ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

21 ವರ್ಷದ ಅಗಂಗ್ ರನ್ನು ನೆನೆದು ಹೆಮ್ಮೆ ಪಡುತ್ತಿದೆ ಇಂಡೋನೇಷ್ಯಾ

|
Google Oneindia Kannada News

ಜಕಾರ್ತ, ಸೆಪ್ಟೆಂಬರ್ 30: ಇಪ್ಪತ್ತೊಂದು ವರ್ಷದ ಏರ್ ಟ್ರಾಫಿಕ್ ಕಂಟ್ರೋಲರ್ ಅಂಥೋನಿಯಸ್ ಗುನವನ್ ಅಗಂಗ್ ಬಗ್ಗೆ ಇಡೀ ದೇಶದಾದ್ಯಂತ ಹೆಮ್ಮೆಯ ಮಾತುಗಳು ಕೇಳಿಬರುತ್ತಿವೆ. ಶುಕ್ರವಾರ ಇಂಡೋನೇಷ್ಯಾದಲ್ಲಿ ಭೂಕಂಪ, ಅದರ ಬೆನ್ನಿಗೇ ಸುನಾಮಿ ಸಂಭವಿಸಿತು. ಈ ಅವಘಡ ಸಂಭವಿಸಿದ್ದು ಸುಲವೇಸಿ ದ್ವೀಪದಲ್ಲಿ.

ಈ ಭೂಕಂಪ ಸಂಭವಿಸಿದ ವೇಳೆ ವಿಮಾನ ನಿಲ್ದಾಣದಲ್ಲಿ ಏರ್ ಟ್ರಾಫಿಕ್ ಕಂಟ್ರೋಲರ್ ಆಗಿದ್ದವರು ಅಂಥೋನಿಯಸ್ ಗುನವನ್ ಅಗಂಗ್. ಪಲುವಿನಲ್ಲಿರುವ ಮುಟಿಯಾರ ಸಿಸ್ ಅಲ್ ಜುಫ್ರಿ ವಿಮಾನ ನಿಲ್ದಾಣದಿಂದ ಬತಿಕ್ ಏರ್ ನ ವಿಮಾನ ಅಲ್ಲಿಂದ ಹೊರಡುವ ತನಕ ಸ್ಥಳ ಬಿಟ್ಟು ಕದಲಲಿಲ್ಲ. ಈತನ ಸಹೋದ್ಯೋಗಿಗಳು ವಿಮಾನಗಳ ಟ್ರಾಫಿಕ್ ಕಂಟ್ರೋಲ್ ಅಂತೂ ನಿರ್ವಹಿಸುತ್ತಿರಲಿಲ್ಲ. ಆದರೆ ಆ ಸ್ಥಳ ಬಿಟ್ಟು ಹೊರಡಲು ಅಗಂಗ್ ಒಪ್ಪಿಲ್ಲ.

ಇಂಡೋನೇಷ್ಯಾದಲ್ಲಿ ಭೂಕಂಪ, ಸುನಾಮಿಗೆ 832 ಮಂದಿ ಸಾವುಇಂಡೋನೇಷ್ಯಾದಲ್ಲಿ ಭೂಕಂಪ, ಸುನಾಮಿಗೆ 832 ಮಂದಿ ಸಾವು

ಭೂಕಂಪನ ಸಂಭವಿಸಿದಾಗ ಬತಿಕ್ ಏರ್ ಹೊರಡಲು ಅಂಥೋನಿಯಸ್ ಗುನವನ್ ಅಗಂಗ್ ಕ್ಲಿಯರೆನ್ಸ್ ನೀಡುತ್ತಿದ್ದರು. ಕ್ಷೇಮವಾಗಿ ಹೊರಟಿದೆ ಎಂಬುದನ್ನು ಖಾತ್ರಿ ಪಡಿಸಲು ಕಾಯುತ್ತಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆ ವಿಮಾನ ಯಶಸ್ವಿಯಾಗಿ ಆ ಸ್ಥಳದಿಂದ ಹೊರಟಿತು.

Agung

ಭೂಕಂಪ ಆದಾಗ ತಪ್ಪಿಸಿಕೊಳ್ಳುವ ಸಲುವಾಗಿ ನಾಲ್ಕು ಅಂತಸ್ತಿನ ಟವರ್ ನಿಂದ ಅಗಂಗ್ ಹಾರಿದ್ದಾರೆ. ಕಾಲು ಮುರಿದುಕೊಂಡು, ಗಂಭೀರ ಗಾಯಗಳಾಗಿವೆ. ಹತ್ತಿರದ ಆಸ್ಪತ್ರೆಗೆ ಕರೆದೊಯ್ದು, ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿದೆ. ಇನ್ನೂ ಹೆಚ್ಚಿನ ವ್ಯವಸ್ಥೆ ಇರುವ ಆಸ್ಪತ್ರೆಗೆ ಅಗಂಗ್ ನ ಕರೆದೊಯ್ಯಲು ಹೆಲಿಕಾಪ್ಟರ್ ಬರುವ ಮುನ್ನ ಪ್ರಾಣ ಹೋಗಿದೆ.

ವಿಧಿಬರಹ ಎಂಥ ಘೋರ... ತಾತನ ಕೈಯಲ್ಲಿ ಮೊಮ್ಮಗನ ಕಳೇಬರ!ವಿಧಿಬರಹ ಎಂಥ ಘೋರ... ತಾತನ ಕೈಯಲ್ಲಿ ಮೊಮ್ಮಗನ ಕಳೇಬರ!

ತನ್ನ ಕರ್ತವ್ಯ ಮೆರೆದು, ಸ್ಫೂರ್ತಿ ಮೆರೆದ ಅಗಂಗ್ ಗೌರವಾರ್ಥ ಮರಣೋತ್ತರವಾಗಿ ಎರಡು ಹಂತದ ಬಡ್ತಿ ನೀಡಲಾಗಿದೆ.

English summary
An Indonesian air traffic controller is being posthumously hailed as a hero for refusing to leave his post despite devastating earthquakes so that he could guide a passenger jet safely off the ground.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X