ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಸಿವಿನಿಂದ ಕಂಗೆಟ್ಟ ಪಾಕಿಸ್ತಾನ,ಇಲ್ಲಿದೆ ಒಂದು ಮೊಟ್ಟೆಯ ಬೆಲೆ

|
Google Oneindia Kannada News

ಇಸ್ಲಾಮಾಬಾದ್, ಡಿಸೆಂಬರ್ 23: ಕುಸಿಯುತ್ತಿರುವ ಆರ್ಥಿಕತೆ, ಹಣದುಬ್ಬರ, ಹಸಿವಿನಿಂದ ಬಳಲುತ್ತಿರುವ ಜನತೆ ಇದು ಪಾಕಿಸ್ತಾನ ಪ್ರಸ್ತುತ ಚಿತ್ರಣವಾಗಿದೆ. ಪಾಕಿಸ್ತಾನದಲ್ಲಿ ಶೇ.25 ಕ್ಕೂ ಜನರು ಬಡತನ ರೇಖೆಗಿಂತ ಕೆಳಗಿದ್ದಾರೆ. ಕೊರೊನಾ ಮತ್ತು ಚಳಿಯ ಹೊಡೆತಕ್ಕೆ ನಲುಗಿಹೋಗಿರುವ ಪಾಕಿಸ್ತಾನ ಇದೀಗ ಹಸಿವಿನಿಂದ ಬಳಲುತ್ತಿದೆ.

ಅಗತ್ಯ ವಸ್ತುಗಳ ಬೆಲೆ ಇಳಿಕೆ ಮಾಡಿರುವುದಾಗಿ ಹೇಳಿ ಬೆನ್ನು ತಟ್ಟಿಕೊಳ್ಳುತ್ತಿರುವ ಇಮ್ರಾನ್ ಖಾನ್ ಅವರ ಹೊಸ ಪಾಕಿಸ್ತಾನದಲ್ಲಿ ಇದೆಲ್ಲಾ ನಡೆಯುತ್ತಿದೆ. ವಾಸ್ತವಿಕತೆಯನ್ನು ಗಮನಿಸಿದರೆ. ಇಲ್ಲಿ ಹಣದುಬ್ಬರ ಎಲ್ಲಾ ಹಳೆ ದಾಖೆಗಳನ್ನು ಮುರಿದಿದೆ.

ಟ್ವಿಟ್ಟರ್‌ನಲ್ಲಿ ಮಾಜಿ ಪತ್ನಿ ಸಹಿತ ಎಲ್ಲರನ್ನೂ ಅನ್‌ಫಾಲೋ ಮಾಡಿದ ಇಮ್ರಾನ್ ಖಾನ್ಟ್ವಿಟ್ಟರ್‌ನಲ್ಲಿ ಮಾಜಿ ಪತ್ನಿ ಸಹಿತ ಎಲ್ಲರನ್ನೂ ಅನ್‌ಫಾಲೋ ಮಾಡಿದ ಇಮ್ರಾನ್ ಖಾನ್

ಈ ಮೊದಲು ಈರುಳ್ಳಿಯನ್ನು ಜಗತ್ತಿಗೆ ರಫ್ತು ಮಾಡುತ್ತಿದ್ದ ಪಾಕಿಸ್ತಾನ ಇಂದು ಈರುಳ್ಳಿ ಬೆಲೆಯನ್ನು ಕಡಿಮೆ ಮಾಡಲು ಸ್ವತಃ ಈರುಳ್ಳಿಯನ್ನು ಆಮದು ಮಾಡಿಕೊಳ್ಳುತ್ತಿದೆ. ಹಿಟ್ಟು ಮತ್ತು ಸಕ್ಕರೆಯ ಬೆಲೆಯನ್ನು ಕಡಿಮೆ ಮಾಡಲು, ಇಮ್ರಾನ್ ಖಾನ್ ಸಂಪುಟ ನಿರಂತರವಾಗಿ ಸಭೆ ನಡೆಸುತ್ತಿದೆ. ಪಾಕಿಸ್ತಾನದಲ್ಲಿ ಒಂದು ಮೊಟ್ಟೆಯ ಬೆಲೆ ರೂ.30 ಕ್ಕೆ ತಲುಪಿದ್ದರೆ, ಸಕ್ಕರೆ ಬೆಲೆ ಕೆ.ಜಿಗೆ 104 ರೂ. ಹಾಗೂ ಹಸಿ ಶುಂಟಿ ಬೆಲೆ 1000 ರೂ. ಪ್ರತಿ ಕೆ.ಜಿಗೆ ತಲುಪಿದೆ.

ಹಸಿವಿನಿಂದ ಬಳಲುತ್ತಿರುವ ಜನ

ಹಸಿವಿನಿಂದ ಬಳಲುತ್ತಿರುವ ಜನ

ಪಾಕ್ ನಲ್ಲಿ ಜನರು ಸದ್ಯ ಹಸಿವಿನಿಂದ ಬಳಲುತ್ತಿದ್ದಾರೆ. ರುಪಿಯಾ ಮೌಲ್ಯ ಡಾಲರ್ ಎದುರು ನಿರಂತರವಾಗಿ ಕುಸಿಯುತ್ತಿದ್ದು, ದೇಶದ ಆರ್ಥಿಕ ಸ್ಥಿತಿ ಇದುವರೆಗಿನ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಇದರಲ್ಲಿ ಎಲ್ಲಕ್ಕಿಂತ ಬೆಚ್ಚಿಬೀಳಿಸುವ ಸಂಗತಿ ಎಂದರೆ ಅದು ಮೊಟ್ಟೆ ಬೆಲೆ.

ಒಂದು ಮೊಟ್ಟೆಯ ಬೆಲೆ

ಒಂದು ಮೊಟ್ಟೆಯ ಬೆಲೆ

ಪಾಕ್ ವೃತ್ತಪತ್ರಿಕೆ 'ದಿ ಡಾನ್'ನಲ್ಲಿ ಪ್ರಕಟಗೊಂಡ ವರದಿಯೊಂದರ ಪ್ರಕಾರ, ದೇಶದ ಬಹುತೇಕ ಭಾಗಗಳಲ್ಲಿ ಮೊಟ್ಟೆ ಬೇಡಿಗೆ ಗಣನೀಯವಾಗಿ ಏರಿಕೆಯಾಗಿದ್ದು, ಒಂದು ಡಜನ್ ಮೊಟ್ಟೆಯ ಬೆಲೆ ರೂ.350ಕ್ಕೆ ತಲುಪಿದೆ. ಪಾಕಿಸ್ತಾನದ ಬಹುತೇಕ ಜನರು ತಮ್ಮ ಆಹಾರದಲ್ಲಿ ಮೊಟ್ಟೆಯನ್ನು ಬಳಸುತ್ತಾರೆ. ಆದರೆ, ಒಂದು ಮೊಟ್ಟೆಯ ಬೆಲೆ ರೂ.30ಕ್ಕೆ ತಲುಪಿದ ಕಾರಣ ಜನರಿಗೆ ಬದುಕುವುದು ಕಷ್ಟ ಎನಿಸುತ್ತಿದೆ.

ಹೆಚ್ಚಳವಾದ ಗೋದಿ ಬೆಲೆ

ಹೆಚ್ಚಳವಾದ ಗೋದಿ ಬೆಲೆ

ಸದ್ಯ ಅಲ್ಲಿನ ಜನರು ಪಾಕಿಸ್ತಾನದ ಜನರು ರೊಟ್ಟಿ ತಿನ್ನಲು ಸಹ ಯೋಚಿಸುತ್ತಿದ್ದಾರೆ. ಈ ವರ್ಷ ಪಾಕಿಸ್ತಾನದಲ್ಲಿ ಗೋಧಿಯ ಬೆಲೆ ಎಲ್ಲಾ ದಾಖಲೆಗಳನ್ನು ಮುರಿದಿದೆ. 40 ಕೆಜಿ ಗೋಧಿ ಕಟ್ಟಾವನ್ನು ಇಲ್ಲಿ 2400 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಅಂದರೆ 60 ರೂಪಾಯಿ ಕೆ.ಜಿ. ಕಳೆದ ಡಿಸೆಂಬರ್‌ನಲ್ಲಿ ದೇಶದ ಪರಿಸ್ಥಿತಿ ತುಂಬಾ ಹದಗೆಟ್ಟ ಕಾರಣ ಗೋಧಿಯ ಬೆಲೆ 40 ಕೆ.ಜಿ.ಗೆ 2000 ರೂ.ಗೆ ತಲುಪಿತ್ತು. ಈ ವರ್ಷದ ಅಕ್ಟೋಬರ್‌ನಲ್ಲಿ ಈ ದಾಖಲೆ ಸಹ ಮುರಿದಿದೆ.

ಅಡುಗೆ ಅನಿಲ ಬೆಲೆ ಹೆಚ್ಚಳ

ಅಡುಗೆ ಅನಿಲ ಬೆಲೆ ಹೆಚ್ಚಳ

ಸ್ಥಳೀಯ ಮಾಧ್ಯಮಗಳ ಪ್ರಕಾರ, ಜನವರಿ 4 ರಿಂದ 20 ರ ನಡುವೆ, ಅನಿಲದ ಕೊರತೆಯು ಅತ್ಯಧಿಕವಾಗಲಿದೆ, ಇದರಿಂದಾಗಿ ಜನರು ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಮುಂದಿನ ಕೆಲವು ದಿನಗಳಲ್ಲಿ ಸೂಯಿ ನಾರ್ದರ್ನ್ ದಿನಕ್ಕೆ 500 ಮಿಲಿಯನ್ ಸ್ಟ್ಯಾಂಡರ್ಡ್ ಕ್ಯೂಬಿಕ್ ಅಡಿಗಳಷ್ಟು ಅನಿಲ ಕೊರತೆಯನ್ನು ಎದುರಿಸಲಿದೆ. ಈ ಹಿನ್ನೆಲೆಯಲ್ಲಿ, ಕಂಪನಿಯು ವಿದ್ಯುತ್ ಕ್ಷೇತ್ರಕ್ಕೆ ಅನಿಲ ಸರಬರಾಜನ್ನು ನಿಲ್ಲಿಸುವ ಸಾಧ್ಯತೆ ಇದೆ. ಆದರೆ ಇದರಿಂದ ದೇಶೀಯ ಗ್ರಾಹಕರ ಸಮಸ್ಯೆ ಬಗೆಹರಿಯುವುದಿಲ್ಲ.

English summary
Pakistan is in a bad situation in the reign of PM Imran Khan, who came to power by promising to build a 'new Pakistan'. Inflation has created havoc in the country. The prices of eggs including vegetables and pulses are also on fire.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X