ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಮನ್ ಕನ್ನಡತಿಯಿಂದ 'ನಾ ಕಂಡ ಮಸ್ಕಟ್' ಪುಸ್ತಕ

By Prasad
|
Google Oneindia Kannada News

Indian writes book on Oman in Kannada
ಮಸ್ಕಟ್ (ಒಮನ್), ಮಾ. 6 : ನಾವು ಎಲ್ಲೇ ಹುಟ್ಟಿರಲಿ, ಎಲ್ಲಿ ಜೀವನ ನಡೆವುದೋ ಅದೇ ನಮ್ಮೂರಾಗಿಬಿಡುತ್ತದೆ. ಆ ಊರು, ಜನರು, ಸಂಸ್ಕೃತಿ, ಜೀವನಶೈಲಿ ನಮ್ಮದೇ ಎನ್ನುವ ಮಟ್ಟಿಗೆ ಮೋಹ ಬೆಳೆದುಬಿಡುತ್ತದೆ. ಹೀಗೆ ಅದೇ ಊರಲ್ಲಿ ಬಹುಕಾಲ ಇದ್ದು, ಅದರ ಬಗ್ಗೆ ಪ್ರೇಮ ಬೆಳೆಸಿಕೊಂಡಿರುವ ಕನ್ನಡತಿಯೊಬ್ಬರು ಕನ್ನಡದಲ್ಲಿ ಈ ಊರಿನ ಬಗ್ಗೆ ಪುಸ್ತಕ ಬರೆದಿದ್ದಾರೆ.

ವೃತ್ತಿಯಿಂದ ಸಂಸ್ಕೃತ ಶಿಕ್ಷಕಿಯಾಗಿರುವ ಕವಿತಾ ರಾಮಕೃಷ್ಣ ಅವರು ಬರೆದಿರುವ 'ನಾ ಕಂಡ ಮಸ್ಕಟ್' ಎಂಬ ಕನ್ನಡ ಪುಸ್ತಕ ಬೆಂಗಳೂರಿನಲ್ಲಿ ಜುಲೈ ತಿಂಗಳಲ್ಲಿ ಬಿಡುಗಡೆಯಾಗುತ್ತಿದೆ. ಈ ಪುಸ್ತಕವನ್ನು ಆಂಗ್ಲ ಭಾಷೆಗೂ ಭಾಷಾಂತರಿಸಲಾಗಿದೆ. ಎರಡೂ ಪುಸ್ತಕಗಳು ಏಕಕಾಲಕ್ಕೆ ಬಿಡುಗಡೆ ಭಾಗ್ಯ ಕಾಣುತ್ತಿವೆ.

ಈ ಹೊತ್ತಗೆಯ ಮುಖಾಂತರ ತಾವು ಕಂಡ ಮಸ್ಕಟ್ ಸೊಬಗನ್ನು ಕವಿತಾ ರಾಮಕೃಷ್ಣ ಅವರು ಹಿಡಿದಿಟ್ಟಿದ್ದಾರೆ. ಮಸ್ಕಟ್ ನ ಸುಂದರ ಪರಿಸರ ಮಾತ್ರವಲ್ಲ ಜನಜೀವನವನ್ನೂ ಅವರು ವರ್ಣಿಸಿದ್ದಾರೆ. ಸುಮಾರು ಏಳು ವರ್ಷಗಳಿಂದ ಬ್ಯಾಂಕ್ ನಲ್ಲಿ ಉದ್ಯೋಗಿಯಾಗಿರುವ ಗಂಡ ಮತ್ತು ಮಗನ ಜೊತೆ ಕವಿತಾ ರಾಮಕೃಷ್ಣ ಅವರು ಒಮನ್ ದೇಶದಲ್ಲಿ ಸಂಸಾರ ಹೂಡಿದ್ದಾರೆ.

"ದೇಶದ ಉದ್ದಗಲಕ್ಕೂ ಸುತ್ತಾಡಿದ್ದು ನನಗೆ ಈ ಸುಂದರ ದೇಶದ ಹಲವಾರು ಸಂಗತಿಗಳ ಬಗ್ಗೆ ಅರಿವು ಮಾಡಿಕೊಟ್ಟಿದೆ. ಕನ್ನಡ ಓದಲು ಬರುವವರಿಗೆ ಜಗತ್ತಿನ ಅತ್ಯಂತ ಸುಂದರ ಮತ್ತು ವಿಶಿಷ್ಟ ದೇಶಗಳಲ್ಲಿ ಒಂದಾಗಿರುವ ಮಸ್ಕಟ್ ಬಗ್ಗೆ ತಿಳಿಸಬೇಕೆಂಬುದು ನನ್ನ ಬಹುದಿನಗಳ ಬಯಕೆಯಾಗಿತ್ತು" ಎಂದು ಕವಿತಾ ಹೇಳಿದ್ದಾರೆ. [ಒಮಾನ್ ಜನಪ್ರಿಯ ಪ್ರವಾಸಿ ತಾಣ ಬಿಮ್ಮ ಸಿಂಕ್ ಹೋಲ್]

"ಒಮನ್ ನಲ್ಲಿ ಕಳೆದ ಏಳು ವರ್ಷಗಳಿಂದ ಜೀವಿಸುತ್ತಿರುವ ನನಗೆ ಈ ದೇಶ ನನ್ನದೇ ಎನ್ನುವ ಭಾವನೆ ಮೂಡಿದೆ. ಇಲ್ಲಿಯ ಜನರು, ಸಂಸ್ಕೃತಿ ಮತ್ತು ಜೀವನದ ಬಗ್ಗೆ ಒಂದು ಬಗೆಯ ಗೌರವ ಭಾವನೆಯಿದೆ. ಇದೆಲ್ಲವನ್ನೂ ನನ್ನ ಪುಸ್ತಕದಲ್ಲಿ ಎರಕಹೊಯ್ದಿದ್ದೇನೆ" ಎಂದು ಕವಿತಾ ಅವರು ವಿವರಿಸಿದ್ದಾರೆ.

ಬರಹಗಾರ್ತಿಯಾಗುವುದರ ಜೊತೆಗೆ ಕವಿತಾ ಅವರು ಭಾರತೀಯ ಕಲೆಯ ಬಗ್ಗೆಯೂ ಪರಿಣತಿ ಪಡೆದಿದ್ದಾರೆ. ತಂಜಾವೂರು ವರ್ಣಚಿತ್ರ ಕಲೆಯನ್ನು ಅವರು ಕಳೆದ 10 ವರ್ಷಗಳಿಂದ ಅಭ್ಯಸಿಸುತ್ತಿದ್ದಾರೆ. ಈ ಕಲೆಯನ್ನು ಭಾರತೀಯ ರಾಯಭಾರಿ ಕಚೇರಿಯಲ್ಲಿ ಪ್ರದರ್ಶಿಸಿದ್ದಾರೆ.

English summary
A book on Oman by a Muscat-based Indian teacher, giving insight into the life and culture of the Arab country, is set for a mid-July release. The book titled Na Kanda Muscat (The Muscat I've seen), by Kavitha Ramakrishna, will be launched in Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X