ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಲ್ಡೀವ್ಸ್‌ನ ಹಸಿದ ಜೀವಗಳಿಗೆ ಆಹಾರ ಒದಗಿಸಿದ ಭಾರತ

|
Google Oneindia Kannada News

ನವದೆಹಲಿ, ಮೇ 13: ಮಾಲ್ಡೀವ್ಸ್‌ನ ಹಸಿದ ಜೀವಗಳಿಗೆ ಭಾರತ ಆಹಾರ ಒದಗಿಸಿದೆ.ಭಾರತ ಸರ್ಕಾರದ 'ಮಿಷನ್ ಸಾಗರ್' ಅಡಿಯಲ್ಲಿ ಭಾರತೀಯ ನೌಕಾ ಹಡಗು ಎಸ್ಎನ್ಎಸ್ ಕೇಸರಿ 580 ಟನ್ ಅಗತ್ಯ ಆಹಾರ ವಸ್ತುಗಳನ್ನು ಹೊತ್ತು ಮಾಲ್ಡೀವ್ಸ್‌ಗೆ ತಲುಪಿದೆ.

ಇಂಡಿಯಾ ಇನ್ ದಿ ಮಾಲ್ಡಿವ್ಸ್ ಟ್ವಿಟರ್ ಖಾತೆಯ ಈ ಬಗ್ಗೆ ಟ್ವೀಟ್ ಮಾಡಿದ್ದು, ಮಿಷನ್ ಸಾಗರ್ ಮೊದಲ ತೀರವನ್ನು ತಲುಪಿದೆ. ಐಎನ್‌ಎಸ್ ಕೇಸರಿ ಮಾಲೆ ಬಂದರನ್ನು ತಲುಪಿದೆ. ಈ ಬಂದರು ಮಿಷನ್ ಸಾಗರ್‌ನ ಮೊದಲ ಗುರಿಯಾಗಿದೆ. ಅದು 580 ಟನ್ ಅಗತ್ಯ ಆಹಾರ ವಸ್ತುಗಳನ್ನು ಮಾಲ್ಡಿವ್ಸ್ ರಾಷ್ಟ್ರಕ್ಕೆ ಭಾರತೀಯರ ಉಡುಗೊರೆಯಾಗಿ ಹೊತ್ತೊಯ್ದಿದೆ ಎಂದಿದೆ.

 ಕೊರೊನಾ ಭೀತಿ ನಡುವೆಯೇ ಕಾರವಾರ ಬಂದರಿಗೆ ಬಂದ ವಿದೇಶಿ ಹಡಗು ಕೊರೊನಾ ಭೀತಿ ನಡುವೆಯೇ ಕಾರವಾರ ಬಂದರಿಗೆ ಬಂದ ವಿದೇಶಿ ಹಡಗು

ಕೊರೊನಾವೈರಸ್ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತದ ಜನರು ಮಾಲ್ಡಿವ್ಸ್ ದೇಶಕ್ಕೆ ತೋರಿಸುತ್ತಿರುವ ಸೌಹಾರ್ದ ಸಂಕೇತವಾಗಿದೆ. ಹಡಗು ಅಗತ್ಯ ಆಹಾರ ಸಾಮಗ್ರಿಗಳನ್ನು ಮಾಲೆ ಬಂದರಿಗೆ ತಲುಪಿಸಿದೆ.

INS Kesari Carrying 580 Tons Of Food Food To Maldives

ಸಾಂಕ್ರಾಮಿಕ ರೋಗವನ್ನು ನಿರ್ವಹಿಸುವ ಸಹಾಯ ಮಾಡುವಂತೆ ಮಾಲ್ಡಿವ್ಸ್, ಮಾರಿಷಿಯಸ್, ಮಡಗಾಸ್ಕರ್, ಕೊಮೊರೋಸ್ ಮತ್ತು ಸೆಶೆಲ್ಸ್ ಭಾರತಕ್ಕೆ ಮನವಿ ಮಾಡಿಕೊಂಡಿತ್ತು. ಮೋರಿಷಿಯಸ್ ಮತ್ತು ಕಮೊರೋಸ್‌ಗಳಲ್ಲಿ ವೈದ್ಯಕೀಯ ಸಲಹಾ ತಂಡಗಳನ್ನು ನಿಯೋಜಿಸುವ ಮೂಲಕ ಆ ದೇಶಗಳಿಗೆ ಸಾಂಕ್ರಾಮಿಕ ರೋಗವನ್ನು ಎದುರಿಸಲು ಸಹಾಯ ಮಾಡಲಾಗುತ್ತದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.

ಈಜಿಪ್ಟ್ ಹಡಗಿನಲ್ಲೂ ಕೊರೊನಾ ವೈರಸ್ ಹಾವಳಿ; 18 ಭಾರತೀಯರು ಗಲಿಬಿಲಿ! ಈಜಿಪ್ಟ್ ಹಡಗಿನಲ್ಲೂ ಕೊರೊನಾ ವೈರಸ್ ಹಾವಳಿ; 18 ಭಾರತೀಯರು ಗಲಿಬಿಲಿ!

ಕಳೆದ ಭಾನುವಾರ ಭಾರತವು ಐಎನ್‌ಎಸ್ ಕೇಸರಿಯಲ್ಲಿ 2 ವೈದ್ಯಕೀಯ ಸಲಹಾ ತಂಡಗಳನ್ನು, ಔಷಧಿಗಳನ್ನು ಮತ್ತು ಅಗತ್ಯ ವಸ್ತುಗಳನ್ನು ದಕ್ಷಿಣ ಹಿಂದೂಮಹಾಸಾಗರದ ರಾಷ್ಟ್ರಕ್ಕೆ ಕಳುಹಿಸಿಕೊಟ್ಟಿತ್ತು.

English summary
As Part Of Mission Sagar INS Kesar Carrying 580 tons od food provisions for the people of maldives entered port of Male.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X