ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಕಾಶದ 'ಬಿಗ್ ಬಾಸ್ ' ಮನೆ ಬಗ್ಗೆ ಗೊತ್ತಿರದ ಸಂಗತಿಗಳು

|
Google Oneindia Kannada News

ಬೆಂಗಳೂರು, ನವೆಂಬರ್, 03: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಇದೀಗ 15 ರ ಹರೆಯ. ಬಾಹ್ಯಾಕಾಶದಲ್ಲಿ ಮಾನವ ಉಳಿಯುವ ತಾಣ ಬಾಹ್ಯಾಕಾಶ ನಿಲ್ದಾಣ. 2000 ನೇ ಇಸವಿ ನವೆಂಬರ್ 2ರಂದು ಮಾನವ ಮೊದಲ ಬಾರಿಗೆ ಈ ನಿಲ್ದಾಣದಲ್ಲಿ ವಾಸ ಮಾಡಿದ.

ಭೂಮಿ ಮೇಲೆ ಹಲ್ಲುಜ್ಜುವಾಗ ಬ್ರಷ್ ಕೈಜಾರಿದರೆ ಕೆಳಕ್ಕೆ ಬೀಳುತ್ತದೆ. ಅಥವಾ ವಸ್ತುಗಳೆಲ್ಲ ಇಲ್ಲಿ ನಾವು ಇಟ್ಟಲ್ಲಿಯೇ ಇರುತ್ತವೆ ಇದಕ್ಕೆ ಗುರಯತ್ವಾಕರ್ಷಣಾ ಶಕ್ತಿ ಕಾರಣ. ಆದರೆ ಬಾಹ್ಯಾಕಾಶದಲ್ಲಾದರೆ ಶೂನ್ಯ ಗುರುತ್ವದಿಂದಾಗಿ ಈ ವಸ್ತುಗಳೆಲ್ಲವೂ ಗಾಳಿಯಲ್ಲಿ ತೇಲುತ್ತಾ ಎಲ್ಲೆಂದರಲ್ಲಿ ಹೋಗಿ ಅನಾಹುತವಾಗುತ್ತದೆ. ಆದ್ದರಿಂದ ಅವುಗಳನ್ನು ಯಾವುದಾದರೂ ಸ್ಥಿರವಾದ ಆಧಾರಕ್ಕೆ ಕಟ್ಟಿಹಾಕಿರಬೇಕು. ಗಗನಯಾತ್ರಿ ನಿದ್ರೆ ಮಾಡುವಾಗ ಸ್ಲೀಪಿಂಗ್ ಬ್ಯಾಗ್‌ನಲ್ಲಿ ಝಿಪ್ ಹಾಕಿ, ಬಿಗಿಯಾಗಿ ಕಟ್ಟಿಕೊಂಡು ಮಲಗಬೇಕು.

ಪ್ರತಿದಿನ ವಿವಿಧ ಪ್ರಯೋಗಗಳು ಇಲ್ಲಿ ನಡೆಯುತ್ತಲೇ ಇರುತ್ತವೆ. ಅದು ಭೌತ ವಿಜ್ಞಾನ, ಸಂಶೋಧನೆ, ಬಾಹ್ಯಾಕಾಶ ಸಂಶೋಧನೆ ಯಾವುದಕ್ಕೆ ಸಂಬಂಧಿಸಿದ್ದಾರೂ ಆಗಿರಬಹುದು. ಬಾಹ್ಯಾಕಾಶ ನಿಲ್ದಾಣದ ಬಗ್ಗೆ ನಮಗೆ ಗೊತ್ತಿಲ್ಲದ ಕೆಲ ಸಂಗತಿಗಳನ್ನು ತಿಳಿದುಕೊಂಡು ಬರೋಣ...[ಚಿತ್ರಗಳು: ನಾಸಾ)

ವಾಸಮಾಡಿದವರೆಷ್ಟು?

ವಾಸಮಾಡಿದವರೆಷ್ಟು?

ಇಲ್ಲಿಯವರೆಗೆ ಬಾಹ್ಯಾಕಾಶ ನಿಲ್ದಾಣದಲ್ಲಿ 17 ರಾಷ್ಟ್ರಗಳ 220 ಗಗನ ಯಾತ್ರಿಗಳು ವಾಸ ಮಾಡಿದ್ದಾರೆ.

ಭೂಮಿಗೆ ಸಂಬಂಧಿಸಿದ ಸಂಶೋಧನೆ

ಭೂಮಿಗೆ ಸಂಬಂಧಿಸಿದ ಸಂಶೋಧನೆ

ಇದೇ ನಿಲ್ದಾಣದಲ್ಲಿ ಕೂತು ವಿಜ್ಞಾನಿಗಳು ಭೂಮಿಗೆ ಸಂಬಂಧಿಸಿ ಮಾಡಿದ ಸಂಶೋಧನೆಗಳು ಬರೋಬ್ಬರಿ 87,600!

ಮಾಡಿದ ಊಟ ಎಷ್ಟು?

ಮಾಡಿದ ಊಟ ಎಷ್ಟು?

ಇಲ್ಲಿಯವರೆಗೆ ಬಾಹ್ಯಾಕಾಶ ನಿಲ್ದಾಣದಲ್ಲಿ 26,500 ಸಾರಿ ಊಟ ಮಾಡಲಾಗಿದೆ. ಇದು ಒಂದು ಸಾಧನೆಯೇ!

189 ಹೆಜ್ಜೆ ಇಡಲಾಗಿದೆ

189 ಹೆಜ್ಜೆ ಇಡಲಾಗಿದೆ

9 ದೇಶದ 122 ಗಗನ ಯಾತ್ರಿಗಳು ಅಂತಾರಾ‍ಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ನಿರ್ಮಿಸಲು ಮತ್ತು ಸುಸ್ಥಿತಿಯಲ್ಲಿ ಇಡಲು 189 ಆಕಾಶದಲ್ಲಿ ಹೆಜ್ಜೆ ಇಟ್ಟಿದ್ದಾರೆ.

 522 ದಿನ ಕಳೆದಿರುವ ಸ್ಕಾಟ್ ಕೆಲ್ಲಿ

522 ದಿನ ಕಳೆದಿರುವ ಸ್ಕಾಟ್ ಕೆಲ್ಲಿ

ಬಾಹ್ಯಾಕಾಶ ನಿಲ್ದಾಣದಲ್ಲಿ ಅಮೆರಿಕದ ಸ್ಕಾಟ್ ಕೆಲ್ಲಿ 522 ದಿನ ಕಳೆದಿರುವ ದಾಖಲೆ ಮಾಡಿದ್ದಾರೆ. ವಿಜ್ಞಾನಿಗಳಿಗೆ ಅಗತ್ಯ ಮಾಹಿತಿ ನೀಡುತ್ತ ಬಂದಿದ್ದಾರೆ.

ಸೋಲಾರ್ ಸೆಲ್ ಗಳು

ಸೋಲಾರ್ ಸೆಲ್ ಗಳು

2000ನೇ ಇಸವಿಯ ಆರಂಭದಲ್ಲಿ ಕೆಲ ಸೋಲಾರ್ ಸೆಲ್ ಗಳು ಇಡೀ ನಿಲ್ದಾಣದ ಪವರ್ ಜನರೇಶನ್ ನೊಡಿಕೊಳ್ಳುತ್ತಿದ್ದವು.

37 ಬಾಹ್ಯಾಕಾಶ ವಿಮಾನ

37 ಬಾಹ್ಯಾಕಾಶ ವಿಮಾನ

ವಿವಿಧ ದೇಶಗಳ 37 ಬಾಹ್ಯಾಕಾಶ ವಿಮಾನಗಳನ್ನು ನಿಲ್ದಾಣದ ಮೂಲಕವೇ ಹಾರಿ ಬಿಡಲಾಗಿದೆ. ಅಮೆರಿಕ, ಜಪಾನ್, ಕೆನಡಾದ ಬಾಹ್ಯಾಕಾಶ ವಿಮಾನಗಳನ್ನು ಇಲ್ಲಿಂದಲೇ ಹಾರಿ ಬಿಡಲಾಗಿದೆ.

ನಿಲ್ದಾಣ ಎಷ್ಟು ದೊಡ್ಡದಿದೆ?

ನಿಲ್ದಾಣ ಎಷ್ಟು ದೊಡ್ಡದಿದೆ?

ಆರು ಬೆಡ್ ರೂಂ ನ ಮನೆಯಷ್ಟು ದೊಡ್ಡದಿರುವ ಬಾಹ್ಯಾಕಾಶ ನಿಲ್ದಾಣ ಫುಟ್ ಬಾಲ್ ಅಂಕಣದಷ್ಟಿದೆ.

ಎಷ್ಟು ತೂಕವಿದೆ?

ಎಷ್ಟು ತೂಕವಿದೆ?

454,000 ಕೆಜಿ ಇರುವ ನಿಲ್ದಾಣ 3.3 ಮಿಲಿಯನ್ ಸಾಫ್ಟ ವೇರ್ ಆಧರಿಸಿ ಕಾರ್ಯನಿರ್ವಹಿಸುತ್ತಿದೆ. ಭೂಮಿಯ ನಿಕಟವರ್ತಿ ಕಕ್ಷೆಯಲ್ಲಿ ಇದನ್ನು ಸ್ಥಾಪಿಸಲಾಗಿದೆ.

English summary
On November 2, 2000 human marked into International Space Station. The space station is a microgravity and space environment research lab, where crew members carry out experiments in biology, physics. Here some Interesting Facts about International Space Station.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X