ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಂಬ್ ದಾಳಿಯ ಬಗ್ಗೆ ಶ್ರೀಲಂಕಾ ಕ್ಕೆ ಎಚ್ಚರಿಕೆ ನೀಡಿತ್ತು ಭಾರತ

|
Google Oneindia Kannada News

ಕೊಲಂಬೊ, ಏಪ್ರಿಲ್ 23: ಶ್ರೀಲಂಕಾದಲ್ಲಿ ಸರಣಿ ಬಾಂಬ್ ಸ್ಫೋಟ ನಡೆಸಲು ಉಗ್ರರು ಸಂಚು ರೂಪಿಸಿದ್ದಾರೆ ಎಂದು ಭಾರತದ ಗುಪ್ತಚರ ಇಲಾಖೆ ಶ್ರೀಲಂಕಾಕ್ಕೆ ಕೆಲವು ಗಂಟೆಗಳ ಮುನ್ನಾ ಎಚ್ಚರಿಕೆ ನೀಡಿತ್ತು ಎನ್ನಲಾಗಿದೆ.

ಶ್ರೀಲಂಕಾ ಸ್ಫೋಟ: ಸುತ್ತಾಡುತ್ತಿದ್ದ ಶಂಕಿತ ಉಗ್ರನ ವಿಡಿಯೋ ವೈರಲ್ ಶ್ರೀಲಂಕಾ ಸ್ಫೋಟ: ಸುತ್ತಾಡುತ್ತಿದ್ದ ಶಂಕಿತ ಉಗ್ರನ ವಿಡಿಯೋ ವೈರಲ್

ಇಂದು ಸುದ್ದಿಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಶ್ರೀಲಂಕಾ ಪ್ರಧಾನಿ, ದಾಳಿ ನಡೆವ ಬಗ್ಗೆ ಮುನ್ಸೂಚನೆ ದೊರೆತಿತ್ತು, ಆದರೆ ಭದ್ರತೆಯಲ್ಲಿ ಲೋಪವಾಗಿದೆ ಎಂದು ಒಪ್ಪಿಕೊಂಡಿದ್ದಾರೆ.

ಶ್ರೀಲಂಕಾದ ಸರಣಿ ಸ್ಫೋಟಕ್ಕೆ ಇಸ್ಲಾಮಿಕ್ ಸ್ಟೇಟ್ ಉಗ್ರರೇ ಹೊಣೆ ಶ್ರೀಲಂಕಾದ ಸರಣಿ ಸ್ಫೋಟಕ್ಕೆ ಇಸ್ಲಾಮಿಕ್ ಸ್ಟೇಟ್ ಉಗ್ರರೇ ಹೊಣೆ

ಪ್ರಥಮ ಬಾಂಬ್ ದಾಳಿ ಆಗುವುದಕ್ಕೆ ಎರಡು ಗಂಟೆ ಮುನ್ನಾ ಭಾರತದ ಗುಪ್ತಚರ ಇಲಾಖೆಯು ಶ್ರೀಲಂಕಾದ ಅಧಿಕಾರಿಗಳನ್ನು ಸಂಪರ್ಕಿಸಿ ಚರ್ಚ್‌ಗಳನ್ನು ಗುರಿಯಾಗಿಸಿಕೊಂಡು ಬಾಂಬ್ ದಾಳಿ ನಡೆಸುತ್ತಿರುವ ಬಗ್ಗೆ ಎಚ್ಚರಿಕೆ ನೀಡುತ್ತು ಎಂದು ಭಾರತದ ಗುಪ್ತಚರ ಇಲಾಖೆ ಮತ್ತು ಶ್ರೀಲಂಕಾದ ಭದ್ರತಾ ಅಧಿಕಾರಿಗಳು ಹೇಳಿದ್ದಾರೆ.

Indian warned Srilanka about bomb blast

ಇದೇ ರೀತಿಯ ಮಾಹಿತಿಯನ್ನು ಏಪ್ರಿಲ್ 4 ಮತ್ತು ಏಪ್ರಿಲ್ 20 ರಂದು ಸಹ ಶ್ರೀಲಂಕಾದ ಗುಪ್ತಚರ ಇಲಾಖೆಗೆ ನೀಡಲಾಗಿತ್ತು, ಆದರೆ ಶ್ರೀಲಂಕಾದ ವಿದೇಶಾಂಗ ಇಲಾಖೆ ಸೂಕ್ತ ರೀತಿಯಲ್ಲಿ ಸ್ಪಂದಿಸಿರಲಿಲ್ಲ ಎನ್ನಲಾಗಿದೆ.

ಶ್ರೀಲಂಕಾಕ್ಕೆ ಕಾಲಿಟ್ಟಿತು ಇಸ್ಲಾಮಿಕ್ ಸ್ಟೇಟ್; ಭಾರತದ ಎದುರಿಗೆ ನಿಂತ ಅಪಾಯ! ಶ್ರೀಲಂಕಾಕ್ಕೆ ಕಾಲಿಟ್ಟಿತು ಇಸ್ಲಾಮಿಕ್ ಸ್ಟೇಟ್; ಭಾರತದ ಎದುರಿಗೆ ನಿಂತ ಅಪಾಯ!

ಭಾನುವಾರ ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ ಈವರೆಗೆ 321 ಮಂದಿ ಹತರಾಗಿದ್ದು, 500 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ದಾಳಿಯ ಹೊಣೆಯನ್ನು ಐಸಿಸ್ ಉಗ್ರ ಸಂಘಟನೆ ಹೊತ್ತುಕೊಂಡಿದೆ.

English summary
Indian inteligenece department warned Sri Lanka about terrorists attack earlier says inteligence officers. Sri Lanka prime minister also said today that we warned but we failed to act.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X