ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪತನವಾದ ವಿಮಾನದ ರೆಕಾರ್ಡರ್ ಮತ್ತು 48 ಶವಗಳು ಪತ್ತೆ

|
Google Oneindia Kannada News

ಜಕಾರ್ತಾ, ನವೆಂಬರ್ 01: ಇಂಡೋನೇಷ್ಯಾದಲ್ಲಿ ಇತ್ತೀಚೆಗೆ ಸಂಬಂವಿಸಿದ ಭೀಕರ ವಿಮಾನ ಪತನದಲ್ಲಿ ಮೃತರಾದ 48 ಪ್ರಯಾಣಿಕರ ಶವವನ್ನು ಸಮುದ್ರದಲ್ಲಿ ಪತ್ತೆಯಾಗಿದೆ.

ಜೊತೆಗೆ ವಿಮಾನ ದಾಖಲೆಗಳು ಪತ್ತೆಯಾಗಿದ್ದು, ಇದರಲ್ಲಿ ವಿಮಾನ ಪತನದ ಕಾರಣಗಳೂ ಇದ್ದಿರಬಹುದು ಎಂದು ಅಂದಾಜಿಸಲಾಗಿದೆ.

189 ಪ್ರಯಾಣಿಕರಿದ್ದ ಇಂಡೋನೇಷ್ಯಾದ ಲಯನ್ ಏರ್ ವಿಮಾನ ಪತನ189 ಪ್ರಯಾಣಿಕರಿದ್ದ ಇಂಡೋನೇಷ್ಯಾದ ಲಯನ್ ಏರ್ ವಿಮಾನ ಪತನ

ಅ.29 ರಂದು ಇಂಡೋನೇಷ್ಯಾದ ಕಾಲಮಾನ ಬೆಳಿಗ್ಗೆ 6:20 ಕ್ಕೆ ಟೇಕಾಫ್ ಆದ ಲಯನ್ ಏರ್ ವಿಮಾನ 13 ನಿಮಿಷಗಳ ನಂತರ, ಅಂದರೆ 6:33 ರ ಸಮಯಕ್ಕೆ ಸಂಪರ್ಕ ಕಳೆದುಕೊಂಡಿತ್ತು. ರಾಡರ್ ಸಂಪರ್ಕ ಕಳೆದುಕೊಳ್ಳುವ ಕೆಲವೇ ಕ್ಷಣ ಮೊದಲು ಸಂಪರ್ಕಕ್ಕೆ ಸಿಕ್ಕಿದ್ದ ಪೈಲೆಟ್ ನಂತರ ಪತ್ತೆಯಿರಲಿಲ್ಲ. ವಿಮಾನದಲ್ಲಿದ್ದ 189 ಪ್ರಯಾಣಿಕರ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ.

Indonesia plane crash: Flight recorders of Lion Air jet retrieved from sea

ವಿಮಾನ ಪತನದ ದುರಂತದಲ್ಲಿ ಅವರ ಜೀವ ಉಳಿಸಿದ್ದು ಟ್ರಾಫಿಕ್ ಜಾಮ್!ವಿಮಾನ ಪತನದ ದುರಂತದಲ್ಲಿ ಅವರ ಜೀವ ಉಳಿಸಿದ್ದು ಟ್ರಾಫಿಕ್ ಜಾಮ್!

ಆದರೆ ಕೆಲವೇ ಕ್ಷಣಗಳಲ್ಲಿ ಈ ವಿಮಾನ ಸಮುದ್ರದಲ್ಲಿ ಬಿದ್ದಿರುವ ಬಗ್ಗೆ ಮಾಹಿತಿ ಲಭ್ಯವಾಯಿತು. ವಿಮಾನದಲ್ಲಿದ್ದ 189 ಪ್ರಯಾಣಿಕರೂ ಮೃತರಾಗಿದ್ದಾರೆ ಎನ್ನಲಾಗಿತ್ತಾದರೂ ಅವರ ಕಳೇಬರ ಪತ್ತೆಯಾಗಿರಲಿಲ್ಲ. ಇದೀಗ 48 ಶವಗಳು ಪತ್ತೆಯಾಗಿದ್ದು, ಉಳಿದವರ ಕಳೇಬರಕ್ಕಾಗಿ ಶೋಧಕಾರ್ಯ ನಡೆಯುತ್ತಿದೆ.

English summary
Indonesian investigators on Thursday said they found the flight data recorders from the Lion Air Flight JT610, a discovery that should help explain why the new Boeing 737 crashed on Monday, killing all 189 people on board.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X