• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಾಸಾದ ಪಾರ್ಕರ್ ಸೋಲಾರ್ ನೌಕೆ ಹಿಂದೆ ಭಾರತದ ವಿಜ್ಞಾನಿಯ ಕೊಡುಗೆ

|

ಫ್ಲೋರಿಡಾ, ಆಗಸ್ಟ್ 13: ಸೂರ್ಯನ ಕುರಿತು ಅಧ್ಯಯನ ಮಾಡುವ ನಾಸಾದ ಮಹತ್ವಾಕಾಂಕ್ಷೆಯ ಪಾರ್ಕರ್ ಸೋಲಾರ್ ಪ್ರೋಬ್ ನೌಕೆ ಭಾನುವಾರ ಸೂರ್ಯನತ್ತ ಚಿಮ್ಮಿದೆ.

ಭೂಮಿಗೆ ಅತ್ಯಂತ ಅಗತ್ಯವಾಗಿರುವ ಸೂರ್ಯ, ಅಷ್ಟೇ ಕೌತುಕಮಯವೂ ಹೌದು. ಆದರೆ, ಸೂರ್ಯನ ಕುರಿತ ಅಧ್ಯಯನ ವಿಜ್ಞಾನಿಗಳ ಮುಂದಿರುವ ಬಹುದೊಡ್ಡ ಸವಾಲು. ಏಕೆಂದರೆ, ದಿನಕರನ ಬಗ್ಗೆ ಅಧ್ಯಯನ ಮಾಡಬೇಕೆಂದರೆ ಅವನ ಹತ್ತಿರ ಹೋಗಲೇಬೇಕು. ಆದರೆ, ಲಕ್ಷಾಂತರ ಮೈಲು ದೂರದಿಂದಲೇ ನಮಗೆ ಶಾಖದ ಚುರುಕು ಮುಟ್ಟಿಸುವವನ ಬಳಿ ಹೋಗಲು ಸಾಧ್ಯವೇ?

ಸೂರ್ಯನ ಸ್ಪರ್ಶಕ್ಕಾಗಿ ನಭಕ್ಕೆ ಚಿಮ್ಮಿದ ಪಾರ್ಕರ್ ನೌಕೆ!

ಸೂರ್ಯನಿಗೆ ಅತಿ ಗರಿಷ್ಠ ಸಮೀಪಕ್ಕೆ ತಲುಪುವ 'ಟಚ್ ದಿ ಸನ್' ಎಂಬ ಮಹಾ ಸಾಹಸಿ ಕಾರ್ಯಕ್ಕೆ ನಾಸಾ ಮುಂದಾಗಿದೆ. ಭಾನುವಾರ ಉಡಾವಣೆಗೊಂಡಿರುವ ಪಾರ್ಕರ್ ಸೋಲಾರ್ ನೌಕೆ ಸೂರ್ಯನ ಕುರಿತ ಅನೇಕ ಕೌತುಕಗಳಿಗೆ ಉತ್ತರಗಳನ್ನು ಒದಗಿಸುವ ನಿರೀಕ್ಷೆಯಿದೆ. ಈ ಪಾರ್ಕರ್ ಸೋಲಾರ್ ನೌಕೆ ಕೂಡ ಅನೇಕ ಕುತೂಹಲಕಾರಿ ಸಂಗತಿಗಳನ್ನು ಒಳಗೊಂಡಿದೆ.

ಸೂರ್ಯಮುಖಿಯಾಗಿ ಭಾನುವಾರ ಪ್ರಯಾಣ ಬೆಳೆಸಿರುವ ಈ ನೌಕೆಯ ಕುರಿತು ಕೆಲವೊಂದಿಷ್ಟು ಮಾಹಿತಿ ಇಲ್ಲಿವೆ.

ಭಾರತೀಯ ವಿಜ್ಞಾನಿಯ ಕೊಡುಗೆ

ಭಾರತೀಯ ವಿಜ್ಞಾನಿಯ ಕೊಡುಗೆ

ನಾಸಾದ ಯೋಜನೆ ಕಾರ್ಯಗತವಾಗುವುದರ ಹಿಂದೆ ಭಾರತೀಯ ವ್ಯಕ್ತಿಯ ಕೊಡುಗೆಯ ಇತಿಹಾಸವೂ ಇದೆ. ಭೂಮಿಯ ಜತೆಗಿನ ಸೂರ್ಯನ ನಂಟು, ಪರಿಣಾಮಗಳ ಬಗ್ಗೆ ಸುಮಾರು 60 ವರ್ಷಗಳ ಹಿಂದೆ ಕುತೂಹಲಕಾರಿ ಅಧ್ಯಯನ ನಡೆಸಿದವರು ವಿಜ್ಞಾನಿ ಯೂಜಿನ್ ಪಾರ್ಕರ್. ಹೀಗಾಗಿ ಈ ನೌಕೆಗೆ ಅವರ ಹೆಸರನ್ನೇ ಇರಿಸಲಾಯಿತು.

ಆದರೆ, ಆಗಿನ್ನೂ ಖಭೌತ ವಿಜ್ಞಾನಿಯಾಗಿ ಬೆಳೆಯುತ್ತಿದ್ದ ಪಾರ್ಕರ್ ಅವರ 'ಸೋಲಾರ್ ವಿಂಡ್ಸ್' ಕುರಿತಾದ ಲೇಖನವನ್ನು ಪ್ರಕಟಿಸಿದ್ದು, ಆಗಿನ ಖ್ಯಾತ ವಿಜ್ಞಾನ ಪತ್ರಿಕೆಯೊಂದರ ಸಂಪಾದಕರಾಗಿದ್ದ ಸುಬ್ರಮಣ್ಯನ್ ಚಂದ್ರಶೇಖರ್.

ಸೂರ್ಯನ ಕುರಿತ ಪಾರ್ಕರ್ ಅವರ ಅಧ್ಯಯನ ಬರಹವನ್ನು ವಿಜ್ಞಾನ ವಿಮರ್ಶಕರು ಎರಡು ಬಾರಿ ತಿರಸ್ಕರಿಸಿದ್ದರು. ಆದರೆ, ವಿಜ್ಞಾನ ವಿಶ್ಲೇಷಕರ ಅಭಿಪ್ರಾಯಗಳನ್ನು ಬದಿಗೊತ್ತಿ ಚಂದ್ರಶೇಖರ್ ಈ ಲೇಖನವನ್ನು ಪ್ರಕಟಿಸಿದ್ದರು. ಚಂದ್ರಶೇಖರ್ ಕೂಡ ಈ ಲೇಖನವನ್ನು ಪ್ರಕಟಿಸಿದ್ದರೆ ಪಾರ್ಕರ್ ಅವರ ಅಧ್ಯಯನದ ಅಂಶಗಳು ಜಗತ್ತಿಗೆ ತಿಳಿಯುತ್ತಿರಲಿಲ್ಲ. ಮಿಗಿಲಾಗಿ ಸೌರ ನೌಕೆಯ ಈ ಕಾರ್ಯಕ್ಕೆ ಬುನಾದಿಯೇ ಸಿಗುತ್ತಿರಲಿಲ್ಲ.

ಸುಡುವ ಸೂರ್ಯನ ಅಂಗಳಕ್ಕೆ ನಾಸಾದ ಪಾರ್ಕರ್

ಅವಿಭಜಿತ ಭಾರತದವರು

ಅವಿಭಜಿತ ಭಾರತದವರು

ಸುಬ್ರಮಣ್ಯನ್ ಚಂದ್ರಶೇಖರ್ ಅವಿಭಜಿತ ಭಾರತದ ಪಂಜಾಬ್ ಪ್ರಾಂತ್ಯದ ಲಾಹೋರ್‌ನಲ್ಲಿ (ಈಗಿನ ಪಾಕಿಸ್ತಾನ) ತಮಿಳು ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದವರು.

ಚಂದ್ರಶೇಖರ್ ಖ್ಯಾತ ವಿಜ್ಞಾನಿ ಸಿ.ವಿ. ರಾಮನ್ ಅವರ ಸೋದರ ಸಂಬಂಧಿ ಕೂಡ. ಮದ್ರಾಸ್‌ನಲ್ಲಿ ಓದಿದ ಅವರು ಬಳಿಕ ಉನ್ನತ ವ್ಯಾಸಂಗಕ್ಕಾಗಿ ಕೇಂಬ್ರಿಡ್ಜ್ ವಿವಿಗೆ ತೆರಳಿದರು. ಅಲ್ಲಿಂದ ಅಮೆರಿಕದ ಷಿಕಾಗೊಗೆ ತೆರಳಿ ಪ್ರೊಫೆಸರ್ ಆಗಿ ಕರ್ತವ್ಯ ನಿರ್ವಹಿಸಿದರು. ತಮ್ಮ 84ನೇ ವಯಸ್ಸಿನಲ್ಲಿ 1995ರಲ್ಲಿ ಮೃತಪಡುವವರೆಗೂ ಅವರು ಅಮೆರಿಕದಲ್ಲಿಯೇ ನೆಲೆಸಿದ್ದರು.

ಭೌತವಿಜ್ಞಾನದ ಗಣನೀಯ ಸೇವೆ ಸಲ್ಲಿಸಿದ್ದ ಅವರ ನಕ್ಷತ್ರಗಳ ವಿಕಾಸ ಮತ್ತು ಸಂರಚನೆ ಕುರಿತ ಅಧ್ಯಯನಕ್ಕಾಗಿ 1983ರಲ್ಲಿ ನೊಬೆಲ್ ಗೌರವ ಒಲಿದಿತ್ತು. ನಾಸಾ ಅವರ ಹೆಸರಿನಲ್ಲಿ ಚಂದ್ರ ಎಕ್ಸ್‌ರೇ ಅಬ್ಸರ್ವೇಟರಿ ಉಪಗ್ರಹವನ್ನು ಉಡಾವಣೆ ಮಾಡಿತ್ತು.

'ಸೂರ್ಯ ನೌಕೆ' ಪಾರ್ಕರ್ ಉಡಾವಣೆ ಮುಂದೂಡಿದ ನಾಸಾ

ಪಾರ್ಕರ್ ನೌಕೆಯ ಬಗ್ಗೆ

ಪಾರ್ಕರ್ ನೌಕೆಯ ಬಗ್ಗೆ

* ಈ ಸೌರನೌಕೆಯನ್ನು ಹೊತ್ತುಕೊಂಡ ರಾಕೆಟ್‌ನ ಉಡ್ಡಯನ ತೂಕ 685 ಕೆ.ಜಿ.

* ಈ ರಾಕೆಟ್ ಗಂಟೆಗೆ ಅಂದಾಜು 4.30 ಲಕ್ಷ ಮಿಲಿಯನ್ ಮೈಲು (ಏಳು ಲಕ್ಷ ಕಿ.ಮೀ) ವೇಗದಲ್ಲಿ ಚಲಿಸುತ್ತದೆ.

* ಭೂಮಿಗೂ ಸೂರ್ಯನಿಗೂ ಸುಮಾರು 92 ಲಕ್ಷ ಮಿಲಿಯನ್ ಮೈಲು ದೂರವಿದ್ದು, ಸೂರ್ಯನ 3.85 ಮಿಲಿಯನ್ ಹತ್ತಿರದವರೆಗೂ ಈ ನೌಕೆ ಸಾಗಲಿದೆ.

* 88 ದಿನಗಳಲ್ಲಿ ಈ ನೌಕೆ ಸೂರ್ಯನ ಪ್ರಭಾವಲಯ ಪ್ರವೇಶಿಸಲಿದೆ. ಈ ಭಾಗದ ಸೂರ್ಯನ ಹೊರ ವಲಯಕ್ಕಿಂತ 300 ಪಟ್ಟು ಬಿಸಿಯಾಗಿರುತ್ತದೆ.

* ಈ ನೌಕೆಯ ಜೀವಿತಾವಧಿ ಒಟ್ಟು 6 ವರ್ಷ 321 ದಿನ.

* ಅಂತಿಮವಾಗಿ ಒಂದು ಚಿಕ್ಕ ಕಾರ್ ಗಾತ್ರದ ನೌಕೆ ಮಾತ್ರ ಉಳಿದುಕೊಂಡು ಸೂರ್ಯನ ಪ್ರಭಾವಲಯ ಪ್ರವೇಶಿಸುತ್ತದೆ.

ನೌಕೆ ಕರಗುವುದಿಲ್ಲ ಯಾಕೆ?

ನೌಕೆ ಕರಗುವುದಿಲ್ಲ ಯಾಕೆ?

ನಾಸಾದ ಯಾವುದೇ ಯೋಜನೆಗಳ ನೌಕೆ ಇದುವರೆಗೂ ಸೂರ್ಯನಿಗೆ ಇಷ್ಟು ಸಮೀಪ ಹೋಗಿಲ್ಲ. ಅದರ ಪ್ರಭಾವಲಯದಲ್ಲಿ ಊಹೆಗೂ ನಿಲುಕದಷ್ಟು ಬಿಸಿ ಇರುತ್ತದೆ. ಆ ಶಾಖದಲ್ಲಿಯೂ ನೌಕೆ ಕರಗುವುದಿಲ್ಲ. ಅಷ್ಟು ಶಾಖವನ್ನು ತಾಳಿಕೊಳ್ಳುವ ಶಕ್ತಿ ಈ ನೌಕೆಗಿದೆ.

ಬಾಹ್ಯಾಕಾಶದಲ್ಲಿ ಉಷ್ಣಾಂಶವು ಅದೆಷ್ಟೋ ಸಾವಿರ ಡಿಗ್ರಿ ಸೆಲ್ಸಿಯಸ್ ಇರುತ್ತದೆ. ನೌಕೆ ಸಾಗುವ ಪ್ರಭಾವಲಯದಲ್ಲಿ ಉಷ್ಣಾಂಶ ಅತ್ಯಧಿಕ ಪ್ರಮಾಣದಲ್ಲಿದ್ದರೂ ಅದರ ಸಾಂದ್ರತೆ ಕಡಿಮೆ ಇರುತ್ತದೆ. ಹೀಗಾಗಿ ಪ್ರಭಾವಲಯದಲ್ಲಿ ಮಿಲಿಯನ್‌ ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಇದ್ದರೂ ನೌಕೆಗೆ ಹೊದಿಸಿರುವ ಹೀಟ್ ಶೀಲ್ಡ್‌ಗೆ ತಗುಲುವುದು 1,400 ಡಿಗ್ರಿ ಸೆಲ್ಸಿಯಸ್ ಮಾತ್ರ.

ಥರ್ಮಲ್ ಪ್ರೊಟೆಕ್ಷನ್ ಸಿಸ್ಟಂ ಎಂಬ ಹೀಟ್ ಶೀಲ್ಡ್ ಕವಚ ಹೊಂದಿರುವ ನೌಕೆಯು ಎಂಟು ಅಡಿ ವ್ಯಾಸವುಳ್ಳದಾಗಿದ್ದು, 4.5 ಇಂಚ್ ಗಾತ್ರದಷ್ಟು ದಪ್ಪನಾಗಿದೆ. ಎರಡು ಇಂಗಾಲದ ತಟ್ಟೆಗಳ ನಡುವೆ ಕಾರ್ಬನ್ ಸಂಯೋಜಿತ ಫೋಮ್ ಇರಿಸಿ ಇದನ್ನು ಸಿದ್ಧಪಡಿಸಲಾಗಿದೆ. ಹಗುರದ ಈ ಕವಚಕ್ಕೆ ಶಾಖವನ್ನು ಪ್ರತಿಫಲಿಸುವ ಶಕ್ತಿ ಇದೆ. ಇದರಿಂದ ಹೊರಗೆ ಅಷ್ಟೊಂದು ಶಾಖವಿದ್ದರೂ ಒಳಗಿನ ಉಪಕರಣಗಳಿಗೆ ಬಿಸಿ ತಗುಲುವುದಿಲ್ಲ.

ಅವುಗಳಲ್ಲದೆ ನೌಕೆಯನ್ನು ತಂಪುಗೊಳಿಸುವ ಅನೇಕ ವೈಜ್ಞಾನಿಕ ತಂತ್ರಜ್ಞಾನಗಳನ್ನು ಸಹ ಅಳವಡಿಸಲಾಗಿದೆ.

ಸೂರ್ಯನ ಸುತ್ತ 24 ಸುತ್ತು

ಸೂರ್ಯನ ಸುತ್ತ 24 ಸುತ್ತು

ಉಡಾವಣೆಗೊಂಡ ನೌಕೆಯು ಸೂರ್ಯ ಇರುವ ದಿಕ್ಕನ್ನು ಸ್ವತಃ ಗುರುತಿಸಿಕೊಳ್ಳುತ್ತದೆ. ಅದಕ್ಕೆ ಅನುಗುಣವಾಗಿ ಥರ್ಮಲ್ ರಕ್ಷಣಾ ಕವಚವನ್ನು ಸಜ್ಜುಗೊಳಿಸುತ್ತದೆ. ಸೂರ್ಯನ ದಿಕ್ಕಿಗೆ ಅನುಗುಣವಾಗಿ ಇದೇ ರೀತಿ ಸುಮಾರು ಮೂರು ತಿಂಗಳು ಪ್ರಯಾಣಿಸುತ್ತದೆ. ಸೂರ್ಯನ ಶಾಖ ಮತ್ತು ಬಾಹ್ಯಾಕಾಶದ ನಿರ್ವಾತದ ಶೀತವನ್ನು ಅದು ಎದುರಿಸಬಲ್ಲದು.

ಅಂದಾಜು ಏಳು ವರ್ಷದ ಈ ಯೋಜನಾವಧಿಯಲ್ಲಿ ನೌಕೆಯು ಸೂರ್ಯ ಸುತ್ತ 24 ಸುತ್ತುಗಳನ್ನು ಹಾಕುತ್ತದೆ. ಪ್ರತಿ ಬಾರಿ ಸೂರ್ಯನ ಸಮೀಪಿಸಿದಾಗಲೂ ಸೋಲಾರ್ ವಿಂಡ್ (ಸೌರ ವಾಯು) ಮಾದರಿಯನ್ನು, ಸೂರ್ಯನ ಪ್ರಭಾವಲಯವನ್ನು ಅಧ್ಯಯನ ಮಾಡುತ್ತದೆ. ಜತೆಗೆ ಸೂರ್ಯನ ಸುತ್ತಲೂ ಅತಿ ಸಮೀಪದಿಂದ ಮಾಹಿತಿಗಳನ್ನು ಕಲೆಹಾಕುತ್ತದೆ.

English summary
Indian American astrophysicist Subramanyan Chandrasekhar is remembered by the scientists and NASA while launching the Parker Solar Probe to study Sun from the closest space. Here is some interesting details about Solar Probe mission.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more