ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊತ್ತಿ ಉರಿದ ಆಯಿಲ್ ಟ್ಯಾಂಕರ್ ಮೇಲೆ ಐಎನ್ಎಸ್ ನಿಗಾ

|
Google Oneindia Kannada News

ನವದೆಹಲಿ, ಸಪ್ಟೆಂಬರ್,06: ಶ್ರೀಲಂಕಾದ ಎಂಟಿ ನ್ಯೂ ಡೈಮಂಡ್‌ ಆಯಿಲ್ ಟ್ಯಾಂಕರ್ ನಲ್ಲಿ ಹೊತ್ತಿಕೊಂಡ ಬೆಂಕಿಯನ್ನು ಅಗ್ನಿಶಾಮಕ ದಳದ ಪ್ರಯತ್ನದಿಂದ ನಂದಿಸಲಾಗಿದೆ. ಕರಾವಳಿ ಪ್ರದೇಶದಿಂದ 70 ಕಿ.ಮೀ ದೂರದಲ್ಲಿರುವ ಟ್ಯಾಂಕರ್ ನ್ನು ಐಎನ್ಎಸ್ ಸಹ್ಯಾದ್ರಿ ಸೂಕ್ಷ್ಮವಾಗಿ ಗಮನಿಸುತ್ತಿದೆ.

Recommended Video

SriLanka ನೀರಿನಲ್ಲಿ IOC ಕಚ್ಚಾ ತೈಲ ಹಡಗಿನಲ್ಲಿ ಬೆಂಕಿ | Oneindia Kannada

ವೈಮಾನಿಕ ಸಮೀಕ್ಷೆ ಮೂಲಕ ಸ್ಥಳ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಟ್ಯಾಂಕರ್ ನ ಕೆಲವು ಕಡೆಗಳಲ್ಲಿ ಹೊಗೆಯಾಡುತ್ತಿರುವುದು ಕಂಡು ಬಂದಿದೆ ಎಂದು ಭಾರತೀಯ ನೌಕಾಪಡೆಯು ತಿಳಿಸಿದೆ.

ಶ್ರೀಲಂಕಾ ಸಮುದ್ರ ಭಾಗದಲ್ಲಿ ಹೊತ್ತಿ ಉರಿದ ತೈಲ ಟ್ಯಾಂಕರ್: ಕೇರಳ ತೀರದಲ್ಲಿ ಕಟ್ಟೆಚ್ಚರಶ್ರೀಲಂಕಾ ಸಮುದ್ರ ಭಾಗದಲ್ಲಿ ಹೊತ್ತಿ ಉರಿದ ತೈಲ ಟ್ಯಾಂಕರ್: ಕೇರಳ ತೀರದಲ್ಲಿ ಕಟ್ಟೆಚ್ಚರ

2,70,000 ಮೆಟ್ರಿಕ್ ಟನ್ ಇಂಧನವನ್ನು ಹೊತ್ತು ಕುವೈತ್ ನಿಂದ ಭಾರತಕ್ಕೆ ಆಗಮಿಸುತ್ತಿದ್ದ ಟ್ಯಾಂಕರ್ ನಲ್ಲಿ ಸಪ್ಟೆಂಬರ್.3ರಂದು ಬೆಂಕಿ ಹೊತ್ತಿಕೊಂಡಿತ್ತು. ಭಾರತೀಯ ಸೇನೆಯ ನೆರವಿನಿಂದ ಎಂ.ಟಿ.ನ್ಯೂ ಡೈಮಂಡ್ ಆಯಿಲ್ ಟ್ಯಾಂಕರ್ ಗೆ ಹೊತ್ತಿಕೊಂಡ ಬೆಂಕಿಯನ್ನು ನಂದಿಸಲಾಗಿದೆ ಎಂದು ಇತ್ತೀಗಷ್ಟೇ ಶ್ರೀಲಂಕಾದ ನೌಕಾಪಡೆಯು ಮಾಹಿತಿ ನೀಡಿತ್ತು.

INS Sahyadri Closely Monitoring Fire-Fighting Efforts On Sri Lankan Oil Tanker MT New Diamond

ಪೂರ್ವ ಜಿಲ್ಲೆ ಅಂಪಾರದಲ್ಲಿ ಸಂಘಮಂಕಂದ ಕರಾವಳಿ ಸಮೀಪ ಅದರ ಎಂಜಿನ್ ಕೊಠಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅದರ ಸರಕು ಪ್ರದೇಶಕ್ಕೆ ಯಾವುದೇ ಹಾನಿಯಾಗಿಲ್ಲ. ಸಮುದ್ರದಲ್ಲಿ ತೈಲ ಸೋರಿಕೆಯಾಗಿದ್ದರೆ ತನ್ನ 600 ಕಿ.ಮೀ ಚದರ ಕರಾವಳಿ ಪ್ರದೇಶಕ್ಕೆ ಅಪಾಯ ಸಂಭವಿಸುವ ಸಾಧ್ಯತೆ ಇರುವುದರಿಂದ ಘಟನೆಯ ಬಗ್ಗೆ ವಿವರವಾದ ಮಾಹಿತಿ ನೀಡುವಂತೆ ಭಾರತ ರಾಷ್ಟ್ರೀಯ ಸಾಗರ ಮಾಹಿತಿ ಸೇವೆಗಳ ಕೇಂದ್ರಕ್ಕೆ (ಐಎನ್‌ಸಿಒಐಎಸ್) ಕೇರಳ ಸರ್ಕಾರ ಕೋರಿದೆ. ಕೇರಳ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಈ ಸಂಬಂಧ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

English summary
INS Sahyadri Closely Monitoring Fire-Fighting Efforts On Sri Lankan Oil Tanker MT New Diamond.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X