ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾದ ಮಾತು ಕೇಳಿ ಅಧಿಕಾರ ಕಳೆದುಕೊಳ್ಳುವತ್ತ ನೇಪಾಳ ಪ್ರಧಾನಿ

|
Google Oneindia Kannada News

ಕಠ್ಮಂಡು, ಜುಲೈ 3: ಭಾರತದ ವಿರುದ್ದ ಗಡಿ ಸಮರ ಘೋಷಿಸಿದ್ದ ನೇಪಾಳದ ಪ್ರಧಾನಿ ಕೆ.ಪಿ.ಶರ್ಮಾ ಒಲಿ, ಈಗ ತಮ್ಮ ಹುದ್ದೆಯನ್ನೇ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.

ಆಡಳಿತಾರೂಢ ಪಕ್ಷದವರೇ ಒಲಿ, ಸರಕಾರ ಮುನ್ನಡೆಸುವಲ್ಲಿ ಅಸಮರ್ಥರಾಗಿದ್ದಾರೆ, ಹುದ್ದೆಯಿಂದ ಕೆಳಗಿಳಿವುದಷ್ಟೇ ಅವರಿಗಿರುವ ಆಯ್ಕೆ ಎನ್ನುವ ಪಟ್ಟು ಹಿಡಿದಿದ್ದಾರೆ.

ನೇಪಾಳ ಪ್ರಧಾನಿ ಶರ್ಮಾಗೆ ಅನಾರೋಗ್ಯ ಆಸ್ಪತ್ರೆಗೆ ದಾಖಲುನೇಪಾಳ ಪ್ರಧಾನಿ ಶರ್ಮಾಗೆ ಅನಾರೋಗ್ಯ ಆಸ್ಪತ್ರೆಗೆ ದಾಖಲು

ತಮ್ಮ ಪಕ್ಷದ ಕೆಲವು ಮುಖಂಡರನ್ನು ಬಲೆಗೆ ಹಾಕಿಕೊಂಡು, ಸರಕಾರ ಕೆಡವಲು ಭಾರತ ಯತ್ನಿಸುತ್ತಿದೆ ಎನ್ನುವ ಪ್ರಧಾನಿ ಒಲಿ ಆರೋಪ, ಈಗ ಅವರಿಗೇ ತಿರುಗುಬಾಣವಾಗಿದೆ.

ಭಾರತ-ಚೀನಾ ನಡುವೆ ಶಾಂತಿ ಮಂತ್ರ ಜಪಿಸಿದ ನೇಪಾಳಭಾರತ-ಚೀನಾ ನಡುವೆ ಶಾಂತಿ ಮಂತ್ರ ಜಪಿಸಿದ ನೇಪಾಳ

ಇತ್ತ, ಒಲಿ ಪದತ್ಯಾಗಕ್ಕೆ ಒತ್ತಡ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಚೀನಾ ತನ್ನ ಬೇಹುಗಾರಿಕೆ ಪಡೆಯನ್ನು ರಾಜಧಾನಿ ಕಠ್ಮಂಡುವಿಗೆ ಕಳುಹಿಸಿದೆ. ಕೋವಿಡ್ ನಿರ್ವಹಣೆ ನೆಪದಲ್ಲಿ ಚೀನಾದ ಬೇಹುಗಾರರು ಅಲ್ಲಿಗೆ ತಲುಪಿದ್ದಾರೆಂದು ವರದಿಯಾಗಿದೆ.

ಆಡಳಿತಾರೂಢ ನೇಪಾಳ ಕಮ್ಯುನಿಸ್ಟ್ ಪಕ್ಷ

ಆಡಳಿತಾರೂಢ ನೇಪಾಳ ಕಮ್ಯುನಿಸ್ಟ್ ಪಕ್ಷ

ಸ್ವಪಕ್ಷೀಯರಿಂದಲೇ ರಾಜೀನಾಮೆಗೆ ಒತ್ತಡ ಬರುತ್ತಿರುವುದಕ್ಕೆ ಭಾರತದ ಕುಮ್ಮುಕ್ಕೇ ಕಾರಣ ಎಂದು ದೂಷಿಸಿದ್ದ ಪ್ರಧಾನಿ ಒಲಿ, ಈಗ ಆಡಳಿತಾರೂಢ ನೇಪಾಳ ಕಮ್ಯುನಿಸ್ಟ್ ಪಕ್ಷದ ಉನ್ನತ ನಾಯಕರ ತೀವ್ರ ವಿರೋಧ ಎದುರಿಸುತ್ತಿದ್ದಾರೆ. ಪ್ರಧಾನಿ ತಕ್ಷಣವೇ ಸ್ಥಾನದಿಂದ ಕೆಳಗಿಳಿಯಬೇಕೆನ್ನುವ ಭಾರೀ ಒತ್ತಡವಿದೆ ಎಂದು ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಮಾಜಿ ಪ್ರಧಾನಿ ಪುಷ್ಪ ಕಮಲ್ ದಹಾಲ್

ಮಾಜಿ ಪ್ರಧಾನಿ ಪುಷ್ಪ ಕಮಲ್ ದಹಾಲ್

ಮಾಜಿ ಪ್ರಧಾನಿ ಪುಷ್ಪ ಕಮಲ್ ದಹಾಲ್ ಪ್ರಚಂಡ ನೇತೃತ್ವದ ಪ್ರತಿಸ್ಪರ್ಧಿ ಬಣವನ್ನು ತಮ್ಮ ವಿರುದ್ದ ಎತ್ತಿಕಟ್ಟಲು ಭಾರತ ಬಳಸಿಕೊಳ್ಳುತ್ತಿದೆ ಎಂದು ಒಲಿ ಆರೋಪಿಸಿದ್ದರು. ಸಿಪಿಎನ್ (ಕಮ್ಯೂನಿಸ್ಟ್ ಪಾರ್ಟಿ ಆಫ್ ನೇಪಾಳ) ರಹಸ್ಯ ಸಭೆಯಲ್ಲಿ ಪ್ರಚಂಡ, ಮಾಧವ್ ಕುಮಾರ್ ನೇಪಾಳ್, ಬಮದೇವ್ ಗೌತಂ, ಜಲನಾಥ್ ಖುನಾಲ್ ಮುಂತಾದವರು ಭಾಗವಹಿಸಿದ್ದರು.

ಎರಡು ದೇಶಗಳ ನಡುವಿನ ಸಂಬಂಧ ಹಾಳು

ಎರಡು ದೇಶಗಳ ನಡುವಿನ ಸಂಬಂಧ ಹಾಳು

ಸಭೆಯ ನಂತರ, ಭಾರತದ ವಿರುದ್ದ ಒಲಿ ಆರೋಪಿಸುತ್ತಿರುವುದು ಸರಿಯಲ್ಲ. ಅವರು ನೀಡುತ್ತಿರುವ ಬೇಜವಾಬ್ದಾರಿ ಹೇಳಿಕೆಯಿಂದ ಎರಡು ದೇಶಗಳ ನಡುವಿನ ಸಂಬಂಧ ಹಾಳಾಗುತ್ತಿದೆ. ಎಲ್ಲಾ ವಿಧದಲ್ಲೂ ವಿಫಲಾಗಿರುವ ಒಲಿ ರಾಜೀನಾಮೆ ನೀಡುವುದೊಂದೇ ಉಳಿದಿರುವ ದಾರಿ ಎಂದು ಈ ನಾಯಕರು ಹೇಳಿಕೆಯನ್ನು ನೀಡಿದ್ದಾರೆ.

ಭಾರತದ ಸ್ಥಳಗಳನ್ನು ನೇಪಾಳದ ಭೂಪಟದಲ್ಲಿ ಸೇರ್ಪಡೆ

ಭಾರತದ ಸ್ಥಳಗಳನ್ನು ನೇಪಾಳದ ಭೂಪಟದಲ್ಲಿ ಸೇರ್ಪಡೆ

ಭಾರತದ ಸ್ಥಳಗಳನ್ನು ನೇಪಾಳದ ಭೂಪಟದಲ್ಲಿ ಸೇರ್ಪಡೆಗೊಳಿಸಿ, ವಿಧೇಯಕವನ್ನು ಸಂಸತ್ತಿನಲ್ಲೂ ಪ್ರಧಾನಿ ಒಲಿ ಆಂಗೀಕರಿಸಿದ್ದರು. ಇದಲ್ಲದೇ, ಬಿಹಾರದ ಗಡಿ ಭಾಗದಲ್ಲೂ ಓಲಿ ಕ್ಯಾತೆ ತೆಗೆದಿದ್ದರು. ಅಂದಿನಿಂದಲೇ, ಒಲಿ ಸರಕಾರದ ವಿರುದ್ದ ಸ್ವಪಕ್ಷೀಯರಿಂದಲೇ ಅಪಸ್ವರ ಕೇಳಲಾರಂಭಿಸಿತ್ತು.

English summary
Instability Stalks In Nepal As Calls For PM K P Oli's Resignation Growing.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X