ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಮಾನ ಪತನವಾಗುವ ಕೆಲವೇ ಕ್ಷಣ ಮೊದಲು ಸೂಚನೆ ಸಿಕ್ಕಿತ್ತು!

|
Google Oneindia Kannada News

Recommended Video

Indonesia Lion Air Plane Crash : ವಿಮಾನ ಪತನವಾಗುವ ಮುಂಚೆ ಪೈಲಟ್ ಗೆ ಸೂಚನೆ ಸಿಕ್ಕಿತ್ತಾ?

ಜಕಾರ್ತಾ, ಅಕ್ಟೋಬರ್ 29: ಸೋಮವಾರ ಬೆಳಗ್ಗೆ ಇಂಡೋನೇಷ್ಯಾದ ಲಯನ್ ಏರ್ ಬೋಯಿಂಗ್ 737 ವಿಮಾನ ಪತನವಾಗುವ ಕೆಲವೇ ಕ್ಷಣಗಳ ಮೊದಲು ಪತನವಾಗುವ ಸೂಚನೆ ಸಿಬ್ಬಂದಿಗೆ ಸಿಕ್ಕಿತ್ತಾ?!

ವಿಮಾನ ಪತನವಾಗುವ ಎರಡು ನಿಮಿಷ ಮೊದಲು ಪೈಲೆಟ್ ಜೊತೆ ಸಂಪರ್ಕದಲ್ಲಿದ್ದ ಅಧಿಕಾರಿಗಳು ವಿಮಾನವನ್ನು ವಾಪಸ್ ಜಕಾರ್ತಾ ವಿಮಾನ ನಿಲ್ದಾಣಕ್ಕೆ ಕರೆತಂದು ಲ್ಯಾಂಡ್ ಮಾಡುವಂತೆ ಮನವಿ ಮಾಡಿದ್ದರು! ಅದಾಗ ಎರಡೇ ಎರಡು ನಿಮಿಷದಲ್ಲಿ ವಿಮಾನ ರಾಡರ್ ಸಂಪರ್ಕ ಕಳೆದುಕೊಂಡು ಪತನವಾಗಿತ್ತು!

189 ಪ್ರಯಾಣಿಕರಿದ್ದ ಇಂಡೋನೇಷ್ಯಾದ ಲಯನ್ ಏರ್ ವಿಮಾನ ಪತನ189 ಪ್ರಯಾಣಿಕರಿದ್ದ ಇಂಡೋನೇಷ್ಯಾದ ಲಯನ್ ಏರ್ ವಿಮಾನ ಪತನ

ಇಂಡೋನೇಷ್ಯಾ ರಾಜಧಾನಿ ಜಕಾರ್ತಾ ವಿಮಾನ ನಿಲ್ದಾಣದಿಂದ ಬೆಳಗ್ಗೆ 6:20 ಕ್ಕೆ ಟೇಕಾಫ್ ಆದ ವಿಮಾನ 6:33 ರ ಸಮಯಕ್ಕೆ ಸಂಪರ್ಕ ಕಳೆದುಕೊಂಡಿತ್ತು. ಟೇಕಾಫ್ ಆದ 13 ನಿಮಿಷದ ನಂತರ ಸಂಪರ್ಕ ಕಳೆದುಕೊಂಡ ವಿಮಾನ ಸಮುದ್ರವೊಂದರಲ್ಲಿ ಬಿದ್ದಿದ್ದು ನಂತರ ತಿಳಿಯಿತು.

ಹಿಂತಿರುಗುವಂತೆ ಮನವಿ!

ವಿಮಾನ ಕೇವಲ 2000 ಅಡಿ ಎತ್ತರ ಹಾರಿತ್ತಷ್ಟೇ. ಆಗಲೇ ಏನೋ ಸರಿಯಿಲ್ಲ ಸನ್ನಿಸಿ ಪೈಲೆಟ್ ಜೊತೆ ಸಂಪರ್ಕದಲ್ಲಿದ್ದ ಅಧಿಕಾರಿಗಳು ವಿಮಾನವನ್ನು ವಾಪಸ್ ಜಕಾರ್ತಾ ನಿಲ್ದಾಣಕ್ಕೆ ತಂದು ಲ್ಯಾಂಡ್ ಮಾಡುವಂತೆ ಮನವಿ ಮಾಡಿದ್ದರು! ಆ ಮನವಿಯನ್ನು ಪೈಲೆಟ್ ಪುರಸ್ಕರಿಸಿ ವಾಪಸ್ ಹೊರಟಿದ್ದರೋ, ಇಲ್ಲವೋ ಎಂಬ ಮಾಹಿತಿಯಿಲ್ಲ. ಏಕೆಂದರೆ ಅದಾಗಿ ಎರಡೇ ನಿಮಿಷಕ್ಕೆ ವಿಮಾನ ರಾಡರ್ ಸಂಪರ್ಕ ಕಳೆದುಕೊಂಡಿತ್ತು. ಕೆಲ ಸಮಯದ ನಂತರ ಈ ದುರ್ಘಟನೆಯ ಮಾಹಿತಿ ಲಭಿಸಿತ್ತು!

Array

ಪತನದ ಸೂಚನೆ ಮೊದಲೇ ಸಿಕ್ಕಿತ್ತಾ?

ರಾಡರ್ ಸಂಪರ್ಕ ಕಳೆದುಕೊಳ್ಳುವ ಕೆಲವು ಕ್ಷಣಗಳ ಮೊದಲು ಹಿಂದಿರುಗುವಂತೆ ಪೈಲೆಟ್ ಬಳಿ ಮನವಿ ಮಾಡಲಾಗಿತ್ತು. ಬಹುಶಃ ಕೆಲವು ತಾಂತ್ರಿಕ ದೋಷಗಳ ಬಗ್ಗೆ ಆಗ ಮಾಹಿತಿ ಸಿಕ್ಕಿರಬಹುದು. ಆದರೆ ಮನವಿ ಮಾಡಿಕೊಂಡ ಕೆಲವೇ ಕೆಲವು ಸೆಕೆಂಡ್ ಗಳಲ್ಲಿ ವಿಮಾನ ರಾಡರ್ ಸಂಪರ್ಕ ಕಳೆದುಕೊಂಡಿದ್ದು ಅಧಿಕಾರಿಗಳಲ್ಲಿ ದಿಗ್ಭ್ರಮೆ ಮೂಡಿಸಿದೆ.

ಮುಂಬೈ ವಿಮಾನದಿಂದ ಆಯತಪ್ಪಿ ಬಿದ್ದ ಗಗನಸಖಿಮುಂಬೈ ವಿಮಾನದಿಂದ ಆಯತಪ್ಪಿ ಬಿದ್ದ ಗಗನಸಖಿ

189 ಪ್ರಯಾಣಿಕರ ಕತೆ ಏನು?

ವಿಮಾನದಲ್ಲಿದ್ದ 189 ಪ್ರಯಾಣಿಕರೂ ಬದುಕಿರುವ ಸಾಧ್ಯತೆ ತೀರಾ ಕಡಿಮೆ ಎನ್ನಲಾಗಿದೆ. ಇದುವರೆಗೂ ಪ್ರಯಾಣಿಕರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಸಮುದ್ರದ ಮಧ್ಯೆ ವಿಮಾನ ಪತನವಾಗಿರುವುದರಿಂದ ಈಜಿಕೊಂಡು ಹೋಗುವುದೂ ಸುಲಭವಿಲ್ಲ! ಎಲ್ಲ ಪ್ರಯಾಣಿಕರೂ ಸುರಕ್ಷಿತವಾಗಿರಲಿ ಎಂದು ಪ್ರಾರ್ಥಿಸುವುದಲ್ಲದೆ ಬೇರೆ ದಾರಿ ಇಲ್ಲ! ಈಗಾಗಲೇ ವಿಮಾನ ಪತನವಾದ ಸ್ಥಳದಲ್ಲಿ ರಕ್ಷಣಾ ಕಾರ್ಯ ನಡೆಯುತ್ತಿದ್ದು, ವಿಮಾನ ಮತ್ತು ಅದರ ಬಿಡಿ ಭಾಗಗಳು ನೀರಿನಲ್ಲಿ ತೇಲುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪ್ರಯಾಣಿಕರಿಗಾಗಿ ಪ್ರಾರ್ಥಿಸುತ್ತಿರುವುದು ಕಂಡುಬರುತ್ತಿದೆ.

Array

ಈ ಶತಮಾನದ ಮಹಾ ದುರಂತ?!

2013 ಏಪ್ರಿಲ್ 13ರಂದು ಇಂಡೊನೇಷ್ಯಾದ ಬಾಲಿಯಲ್ಲೂ ಇಂಥದೇ ಘಟನೆ ನಡೆದಿತ್ತು, 101 ಪ್ರಯಾಣಿಕರನ್ನು ಹೊತ್ತಿದ್ದ ಲಯನ್ ಏರ್ ಫ್ಲೈಟ್ 904 ವಿಮಾನವು ಪತನವಾಗಿತ್ತು. ಆದರೆ ಅದೃಷ್ಟವಶಾತ್ ಎಲ್ಲಾ ಪ್ರಯಾಣಿಕರೂ ಪ್ರಾಣಾಪಾಯದಿಂದ ಪಾರಾಗಿದ್ದರು. ಅಕಸ್ಮಾತ್ ಇಂದು ನಡೆದ ಈ ದುರಂತದಲ್ಲಿ ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರೂ ದುರದೃಷ್ಟವಶಾತ್ ಮೃತರಾಗಿದ್ದೇ ಹೌದಾದರೆ 1997 ರ ನಂತರ ನಡೆದ ಮಹಾ ದುರಂತ ಇದಾಗಲಿದೆ. 1997 ರಲ್ಲಿ ಗರುಡಾ ಇಂಡೋನೇಷ್ಯಾ A300 ವಿಮಾನ ಪತನವಾಗಿ 214 ಪ್ರಯಾಣಿಕರು ಮೃತರಾಗಿದ್ದರು.

ದೆಹಲಿಯಿಂದ ವಿಮಾನದಲ್ಲಿ ಬರ್ತಿದ್ದ ಅರ್ಮಾನ್ ರಾತ್ರಿ ಏನ್ಮಾಡ್ತಿದ್ದ ನೋಡಿ!ದೆಹಲಿಯಿಂದ ವಿಮಾನದಲ್ಲಿ ಬರ್ತಿದ್ದ ಅರ್ಮಾನ್ ರಾತ್ರಿ ಏನ್ಮಾಡ್ತಿದ್ದ ನೋಡಿ!

English summary
Indonesia's Lion Air flight, that crashed into the sea probably killing all 188 persons on-board, had reportedly requested to return to base before going off the radar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X