• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಫ್ಘಾನಿಸ್ತಾನ ಘರ್ಷಣೆಯಲ್ಲಿ ಭಾರತೀಯ ಫೋಟೊ ಜರ್ನಲಿಸ್ಟ್ ಡ್ಯಾನಿಶ್ ಸಿದ್ದಿಕಿ ಮೃತ್ಯು

|
Google Oneindia Kannada News

ಕಾಬೂಲ್‌, ಜು.16: ಅಫ್ಘಾನಿಸ್ತಾನದ ಕಂದಹಾರ್‌ನಲ್ಲಿ ಭದ್ರತಾ ಪಡೆಗಳೊಂದಿಗೆ ತಾಲಿಬಾನ್‌ ನಡೆಸಿದ ಘರ್ಷಣೆಯ ಸಂದರ್ಭ ಭದ್ರತಾ ಪಡೆಯೊಂದಿಗೆ ಇದ್ದ ಪುಲಿಟ್ಜೆರ್ ಪ್ರಶಸ್ತಿ ಪುರಸ್ಕೃತ ಭಾರತೀಯ ಫೋಟೊ ಜರ್ನಲಿಸ್ಟ್ ಡ್ಯಾನಿಶ್ ಸಿದ್ದಿಕಿ ಗುರುವಾರ ಸಾವನ್ನಪ್ಪಿದ್ದಾರೆ ಎಂದು ಅಫ್ಘಾನಿಸ್ತಾನದ ಭಾರತದ ರಾಯಭಾರಿ ಫರೀದ್ ಮಾಮುಂಡ್‌ಜೇ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.

   ಭಾರತದ ಹೆಸರಾಂತ ಫೋಟೊ ಜರ್ನಲಿಸ್ಟ್ Danish Siddiqui ಇನ್ನಿಲ್ಲ | Indian Photojournalist | Oneindia Kannada

   ಈ ಬಗ್ಗೆ ಟ್ವೀಟ್‌ ಮಾಡಿರುವ ಫರೀದ್ ಮಾಮುಂಡ್‌ಜೇ, ನಿನ್ನೆ ರಾತ್ರಿ ಕಂದಹಾರ್‌ನಲ್ಲಿ ಸ್ನೇಹಿತ ಡ್ಯಾನಿಶ್ ಸಿದ್ದಿಕಿ ಹತ್ಯೆಯ ಸುದ್ದಿಯಿಂದ ತೀವ್ರ ದುಃಖಿತನಾಗಿದ್ದಾನೆ ಎಂದು ತಿಳಿಸಿದ್ದಾರೆ.

   ತಾಲಿಬಾನ್‌ ಜೊತೆ ಮಾತುಕತೆ ವಿಫಲವಾದರೆ ಭಾರತದ ಮಿಲಿಟರಿ ನೆರವು ಕೇಳಬಹುದು: ಅಫ್ಘಾನಿಸ್ತಾನತಾಲಿಬಾನ್‌ ಜೊತೆ ಮಾತುಕತೆ ವಿಫಲವಾದರೆ ಭಾರತದ ಮಿಲಿಟರಿ ನೆರವು ಕೇಳಬಹುದು: ಅಫ್ಘಾನಿಸ್ತಾನ

   ಭಾರತೀಯ ಪತ್ರಕರ್ತ ಮತ್ತು ಪುಲಿಟ್ಜೆರ್ ಪ್ರಶಸ್ತಿ ವಿಜೇತರು ಅಫ್ಘಾನ್‌ ಭದ್ರತಾ ಪಡೆಗಳ ಮೇಲೆ ಭಯೋತ್ಪಾದಕರಿಂದ ಹಲ್ಲೆ ನಡೆಸಿದಾಗ ಅಲ್ಲಿದ್ದರು. ನಾನು 2 ವಾರಗಳ ಹಿಂದೆ ಕಾಬೂಲ್‌ಗೆ ತೆರಳುವ ಮೊದಲು ಡ್ಯಾನಿಶ್‌ರನ್ನು ಭೇಟಿಯಾಗಿದ್ದೆ. ಡ್ಯಾನಿಶ್‌ ಫೋಟೋ ಪತ್ರಿಕೋದ್ಯಮ ಮಾಡಿದರು ಎಂದು ಶುಕ್ರವಾರ ಟ್ವೀಟ್‌ ಮಾಡಿದ್ದಾರೆ.

   40 ವರ್ಷದ ಸಿದ್ದಿಕಿ ಕಂದಹಾರ್‌ನ ಸ್ಪಿನ್ ಬೋಲ್ಡಾಕ್ ಜಿಲ್ಲೆಯಲ್ಲಿ ನಡೆದ ಘರ್ಷಣೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಟೋಲೋ ನ್ಯೂಸ್ ಮೂಲಗಳನ್ನು ಉಲ್ಲೇಖಿಸಿದೆ. ಮುಂಬೈನಲ್ಲಿ ನೆಲೆಸಿರುವ ಭಾರತೀಯ ಪತ್ರಕರ್ತ ಕಳೆದ ಕೆಲವು ದಿನಗಳಿಂದ ಕಂದಹಾರ್‌ನ ಪರಿಸ್ಥಿತಿಯ ಬಗ್ಗೆ ವರದಿ ಮಾಡುತ್ತಿದ್ದರು.

   ರೋಹಿಂಗ್ಯಾ ನಿರಾಶ್ರಿತರ ದುಃಸ್ಥಿತಿಯನ್ನು ಬಗ್ಗೆ ಸಿದ್ದಿಕಿ ಸೆರೆಹಿಡಿದ ಚಿತ್ರಕ್ಕೆ 2018 ರಲ್ಲಿ ಪುಲಿಟ್ಜೆರ್ ಪ್ರಶಸ್ತಿ ಲಭಿಸಿದೆ. 2017 ರಲ್ಲಿ ನಿರಾಶ್ರಿತರ ಚಿತ್ರಗಳನ್ನು ತೆಗೆದ ಪತ್ರಕರ್ತರ ತಂಡದ ಭಾಗವಾಗಿದ್ದರು.

   ಅಫ್ಘಾನಿಸ್ತಾನದ ಹಲವಾರು ಜಿಲ್ಲೆಗಳು ವಶಕ್ಕೆ ಪಡೆದ ತಾಲಿಬಾನ್‌ಅಫ್ಘಾನಿಸ್ತಾನದ ಹಲವಾರು ಜಿಲ್ಲೆಗಳು ವಶಕ್ಕೆ ಪಡೆದ ತಾಲಿಬಾನ್‌

   ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾದಿಂದ ಡ್ಯಾನಿಶ್ ಅರ್ಥಶಾಸ್ತ್ರದಲ್ಲಿ ಪದವಿ ಪಡೆದಿದ್ದು 2007 ರಲ್ಲಿ ಜಾಮಿಯಾದ ಎಜೆಕೆ ಮಾಸ್ ಕಮ್ಯುನಿಕೇಷನ್ ರಿಸರ್ಚ್ ಸೆಂಟರ್ನಿಂದ ಮಾಸ್ ಕಮ್ಯುನಿಕೇಷನ್‌ನಲ್ಲಿ ಪದವಿ ಪಡೆದರು.

   ಟೆಲಿವಿಷನ್ ಸುದ್ದಿ ವರದಿಗಾರರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಸಿದ್ಧಿಕಿ, ಬಳಿಕ ಫೋಟೊ ವರದಿಗಾರಿಕೆಯಲ್ಲಿ ತೊಡಗಿಕೊಂಡರು. 2010 ರಲ್ಲಿ ರಾಯಿಟರ್ಸ್‌ನ ಇಂಟರ್ನ್ ಆಗಿ ಸೇರ್ಪಡೆಯಾದರು.

   ಅಫ್ಘಾನಿಸ್ತಾನದಿಂದ ಅಮೆರಿಕ ತನ್ನ ಸೇನೆಯನ್ನು ಹಿಂಪಡೆದ ಬೆನ್ನಲ್ಲೇ ಅಫ್ಘಾನಿಸ್ತಾನದ ಹಲವಾರು ಜಿಲ್ಲೆಗಳನ್ನು ತಾಲಿಬಾನ್‌ ವಶಕ್ಕೆ ಪಡೆದುಕೊಂಡಿದೆ. ಈ ವಾರ ಕಂದಹಾರ್‌ನಲ್ಲಿ ಸ್ಪಿನ್ ಬೋಲ್ಡಾಕ್ ಜಿಲ್ಲೆಯನ್ನು ತಾಲಿಬಾನ್ ವಶಪಡಿಸಿಕೊಂಡಿದ್ದು ಕಳೆದ ಕೆಲವು ದಿನಗಳಿಂದ ಕಂದಹಾರ್‌ನಲ್ಲಿ, ವಿಶೇಷವಾಗಿ ಸ್ಪಿನ್ ಬೋಲ್ಡಾಕ್‌ನಲ್ಲಿ ತೀವ್ರ ಘರ್ಷಣೆ ನಡೆಯುತ್ತಿದೆ.

   (ಒನ್‌ಇಂಡಿಯಾ ಸುದ್ದಿ)

   English summary
   Pulitzer prize winning Indian photojournalist Danish Siddiqui was on Thursday killed in clashes in Afghanistan's Kandahar where he was embedded with the security forces.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X