣೆ

   * 2014ರಲ್ಲಿ ಪಾಕಿಸ್ತಾನದ ಪೇಶಾವರದಲ್ಲಿ ಶಾಲೆಯ ಮೇಲೆ ನಡೆದ ದಾಳಿಯನ್ನು ಭಾರತ ಪ್ರಾಯೋಜಿಸಿತ್ತು. ಅಫ್ಘಾನಿಸ್ತಾನದ ಮೂಲಕ ಈ ದಾಳಿ ನಡೆದು ನಾವು 140 ಮಕ್ಕಳನ್ನು ಕಳೆದುಕೊಂಡಿದ್ದೆವು.

   * ಭಾರತ ಯಾವಾಗಲೂ ಜಿನೇವಾ ನಿರ್ಣಯಗಳನ್ನು ಉಲ್ಲಂಘಿಸುತ್ತಲೇ ಬಂದಿದೆ. ನಾನೇ ಸ್ವತಃ ಯುವ ಸೇನಾಧಿಕಾರಿಯಾಗಿದ್ದಾಗ ಯುದ್ಧ ಕೈದಿಯಾಗಿ ಭಾರತದ ಕ್ರೂರತ್ವದ ಬಲಿಪಶುವಾಗಿದ್ದೆ.

   * ಐಸಿಜೆಯಲ್ಲಿ ಭಾರತದ ಅರ್ಜಿಯೇ ಪಾಕಿಸ್ತಾನದ ಮೇಲೆ ಸವಾರಿ ಮಾಡುವ ಅದರ ಸಾಂಪ್ರದಾಯಿಕ ಮಾದರಿಗೆ ಸ್ಪಷ್ಟ ಉದಾಹರಣೆ.

   ಕುಲಭೂಷಣ್ ಪರ ವಾದ ಮಂಡಿಸಲು ವಕೀಲ ಸಾಳ್ವೆ ಫೀಜ್ ಎಷ್ಟು?

   * ಪಾಕಿಸ್ತಾನದಲ್ಲಿ ಗಲಭೆ ಸೃಷ್ಟಿಸುವ ಸಲುವಾಗಿ ಆತ್ಮಾಹುತಿ ಬಾಂಬ್ ದಾಳಿ ನಡೆಸಲು ಜಾಧವ್ ಸ್ಥಳೀಯ ಮತ್ತು ಹೊರರಾಜ್ಯದ ಅನೇಕರೊಂದಿಗೆ ಸೇರಿಕೊಂಡಿದ್ದರು.

   * ಪಾಕಿಸ್ತಾನಕ್ಕೆ ಅಭಿವೃದ್ಧಿ ತರಲಿರುವ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್‌ಅನ್ನ ಹಾಳುಗೆಡುವ ಪ್ರಯತ್ನ ನಡೆಸಿದ್ದರು. ಅವರ ಕೃತ್ಯ ವೈಯಕ್ತಿಕವಾಗಿರಲಿಲ್ಲ ಅದು ತನ್ನ ದೇಶದ ಪರವಾಗಿ ಮಾಡಿದ್ದಾಗಿತ್ತು.

   * 1947ರಿಂದಲೂ ಪಾಕಿಸ್ತಾನವನ್ನು ನಾಶಪಡಿಸಲು ಭಾರತ ನಿರಂತರವಾಗಿ ಈ ನೀತಿ ಅನುಸರಿಸುತ್ತಿದೆ. ಭಾರತ ಸಿಂಧೂ ನದಿ ನೀರಿಗೆ ತಡೆಯೊಡ್ಡಿತ್ತು. ಇದು ಸಿಂಧೂ ನದಿ ಒಪ್ಪಂದದ ಸ್ಪಷ್ಟ ಉಲ್ಲಂಘನೆ.

   * ಮಾನವೀಯಕತೆ ಆಧಾರದಲ್ಲಿ ನಾವು ಜಾಧವ್ ಅವರನ್ನು ಭೇಟಿ ಮಾಡಲು ಅವರ ಕುಟುಂಬಕ್ಕೆ ಅವಕಾಶ ನೀಡಿದ್ದೆವು. ಈ ರೀತಿ ಭಾರತ ಯಾರನ್ನಾದರೂ ಬಂಧಿಸಿದಾಗ ಕುಟುಂದವರಿಗೆ ಅವಕಾಶ ನೀಡಿದ ಉದಾಹರಣೆಯನ್ನು ಅದು ನೀಡಲಿ.

   * ಜಾಧವ್ ಅವರನ್ನು ಇರಾನ್‌ನಿಂದ ಅಪಹರಣ ಮಾಡಲಾಗಿದೆ ಎನ್ನುವುದು ಹಾಸ್ಯಾಸ್ಪದ. ಜಾಧವ್ ಅವರನ್ನು ಬಿಡುಗಡೆ ಮಾಡಿ ಮರಳಿಸಿ ಎನ್ನುವುದು ಸಾಧಾರಣ ಬೇಡಿಕೆ.

   * ಜಾಧವ್ ಒಬ್ಬ ಸೇವೆಯಲ್ಲಿದ್ದ ಅಧಿಕಾರಿಯಾಗಿದ್ದು 2022ರಲ್ಲಿ ನಿವೃತ್ತರಾಗಬೇಕಿದೆ. ಭಾರತ ಪ್ರತಿಬಾರಿಯೂ ಸತ್ಯವನ್ನು ಬಚ್ಚಿಡಲು ಪ್ರಯತ್ನಿಸುತ್ತಿರುತ್ತದೆ.

   * ಪಾಕಿಸ್ತಾನದ ಸಂಕಷ್ಟವು ಭಾರತಕ್ಕಿಂತ ಹಲವು ಪಟ್ಟು ಹೆಚ್ಚು. ಭಾರತವು ತನ್ನ ರಕ್ಷಣಾತ್ಮಕ ನಿಲುವಿನಿಂದ ರಕ್ಷಣಾತ್ಮಕ ಅಪರಾಧ ಕೃತ್ಯಕ್ಕೆ ನಡೆಯನ್ನು ಬದಲಿಸಿದರೆ ಅದನ್ನು ಅವರಿಗೆ ಸಹಿಸಿಕೊಳ್ಳುವುದು ಸಾಧ್ಯವಿಲ್ಲ. ಇಲ್ಲಿ ಅಣ್ವಸ್ತ್ರ ಯುದ್ಧವಿಲ್ಲ, ಯಾವ ಪಡೆಯೂ ಯುದ್ಧ ಮಾಡುವುದಿಲ್ಲ. ನಿಮಗೆ ತಂತ್ರಗಳು ಗೊತ್ತಿದ್ದರೆ, ನಿಮಗಿಂತ ನಮಗೆ ತಂತ್ರಗಳು ಇನ್ನೂ ಚೆನ್ನಾಗಿ ತಿಳಿದಿದೆ ಎಂದು 2014ರಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಹೇಳಿದ್ದ ಮಾತನ್ನು ವಕೀಲ ಖನ್ವರ್ ಖುರೇಷಿ ಉಲ್ಲೇಖಿಸಿದರು.

   * ಕುಲಭೂಷಣ್ ಜಾಧವ್ ಸುಳ್ಳು ಹೆಸರಿನಲ್ಲಿ ಪಾಸ್‌ಪೋರ್ಟ್ ಪಡೆದು ಭಾರತದೊಳಗೆ ಮತ್ತು ಹೊರಗೆ ಹೇಗೆ ಓಡಾಡಲು ಸಾಧ್ಯವಾಗಿತ್ತು ಎಂಬುದಕ್ಕೆ ವಿವರಣೆ ನೀಡಲು ಭಾರತ ವಿಫಲವಾಗಿದೆ.

   * ಪಾಕಿಸ್ತಾನದಲ್ಲಿ ಭಯಾನಕ ಮತ್ತು ವಿನಾಶಕಾರಿ ಸ್ಥಿತಿ ಸೃಷ್ಟಿಸಲು ಭಾರತವು ಕುಲಭೂಷಣ್ ಜಾಧವ್ ಅವರನ್ನು ಬಳಿಸಿಕೊಂಡಿದ್ದಕ್ಕೆ ಸೂಕ್ತ ಸಾಕ್ಷ್ಯ ಇರುವುದು ಸ್ಪಷ್ಟ.

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   Pakistan Lawyer Khanwar Qureshi on Tuesday submitted his arguments at International Court of Justice on India's Kulbhushan Jadhav's death sentence case.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more