ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರವಾಸಿಗರಿಗೆ ಮುಕ್ತ ಪ್ರವೇಶ, ಶ್ರೀಲಂಕಾದಿಂದ ಏರ್ ಟಿಕೆಟ್ ವಿಶೇಷ ಕೊಡುಗೆ

|
Google Oneindia Kannada News

ಕೊಲಂಬೋ, ಅಕ್ಟೋಬರ್ 26: ಅಕ್ಟೋಬರ್ 1ರಿಂದ ಶ್ರೀಲಂಕಾ ತನ್ನ ಗಡಿಗಳನ್ನು ವಿಶ್ವದ ಪ್ರವಾಸಿಗರ ಆಗಮನಕ್ಕೆ ತೆರೆದಿದೆ. ಹೊಸ ಮಾರ್ಗಸೂಚಿಗಳ ಪ್ರಕಾರ ಈ ದ್ವೀಪರಾಷ್ಟ್ರವು ಈಗ ಭಾರತ ಒಳಗೊಂಡು ಎಲ್ಲ ದೇಶಗಳ ಪೂರ್ಣ ಲಸಿಕೆ ಪಡೆದ ಪ್ರಯಾಣಿಕರಿಗೆ ಪ್ರವಾಸಕ್ಕೆ ಅವಕಾಶ ನೀಡಿದೆ. ಪೂರ್ಣ ಲಸಿಕೆ ಪಡೆದಿರುವ ಮತ್ತು ಮೂಲ ಪ್ರದೇಶದಿಂದ ನೆಗೆಟಿವ್ ಪಿಸಿಆರ್ ಹೊಂದಿರುವ ಶ್ರೀಲಂಕಾಗೆ ಆಗಮಿಸುವ ಪ್ರವಾಸಿಗರು ಕೊಲಂಬೋದಲ್ಲಿ ಪಿಸಿಆರ್ ಪರೀಕ್ಷೆಗೆ ಒಳಪಡಬೇಕಿಲ್ಲ ಮತ್ತು ಅವರು ಅವರ ಪ್ರಯಾಣ ಮತ್ತು ರಜೆಯನ್ನು ಶ್ರೀಲಂಕೆಯಲ್ಲಿ ಆನಂದಿಸಬಹುದು.

ಶ್ರೀಲಂಕಾಕ್ಕೆ ಭೇಟಿ ಕೊಟ್ಟ ವಿದೇಶಿ ಪ್ರವಾಸಿಗರ ಲೆಕ್ಕ ಹಾಕಿದಾಗ ಸೆಪ್ಟೆಂಬರ್ ತಿಂಗಳಲ್ಲಿ ಭಾರತೀಯರೇ ಅತಿ ಹೆಚ್ಚು ಭೇಟಿ ನೀಡಿರುವುದು ಕಂಡು ಬಂದಿದೆ. ಸೆಪ್ಟೆಂಬರ್ ತಿಂಗಳಲ್ಲಿ ಒಟ್ಟು 13, 547 ಪ್ರವಾಸಿಗರನ್ನು ಸ್ವಾಗತಿಸಿದೆ. ಸಾಂಕ್ರಾಮಿಕ ನಿಯಂತ್ರಣದ ಬಳಿಕ ವಿಮಾನಯಾನಕ್ಕೆ ಇಂಬು ನೀಡಲು ಏರ್ ಟಿಕೆಟ್ ರಿಯಾಯಿತಿಗಳನ್ನು ಘೋಷಿಸಲಾಗಿದ್ದು, ಭಾರತೀಯರು ಹೆಚ್ಚು ಆಕರ್ಷಿತರಾಗಿದ್ದಾರೆ ಎಂದು ಪ್ರವಾಸೋದ್ಯಮ ಇಲಾಖೆ ಹೇಳಿದೆ.

ಭಾರತದ ಪ್ರವಾಸಿಗರು ಇದರ ಪ್ರಯೋಜನ ಪಡೆಯಬಹುದಾಗಿದ್ದು ಅವರು ಕಳೆದ ತಿಂಗಳು ಶ್ರೀಲಂಕನ್ ಏರ್‌ಲೈನ್ಸ್ ಪರಿಚಯಿಸಿದ ಬೈ ಒನ್ ಅಂಡ್ ಗೆಟ್ ಒನ್ ಫ್ರೀ' ವಿಶೇಷ ಕೊಡುಗೆ ಪಡೆಯಬಹುದು. ಈ ಕೊಡುಗೆ ಎಲ್ಲ ಸೀಟುಗಳಿಗೆ ಲಭ್ಯ ಮತ್ತು ಭಾರತ ಮತ್ತು ಕೊಲಂಬೊಗಳಿಗೆ ವಿರಾಮದ ಪ್ರವಾಸಗಳಿಗೆ ಹಾರಾಡುವ ವಿಮಾನಗಳ ಬುಕಿಂಗ್‍ಗಳಿಗೆ ಅನ್ವಯಿಸುತ್ತದೆ. ಈ ಕೊಡುಗೆಯು ಅಕ್ಟೋಬರ್ 31, 2021ರವರೆಗೆ ಲಭ್ಯವಿದೆ ಮತ್ತು ಶ್ರೀಲಂಕನ್ ಹಾಲಿಡೇಸ್ ಅಥವಾ ಶ್ರೀಲಂಕನ್ ಏರ್‌ಲೈನ್ಸ್ ವೆಬ್‍ಸೈಟ್ ಮೂಲಕ ಪಡೆಯಬಹುದು.

Indians top foreign tourist arrivals in Sri Lanka, Sri Lanka to launch tourism promotion campaign

ಈ ವಿಶೇಷ ಕೊಡುಗೆಯು ಶ್ರೀಲಂಕಾ ಸರ್ಕಾರ ಪ್ರವಾಸೋದ್ಯಮ ವಲಯವನ್ನು ಉತ್ತೇಜಿಸಲು ಮತ್ತೆ ತೆರೆಯುವ ಪ್ರಕಟಣೆ ಹೊರಡಿಸಿದ ಸಂದರ್ಭಕ್ಕೆ ನೀಡಲಾಗಿದೆ. ಅದಕ್ಕೆ ಪೂರಕವಾಗಿ ಶ್ರೀಲಂಕಾ ಕೋವ್ಯಾಕ್ಸಿನ್ ಒಳಗೊಂಡು ಪೂರ್ಣ ಲಸಿಕೆ ಪಡೆದ ಭಾರತದ ಪ್ರವಾಸಿಗರನ್ನು ಸ್ವಾಗತಿಸುತ್ತಿದೆ. ಪ್ರವಾಸದ 14 ದಿನಗಳು ಮುನ್ನ ಎರಡನೇ ಡೋಸ್ ಲಸಿಕೆ ಪಡೆದಿರಬೇಕು.

ಪ್ರಸ್ತುತ ಶ್ರೀಲಂಕನ್ ಏರ್‌ಲೈನ್ಸ್ ಭಾರತದಿಂದ 9 ನಗರಗಳಿಂದ ಸಂಚರಿಸುತ್ತಿದ್ದು ಚೆನ್ನೈ, ತಿರುಚ್ಚಿ, ಮದುರೈ, ಬೆಂಗಳೂರು, ಹೈದರಾಬಾದ್, ತಿರುವನಂತಪುರಂ, ಕೊಚ್ಚಿ, ನವದೆಹಲಿ ಮತ್ತು ಮುಂಬೈ ಸೇರಿವೆ. "ಬೈ ಒನ್ ಅಂಡ್ ಗೆಟ್ ಒನ್ ಫ್ರೀ" ಕೊಡುಗೆ ಜಾಗತಿಕ ಪ್ರವಾಸ ಇನ್ನೂ ನಿರ್ಬಂಧ ಹೊಂದಿರುವುದರಿಂದ ಭಾರತದಿಂದ ಶ್ರೀಲಂಕಾಗೆ ಹೆಚ್ಚಿನ ಸಂಖ್ಯೆಯ ಪ್ರವಾಸಿಗರನ್ನು ಸೆಳೆಯುವ ನಿರೀಕ್ಷೆ ಇದೆ.

Indians top foreign tourist arrivals in Sri Lanka, Sri Lanka to launch tourism promotion campaign

ಹೆಚ್ಚಿನ ಮಾಹಿತಿಗೆ ದಯವಿಟ್ಟು ನಿಮ್ಮ ಪ್ರದೇಶದ ಶ್ರೀಲಂಕಾದ ಮಾರಾಟ ಕಛೇರಿಗಳನ್ನು ಸಂಪರ್ಕಿಸಿ ಅತವಾ ದಯವಿಟ್ಟು ಭೇಟಿ ಕೊಡಿ

English summary
Sri Lanka has welcomed 13,547 foreign tourists in September 2021, of which 8,528 were Indians who topped the list of arrivals to the island nation. Sri Lanka to launch tourism promotion campaign
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X