ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಡೋನೇಷ್ಯಾ ಸುನಾಮಿ ಆರ್ಭಟಕ್ಕೆ ಕನಿಷ್ಠ 400 ಸಾವು, ಅನೇಕರು ನಾಪತ್ತೆ

|
Google Oneindia Kannada News

ಜಕಾರ್ತಾ, ಸೆಪ್ಟೆಂಬರ್ 29: ಇಂಡೋನೇಷ್ಯಾಕ್ಕೆ ಅಪ್ಪಳಿಸಿರುವ ಪ್ರಬಲ ಭೂಕಂಪ ಮತ್ತು ಸುನಾಮಿ ಸುಲವೆಸಿ ದ್ವೀಪದಲ್ಲಿ ಕನಿಷ್ಠ 400 ಮಂದಿಯನ್ನು ಬಲಿತೆಗೆದುಕೊಂಡಿದೆ.

ನೂರಾರು ಗಾಯಾಳುಗಳು ಆಸ್ಪತ್ರೆಗೆ ದಾಖಲಾಗಿದ್ದು, ದುರಂತಕ್ಕೀಡಾದ ಸ್ಥಳಗಳಿಗೆ ತೆರಳಲು ರಕ್ಷಣಾ ಪಡೆಗಳು ಹರಸಾಹಸಪಡಬೇಕಾಗಿದೆ. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ.

ಸುಮಾರು 3.50 ಲಕ್ಷ ಜನಸಂಖ್ಯೆ ಇರುವ ಪಲು ಪ್ರದೇಶದಲ್ಲಿ ಶನಿವಾರ ಬೆಳಿಗ್ಗೆ ಸುನಾಮಿ ಅಲೆಗಳು ಸುಮಾರು ಹತ್ತು ಅಡಿಗಳ ಎತ್ತರದಲ್ಲಿ ನಗರಕ್ಕೆ ಅಪ್ಪಳಿಸಿದ್ದು, ಸಮುದ್ರ ತೀರದುದ್ದಕ್ಕೂ ಅಸ್ತವ್ಯಸ್ತವಾಗಿ ಬಿದ್ದಿದ್ದ ಮೃತದೇಹಗಳು ದುರಂತದ ಕ್ರೌರ್ಯಕ್ಕೆ ಸಾಕ್ಷಿಯಾಗಿವೆ.

ಗಾಯಾಳುಗಳ ಚಿಕಿತ್ಸೆಗೆ ಆಸ್ಪತ್ರೆಯಲ್ಲಿ ಜಾಗವಿಲ್ಲದಂತಾಗಿದೆ. ಹೀಗಾಗಿ ರಸ್ತೆ ಬದಿಯಲ್ಲಿಯೇ ಅನೇಕರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ವಿಡಿಯೋ : ಇಂಡೋನೇಷ್ಯಾದಲ್ಲಿ ಭೂಕಂಪದ ನಂತರ ಸುನಾಮಿಯ ಅಟ್ಟಹಾಸವಿಡಿಯೋ : ಇಂಡೋನೇಷ್ಯಾದಲ್ಲಿ ಭೂಕಂಪದ ನಂತರ ಸುನಾಮಿಯ ಅಟ್ಟಹಾಸ

ದುರಂತದಲ್ಲಿ ಬಚಾವಾದವರು ಮೃತರ ದೇಹಗಳನ್ನು ಪತ್ತೆಹಚ್ಚಲು ನೆರವಾಗುತ್ತಿದ್ದಾರೆ. ನೂರಾರು ಮಂದಿ ಕಾಣೆಯಾಗಿದ್ದಾರೆ. ಎಲ್ಲೆಡೆ ಕಟ್ಟಡಗಳು ಕುಸಿದಿದ್ದು, ಅವಶೇಷಗಳ ಅಡಿ ಜನರು ಸಿಕ್ಕಿಬಿದ್ದಿದ್ದಾರೆ. ಜಲಾವೃತ ರಸ್ತೆಗಳು, ಭೂಕುಸಿತ ಮುಂತಾದ ಕಾರಣಗಳಿಂದಾಗಿ ಪರಿಹಾರ ಕಾರ್ಯಕ್ಕೆ ತೀವ್ರ ಹಿನ್ನಡೆಯಾಗಿದೆ.

ಕಟ್ಟಡಗಳು ನೆಲಸಮ

ಕಟ್ಟಡಗಳು ನೆಲಸಮ

ಭಾರಿ ಪ್ರಮಾಣದ ಭೂಕಂಪ ಸಂಭವಿಸಿದ ಬೆನ್ನಲ್ಲೇ ಇಂಡೋನೇಷ್ಯಾದಲ್ಲಿ ಸುನಾಮಿ ಅಬ್ಬರಿಸಿತ್ತು. ಅನೇಕ ಕಟ್ಟಡಗಳು ನೆಲಸಮವಾಗಿವೆ. ಭಯಭೀತರಾದ ಜನರು ಎತ್ತರ ಪ್ರದೇಶಗಳಿಗೆ ದೌಡಾಯಿಸಿದ್ದಾರೆ. ಪಲು ನಗರ ಸಂಪೂರ್ಣ ಜಲಾವೃತವಾಗಿದೆ.

ಅಂದಾಜು 540 ಮಂದಿ ಗಾಯಗೊಂಡಿದ್ದಾರೆ. ಸುಮುದ್ರ ತೀರದುದ್ದಕ್ಕೂ ಅವಶೇಷಗಳು ಹರದಿಕೊಂಡಿದ್ದು, ಅವುಗಳ ನಡುವೆಯೇ ಮೃತದೇಹಗಳು ಬಿದ್ದಿವೆ. ಸುನಾಮಿ ಏಳುವ ಸೂಚನೆ ದೊರೆಯುತ್ತಿದ್ದಂತೆಯೇ ಅನೇಕರು ಎತ್ತರದ ಮರಗಳನ್ನು ಏರಿ ಜೀವ ಉಳಿಸಿಕೊಂಡಿದ್ದಾರೆ.

ಕೆಸರಿನಲ್ಲಿ ಬಿದ್ದಿದ್ದ ಪುಟ್ಟ ಕಂದ ಮೃತದೇಹವನ್ನು ಹೊತ್ತು ತರುವ ಚಿತ್ರ ವೈರಲ್ ಆಗಿದ್ದು, ಎಲ್ಲರ ಮನಕಲಕುವಂತಿದೆ.

ಇಂಡೋನೇಷ್ಯಾವನ್ನು ಕಾಡಿರುವ ಅತಿ ಭಯಂಕರ 10 ಭೂಕಂಪಗಳ ಪಟ್ಟಿಇಂಡೋನೇಷ್ಯಾವನ್ನು ಕಾಡಿರುವ ಅತಿ ಭಯಂಕರ 10 ಭೂಕಂಪಗಳ ಪಟ್ಟಿ

Array

ಪಲು ನಗರ ಜಲಾವೃತ

ಭೂಕಂಪದ ಕೇಂದ್ರ ಸ್ಥಾನದಿಂದ ಸುಮಾರು 80 ಕಿ.ಮೀ. ದೂರದಲ್ಲಿರುವ ಪಲು ನಗರದಲ್ಲಿ ಎತ್ತರ ಕಟ್ಟಡವೊಂದರಿಂದ ತೆಗೆದ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಸಮುದ್ರದಾಳದಿಂದ ಏಕಾಏಕಿ ಚಿಮ್ಮಿದ ಅಲೆಗಳು ಅನೇಕ ಕಟ್ಟಡಗಳನ್ನು ನೆಲಸಮ ಮಾಡಿದ್ದಲ್ಲದೆ, ಬೃಹತ್ ಮಸೀದಿಯನ್ನು ಕೊಚ್ಚಿಕೊಂಡು ಹೋಗಿದ್ದನ್ನು ಈ ವಿಡಿಯೋ ಚಿತ್ರಿಸಿದೆ.

ಮನೆಗಳು, ಕಟ್ಟಡಗಳು ನೆಲಕ್ಕುರುಳಿದ್ದು, ಹೆಚ್ಚಿನ ಕಡೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ನಗರ, ಪಟ್ಟಣಗಳು ಜಲಾವೃತಗೊಂಡಿವೆ. ಭೂಕುಸಿತದಿಂದಾಗಿ ಹೆಚ್ಚಿನ ಅವಘಡ ಸಂಭವಿಸಿದೆ.

ಇಂಡೋನೇಷ್ಯಾಕ್ಕೆ ಅಪ್ಪಳಿಸಿದ ಸುನಾಮಿ, 5 ಮಂದಿ ಸಾವು, ಕುಟುಂಬಗಳು ಕಣ್ಮರೆಇಂಡೋನೇಷ್ಯಾಕ್ಕೆ ಅಪ್ಪಳಿಸಿದ ಸುನಾಮಿ, 5 ಮಂದಿ ಸಾವು, ಕುಟುಂಬಗಳು ಕಣ್ಮರೆ

ವಿಮಾನ ನಿಲ್ದಾಣ ಬಂದ್

ವಿಮಾನ ನಿಲ್ದಾಣ ಬಂದ್

ದಕ್ಷಿಣ ಸುಲವೆಸಿ ಪ್ರಾಂತ್ಯದ ರಾಜಧಾನಿ ಪಲು ನಗರದಲ್ಲಿರುವ ಮುಖ್ಯ ವಿಮಾನ ನಿಲ್ದಾಣವನ್ನು ಸುನಾಮಿ ಹೊಡೆತದ ಬಳಿಕ ಮುಚ್ಚಲಾಗಿದ್ದು, ವಿಪತ್ತು ಪರಿಹಾರ ಕಾರ್ಯಾಚರಣೆಗಳು ಮುಗಿಯುವವರೆಗೂ ಕನಿಷ್ಠ 24 ಗಂಟೆ ತೆರೆಯಲಾಗುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದ್ವೀಪದ ದಕ್ಷಿಣ ಭಾಗದ ಅತಿ ದೊಡ್ಡ ನಗರ ಮಕಸ್ಸಾರ್ ಮತ್ತು ನೆರೆಯ ಕಲಿಮಂಟಾನ್‌ಗಳಲ್ಲಿಯೂ ಭೂ ಕಂಪನದ ಅನುಭವಗಳು ಆಗಿವೆ.

ರಿಕ್ಟರ್‌ನಲ್ಲಿ 7.5 ತೀವ್ರತೆ

ಜುಲೈ ಮತ್ತು ಆಗಸ್ಟ್‌ನಲ್ಲಿ ಇಂಡೋನೇಷ್ಯಾದ ಲೊಂಬೊಕ್ ದ್ವೀಪದಲ್ಲಿ ಸರಣಿ ಭೂಕಂಪ ಸಂಭವಿಸಿ 550ಕ್ಕೂ ಅಧಿಕ ಮಂದಿ ಜೀವ ಕಳೆದುಕೊಂಡಿದ್ದರು. ಶುಕ್ರವಾರ ಸಂಭವಿಸಿದ ಭೂಕಂಪ ರಿಕ್ಟರ್ ಮಾಪಕದಲ್ಲಿ 7.5 ತೀವ್ರತೆ ಹೊಂದಿದ್ದು, ಹಿಂದಿನ ಭೂಕಂಪಗಳಿಂತಲೂ ಹೆಚ್ಚು ತೀವ್ರವಾಗಿದೆ.

ಸುನಾಮಿ ಸಂಭವಿಸಿದ ವೇಳೆ ಜನರು ಅದರ ಅರಿವಿಲ್ಲದೆ ಬೀಚ್‌ನಲ್ಲಿ ತಮ್ಮ ಚಟುವಟಿಕೆಗಳಲ್ಲಿ ಮಗ್ನರಾಗಿದ್ದರು. ಭೂಕಂಪನದ ಅನುಭವ ಆದಾಗಲೂ ಅಲ್ಲಿಂದ ತಕ್ಷಣ ಓಡಲಿಲ್ಲ. ಹೀಗಾಗಿ ಅಲೆಗಳ ಅಬ್ಬರಕ್ಕೆ ಬಲಿಯಾದರು.

2004ರ ಸುನಾಮಿ ನೆನಪು

2004ರ ಸುನಾಮಿ ನೆನಪು

2004ರಲ್ಲಿ ಸುಮಾತ್ರಾದ ಕರಾವಳಿಯಲ್ಲಿ 9.1 ತೀವ್ರತೆಯ ಭೂಕಂಪದಿಂದ ಉಂಟಾದ ಭಾರಿ ಸುನಾಮಿ ಅಲೆಗಳು ಇಂಡೋನೇಷ್ಯಾವಲ್ಲದೆ, ವಿವಿಧ ದೇಶಗಳ ಸುಮಾರು 2.20 ಲಕ್ಷ ಜನರನ್ನು ಬಲಿ ತೆಗೆದುಕೊಂಡಿತ್ತು. ಇಂಡೋನೇಷ್ಯಾದಲ್ಲಿಯೇ 1.68 ಲಕ್ಷ ಮಂದಿ ಪ್ರಾಣ ಕಳೆದುಕೊಂಡಿದ್ದರು.

2010ರಲ್ಲಿ ಸುಮಾತ್ರಾ ಕರಾವಳಿಯಲ್ಲಿ ಉಂಟಾಗಿದ್ದ ಭಾರಿ ಭೂಕಂಪನದ ಪರಿಣಾಮದ ಸುನಾಮಿ ಜಾವಾ ದ್ವೀಪದಲ್ಲಿ 600ಕ್ಕೂ ಅಧಿಕ ಜನರನ್ನು ಸಾಯಿಸಿತ್ತು.

English summary
More than 400 died and hundreds of people injured in the strong Earth quake and Tsunami hit Indonesia.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X