ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಡೋನೇಷ್ಯಾ ಮೆರಾಪಿ ಪರ್ವತದ ಸ್ಫೋಟ, ಹೈ ಅಲರ್ಟ್

|
Google Oneindia Kannada News

ಜಕಾರ್ತಾ, ಮಾರ್ಚ್ 03: ಇಂಡೋನೇಷ್ಯಾದ ಅತ್ಯಂತ ಸಕ್ರಿಯ ಅಗ್ನಿ ಪರ್ವತ ಮೌಂಟ್ ಮೆರಾಪಿ ಮಂಗಳವಾರ ಸ್ಫೋಟಗೊಂಡಿದ್ದು, ಸುಮಾರು ಆರು ಕಿ.ಮೀ ಎತ್ತರಕ್ಕೆ ದಟ್ಟ ಬೂದಿ ಚಿಮ್ಮಿಸಿದೆ. ಈ ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ. ಜಾವಾ ದ್ವೀಪದಲ್ಲಿರುವ ಮೆರಾಪಿ ಪರ್ವತವು ಯೋಗ್ಯಾಕಾರ್ತಾ ನಗರದಿಂದ 30 ಕಿ.ಮೀ ದೂರದಲ್ಲಿದೆ.

ಜ್ವಾಲಾಮುಖಿಯು ಅಪಾಯಕಾರಿ ಅನಿಲ ಮತ್ತು ಬಿಸಿ ಮೋಡಗಳನ್ನು ಸೃಷ್ಟಿಸಿದೆ, ಕೋಡ್ ರೆಡ್ ವಿಮಾನಯಾನ ಅಲರ್ಟ್ ಘೋಷಿಸಲಾಗಿದೆ ಎಂದು ಇಂಡೋನೇಷ್ಯಾ ಭೂವೈಜ್ಞಾನಿಕ ವಿಪತ್ತು ಸಂಸ್ಥೆಯ ಮುಖ್ಯಸ್ಥ ಹನಿಕ್ ಹುಮೈದಾ ಹೇಳಿದ್ದಾರೆ.

ಜ್ವಾಲಾಮುಖಿ ಕುಳಿಯಿಂದ ಮೂರು ಕಿ.ಮೀ ದೂರದಲ್ಲಿರುವ ಹಳ್ಳಿಗಳ ಮೇಲೆ ಬೂದಿ ಮತ್ತು ಮರಳಿನ ಮಳೆ ಸುರಿದಿದ್ದು, ಕುಳಿಯಿಂದ 10 ಕಿ.ಮೀ ದೂರದಲ್ಲಿರುವ ಉತ್ತರದ ಪ್ರಾಂತ್ಯಗಳಲ್ಲೂ ಬೂದಿಯ ಮಳೆ ಬಿದ್ದಿದೆ ಎಂದು ಹುಮೈದಾ ಹೇಳಿದ್ದಾರೆ.

Indonesias Mount Merapi erupts, triggers aviation alert

ಸುಮಾರು 3 ಕಿಮೀ ವ್ಯಾಪ್ತಿಯಲ್ಲಿನ ನಿವಾಸಿಗಳು ತಕ್ಷಣಾವೇ ಮನೆ ಖಾಲಿ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಗೊಳಿಸಲಾಗಿದೆ. ಜ್ವಾಲಾಮುಖಿ ಕುಳಿಯಿಂದ ಮೂರು ಕಿ.ಮೀ ದೂರದಲ್ಲಿರುವ ಹಳ್ಳಿಗಳ ಮೇಲೆ ಬೂದಿ ಮತ್ತು ಮರಳಿನ ಮಳೆ ಸುರಿದಿದೆ. ಕುಳಿಯಿಂದ 10 ಕಿ.ಮೀ ದೂರದಲ್ಲಿರುವ ಉತ್ತರದ ಪ್ರಾಂತ್ಯಗಳಲ್ಲೂ ಬೂದಿಯ ಮಳೆ ಬಿದ್ದಿದೆ.

1930ರಲ್ಲಿ 1,300ಕ್ಕೂ ಅಧಿಕ ಮಂದಿಯನ್ನು ಬಲಿ ತೆಗೆದುಕೊಂಡಿತ್ತು. 1994ರಲ್ಲಿ 60 ಮಂದಿ ಮೃತರಾಗಿದ್ದರು. 2010ರಲ್ಲಿ ಕೊನೆಯ ಬಾರಿಗೆ ಈ ಮೌಂಟ್ ಮೆರಾಪಿ ಜ್ವಾಲಾಮುಖಿ ಸ್ಫೋಟಗೊಂಡು, ಸುಮಾರು 300ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದರು. ಸುಮಾರು 2 ಲಕ್ಷದ 80 ಸಾವಿರ ಮಂದಿ ನಿರಾಶ್ರಿತರಾಗಿದ್ದರು.

English summary
Mount Merapi erupted early on Tuesday (Mar 3), spewing ash plumes as high as 6km above its peak and coating nearby communities with grey dust, said Indonesian authorities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X