ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೂಪರ್ ಕೆಂಪು ಚಂದ್ರನ ಕುರಿತು ಇಂಟರೆಸ್ಟಿಂಗ್ ಸಂಗತಿ

By Prasad
|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 25 : ಸರಿಯಾಗಿ 33 ವರ್ಷಗಳ ನಂತರ ಇಂಥದೊಂದು ವಿಶಿಷ್ಟ ಬಗೆಯ ವಿದ್ಯಮಾನ ನಭೋಮಂಡಲದಲ್ಲಿ ಸೆಪ್ಟೆಂಬರ್ 27-28ರಂದು ಜರುಗಲಿದೆ. 27ರ ರಾತ್ರಿ ಸೂಪರ್ ಚಂದ್ರ ಗ್ರಹಣ ಸಂಭವಿಸಲಿದ್ದು, ಭೂಮಿಯನ್ನು ಸದಾ ಸುತ್ತುತ್ತಲೇ ಇರುವ ಚಂದ್ರನು ಭುವಿಗೆ ಅತೀ ಹತ್ತಿರದಲ್ಲಿ ಗೋಚರಿಸಲಿದ್ದಾನೆ. ಈ ರೀತಿ ಮತ್ತೆ ಗೋಚರಿಸುವುದು 2033ರಲ್ಲಿ.

1900ರಿಂದ ಕೇವಲ ಐದು ಬಾರಿ ಮಾತ್ರ ಚಂದ್ರ ಇಷ್ಟು ಹತ್ತಿರಕ್ಕೆ ಬಂದಿದ್ದಾನೆ. ವಿಜ್ಞಾನಿಗಳ ಪ್ರಕಾರ, ಅನಂತ ಹುಣ್ಣಿಮೆಯಂದು ಚಂದ್ರ ಶೇ.14ರಷ್ಟು ದೊಡ್ಡದಾಗಿ ಕಂಗೊಳಿಸಲಿದ್ದು, ಶೇ.30ರಷ್ಟು ಹೆಚ್ಚು ಬೆಳದಿಂಗಳನ್ನು ಪೃಥ್ವಿಯ ಮೇಲೆ ಪಸರಿಸಲಿದ್ದಾನೆ. ಆದರೆ, ದುರಾದೃಷ್ಟದ ಸಂಗತಿಯೆಂದರೆ, ಈ ಚಂದ್ರ ಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ. [ಸಮಯವಿದ್ದರೆ ಈ ಸಣ್ಣಕಥೆ ಓದಿರಿ]

ಸೆಪ್ಟೆಂಬರ್ 27ರ ರಾತ್ರಿ ಉತ್ತರ ಮತ್ತು ದಕ್ಷಿಣ ಅಮೆರಿಕ, ಯುರೋಪ್, ಆಫ್ರಿಕಾ, ಏಷ್ಯಾದ ಪಶ್ಚಿಮ ಭಾಗಗಳಲ್ಲಿ ಮತ್ತು ಪೆಸಿಫಿಕ್ ಪೂರ್ವ ಭಾಗದಲ್ಲಿ ಸಂಪೂರ್ಣ ಚಂದ್ರ ಗ್ರಹಣ ಗೋಚರಿಸಲಿದೆ. 28ರ ಮುಂಜಾವಿನಲ್ಲಿ ಪಾಕಿಸ್ತಾನ, ಅಫಘಾನಿಸ್ತಾನ ಮತ್ತು ಇರಾನ್ ಪೂರ್ವ ಭಾಗದಲ್ಲಿ ಭಾಗಶಃ ಗ್ರಹಣ ಗೋಚರಿಸಲಿದೆ.

ಒಟ್ಟು 1 ಗಂಟೆ 12 ನಿಮಿಷಗಳ ಕಾಲ ಚಂದ್ರನ ಮೇಲೆ ಭೂಮಿಯ ನೆರಳು ಆವರಿಸಿಕೊಳ್ಳಲಿದೆ. 10.11ಕ್ಕೆ ಗ್ರಹಣ ಆರಂಭವಾಗಲಿದ್ದು, 10.47ಕ್ಕೆ ಸಂಪೂರ್ಣ ಗ್ರಹಣ ಸಂಭವಿಸಲಿದೆ. ಈ ಸೂಪರ್ ಮೂನ್ ಅಥವಾ ಕೆಂಪು ಚಂದ್ರನ ಕುರಿತಂತೆ ಕೆಲ ಇಂಟರೆಸ್ಟಿಂಗ್ ಸಂಗತಿಗಳು ಮುಂದಿವೆ, ಓದಿರಿ. [ದೇವರನ್ನೇ ಸಂಕಷ್ಟದಲ್ಲಿ ಸಿಲುಕಿಸುವ ಗ್ರಹಣ!]

ಬ್ಲಡ್ ಮೂನ್ ಅಥವಾ ಸೂಪರ್ ಮೂನ್

ಬ್ಲಡ್ ಮೂನ್ ಅಥವಾ ಸೂಪರ್ ಮೂನ್

ಚಂದ್ರ ಭೂಮಿಗೆ ಅತೀ ಹತ್ತಿರದಲ್ಲಿ ಬರುವುದರಿಂದ ಮತ್ತು ಅದೇ ಸಮಯದಲ್ಲಿ ಗ್ರಹಣವೂ ಇರುವುದರಿಂದ ಮತ್ತು ಚಂದ್ರ ಕೆಂಪಾಗಿ ಗೋಚರಿಸಲಿದ್ದರಿಂದ ಚಂದ್ರನನ್ನು ಬ್ಲಡ್ ಮೂನ್ ಅಥವಾ ಸೂಪರ್ ಮೂನ್ ಎಂದು ಕರೆಯುತ್ತಾರೆ. ಚಂದ್ರ ಕೆಂಪಾಗಿ ಕಾಣುವುದಕ್ಕೂ ಭೂಮಿಯ ವಾತಾವರಣವೇ ಕಾರಣ.

ವಿಜ್ಞಾನಿ, ಜ್ಯೋತಿಷಿಗಳಲ್ಲಿ ಪುಳಕ

ವಿಜ್ಞಾನಿ, ಜ್ಯೋತಿಷಿಗಳಲ್ಲಿ ಪುಳಕ

ಈ ವಿಶಿಷ್ಟ ವಿದ್ಯಮಾನವನ್ನು ವಿಜ್ಞಾನಿಗಳು ಮತ್ತು ಜ್ಯೋತಿಷಿಗಳು ಎದುರು ನೋಡುತ್ತಿದ್ದಾರೆ. ಚಂದ್ರನ ಅಧ್ಯಯನಕ್ಕೆ ವಿಜ್ಞಾನಿಗಳು ಮೀಸಲಿಡಲಿದ್ದರೆ, ಇದನ್ನೇ ಬಂಡವಾಳ ಮಾಡಿಕೊಳ್ಳುವ ಜ್ಯೋತಿಷಿಗಳು ಇದರಿಂದ ಏನಾದರೂ ಅವಘಡ ಸಂಭವಿಸಬಹುದೆ ಎಂದು ಲೆಕ್ಕ ಹಾಕುತ್ತಿದ್ದಾರೆ.

ಪ್ರಳಯ ಸಂಭವಿಸುವುದೆ?

ಪ್ರಳಯ ಸಂಭವಿಸುವುದೆ?

ಈ ಸಮಯದಲ್ಲಿ ಭೂಮಿಗೆ ಕ್ಷುದ್ರ ಗ್ರಹವೊಂದು ಅಪ್ಪಳಿಸುವುದರಿಂದ ಪ್ರಳಯ ಸಂಭವಿಸಲಿದೆ ಎಂದು ಗಾಳಿಸುದ್ದಿಗಳು ಹರಿದಾಡುತ್ತಿವೆ. ಈ ವಿಷಯ ಕೇಳಿ ಆಸ್ತಿಕರು ಆತಂಕಕ್ಕೀಡಾಗಿದ್ದರೆ, ವಿಜ್ಞಾನಿಗಳು ಗಹಗಹಿಸಿ ನಗುತ್ತಿದ್ದಾರೆ. ನಾಸಾ ಕೂಡ ಇಂಥ ಪ್ರಮೇಯವನ್ನು ಅಲ್ಲಗಳೆದಿದೆ.

ಜ್ಯೋತಿಷಿಗಳ ಬುರುಡೆ ಭವಿಷ್ಯ

ಜ್ಯೋತಿಷಿಗಳ ಬುರುಡೆ ಭವಿಷ್ಯ

ಫ್ರೆಂಚ್ ನ ಪ್ರಸಿದ್ಧ ಜ್ಯೋತಿಷಿ ನಾಸ್ಟ್ರಡಾಮಸ್ ಜಗತ್ತು 1999ರಲ್ಲಿ ಧ್ವಂಸವಾಗುವುದೆಂದು ಭವಿಷ್ಯ ನುಡಿದಿದ್ದ. 2012ರಲ್ಲಿ ಕೂಡ ಮಾಯನ್ ಕ್ಯಾಲೆಂಡರ್ ಪ್ರಕಾರ ಭೂಮಿಯ ನಿರ್ನಾಮವಾಗಲಿದೆ ಎಂಬ ಸುದ್ದಿ ಹಬ್ಬಿತ್ತು. ಆದರೆ, ಇಂದು ಏನಾಗಿದೆ? ಪ್ರತಿ ಬಾರಿ ಗ್ರಹಣ ಸಂಭವಿಸಿದಾಗ ನುಡಿಯಲಾದ ಇಂಥ ಸರ್ವನಾಶದ ಭವಿಷ್ಯಗಳೆಲ್ಲ ಸುಳ್ಳಾಗಿವೆ.

ಫ್ರಾನ್ಸ್ ವಿದೇಶ ಸಚಿವ ಹೇಳಿದ್ದೇನು?

ಫ್ರಾನ್ಸ್ ವಿದೇಶ ಸಚಿವ ಹೇಳಿದ್ದೇನು?

ಅಲ್ಲೋಲಕಲ್ಲೋಲವನ್ನು ತಪ್ಪಿಸಲು ನಮಗೆ ಕೇವಲ 500 ದಿನಗಳಿವೆ ಎಂದು 2014ರ ಮೇ 13ರಂದು ಫ್ರಾನ್ಸ್ ವಿದೇಶ ಸಚಿವರೊಬ್ಬರು ಎಚ್ಚರಿಕೆ ನೀಡಿದ್ದರು. ಆ 500 ದಿನಗಳ ಡೆಡ್ ಲೈನ್ ಸರಿಯಾಗಿ ಸೂಪರ್ ಮೂನ್ ಗ್ರಹಣದ ಸಮಯದಲ್ಲಿ ಮುಕ್ತಾಯವಾಗಲಿದೆ. ಏನಾಗುತ್ತೋ ನೋಡೇಬಿಡೋಣ.

ನಾಸಾದಿಂದ ಲೈವ್ ಸ್ಟ್ರೀಮಿಂಗ್

ನಾಸಾದಿಂದ ಲೈವ್ ಸ್ಟ್ರೀಮಿಂಗ್

ಎಲ್ಲೆಲ್ಲಿ ಚಂದ್ರ ಗ್ರಹಣ ಗೋಚರಿಸುತ್ತದೋ ಅಲ್ಲೆಲ್ಲ ಜನರು ಬರಿಗಣ್ಣಿನಿಂದ ಚಂದ್ರ ಗ್ರಹಣವನ್ನು ಯಾವೂದೇ ಪೂರ್ವಾಗ್ರಹವಿಲ್ಲದೆ ವೀಕ್ಷಿಸಬಹುದು. ಭಾರತದಂಥ ದೇಶದಲ್ಲಿ ಗೋಚರಿಸದಿದ್ದರಿಂದ ನಾಸಾ ಒದಗಿಸುತ್ತಿರುವ ಲೈವ್ ಸ್ಟ್ರೀಮಿಂಗ್ ಮೂಲಕ ಈ ಅದ್ಭುತವನ್ನು ವೀಕ್ಷಿಸಬಹುದು.

English summary
Some interesting facts about Super moon or blood moon. Lunar eclipse is colliding with Super moon this time. It is happening after a gap of 33 years. Moon will look larger and brighter than usual on September 27 and 28. NASA will live stream the event.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X