ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಲಭೂಷಣ್ ಪ್ರಕರಣದ ತೀರ್ಪು 15ಕ್ಕೆ: ಅಂತಾರಾಷ್ಟ್ರೀಯ ಕೋರ್ಟ್

|
Google Oneindia Kannada News

ನವದೆಹಲಿ, ಮೇ 10: ಪಾಕಿಸ್ತಾನದಲ್ಲಿ ಗಲ್ಲು ಶಿಕ್ಷೆಗೆ ಒಳಗಾಗಿರುವ ಭಾರತದ ಮಾಜಿ ನೌಕಾಧಿಕಾರಿ ಕುಲಭೂಷಣ್ ಜಾಧವ್ ಅವರ ಪ್ರಕರಣದ ತೀರ್ಪನ್ನು ಸೋಮವಾರ (ಮೇ 15) ಪ್ರಕಟಿಸುವುದಾಗಿ ಅಂತಾರಾಷ್ಟ್ರೀಯ ನ್ಯಾಯಾಲಯ ಹೇಳಿದೆ.

ಕುಲಭೂಷಣ್ ಗೆ ಪಾಕಿಸ್ತಾನ ಸೇನಾ ನ್ಯಾಯಾಲಯವು ಗಲ್ಲು ಶಿಕ್ಷೆ ವಿಧಿಸಿರುವ ಹಿನ್ನೆಲೆಯಲ್ಲಿ ಭಾರತ ಸರ್ಕಾರ, ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ದಾವೆ ಹೂಡಿತ್ತು. ಭಾರತದ ದಾಖಲಿಸಿದ್ದ ಪ್ರಕರಣದ ವಿಚಾರಣೆ ನಡೆಸಿದ್ದ ಅಂತಾರಾಷ್ಟ್ರೀಯ ನ್ಯಾಯಾಲಯವು ಮಂಗಳವಾರ ಪಾಕಿಸ್ತಾನ ಸೇನಾ ನ್ಯಾಯಾಲಯ ನೀಡಿದ್ದ ಗಲ್ಲು ಶಿಕ್ಷೆಗೆ ತಡೆಯಾಜ್ಞೆ ನೀಡಿತ್ತು.

ಇದೀಗ, ಈ ಪ್ರಕರಣದ ತೀರ್ಪನ್ನು ಮೇ 15ರಂದು ಪ್ರಕಟಿಸುವುದಾಗಿ ನ್ಯಾಯಾಲಯ ಹೇಳಿದೆ.[ಕುಲಭೂಷಣ್ ಗಲ್ಲು ಶಿಕ್ಷೆಗೆ ಅಂತಾರಾಷ್ಟ್ರೀಯ ಕೋರ್ಟ್ ತಡೆಯಾಜ್ಞೆ]

Internatinoal Court's judgement about Kulbhushan on May 15

ಏತನ್ಮಧ್ಯೆ, ಅಂತಾರಾಷ್ಟ್ರೀಯ ನ್ಯಾಯಾಲಯದ ತಡೆಯಾಜ್ಞೆ ಹಿನ್ನೆಲೆಯಲ್ಲಿ, ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಹಾಗೂ ಪಾಕಿಸ್ತಾನ ಸೇನಾ ಮುಖ್ಯಸ್ಥ ಖಮರ್ ಜಾವೇದ್ ಬಾವ್ಜಾ ನಡುವೆ ಮೇ 10ರಂದು ಮಾತುಕತೆ ನಡೆದಿದೆ.['ಕಾಶ್ಮೀರದಲ್ಲಿ ಜಿಹಾದ್ ಗಾಗಿ ಲಾಡೆನ್ ನಿಂದ ಹಣ ಪಡೆದಿದ್ದ ನವಾಜ್ ಷರೀಫ್']

ಕಳೆದ ವರ್ಷ ಏಪ್ರಿಲ್ ನಲ್ಲಿ ಪಾಕಿಸ್ತಾನದಲ್ಲಿ ಬಂಧಿತರಾಗಿರುವ ಕುಲಭೂಷಣ್ ಜಾಧವ್ ಅವರು ಭಾರತದ ಗುಪ್ತಚರ ದಳವಾದ RAW ಪರವಾಗಿ ಪಾಕಿಸ್ತಾನ ಕರಾಚಿ ಹಾಗೂ ಬಲೂಚಿಸ್ತಾನದಲ್ಲಿ ಕುಲಭೂಷಣ್ ಜಾಧವ್ ಗೂಢಚರ್ಯೆ ನಡೆಸಿದ್ದಾಗಿ, ಪಾಕಿಸ್ತಾನ ಆರೋಪಿಸಿದೆ.

English summary
The international court will despense its verdict regarding Kulbhushan Jadhav who is facing death sentence by Pakistan Military Court, on May 15, 2017, reports said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X