ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐದು ವರ್ಷ ನಿಶ್ಚಿಂತೆಯಿಂದ ಇರಿ, ಇದು ಟ್ಯಾಕ್ಸ್ ಫ್ರೀ- ಇಂಡೋನೇಷ್ಯಾದಲ್ಲಿ 'ಅಲೆಮಾರಿ ವೀಸಾ' ಪ್ರಯೋಗ

|
Google Oneindia Kannada News

ಜಕಾರ್ತಾ, ಜೂನ್ 24: ಫ್ರೀಲ್ಯಾನ್ಸ್ ಆಗಿ ಕೆಲಸ ಮಾಡುತ್ತೀರಾ? ಹಾಗಿದ್ದರೆ ಲಗೇಜ್ ಪ್ಯಾಕಪ್ ಮಾಡಿಕೊಂಡು ಬಾಲಿ ಟ್ರಿಪ್‌ಗೆ ಹೋಗಲು ಅಣಿಯಾಗಿ. ಅದೂ ಐದು ವರ್ಷದವರೆಗೆ ಆರಾಮವಾಗಿ ಬಾಲಿ ಮುಂತಾದ ಸುಂದರ ದ್ವೀಪ ಪ್ರದೇಶಗಳಲ್ಲಿದ್ದು ಫ್ರೀಲ್ಯಾನ್ಸ್ (Freelance Job) ಕೆಲಸ ಮಾಡಿಕೊಂಡು ಇರಬಹುದು. ತೆರಿಗೆ ಕಟ್ಟುವ ಚಿಂತೆ ಇಲ್ಲ.

ಇಂಡೋನೇಷ್ಯಾ ಸರಕಾರ ಇಂಥದ್ದೊಂದು ಭರ್ಜರಿ ಆಫರ್ ಮುಂದಿಟ್ಟಿದೆ. ಇಂಡೋನೇಷ್ಯಾದ ಪ್ರವಾಸೋದ್ಯಮ ಸಚಿವ ಸ್ಯಾಂಡಿಯಾಗೊ ಉನೋ ಅವರು ಮೂರು ವಾರಗಳ ಹಿಂದೆ ಡಿಜಿಟಿಲ್ ಅಲೆಮಾರಿ ವೀಸಾ (Digital Nomad Visa) ಯೋಜನೆಯನ್ನು ಪ್ರಕಟಿಸಿದ್ದಾರೆ. ಈ ವೀಸಾ ಅವಧಿ 5 ವರ್ಷದವರೆಗೂ ಇರಲಿದೆ.

ವಿಡಿಯೋ: ಒರಾಂಗೂಟಾನ್‌ನೊಂದಿಗೆ ಚೆಲ್ಲಾಟವಾಡಲು ಹೋದವನಿಗೆ ಆಗಿದ್ದೇನು?ವಿಡಿಯೋ: ಒರಾಂಗೂಟಾನ್‌ನೊಂದಿಗೆ ಚೆಲ್ಲಾಟವಾಡಲು ಹೋದವನಿಗೆ ಆಗಿದ್ದೇನು?

"ಹಿಂದೆ ಮೂರು S ಇತ್ತು: Sun (ಸೂರ್ಯ), Sea (ಸಮುದ್ರ) ಮತ್ತು Sand (ಮರಳು). ಈಗ ನಾವು Serenity (ಪ್ರಶಾಂತತೆ), Spirituality (ಆಧ್ಯಾತ್ಮಶೀಲತೆ) ಮತ್ತು Sustainability (ಸುಸ್ಥಿರತೆ) ಎಂಬ ಮೂರು S ನತ್ತ ಸಾಗುತ್ತಿದ್ದೇವೆ. ಇದರಿಂದ ನಮ್ಮ ಸ್ಥಳೀಯ ಆರ್ಥಿಕತೆಗೆ ಒಳ್ಳೆಯ ಪುಷ್ಟಿ ಸಿಗುತ್ತದೆ" ಎಂದು ಇಂಡೋನೇಷ್ಯಾದ ಈ ಸಚಿವರು ಅಭಿಪ್ರಾಯಪಟ್ಟಿದ್ದಾರೆ.

 ತೆರಿಗೆ ಇಲ್ಲ, ಷರತ್ತು ಇದೆ

ತೆರಿಗೆ ಇಲ್ಲ, ಷರತ್ತು ಇದೆ

ಇಂಡೋನೇಷ್ಯಾ ಸರಕಾರ ಘೋಷಿಸಿರುವ ಈ ಯೋಜನೆಯಲ್ಲಿ ಫ್ರೀಲ್ಯಾನ್ಸ್ ಆಗಿ ಕೆಲಸ ಮಾಡುವ ವಿಶ್ವದ ಯಾವ ವ್ಯಕ್ತಿ ಬೇಕಾದರೂ ಇಂಡೋನೇಷ್ಯಾದ ಬಾಲಿ ಮೊದಲಾದ ಪ್ರದೇಶಗಳಲ್ಲಿ ಐದು ವರ್ಷ ಕಾಲ ಸ್ವತಂತ್ರವಾಗಿ ಇರಬಹುದು. ಇಲ್ಲಿ ಒಂದು ಮುಖ್ಯ ಷರತ್ತು ಇದೆ. ಅದೆಂದರೆ, ಫ್ರೀಲಾನ್ಸ್ ಕೆಲಸ ಮಾಡುವವರು ಇಂಡೋನೇಷ್ಯಾದ ಕಂಪನಿಯ ಕೆಲಸ ಮಾಡಬಾರದು. ಬದಲಾಗಿ ಬೇರೆ ದೇಶಗಳ ಕೆಲಸವನ್ನು ಮಾಡಬೇಕು.

ಫ್ರೀಲ್ಯಾನ್ಸ್ ಎಂದರೆ ಯಾವುದೇ ಕಂಪನಿಯಲ್ಲಿ ಉದ್ಯೋಗಿಯಾಗಿ ನೇಮಕವಾಗದೇ ಮಾಡುವ ಕೆಲಸವಾಗಿದೆ.

ಪಾಮ್ ಆಯಿಲ್ ರಫ್ತು ನಿರ್ಬಂಧ ತೆರವುಗೊಳಿಸಲಿದೆ ಇಂಡೋನೇಷ್ಯಾಪಾಮ್ ಆಯಿಲ್ ರಫ್ತು ನಿರ್ಬಂಧ ತೆರವುಗೊಳಿಸಲಿದೆ ಇಂಡೋನೇಷ್ಯಾ

 ಇಂಡೋನೇಷ್ಯಾಗೇನು ಉಪಯೋಗ?

ಇಂಡೋನೇಷ್ಯಾಗೇನು ಉಪಯೋಗ?

ಸರಕಾರದ ಡಿಜಿಟಲ್ ಅಲೆಮಾರಿ ವೀಸಾ ಪ್ರಯೋಗವು ಸರಿಯಾಗಿ ನೆರವೇರಿದಲ್ಲಿ ವಿದೇಶಗಳಿಂದ 36 ಲಕ್ಷ ಪ್ರವಾಸಿಗರು ಇಂಡೋನೇಷ್ಯಾಗೆ ಆಗಮಿಸುತ್ತಾರೆ. ಅದರ ದೂರಗಾಮಿ ಪರಿಣಾಮವಾಗಿ ಇಂಡೋನೇಷ್ಯಾದ ಸ್ಥಳೀಯರಿಗೆ 10 ಲಕ್ಷ ಉದ್ಯೋಗ ಸೃಷ್ಟಿಯಾಗುತ್ತದೆ ಎಂಬುದು ಸರಕಾರದ ಲೆಕ್ಕಾಚಾರ.

ಅದಕ್ಕೆಯೇ ಐದು ವರ್ಷ ತೆರಿಗೆಯ ಚಿಂತೆ ಇಲ್ಲದೇ ಫ್ರೀಲ್ಯಾನ್ಸ್ ಕೆಲಸ ಮಾಡಿಕೊಂಡಿರುವ ಅವಕಾಶವನ್ನು ಇಂಡೋನೇಷ್ಯಾ ಮಾಡಿಕೊಟ್ಟಿದೆ. ಇದು ಫ್ರೀಲ್ಯಾನ್ಸ್ ಕೆಲಸಗಾರರಿಗೂ ಲಾಭ, ಇಂಡೋನೇಷ್ಯಾದ ಆರ್ಥಿಕತೆಗೂ ಲಾಭ. ಆರ್ಥಿಕತೆಗೆ ಲಾಭ ಹೇಗೆಂದರೆ, ಜನರು ವಿದೇಶಗಳಿಂದ ಗಳಿಸಿದ ಹಣವನ್ನು ಇಂಡೋನೇಷ್ಯಾದಲ್ಲಿ ಬದುಕು ನಿರ್ವಹಿಸುವುದಕ್ಕಾದರೂ ಒಂದಷ್ಟು ಪ್ರಮಾಣದಲ್ಲಿ ವೆಚ್ಚ ಮಾಡಬೇಕಾಗುತ್ತದೆ. ಇದರಿಂದ ಆರ್ಥಿಕತೆಗೆ ಪುಷ್ಟಿ ಸಿಗುತ್ತದೆ ಎಂದು ಭಾವಿಸಲಾಗಿದೆ.

 ಅಧ್ಯಯನ ಮತ್ತು ಸಮೀಕ್ಷೆ ಆಧಾರ

ಅಧ್ಯಯನ ಮತ್ತು ಸಮೀಕ್ಷೆ ಆಧಾರ

ಇಂಡೋನೇಷ್ಯಾ ಸರಕಾರ ಇಂಥದ್ದೊಂದು ಪ್ರಯೋಗ ಮಾಡಲು ಹೊರಟಿದ್ದು ಏಕಾಏಕಿ ನಿರ್ಧಾರವಲ್ಲ. ಫ್ರೀಲಾನ್ಸ್ ಕೆಲಸಗಾರರ ಬಗ್ಗೆ ಇತ್ತೀಚೆಗೆ ಒಂದು ಸಮೀಕ್ಷೆ ಮತ್ತು ಅಧ್ಯಯನ ನಡೆದಿತ್ತಂತೆ. ಆ ಸಮೀಕ್ಷೆಯಲ್ಲಿ ಪಾಲ್ಗೊಂಡವರಲ್ಲಿ ಶೇ. 95ರಷ್ಟು ಫ್ರೀಲಾನ್ಸ್ ಕೆಲಸಗಾರರು ಇಂಡೋನೇಷ್ಯಾದಲ್ಲಿದ್ದುಕೊಂಡು ಕೆಲಸ ಮಾಡುವ ಇಚ್ಛೆ ತೋಡಿಕೊಂಡರಂತೆ. ಈ ಸಮೀಕ್ಷೆಯ ಆಧಾರದ ಮೇಲೆ ಇಂಡೋನೇಷ್ಯಾ ವಿಶ್ವದೆಲ್ಲೆಡೆ ಇರುವ ಫ್ರೀಲಾನ್ಸ್ ಕೆಲಸಗಾರರಿಗೆ ಆಹ್ವಾನ ಕೊಟ್ಟಿದೆ.

ಕಳೆದ ವರ್ಷವೇ ಡಿಜಿಟಲ್ ಅಲೆಮಾರಿ ವೀಸಾ ಯೋಜನೆ ಜಾರಿಯಾಗಬೇಕಿತ್ತು. ಆದರೆ ಕೋವಿಡ್ ಸಾಂಕ್ರಾಮಿಕ ಪರಿಸ್ಥಿತಿಯಿಂದಾಗಿ ಯೋಜನೆಯನ್ನು ಸ್ಥಗಿತಗೊಳಿಸಲಾಗಿತ್ತು ಎಂದು ಇಂಡೋನೇಷ್ಯಾ ಪ್ರವಾಸೋದ್ಯಮ ಸಚಿವ ಸ್ಯಾಂಡಿಯಾಗೊ ಉನೋ ಹೇಳುತ್ತಾರೆ.


"ಈಗ ಸಾಂಕ್ರಾಮಿಕ ಕಾಯಿಲೆ ಪರಿಸ್ಥಿತಿಯನ್ನು ನಿಭಾಯಿಸಲಾಗಿದೆ. ಆರೋಗ್ಯ ಇಲಾಖೆಯಿಂದ ಹಿಡಿದು ವಲಸೆ ವಿಭಾಗದವರೆಗೂ ಸರಕಾರದ ಎಲ್ಲಾ ಸಚಿವಾಲಯಗಳೂ ಸಕ್ರಿಯವಾಗಿದ್ದಾರೆ. ಇದು ಡಿಜಿಟಲ್ ನೋಮಾಡ್ ವೀಸಾ ಯೋಜನೆ ಪುನಾರಂಭಿಸಲು ಸಕಾಲವಾಗಿದೆ" ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ.

 5 ವರ್ಷದ ವೀಸಾ ಇದೊಂದೇ

5 ವರ್ಷದ ವೀಸಾ ಇದೊಂದೇ

ಇಂಡೋನೇಷ್ಯಾದಲ್ಲಿ ಸದ್ಯ ಹಲವು ವೀಸಾಗಳಿವೆ. ವಿಸಾ ಆನ್ ಅರೈವಲ್ (VoA), ಟೂರಿಸ್ಟ್ ಆಫ್ ಕಲ್ಚರಲ್ (ToC) ವೀಸಾ, ಫ್ರೀ ವೀಸಾ (Free Visa) ಇತ್ಯಾದಿ ಇವೆ. ಆದರೆ, ಇವೆಲ್ಲವೂ 30 ರಿಂದ 180 ದಿನಗಳವರೆಗೆ ಮಾತ್ರ ಇಂಡೋನೇಷ್ಯಾದಲ್ಲಿ ಇರಲು ಅನುಮತಿಸುತ್ತವೆ. ಈ ಹಿನ್ನೆಲೆಯಲ್ಲಿ ಡಿಜಿಟಲ್ ಅಲೆಮಾರಿ ವೀಸಾ ಯೋಜನೆ ವಿಶೇಷವಾಗಿದೆ. ವಿದೇಶಗಳ ಕೆಲಸಗಳನ್ನು ಫ್ರೀಲಾನ್ಸ್ ಆಗಿ ಮಾಡುತ್ತಾ ಐದು ವರ್ಷ ಇದ್ದರೆ ನಿಮಗೆ ಮತ್ತು ಇಂಡೋನೇಷ್ಯಾ ಸರಕಾರಕ್ಕೆ ವಿನ್ ವಿನ್ ಸ್ಥಿತಿ ಆಗುತ್ತದೆ.

ಮೇಲಾಗಿ ಇಂಡೋನೇಷ್ಯಾ ಪ್ರವಾಸಿಗರ ನೆಚ್ಚಿನ ತಾಣಗಳನ್ನು ಹೊಂದಿರುವ ದೇಶವಾಗಿದೆ. ಬಾಲಿಯ ಬೀಚ್ ಬಲು ಫೇಮಸ್. ಗಿಲಿ ಐಲ್ಯಾಂಡ್, ಕೊಮೊಡೋ ನ್ಯಾಷನಲ್ ಪಾರ್ಕ್, ಮೌಂಟ್ ಬ್ರೋಮೊ, ಟೋಬಾ ಸರೋವರ, ರಾಜಾ ಅಂಪತ್ ದ್ವೀಪ, ಬಂದಾ ದ್ವೀಪ ಹೀಗೆ ಅನೇಕ ಸ್ಥಳಗಳಿವೆ. ಅನೇಕ ಪ್ರಾಚೀನ ಹಿಂದೂ ಮತ್ತು ಬೌದ್ಧ ಮಂದಿರಗಳು ಇಲ್ಲಿದೆ. ಹಲವು ದ್ವೀಪಗಳಿಂದ ಕೂಡಿರುವ ಇಂಡೋನೇಷ್ಯಾ ಪ್ರವಾಸಿಗರ ಸ್ವರ್ಗವೆನಿರುವ ದೇಶಗಳಲ್ಲೊಂದಾಗಿದೆ.

(ಒನ್ಇಂಡಿಯಾ ಸುದ್ದಿ)

English summary
Indonesia has offered Digital Nomad visa to freelance workers across the world. This visa will allow to stay in Indonesia for 5 years without the need to pay any taxes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X