ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ರಂಪ್ ಪ್ರಾರ್ಥನಾ ಸಭೆಗೆ ಭಾರತೀಯ ಪುರೋಹಿತ!

ಮೇರಿಲ್ಯಾಂಡ್ ನಲ್ಲಿರುವ ಶ್ರೀ ಶ್ರೀ ಶಿವ ವಿಷ್ಣು ದೇವಾಲಯದ ಪ್ರಧಾನ ಅರ್ಚಕ ನಾರಾಯಣಾಚಾರ್ ಅವರಿಗೆ ಅಮೆರಿಕದ 45ನೇ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುತ್ತಿರುವ ಡೊನಾಲ್ಡ್ ಟ್ರಂಪ್ ಅವರ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದೆ.

|
Google Oneindia Kannada News

ವಾಷಿಂಗ್ಟನ್, ಜನವರಿ 20: ಅಮೆರಿಕದ 45ನೇ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡೊನಾಲ್ಡ್ ಟ್ರಂಪ್ ಅವರ ಪ್ರಮಾಣ ವಚನ ಸ್ವೀಕಾರದ ವೇಳೆ ಜರುಗುವ ಪ್ರಾರ್ಥನಾ ಸಮಾರಂಭಕ್ಕೆ ಭಾರತೀಯ ಮೂಲದ ಪುರೋಹಿತ ನಾರಾಯಣಾಚಾರ್ ಎಲ್. ದಿಗಲಕೋಟ ಅವರಿಗೆ ಆಮಂತ್ರಣ ನೀಡಲಾಗಿದೆ.

ನೂತನ ಅಧ್ಯಕ್ಷರ ಸಮಾರಂಭದಲ್ಲಿ ಪ್ರಮಾಣ ವಚನ ಸ್ವೀಕಾರಕ್ಕೂ ಮುನ್ನ ಸಾಂಪ್ರದಾಯಿಕವಾಗಿ ಪ್ರಾರ್ಥನಾ ಸಭೆ ಏರ್ಪಡಿಸಲಾಗುತ್ತದೆ. ಈ ಸಭೆಯಲ್ಲಿ ಅಮೆರಿಕದಲ್ಲಿರುವ ವಿವಿಧ ಧರ್ಮ ಪ್ರಚಾರಕ, ಪುರೋಹಿತರನ್ನು ಆಹ್ವಾನಿಸುವ ಪದ್ಧತಿಯಿದೆ.

Indian priest for Donald Trump's prayer ceremony

ಈ ಹಿನ್ನೆಲೆಯಲ್ಲಿ, ಮೇರಿಲ್ಯಾಂಡ್ ನ ಲ್ಯಾನ್ ಹ್ಯಾಮ್ ನಲ್ಲಿರುವ ಶ್ರೀ ಶ್ರೀ ಶಿವ ವಿಷ್ಣು ದೇವಾಲಯದ ಪ್ರಧಾನ ಅರ್ಚಕರಾಗಿರುವ ನಾರಾಯಣಾಚಾರ್ ಅವರನ್ನು ಪ್ರಾರ್ಥನಾ ಸಭೆಗೆ ಆಹ್ವಾನಿಸಲಾಗಿದೆ ಎಂದು ಪ್ರಮಾಣ ವಚನ ಕಾರ್ಯಕ್ರಮದ ಆಯೋಜನಾ ಸಮಿತಿ ತಿಳಿಸಿದೆ.

ಅಂದಾಹಾಗೆ, ನಾರಾಯಣಾಚಾರ್ ಅವರಿಗೆ ಶ್ವೇತಭವನದಿಂದ ಆಮಂತ್ರಣ ಬರುತ್ತಿರುವುದು ಹೊಸತೇನಲ್ಲ. ಬರಾಕ್ ಒಬಾಮ ಅವರ ಅಧ್ಯಕ್ಷಾವಧಿಯಲ್ಲಿ ಶ್ವೇತಭವನದಲ್ಲಿ ಏರ್ಪಡಿಸಲಾಗುತ್ತಿದ್ದ ದೀಪಾವಳಿ ಸಮಾರಂಭದಲ್ಲಿ ಅವರು ಹೋಗಿ ಪೂಜಾ ಕೈಂಕರ್ಯ ನೆರವೇರಿಸಿ ಬರುತ್ತಿದ್ದರು.

Indian priest for Donald Trump's prayer ceremony

ಭಾರತೀಯ ಕಾಲಮಾನದ ಪ್ರಕಾರ, ಶುಕ್ರವಾರ ರಾತ್ರಿ ಸುಮಾರು 10 ಗಂಟೆಗೆ ಡೊನಾಲ್ಡ್ ಟ್ರಂಪ್ ಅವರ ಪ್ರಮಾಣ ವಚನ ನಡೆಯಲಿದೆ. ಸಾಮಾನ್ಯವಾಗಿ ಅಮೆರಿಕ ಅಧ್ಯಕ್ಷರ ಪದಗ್ರಹಣ ಸಮಾರಂಭಕ್ಕಾಗಿ ಶಕ್ತಿ ಸೌಧವಾದ 'ನ್ಯಾಷನಲ್ ಕ್ಯಾಪಿಟಾಲ್' ಕಟ್ಟಡದ ಬಳಿಯಲ್ಲೇ ಬೃಹತ್ ವೇದಿಕೆ ಸಿದ್ಧಗೊಳಿಸಲಾಗಿದೆ. ಈ ಸಮಾರಂಭದಲ್ಲಿ ಸುಮಾರು 1 ಲಕ್ಷದಷ್ಟು ಜನರು ಭಾಗಿಯಾಗುವ ನಿರೀಕ್ಷೆಯಿದೆ.

(ಚಿತ್ರಕೃಪೆ: ಶ್ರೀ ಶ್ರೀ ಶಿವ ವಿಷ್ಣು ದೇವಾಲಯ ವೆಬ್ ಸೈಟ್)

English summary
An Indian origin priest Sri Narayanachar who serves in Sri Vishnu Shiva temple, Maryland has been invited to the national prayer ceremony organized during president elected Donald Trump's oath taking ceremony in Washington on Friday 20th Jan 2017
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X