ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ವೈರಸ್ ಜಯಿಸಿದ ವೃದ್ಧೆಯ ವಯಸ್ಸು ಕೇಳಿದ್ರೆ ಹೌಹಾರುತ್ತೀರ!

|
Google Oneindia Kannada News

ಮದ್ರಿದ್, ಏಪ್ರಿಲ್.28: ವಿಶ್ವದಾದ್ಯಂತ ಕೊರೊನಾ ವೈರಸ್ ಸೋಂಕು ಅಂದರೆ ಜನರು ಬೆಚ್ಚಿ ಬೀಳುತ್ತಿದ್ದಾರೆ. ಜಗತ್ತಿನಲ್ಲಿ 30,65,200 ಜನರಿಗೆ ಕೊರೊನಾ ವೈರಸ್ ಸೋಂಕು ಅಂಟಿಕೊಂಡಿದ್ದು, ಮಂಗಳವಾರದ ಅಂಕಿ-ಅಂಶಗಳ ಪ್ರಕಾರ 2,11,597 ಜನರು ಪ್ರಾಣ ಬಿಟ್ಟಿದ್ದಾರೆ.

ಕೊಂಚ ನೆಮ್ಮದಿ ಕೊಡುವ ವಿಚಾರ ಅಂದರೆ ಕೊರೊನಾ ವೈರಸ್ ಸೋಂಕಿನಿಂದ ಪ್ರಾಣ ಬಿಟ್ಟವರಿಗಿಂತ ನಾಲ್ಕು ಪಟ್ಟು ಮಂದಿ ಗುಣಮುಖರಾಗಿದ್ದಾರೆ. ಅಂದರೆ 9,22,387 ಜನರು ಸೋಂಕಿನಿಂದ ಮುಕ್ತರಾಗಿದ್ದಾರೆ. ಈ ಪೈಕಿ ಇಡೀ ವಿಶ್ವಕ್ಕೆ ಸ್ಪೂರ್ತಿಯಂತೆ ಆಗಿರುವು 106 ವರ್ಷದ ಹಿರಿಯ ಅಜ್ಜಿಯ ಕಥೆ.

ಕೊರೊನಾ ವಿರುದ್ಧ ಯುದ್ಧ; ಭಾರತಕ್ಕೆ ವರವಾಗುತ್ತಾ 102 ವರ್ಷಗಳ ಅನುಭವ? ಕೊರೊನಾ ವಿರುದ್ಧ ಯುದ್ಧ; ಭಾರತಕ್ಕೆ ವರವಾಗುತ್ತಾ 102 ವರ್ಷಗಳ ಅನುಭವ?

ಸ್ಪ್ಯಾನಿಷ್ ನಲ್ಲಿರುವ 106 ವರ್ಷದ ಅನಾ ಡೆಲ್ ವಲ್ಲೆ ಎರಡು ಸಾಂಕ್ರಾಮಿಕ ಪಿಡುಗುಗಳನ್ನು ಗೆದ್ದು ಚಿರಂಜೀವಿ ಎನಿಸಿದ್ದಾರೆ. ಇಳಿವಯಸ್ಸಿನಲ್ಲೂ ಕೊರೊನಾ ವೈರಸ್ ಎಂಬ ಮಹಾಮಾರಿಯನ್ನು ಜಯಿಸಿದ ವೃದ್ಧೆಯ ಸ್ಟೋರಿ ಜಗತ್ತಿಗೆ ಮಾದರಿ ಎನಿಸಿದೆ.

ವಿಶ್ವ ಕಂಡ ಎರಡು ಮಹಾಮಾರಿಗೂ ಜಗ್ಗದ ಜೀವ

ವಿಶ್ವ ಕಂಡ ಎರಡು ಮಹಾಮಾರಿಗೂ ಜಗ್ಗದ ಜೀವ

ಕೊರೊನಾ ವೈರಸ್ ನ್ನು ಸಾಂಕ್ರಾಮಿಕ ಪಿಡುಗು ಎಂದು ಅಂತಾರಾಷ್ಟ್ರೀಯ ಆರೋಗ್ಯ ಸಂಸ್ಥೆ ಘೋಷಿಸಿದೆ. ಈ ಹಿಂದೆ ಜಗತ್ತನ್ನು ಬೆಚ್ಚಿ ಬೀಳಿಸಿದ ಮತ್ತೊಂದು ಮಹಾಮಾರಿಯೇ ಸ್ಪ್ಯಾನಿಷ್ ಫ್ಲು(ಬಾಂಬೆ ಜ್ವರ). ಎರಡು ಸಾಂಕ್ರಾಮಿಕ ಪಿಡುಗುಗಳು ಅಂಟಿಕೊಂಡರೂ ಅದನ್ನು ಸಮರ್ಥವಾಗಿ ಎದುರಿಸಿ ಸಾವನ್ನು ಗೆದ್ದ ವೃದ್ಧೆ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಸಖತ್ ಸದ್ದು ಮಾಡಿದ್ದಾರೆ.

ಚಿಕ್ಕ ವಯಸ್ಸಿನಲ್ಲಿ ಅಂಟಿದ್ದ ಸ್ಪ್ಯಾನಿಷ್ ಫ್ಲು

ಚಿಕ್ಕ ವಯಸ್ಸಿನಲ್ಲಿ ಅಂಟಿದ್ದ ಸ್ಪ್ಯಾನಿಷ್ ಫ್ಲು

ಕಳೆದ 1918ರಲ್ಲಿ ಪ್ರಪಂಚವನ್ನು ಕಾಡಿದ ಸ್ಪ್ಯಾನಿಷ್ ಫ್ಲು ಎಂಬ ಸಾಂಕ್ರಾಮಿಕ ಪಿಡುಗು ಅನಾ ಡೆಲ್ ವಲ್ಲೆ ಚಿಕ್ಕಂದಿನಲ್ಲಿ ಇದ್ದಾಗಲೇ ಅಂಟಿಕೊಂಡಿತ್ತು. ವಿಶ್ವವನ್ನು 36 ತಿಂಗಳುಗಳ ಕಾಲ ಕಾಡಿದ ಸೋಂಕು ಅಂಟಿಕೊಂಡ ಪುಟ್ಟ ಬಾಲಕಿ ಅಂದು ಸಾಂಕ್ರಾಮಿಕ ರೋಗವನ್ನು ಗೆದ್ದಿದ್ದರು.

ಕೊರೊನಾ ವೈರಸ್ ಮತ್ತು ಭಾರತಕ್ಕೂ 102 ವರ್ಷಗಳ ಹಳೆಯ ನಂಟು!ಕೊರೊನಾ ವೈರಸ್ ಮತ್ತು ಭಾರತಕ್ಕೂ 102 ವರ್ಷಗಳ ಹಳೆಯ ನಂಟು!

ಸ್ಪ್ಯಾನಿಷ್ ಫ್ಲುಗೆ 500 ಮಿಲಿಯನ್ ಮಂದಿ ಬಲಿ

ಸ್ಪ್ಯಾನಿಷ್ ಫ್ಲುಗೆ 500 ಮಿಲಿಯನ್ ಮಂದಿ ಬಲಿ

1918ರ ಜನವರಯಲ್ಲಿ ಮೊದಲಿಗೆ ಸ್ಪ್ಯಾನಿಷ್ ನಲ್ಲಿ ಕಾಣಿಸಿಕೊಂಡ ತೀವ್ರ ಜ್ವರಕ್ಕೆ ಸ್ಪ್ಯಾನಿಷ್ ಫ್ಲು ಎಂದು ಕರೆಯಲಾಗಿತ್ತು. 1920ರ ಡಿಸೆಂಬರ್ ವರಗೂ ಸ್ಪ್ಯಾನಿಷ್ ಫ್ಲು ಎಂಬ ಸಾಂಕ್ರಾಮಿಕ ಪಿಡುಗು ವಿಶ್ವವನ್ನು ಕಾಡಿತು. ಜಗತ್ತಿನಾದ್ಯಂತ ಮಹಾಮಾರಿಗೆ 500 ಮಿಲಿಯನ್ ಜನರು ಪ್ರಾಣ ಬಿಟ್ಟಿದ್ದರು. ಅಂದು ವಿಶ್ವದ ಜನಸಂಖ್ಯೆಯ ಮೂರರ ಒಂದು ಭಾಗದಷ್ಟು ಜನರು ಸ್ಪ್ಯಾನಿಷ್ ಫ್ಲು ಎಂಬ ಮಹಾಮಾರಿಗೆ ಪ್ರಾಣ ತೆತ್ತಿದ್ದರು.

ಸುತ್ತಮುತ್ತಲಿನ 60 ಮಂದಿಗೆ ಕೊರೊನಾ ವೈರಸ್

ಸುತ್ತಮುತ್ತಲಿನ 60 ಮಂದಿಗೆ ಕೊರೊನಾ ವೈರಸ್

ಸ್ಪ್ಯಾನಿಷ್ ನ ಅಲ್ಕೆಲಾ ಡೆಲ್ ವಲ್ಲೆ ಎಂಬ ನರ್ಸಿಂಗ್ ಹೋಮ್ ನಲ್ಲಿ ಅನಾ ಡೆಲ್ ವಲ್ಲೆ(106) ವಾಸವಿದ್ದರು. ಸುತ್ತಮುತ್ತಲಿನ 60 ನಿವಾಸಿಗಳಿಂದ ಇವರಿಗೂ ಕೊರೊನಾ ವೈರಸ್ ಸೋಂಕು ಅಂಟಿಕೊಂಡಿತು. ನಂತರ ಅನಾ ಡೆಲ್ ವಲ್ಲೆರನ್ನು ಲಾ ಲಿನಿಯಾ ಪ್ರದೇಶದಲ್ಲಿರುವ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಕೆಲವು ದಿನಗಳಲ್ಲಿ ಸೋಂಕುಮುಕ್ತರಾದ ವೃದ್ಧೆಯನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಯಿತು.

ಸ್ಪ್ಯಾನಿಷ್ ಫ್ಲು, ಕೊರೊನಾ ಗೆದ್ದ ಅನಾ ಡೆಲ್ ವಲ್ಲೆ ಹಿನ್ನೆಲೆ

ಸ್ಪ್ಯಾನಿಷ್ ಫ್ಲು, ಕೊರೊನಾ ಗೆದ್ದ ಅನಾ ಡೆಲ್ ವಲ್ಲೆ ಹಿನ್ನೆಲೆ

1913ರ ಅಕ್ಬೋಬರ್ ನಲ್ಲಿ ಜನಿಸಿದ ಅನಾ ಡೆಲ್ ವಲ್ಲೆ ಸ್ಪ್ಯಾನಿಷ್ ಫ್ಲು ಮತ್ತು ಕೊರೊನಾ ವೈರಸ್ ಎಂಬ ಮಹಾಮಾರಿಯನ್ನು ಜಯಿಸಿದ ಸ್ಪ್ಯಾನಿಷ್ ನ ಏಕೈಕ ಹಾಗೂ ಹಿರಿಯ ಪ್ರಜೆ ಎಂಬ ಖ್ಯಾತಿ ಗಳಿಸಿದ್ದಾರೆ. ಸ್ಪೇನ್ ನಲ್ಲಿ ಅನಾ ಡೆಲ್ ವಲ್ಲೆ ಹೊರತಾಗಿ ಕೊರೊನಾ ವೈರಸ್ ವಿರುದ್ಧ 101 ವರ್ಷದ ಇಬ್ಬರು ಹೋರಾಡಿ ಗೆದ್ದಿರುವುದು ವರದಿಯಾಗಿದೆ.

ಜಗತ್ತಿನಲ್ಲೇ ಹೆಚ್ಚು ಕೊರೊನಾ ಸೋಂಕಿತರುಳ್ಳ 2ನೇ ದೇಶ

ಜಗತ್ತಿನಲ್ಲೇ ಹೆಚ್ಚು ಕೊರೊನಾ ಸೋಂಕಿತರುಳ್ಳ 2ನೇ ದೇಶ

ವಿಶ್ವದಲ್ಲೇ ಅತಿಹೆಚ್ಚು ಕೊರೊನಾ ವೈರಸ್ ಸೋಂಕಿತರನ್ನು ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಇದೇ ಸ್ಪೇನ್ ಎರಡನೇ ಸ್ಥಾನದಲ್ಲಿದೆ. ಮಂಗಳವಾರದ ಅಂಕಿ-ಅಂಶಗಳ ಪ್ರಕಾರ ಸ್ಪೇನ್ ನಲ್ಲಿ ಕೊರೊನಾ ವೈರಸ್ ನಿಂದ 23,521 ಮಂದಿ ಪ್ರಾಣ ಬಿಟ್ಟಿದ್ದು, 2,29,422 ಜನರಿಗೆ ಸೋಂಕು ಇರುವುದು ದೃಢಪಟ್ಟಿದೆ. ಇದುವರೆಗೂ ದೇಶದಲ್ಲಿ 1,20,832 ಜನರು ಕೊರೊನಾ ವೈರಸ್ ನಿಂದ ಗುಣಮುಖರಾಗಿದ್ದಾರೆ ಎಂದು ತಿಳಿದು ಬಂದಿದೆ.

English summary
Inspiration Story: 106-Old-Women Defeated Spanish Flu And Now Coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X