ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಜೀವಂತವಾಗಿ ದೇಶಕ್ಕೆ ಬರ್ತಿನಿ ಎಂಬ ನಂಬಿಕೆನೇ ಇರ್ಲಿಲ್ಲ'

|
Google Oneindia Kannada News

ಬೆಂಗಳೂರು, ಏ. 5: ಆಂತರಿಕ ಯುದ್ಧದಿಂದ ತ್ತತ್ತರಿಸುತ್ತಿರುವ ಯೆಮನ್‌ನಲ್ಲಿ ಸಿಲುಕಿಕೊಂಡಿದ್ದ ಬೆಂಗಳೂರಿನ ಉದ್ಯಮಿ ರವಿಕುಮಾರ್ ಹಾಗೂ ಮದನ್‌ಮೋಹನ್‌ರೆಡ್ಡಿ ತಾಯ್ನಾಡಿಗೆ ಆಗಮಿಸಿದ್ದಾರೆ.

ಏಪ್ರಿಲ್ 4 ರಂದು ಮುಂಜಾನೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರನ್ನು ಕುಟುಂಬಸ್ಥರು ಬರಮಾಡಿಕೊಂಡರು. ರವಿಕುಮಾರ್ ಅವರ ಪತ್ನಿ, ಮಕ್ಕಳು ಹಾಗೂ ಬಂಧುಗಳು ಹಾಜರಿದ್ದರು.[ಯೆಮನ್ ನಲ್ಲಿ ಸಿಲುಕಿದ ಪೀಣ್ಯ ರವಿಗಾಗಿ ಉದ್ಯಮ ಬಂದ್]

Industrialist Ravi Kumar arrives home

ನಾವು ಜೀವಂತವಾಗಿ ಸ್ವದೇಶಕ್ಕೆ ಹಿಂದಿರುಗುತ್ತೇವೆ ಎಂಬ ನಂಬಿಕೆಯೇ ಮಾಯವಾಗಿತ್ತು. ನಮ್ಮ ಪಕ್ಕದಲ್ಲಿಯೇ ಬಾಂಬ್ ಸಿಡಿಯುತ್ತಿತ್ತು. ನಾವು ಜೀವಂತವಾಗಿ ಹಿಂದಿರುಗಿರುವುದು ಪವಾಡವೇ ಸರಿ, ಆ ನಂಬಿಕೆಯೂ ನಮಗಿರಲಿಲ್ಲ ಎಂದು ರವಿಕುಮಾರ್ ಅಲ್ಲಿನ ಪರಿಸ್ಥಿತಿಯನ್ನು ತೆರೆದಿಟ್ಟರು.

ಭಾರತ ಸರ್ಕಾರ ಅಲ್ಲಿಗೆ ಕಳುಹಿಸಿದ ಭಾರತೀಯ ವಾಯುಪಡೆ ಮತ್ತು ನೌಕಾಪಡೆ ಸಿಬ್ಬಂದಿ ನಮ್ಮನ್ನು ಸುರಕ್ಷಿತವಾಗಿ ಕರೆತಂದರು. ಯೆಮನ್‌ನಲ್ಲಿ ಇನ್ನೂ ಸಾವಿರಾರು ಜನ ಭಾರತೀಯರು ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದು ಅವರನ್ನು ರಕ್ಷಿಸಬೇಕಿದೆ ಎಂದು ಹೇಳಿದರು.[ಯೆಮನ್: ಭಾರತಕ್ಕೆ ಹಿಂದಿರುಗಿದ 349 ಜನ ಸಂತ್ರಸ್ತರು]

ಕಳೆದ ಒಂದು ವಾರದಿಂದ ಯೆಮನ್ ನಲ್ಲಿ ಆಂತರಿಕ ಸಂಘರ್ಷ ಕಾಣಿಸಿಕೊಂಡಿದ್ದು ಸುಮಾರು 500ಕ್ಕೂ ಹೆಚ್ಚು ಭಾರತೀಯರನ್ನು ರಕ್ಷಿಸಿ ಕರೆತರಲಾಗಿದೆ. ಸ್ವತಃ ಕೇಂದ್ರ ಸಚಿವ ವಿಕೆ ಸಿಂಗ್ ಹಾಜರಿದ್ದು ರಕ್ಚಣಾ ಕ್ರಮ ನೋಡಿಕೊಳ್ಳುತ್ತಿದ್ದಾರೆ.

English summary
When the plane touched down Bengaluru international airport Ravi Kumar T., a city-based entrepreneur who reached home after nine harrowing days in Sana'a, Yemen, had tears in his eyes. He said, "I never thought I would come back alive." After meeting his family, he spoke of his experience of being stranded in the war-hit zone, where he landed on March 25 for business. This was a day before the country went to war.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X