ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking; ಟೋಕಿಯೋಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ

|
Google Oneindia Kannada News

ಟೋಕಿಯೋ, ಮೇ 23; ಜಪಾನ್ ಪ್ರವಾಸ ಕೈಗೊಂಡಿರುವ ಭಾರತ ಪ್ರಧಾನಿ ನರೇಂದ್ರ ಮೋದಿ ಜಪಾನ್ ರಾಜಧಾನಿ ಟೋಕಿಯೋಗೆ ಸೋಮವಾರ ಮುಂಜಾನೆ ಆಗಮಿಸಿದರು. ಮೋದಿ ಮೇ 24ರಂದು ಕ್ವಾಡ್ ನಾಯಕರ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಟೋಕಿಯೋಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಗೆ ಅದ್ದೂರಿ ಸ್ವಾಗತ ದೊರೆಯಿತು. ವಿಮಾನ ನಿಲ್ದಾಣದಲ್ಲಿ ನೂರಾರು ಭಾರತೀಯರು 'ಭಾರತ್ ಮಾತಾ ಕೀ ಶೇರ್' ಎಂಬ ಘೋಷಣೆಯೊಂದಿಗೆ ಮೋದಿ ಸ್ವಾಗತಿಸಿದರು.

ಜಪಾನ್ ಪ್ರಧಾನಿ ಕಿಶಿಡಾ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ ಜಪಾನ್ ಪ್ರಧಾನಿ ಕಿಶಿಡಾ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ

ಜಪಾನ್ ಪ್ರಧಾನಮಂತ್ರಿ ಫ್ಯೂಮಿಯೊ ಕಿಶಿಡಾ ಆಹ್ವಾನದ ಮೇರೆಗೆ ನರೇಂದ್ರ ಮೋದಿ ಮೇ 24ರಂದು ಟೋಕಿಯೋದಲ್ಲಿ ನಡೆಯಲಿರುವ ಕ್ವಾಡ್ ನಾಯಕರ ಶೃಂಗಸಭೆಯಲ್ಲಿ ಅಮರಿಕ ಅಧ್ಯಕ್ಷ ಜೋ ಬೈಡೆನ್ ಮತ್ತು ಆಸ್ಟ್ರೇಲಿಯಾ ಪ್ರಧಾನಮಂತ್ರಿಗಳ ಜೊತೆ ಪಾಲ್ಗೊಳ್ಳಲಿದ್ದಾರೆ.

ಪೆಟ್ರೋಲ್-ಡೀಸೆಲ್ ದರ ಇಳಿಕೆ: ನಮಗೆ ಜನರೇ ಮೊದಲು ಎಂದು ಮೋದಿ ಟ್ವೀಟ್ ಪೆಟ್ರೋಲ್-ಡೀಸೆಲ್ ದರ ಇಳಿಕೆ: ನಮಗೆ ಜನರೇ ಮೊದಲು ಎಂದು ಮೋದಿ ಟ್ವೀಟ್

Indian Prime Minister Narendra Modi Arrives In Tokyo

2021ರ ಮಾರ್ಚ್ ನಲ್ಲಿ ಮೊದಲ ವರ್ಚುವಲ್ ಸಭೆ ನಡೆದಿತ್ತು. ಆನಂತರ ಇದೀಗ ಟೋಕಿಯೋದಲ್ಲಿ ನಡೆಯುತ್ತಿರುವುದು ಕ್ವಾಡ್ ನಾಯಕರ 4ನೇ ಸಂವಾದವಾಗಿದೆ. 2021ರ ಸೆಪ್ಟೆಂಬರ್‌ನಲ್ಲಿ ವಾಷಿಂಗ್ಟನ್ ಡಿಸಿಯಲ್ಲಿ 2ನೇ ಮುಖಾಮುಖಿ ಶೃಂಗಸಭೆ ಹಾಗೂ 2022ರ ಮಾರ್ಚ್ ನಲ್ಲಿ 3ನೇ ವರ್ಚುವಲ್ ಶೃಂಗಸಭೆ ನಡೆದಿತ್ತು.

ಟೋಕಿಯೋದಲ್ಲಿ ನಡೆಯುವ ಕ್ವಾಡ್ ಸಮ್ಮೇಳನದಲ್ಲಿ ಬೈಡನ್-ಮೋದಿ ಟೋಕಿಯೋದಲ್ಲಿ ನಡೆಯುವ ಕ್ವಾಡ್ ಸಮ್ಮೇಳನದಲ್ಲಿ ಬೈಡನ್-ಮೋದಿ

ಮೇ 24ರಂದು ನಡೆಯುವ 4ನೇ ಕ್ವಾಡ್ ಶೃಂಗಸಭೆಯಲ್ಲಿ ಭಾರತ-ಪೆಸಿಫಿಕ್ ಪ್ರದೇಶದಲ್ಲಿನ ಬೆಳವಣಿಗೆಗಳು ಮತ್ತು ಪರರಸ್ಪರ ಹಿತಾಸಕ್ತಿಯ ಸಮಕಾಲೀನ ಜಾಗತಿಕ ವಿಷಯಗಳ ಬಗ್ಗೆ ನಾಯಕರು ಚರ್ಚೆಗಳನ್ನು ನಡೆಸಲಿದ್ದಾರೆ.

ಪ್ರಧಾನಿ ಮೋದಿ ಜಪಾನ್ ಪ್ರಧಾನಮಂತ್ರಿ ಫ್ಯೂಮಿಯೊ ಕಿಶಿಡಾ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಜಪಾನ್‌ನ ಉದ್ಯಮಿಗಳ ವ್ಯಾವಹಾರಿಕ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಮತ್ತು ಜಪಾನ್‌ನಲ್ಲಿನ ಭಾರತೀಯ ಸಮುದಾಯದೊಂದಿಗೆ ಸಂವಾದ ನಡೆಸಲಿದ್ದು, ಅವರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಪ್ರಧಾನಿ ಮೋದಿ ಜಪಾನ್‌ನಲ್ಲಿ ಒಂದು ರಾತ್ರಿ ವಾಸ್ತವ್ಯ ಹೂಡಲಿದ್ದಾರೆ. 23 ಗಂಟೆಗಳಲ್ಲಿ ಮೋದಿ 40 ಸಭೆಗಳಲ್ಲಿ ಪಾಳ್ಗೊಳ್ಳಲಿದ್ದಾರೆ. ಅಮೆರಿಕ ಅಧ್ಯಕ್ಷ ಜೋ ಬೈಡನ್ ಭೇಟಿಯ ವೇಳೆ ಉಕ್ರೇನ್-ರಷ್ಯಾ ಯುದ್ಧದ ಬಗ್ಗೆಯೂ ಪ್ರಧಾನಿ ನರೇಂದ್ರ ಮೋದಿ ಚರ್ಚೆ ನಡೆಸುವ ನಿರೀಕ್ಷೆ ಇದೆ.

2022ರ ಮಾರ್ಚ್ 21ರಂದು ವರ್ಚುವಲ್ ರೂಪದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ದ್ವಿಪಕ್ಷೀಯ ಮಾತುಕತೆ ನಡೆದಿತ್ತು. ನಂತರ ಏಪ್ರಿಲ್ 2ರಂದು ಭಾರತ-ಆಸ್ಟ್ರೇಲಿಯಾ ಆರ್ಥಿಕ ಸಹಕಾರ ಮತ್ತು ವ್ಯಾಪಾರ ಒಪ್ಪಂದ (ಇಸಿಟಿಎ)ಕ್ಕೆ ಸಹಿ ಹಾಕಲಾಗಿತ್ತು.

ಟೋಕಿಯೋದಲ್ಲಿ ಆಸ್ಟ್ರೇಲಿಯಾದ ಪ್ರಧಾನಮಂತ್ರಿಗಳನ್ನು ಮೋದಿ ನೇರವಾಗಿ ಭೇಟಿಯಾಗಲಿದ್ದು, ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸುವ ಸಾಧ್ಯತೆ ಇದೆ.

English summary
Prime minister of India Narendra Modi arrived in Tokyo. He will participate in Quad summit on May 24th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X