ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಯೋತ್ಪಾದನೆ ದೊಡ್ಡ ಅಪಾಯ: ಬ್ರಿಕ್ಸ್ ಸಮಿತಿಯಲ್ಲಿ ಮೋದಿ ಕಳವಳ

|
Google Oneindia Kannada News

ಒಸಾಕಾ, ಜೂನ್ 28: "ಭಯೋತ್ಪಾದನೆಯು ಮಾನವೀಯತೆಗೆ ದೊಡ್ಡ ಅಪಾಯ. ಅದು ಕೇವಲ ಮುಗ್ಧರ ಜೀವ ಕಿತ್ತುಕೊಳ್ಳುತ್ತಿಲ್ಲ, ಅದು ಆರ್ಥಿಕ ಅಭಿವೃದ್ಧಿ ಮತ್ತು ಕೋಮುಸೌಹಾರ್ದಕ್ಕೆ ದಕ್ಕೆಯನ್ನುಂಟು ಮಾಡುತ್ತಿದೆ" ಎಂದು ಪ್ರಧಾನಿ ನರೇಂದ್ರ ಮೋದಿ ಕಳವಳ ವ್ಯಕ್ತಪಡಿಸಿದರು.

ಎಂದೂ ಇಲ್ಲದಷ್ಟು ಆಪ್ತ ಸ್ನೇಹಿತರಾಗಿದ್ದೇವೆ: ಮೋದಿ ಟ್ರಂಪ್ ಮಾತುಕತೆಎಂದೂ ಇಲ್ಲದಷ್ಟು ಆಪ್ತ ಸ್ನೇಹಿತರಾಗಿದ್ದೇವೆ: ಮೋದಿ ಟ್ರಂಪ್ ಮಾತುಕತೆ

ಜಪಾನಿನ ಒಸಾಕಾದಲ್ಲಿ ನಡೆಯುತ್ತಿರುವ ಜಿ 20 ಶೃಂಗಸಭೆಯಲ್ಲಿ ಭಾಗವಹಿಸಿರುವ ನರೇಂದ್ರ ಮೋದಿ BRICS(ಬ್ರೆಜಿಲ್, ರಷ್ಯಾ, ಭಾರತ, ಚೀನಾ, ದಕ್ಷಿಣ ಆಫ್ರಿಕಾ) ಸಮಿತಿ ಸಭೆಯನ್ನುದ್ದೇಶಿಸಿ ಮಾತನಾಡಿದರು.

Informal BRICS meeting in Osaka: PM Modi says, Terrorism is the biggest threat

"ಭಯೋತ್ಪಾದನೆಗೆ ಬೆಂಬಲ ನೀಡುವ ಎಲ್ಲ ಸಂಗತಿಗಳನ್ನೂ ನಾವು ವಿರೋಧಿಸಬೇಕು" ಎಂದು ಈ ಸಂದರ್ಭದಲ್ಲಿ ಮೋದಿ ಸ್ಪಷ್ಟ ಮಾತುಗಳಲ್ಲಿ ಹೇಳಿದರು.

ಬ್ರಿಕ್ಸ್ ಸಮಿತಿ ಸಭೆಯಲ್ಲಿ ಪ್ರಧಾಣಿ ನರೇಮದ್ರ ಮೋದಿ ಅವರೊಂದಿಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಚೀನಾ ಅಧ್ಯಕ್ಷ ಖೈ ಜಿನ್ಪಿಂಗ್, ಬ್ರೆಜಿಲ್ ಅಧ್ಯಕ್ಷ ಜೈರ್ ಬೊಲ್ಸೊನಾರೊ ಮತ್ತು ದಕ್ಷಿಣ ಆಫ್ರಿಕ ಅಧ್ಯಕ್ಷ ಕಿರಿಲ್ ಮರಾಮಫೋಸಾ ಇದ್ದರು.

ಬ್ರಿಕ್ಸ್ ಸಮಿತಿಯಲ್ಲಿ ಮಾತನಾಡಿದ ವಿಶ್ವ ನಾಯಕರು, "ನಾವು ಪಾರದರ್ಶಕ, ತಾರತಮ್ಯವಿಲ್ಲದ, ಮುಕ್ತ, ಅಂತಾರಾಷ್ಟ್ರೀಯ ವ್ಯಾಪಾರಕ್ಕೆ ಬದ್ಧರಾಗಿದ್ದೇವೆ. ವಿಶ್ವ ವಾಣಿಜ್ಯ ಸಂಘಟನೆಯ ಧ್ಯೇಯಗಳಿಗೂ ಬದ್ಧರಾಗಿದ್ದೇವೆ" ಎಂದು ಜಂಟಿ ಪತ್ರಿಕಾ ಹೇಳಿಕೆ ನೀಡಿದರು.

"ಭ್ರಷ್ಟಾಚಾರ, ಅಕ್ರಮ ಹಣ, ಅಕ್ರಮ ಹಣದ ಹರಿವು, ವಿದೇಶಗಳಲ್ಲಿ ಸೇರಿಕೊಂಡಿರುವ ಲೆಕ್ಕಕ್ಕೆ ಸಿಗದ ಸಂಪತ್ತು ಇವು ಜಾಗತಿಕ ಸವಾಲುಗಳು. ಇವು ಆರ್ಥಿಕ ಬೆಳವಣಿಗೆ ಮೇಲೆ ಋಣಾತ್ಮಕ ಪರಿಹಾರ ಬೀರಲಿದೆ" ಎಂದು ನಾಯಕರು ಅಭಿಪ್ರಾಯ ಪತ್ತರು.

English summary
PM Modi at informal BRICS meeting in Osaka: Terrorism is the biggest threat to humanity. Not only it takes lives of the innocents, it negatively affects economical development & communal harmony. We have to stop all mediums of support to terrorism & racism
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X