• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಾಮಾಜಿಕ ಜಾಲತಾಣದ ಪೋಸ್ಟ್‌ನಿಂದ, 10 ವರ್ಷ ಜೈಲು ಶಿಕ್ಷೆಗೆ ಗುರಿಯಾದ ಇರಾನ್‌ನ ಇನ್‌ಸ್ಟಾಗ್ರಾಮ್‌ ಸ್ಟಾರ್‌

|
Google Oneindia Kannada News

ತೆಹ್ರಾನ್, ಡಿಸೆಂಬರ್ 12: ತಮ್ಮ ಸಾಮಾಜಿಕ ಜಾಲತಾಣದ ಪೋಸ್ಟ್‌ನಿಂದಾಗಿ ಇರಾನ್ ಮೂಲದ ಇನ್‌ಸ್ಟಾಗ್ರಾಮ್ ಸ್ಟಾರ್ ಸಹರ್ ತಬರ್ 10 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ.

ಲಕ್ಷಾಂತರ ಇನ್‌ಸ್ಟಾಗ್ರಾಮ್‌ ಫಾಲೋವರ್ಸ್ ಹೊಂದಿರುವ ಸಹರ್ ತಬರ್ ಅವರ ನಿಜವಾದ ಹೆಸರು ಫಾತಿಮೆಹ್ ಖಿಶ್ವಾಂಡ್. ಈಕೆ ಹಾಲಿವುಡ್ ಸೂಪರ್‌ಸ್ಟಾರ್ ಏಂಜೆಲಿನಾ ಜೋಲಿ ಅವರನ್ನು ಹೋಲುವ 'ಜೊಂಬಿ ಆವೃತ್ತಿಯನ್ನು' ಹೋಲುವಂತೆ ಮೇಕಪ್‌ನಲ್ಲಿ ಕಾಣಿಸಿಕೊಂಡು ಫೋಟೊವನ್ನು ಹಂಚಿಕೊಂಡಿದ್ದರು. ಈಕೆಯ ಪೋಸ್ಟ್‌ಗಳು ಆರಂಭದಲ್ಲೀ ತಮಾಷೆಯಾಗಿ ಕಂಡು ಬಂದು, ನಂತರದಲ್ಲಿ ಭಾರೀ ವೈರಲ್ ಆಗಿತ್ತು.

ಏಲಿಯನ್‌ಗಳಿರುವುದು ನಿಜ, ಅದು ಡೊನಾಲ್ಡ್‌ ಟ್ರಂಪ್‌ಗೆ ಗೊತ್ತು!ಏಲಿಯನ್‌ಗಳಿರುವುದು ನಿಜ, ಅದು ಡೊನಾಲ್ಡ್‌ ಟ್ರಂಪ್‌ಗೆ ಗೊತ್ತು!

2019ರಲ್ಲಿ ಸಹರ್ ತಬರ್ ಬಂಧನ

2019ರಲ್ಲಿ ಸಹರ್ ತಬರ್ ಬಂಧನ

ಸಹರ್ ತಬರ್ ತಮ್ಮ ವಿಚಿತ್ರ ಫೋಟೋಗಳ ಮೂಲಕ ಸಾಕಷ್ಟು ಬೇಗನೆ ಪ್ರಚಾರ ಪಡೆದುಕೊಂಡರು. ಈಕೆಯ ವಿಚಿತ್ರ ಪೋಸ್ಟ್‌ಗಳನ್ನು ಕಂಡು ಫಾಲೋವರ್ಸ್‌ ಕೂಡ ಹೆಚ್ಚಾದರು. ಇದು ಸ್ಥಳೀಯ ಆಡಳಿತದ ಕಣ್ಣಿಗೂ ಬಿತ್ತು, ಈಕೆಯನ್ನು ಅಕ್ಟೋಬರ್ 5, 2019 ರಂದು ಇರಾನ್‌ನಲ್ಲಿ ಬಂಧಿಸಲಾಯಿತು. ಜೊತೆಗೆ ಇತರ ಮೂವರು ಮಹಿಳಾ ಇನ್‌ಸ್ಟಾಗ್ರಾಮ್ ಪ್ರಭಾವಿಗಳನ್ನು ಕೂಡ ಸ್ಥಳೀಯ ಪೊಲೀಸರು ಬಂಧಿಸಿದರು.

ಒಂದು ವರ್ಷದ ವಿಚಾರಣೆ ಬಳಿಕ 10 ವರ್ಷ ಜೈಲು ಶಿಕ್ಷೆ

ಒಂದು ವರ್ಷದ ವಿಚಾರಣೆ ಬಳಿಕ 10 ವರ್ಷ ಜೈಲು ಶಿಕ್ಷೆ

ಕಳೆದ ಒಂದು ವರ್ಷದಿಂದ ಬಂಧನದಲ್ಲಿದ್ದ ಈಕೆಗೆ ಇದೀಗ 10 ವರ್ಷ ಜೈಲು ಶಿಕ್ಷೆ ದೃಢವಾಗಿದೆ. ಇರಾನಿನ ಪತ್ರಕರ್ತ ಮಾಸಿಹ್ ಅಲಿನೆಜಾದ್ ಅವರು ಮೇಲ್ಆನ್‌ಲೈನ್‌ಗೆ ಮಾತನಾಡುತ್ತಾ, ತಾನು ತಬಾರ್ ಅವರ ವಕೀಲರೊಂದಿಗೆ ಮಾತನಾಡಿದ್ದು, ಅವರು ‘ಸಾರ್ವಜನಿಕ ಭ್ರಷ್ಟಾಚಾರವನ್ನು ಉತ್ತೇಜಿಸಿದ್ದಕ್ಕಾಗಿ' ಈ ವಾರ ಅವರಿಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು ದೃಢಪಡಿಸಿದರು ಎಂದು ತಿಳಿಸಿದ್ದಾರೆ.

ಸಹರ್ ತಬರ್‌ರ ವಕೀಲರೆ ಸ್ವತಃ ಆಕೆಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ ಎಂಬುದನ್ನು ದೃಢಪಡಿಸಿದ್ದಾರೆ ಎಂದು ಮೆಟ್ರೋ.ಕೊ.ಯುಕೆ ವರದಿ ಮಾಡಿದೆ.

ಉಪಗ್ರಹ ಆಧಾರಿತ ಮಷಿನ್ ಗನ್ ಬಳಸಿ ಅಣು ವಿಜ್ಞಾನಿ ಹತ್ಯೆ!ಉಪಗ್ರಹ ಆಧಾರಿತ ಮಷಿನ್ ಗನ್ ಬಳಸಿ ಅಣು ವಿಜ್ಞಾನಿ ಹತ್ಯೆ!

ಒಂದು ವರ್ಷದ ವಿಚಾರಣೆ ಬಳಿಕ 10 ವರ್ಷ ಜೈಲು ಶಿಕ್ಷೆ

ಒಂದು ವರ್ಷದ ವಿಚಾರಣೆ ಬಳಿಕ 10 ವರ್ಷ ಜೈಲು ಶಿಕ್ಷೆ

ಕಳೆದ ಒಂದು ವರ್ಷದಿಂದ ಬಂಧನದಲ್ಲಿದ್ದ ಈಕೆಗೆ ಇದೀಗ 10 ವರ್ಷ ಜೈಲು ಶಿಕ್ಷೆ ದೃಢವಾಗಿದೆ. ಇರಾನಿನ ಪತ್ರಕರ್ತ ಮಾಸಿಹ್ ಅಲಿನೆಜಾದ್ ಅವರು ಮೇಲ್ಆನ್‌ಲೈನ್‌ಗೆ ಮಾತನಾಡುತ್ತಾ, ತಾನು ತಬಾರ್ ಅವರ ವಕೀಲರೊಂದಿಗೆ ಮಾತನಾಡಿದ್ದು, ಅವರು ‘ಸಾರ್ವಜನಿಕ ಭ್ರಷ್ಟಾಚಾರವನ್ನು ಉತ್ತೇಜಿಸಿದ್ದಕ್ಕಾಗಿ' ಈ ವಾರ ಅವರಿಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು ದೃಢಪಡಿಸಿದರು ಎಂದು ತಿಳಿಸಿದ್ದಾರೆ.

ಸಹರ್ ತಬರ್‌ರ ವಕೀಲರೆ ಸ್ವತಃ ಆಕೆಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ ಎಂಬುದನ್ನು ದೃಢಪಡಿಸಿದ್ದಾರೆ ಎಂದು ಮೆಟ್ರೋ.ಕೊ.ಯುಕೆ ವರದಿ ಮಾಡಿದೆ.

  ಹೊಸ ವರುಷ ಆಚರಣೆ ಮೂಡ್ ಅಲ್ಲಿ ಇದ್ರೆ ಬ್ರೇಕ್ ಹಾಕಿ! | New Year 2021 | Oneindia Kannada
  ಇರಾನ್‌ನಲ್ಲಿ ಇನ್‌ಸ್ಟಾಗ್ರಾಮ್ ಬಳಕೆಗೆ ಮಾತ್ರ ಅನುಮತಿ ಇದೆ

  ಇರಾನ್‌ನಲ್ಲಿ ಇನ್‌ಸ್ಟಾಗ್ರಾಮ್ ಬಳಕೆಗೆ ಮಾತ್ರ ಅನುಮತಿ ಇದೆ

  ಆಶ್ಚರ್ಯ ಏನಂದ್ರೆ ಇರಾನ್‌ನಲ್ಲಿ ಅಧಿಕೃತವಾಗಿ ಬಳಸಲು ಅನುಮತಿ ನೀಡಿರುವ ಏಕೈಕ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್ ಆಗಿದ್ದು, ಸಹರ್ ತಬರ್ ತಮ್ಮ ಎಡಿಟೆಡ್ ಫೋಟೊಗಳನ್ನು ಹರಿಬಿಟ್ಟ ಬಳಿಕ 4,86,000 ಫಾಲೋವರ್ಸ್ ಹೆಚ್ಚಾಗಿದ್ದರು.

  English summary
  An Instagram influencer who used makeup and editing to make her face look like a ‘Zombie Angelina Jolie’ has been jailed in Iran.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X