ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ, ಬ್ರೆಜಿಲ್‌ಗಿಂತ ಅಧಿಕ ಹೊಸ ಕೋವಿಡ್‌ ಪ್ರಕರಣ ದಾಖಲಿಸಿದ ಇಂಡೋನೇಷ್ಯಾ

|
Google Oneindia Kannada News

ಜಕಾರ್ತ, ಜು.26: ವರ್ಲ್ಡ್ ಮೀಟರ್ ಅಂಕಿಅಂಶಗಳ ಪ್ರಕಾರ, ಇಂಡೋನೇಷ್ಯಾವು ಈಗ ಹೊಸ ಕೋವಿಡ್‌ ಸೋಂಕು ಪ್ರಕರಣಗಳಲ್ಲಿ ಬ್ರೆಜಿಲ್, ಭಾರತ ಮತ್ತು ಯುಎಸ್ ಅನ್ನು ಹಿಂದಿಕ್ಕಿದೆ. ಇಂಡೋನೇಷ್ಯಾದಲ್ಲಿ 45,416 ಹೊಸ ಕೊರೊನಾವೈರಸ್ ಸೋಂಕು ಪ್ರಕರಣಗಳು ದಾಖಲಾಗಿದೆ.

ಇಂಡೋನೇಷ್ಯಾದಲ್ಲಿ 45,416 ಹೊಸ ಕೋವಿಡ್‌ ಪ್ರಕರಣಗಳು ದಾಖಲಾದ ಸಂದರ್ಭದಲ್ಲಿ ಬ್ರೆಜಿಲ್‌ನಲ್ಲಿ 38,091 ಕೋವಿಡ್ -19 ಪ್ರಕರಣಗಳು, ಭಾರತದಲ್ಲಿ 39,742 ಮತ್ತು ಯುನೈಟೆಡ್ ಸ್ಟೇಟ್ಸ್‌ನಲ್ಲಿ 37,245 ಪ್ರಕರಣಗಳು ದಾಖಲಾಗಿವೆ. ಆದಾಗ್ಯೂ, ಒಟ್ಟು ಸೋಂಕುಗಳು ಮತ್ತು ಸಾವುಗಳ ಸಂಖ್ಯೆಗೆ ಸಂಬಂಧಿಸಿದಂತೆ, ಇಂಡೋನೇಷ್ಯಾ ಇನ್ನೂ 31,66,505 ಪ್ರಕರಣಗಳು ಮತ್ತು 83,279 ಸಾವುನೋವುಗಳೊಂದಿಗೆ ಅಗ್ರ ರಾಷ್ಟ್ರಗಳಿಗಿಂತ ಹಿಂದುಳಿದಿದೆ.

ಪತ್ನಿಯ ಬುರ್ಖಾ ತೊಟ್ಟು ವಿಮಾನ ಏರಿದ್ದ ಕೊರೊನಾ ಸೋಂಕಿತ: ಸಿಕ್ಕಿ ಬಿದ್ದಿದ್ಹೇಗೆ?ಪತ್ನಿಯ ಬುರ್ಖಾ ತೊಟ್ಟು ವಿಮಾನ ಏರಿದ್ದ ಕೊರೊನಾ ಸೋಂಕಿತ: ಸಿಕ್ಕಿ ಬಿದ್ದಿದ್ಹೇಗೆ?

ಬ್ರೆಜಿಲ್‌ನಲ್ಲಿ ಒಟ್ಟು 1,96,88,663 ಕೋವಿಡ್‌ ಪ್ರಕರಣಗಳು ದಾಖಲಾಗಿದ್ದು, 5,49,999 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಭಾರತದಲ್ಲಿ 3,14,11,262 ಕೋವಿಡ್‌ ಪ್ರಕರಣಗಳು ದಾಖಲಾಗಿದ್ದು, 4,20,996 ಮಂದಿ ಸಾವನ್ನಪ್ಪಿದ್ದಾರೆ. ಯುನೈಟೆಡ್‌ ಸ್ಟೇಟ್ಸ್‌ನಲ್ಲಿ 56,97,912 ಕೋವಿಡ್‌ ಪ್ರಕರಣಗಳು ದಾಖಲಾಗಿದ್ದು, 1,29,158 ಮಂದಿ ಕೋವಿಡ್‌ ಸೋಂಕಿಗೆ ಬಲಿಯಾಗಿದ್ದಾರೆ.

 ಇಂಡೋನೇಷ್ಯಾದಲ್ಲಿ 40,000 ಕ್ಕೂ ಅಧಿಕ ಕೋವಿಡ್‌ ಪ್ರಕರಣ

ಇಂಡೋನೇಷ್ಯಾದಲ್ಲಿ 40,000 ಕ್ಕೂ ಅಧಿಕ ಕೋವಿಡ್‌ ಪ್ರಕರಣ

ಈ ತಿಂಗಳ ಆರಂಭದಲ್ಲಿ ದೈನಂದಿನ ಕೋವಿಡ್ -19 ಪ್ರಕರಣ ಮತ್ತು ಸಾವಿನ ಎಣಿಕೆಗೆ ಸಂಬಂಧಿಸಿದಂತೆ ಇಂಡೋನೇಷ್ಯಾವು ಬ್ರೆಜಿಲ್ ಮತ್ತು ಭಾರತವನ್ನು ಮೀರಿದೆ. ಈಗ ಇಂಡೋನೇಷ್ಯಾವು ಹೊಸ ಜಾಗತಿಕ ವೈರಸ್ ಕೇಂದ್ರಬಿಂದುವಾಗಿದೆ. ಜುಲೈ 15 ರಂದು 56,000 ರಷ್ಟು ಕೋವಿಡ್‌ ಪ್ರಕರಣಗಳು ದಾಖಲಾಗಿದ್ದು, ಈಗ ಪ್ರತಿ ದಿನದ ಕೋವಿಡ್‌ ಪ್ರಕರಣಗಳು 40,000 ಕ್ಕೂ ಹೆಚ್ಚಿದೆ. ಹಾಗೆಯೇ ಸಾವಿನ ಸಂಖ್ಯೆಯೂ ಕೂಡಾ ಏರಿಕೆಯಾಗುತ್ತಿದೆ.

 ಇಂಡೋನೇಷ್ಯಾದಲ್ಲಿ ಮತ್ತೆ ಕೋವಿಡ್‌ ನಿಯಮ ಸಡಿಲಿಕೆ

ಇಂಡೋನೇಷ್ಯಾದಲ್ಲಿ ಮತ್ತೆ ಕೋವಿಡ್‌ ನಿಯಮ ಸಡಿಲಿಕೆ

ಭಾನುವಾರ, ಅಧ್ಯಕ್ಷ ಜೋಕೊ ವಿಡೋಡೋ ಕೋವಿಡ್ -19 ನಿರ್ಬಂಧಗಳನ್ನು ಆಗಸ್ಟ್ 2 ರವರೆಗೆ ಮತ್ತೊಂದು ವಾರ ಸಡಿಲಗೊಳಿಸಿದರು. ಆದರೆ ಕೊರೊನಾ ವೈರಸ್ ರೋಗ ಪ್ರಕರಣಗಳು ತಿಂಗಳ ಅವಧಿಯ ನಿರ್ಬಂಧಗಳ ನಂತರ ಹೆಚ್ಚಿನ ಮಟ್ಟದಲ್ಲಿವೆ. ನಿರ್ಬಂಧಗಳನ್ನು ಸಡಿಲಗೊಳಿಸುವುದರಿಂದ ದೇಶದಲ್ಲಿ ಸಾಂಕ್ರಾಮಿಕದ ಮತ್ತೊಂದು ಅಲೆ ಉಂಟಾಗಬಹುದು ಎಂದು ತಜ್ಞರು ಎಚ್ಚರಿಸಿದ್ದರೂ ಅಧ್ಯಕ್ಷ ಜೋಕೊ ವಿಡೋಡೋ ನಿಯಮ ಸಡಿಲಿಕೆ ಮಾಡಿ ಆದೇಶ ಹೊರಡಿಸಿದ್ದಾರೆ.

ಭಾರತಕ್ಕೆ 4 ಕ್ರಯೋಜೆನಿಕ್ ಆಕ್ಸಿಜನ್ ಕಂಟೇನರ್ ಕಳುಹಿಸಿದ ಇಂಡೋನೆಷ್ಯಾಭಾರತಕ್ಕೆ 4 ಕ್ರಯೋಜೆನಿಕ್ ಆಕ್ಸಿಜನ್ ಕಂಟೇನರ್ ಕಳುಹಿಸಿದ ಇಂಡೋನೆಷ್ಯಾ

 ಇಂಡೋನೇಷ್ಯಾದ ಕೋವಿಡ್‌ ನಿಯಮ

ಇಂಡೋನೇಷ್ಯಾದ ಕೋವಿಡ್‌ ನಿಯಮ

ಹೊಸ ಆದೇಶಗಳ ಪ್ರಕಾರ, ಪ್ರಧಾನ ಆಹಾರವನ್ನು ಮಾರಾಟ ಮಾಡುವ ಸಾಂಪ್ರದಾಯಿಕ ಮಾರುಕಟ್ಟೆಗಳು ಸಾಮಾನ್ಯ ರೀತಿಯಲ್ಲಿ ತೆರೆದುಕೊಳ್ಳಲಿದೆ. ಆಹಾರೇತರ ವಸ್ತುಗಳನ್ನು ಮತ್ತು ಇತರ ಸಣ್ಣ ವ್ಯಾಪಾರಿಗಳು ಅಂಗಡಿಗಳನ್ನು ನಿರ್ಬಂಧದೊಂದಿಗೆ ಕಾರ್ಯನಿರ್ವಹಿಸಬೇಕು. ಈ ಅಂಗಡಿಗಳಲ್ಲಿ ಜನರ ಸಂಖ್ಯೆ ಕಡಿಮೆ ಇರಬೇಕು. ಹಾಗೆಯೇ ಅಂಗಡಿಗಳನ್ನು ತೆರೆಯಲು ಅವಧಿಯನ್ನು ನಿಗದಿಪಡಿಸಲಾಗಿದೆ. ಆಹಾರ ಮಳಿಗೆಗಳು ಮತ್ತು ರೆಸ್ಟೋರೆಂಟ್‌ಗಳು ಹೊರಾಂಗಣ ಪ್ರದೇಶಗಳಲ್ಲಿ ಪುನರಾರಂಭಿಸಬಹುದು ಆದರೆ ಅತ್ಯಂತ ಕಟ್ಟುನಿಟ್ಟಾದ ಮಾರ್ಗಸೂಚಿಗಳನ್ನು ಪಾಲಿಸಬೇಕು. ಈ ಬಗ್ಗೆ ಮಾಹಿತಿ ನೀಡಿದ ಪ್ರದೇಶಗಳಲ್ಲಿನ ಸಾಂಕ್ರಾಮಿಕ ಪ್ರತಿಕ್ರಿಯೆಯನ್ನು ಸಂಘಟಿಸುವ ಉಸ್ತುವಾರಿ ಲುಹುತ್ ಪಂಜೈತಾನ್, ''ಜಾವಾ ಮತ್ತು ಬಾಲಿಯಾದ್ಯಂತ 95 ನಗರಗಳು ಮತ್ತು ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ಕ್ರಮಗಳೊಂದಿಗೆ ಹಂತ -4 ರ ನಿರ್ಬಂಧಗಳು ಜಾರಿಯಲ್ಲಿವೆ. ಹಂತ-ಮೂರು ನಿರ್ಬಂಧಗಳಿಗೆ ಒಳಪಟ್ಟ 33 ನಗರಗಳು ಮತ್ತು ಪ್ರದೇಶಗಳಲ್ಲಿ ಸಂಜೆ 5 ರವರೆಗೆ ಮಾಲ್‌ಗಳು ಮತ್ತು ಡಿಪಾರ್ಟ್‌ಮೆಂಟ್ ಮಳಿಗೆಗಳು ಶೇಕಡ ರಷ್ಟು ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಲಿದೆ,'' ಎಂದು ತಿಳಿಸಿದ್ದಾರೆ.

 ಕಠಿಣ ನಿರ್ಬಂಧ ವಿಧಿಸಿ: ಇಂಡೋನೇಷ್ಯಾಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಒತ್ತಾಯ

ಕಠಿಣ ನಿರ್ಬಂಧ ವಿಧಿಸಿ: ಇಂಡೋನೇಷ್ಯಾಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಒತ್ತಾಯ

ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಇಂಡೋನೇಷ್ಯಾವನ್ನು ಕಠಿಣವಾದ ಕೋವಿಡ್ -19 ನಿರ್ಬಂಧಗಳನ್ನು ವಿಧಿಸುವಂತೆ ಒತ್ತಾಯಿಸಿದೆ. ನಿರ್ಬಂಧಗಳನ್ನು ತೆಗೆದುಹಾಕುವುದರಿಂದ ದೇಶದಲ್ಲಿ ಹೆಚ್ಚಿನ ಪ್ರಕರಣಗಳು ಮತ್ತು ಸಾವುಗಳು ಸಂಭವಿಸುತ್ತವೆ ಎಂದು ತಜ್ಞರು ಹೇಳಿದ್ದಾರೆ. "ಕನಿಷ್ಠ ನಾಲ್ಕು ವಾರಗಳವರೆಗೆ ನಿರ್ಬಂಧಗಳು ಜಾರಿಯಲ್ಲಿರಬೇಕು. ಗರಿಷ್ಠ ವರದಿಗಳನ್ನು ಪಡೆಯಲು ಸರ್ಕಾರ ಪರೀಕ್ಷೆ, ಪತ್ತೆಹಚ್ಚುವಿಕೆ ಮತ್ತು ಚಿಕಿತ್ಸೆಯನ್ನು ಹೆಚ್ಚಿಸಬೇಕಾಗಿದೆ," ಎಂದು ಆಸ್ಟ್ರೇಲಿಯಾದ ಗ್ರಿಫಿತ್ ವಿಶ್ವವಿದ್ಯಾಲಯದ ಇಂಡೋನೇಷ್ಯಾದ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಡಿಕಿ ಬುಡಿಮನ್ ಭಾನುವಾರ ಪ್ರಕಟಣೆಗೆ ಮುನ್ನ ಎಎಫ್‌ಪಿಗೆ ತಿಳಿಸಿದ್ದಾರೆ. "ಇಲ್ಲದಿದ್ದರೆ, ಇದು ಯಾವುದೇ ನಿರ್ಬಂಧಗಳನ್ನು ಹೊಂದಿರದಂತೆಯೇ ಇರುತ್ತದೆ," ಎಂದು ಕೂಡ ಉಲ್ಲೇಖಿಸಿದ್ದಾರೆ.

(ಒನ್‌ಇಂಡಿಯಾ ಸುದ್ದಿ)

English summary
Indonesia on Sunday recorded 45,416 new cases of Covid-19 to overtake Brazil, India and the US in terms of fresh infections, according to Worldometer data.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X