ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹುಡುಗಿಯನ್ನು ಹಿಂಬಾಲಿಸಿದ ಭಾರತೀಯ ವಿದ್ಯಾರ್ಥಿಗೆ ಯುಕೆ ವಿವಿ ಗೇಟ್ ಪಾಸ್!

|
Google Oneindia Kannada News

ಲಂಡನ್, ಡಿಸೆಂಬರ್ 11: ಭಾರತವಷ್ಟೇ ಅಲ್ಲದೇ ವಿದೇಶಗಳಲ್ಲೂ ಇತ್ತೀಚಿಗೆ ವಿದ್ಯಾರ್ಥಿಗಳು ಮಿತಿ ಮೀರಿ ವರ್ತಿಸುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ. ಅದೇ ರೀತಿ ಪುಂಡಾಟ ಪ್ರದರ್ಶಿಸಿದ ಭಾರತೀಯ ಮೂಲದ ವಿದ್ಯಾರ್ಥಿಯನ್ನು ಯುಕೆ ವಿಶ್ವವಿದ್ಯಾಲಯ ಹೊರ ದಬ್ಬಿದೆ.

ಭಾರತೀಯ ಮೂಲದ 22 ವರ್ಷದ ಸಾಹಿಲ್ ಭವ್ನಾನಿ ಆಕ್ಸ್ ಫರ್ಡ್ ಬ್ರೂಕರ್ಸ್ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯನ್ನು ಹಿಂಬಾಲಿಸಿದ್ದೂ ಅಲ್ಲದೇ ಬೆದರಿಕೆ ಹಾಕಿದ ಆರೋಪದ ಹಿನ್ನೆಲೆ ಶಿಕ್ಷೆಗೆ ಗುರಿಯಾಗಿದ್ದಾನೆ. ನಾಲ್ಕು ತಿಂಗಳ ಜೈಲುಶಿಕ್ಷೆ, ಕಾಲೇಜಿನಿಂದ 2 ವರ್ಷಗಳ ಅಮಾನತು ಹಾಗೂ 5 ವರ್ಷಗಳವರೆಗೆ ನಿರ್ಬಂಧವನ್ನು ವಿಧಿಸಲಾಗಿದೆ.

ಮಹಾರಾಷ್ಟ್ರ ಅಪ್ರಾಪ್ತ ವಿವಾಹಿತ ಮಹಿಳೆ ಮೇಲೆ 400 ಜನರಿಂದ ಅತ್ಯಾಚಾರಮಹಾರಾಷ್ಟ್ರ ಅಪ್ರಾಪ್ತ ವಿವಾಹಿತ ಮಹಿಳೆ ಮೇಲೆ 400 ಜನರಿಂದ ಅತ್ಯಾಚಾರ

ಆಕ್ಸ್‌ಫರ್ಡ್ ಕ್ರೌನ್ ಕೋರ್ಟ್‌ನಲ್ಲಿ ನ್ಯಾಯಾಧೀಶ ನಿಗೆಲ್ ಡಾಲಿ ಅವರು ತೀರ್ಪು ಪ್ರಕಟಿಸಿದ ನಂತರದಲ್ಲಿ ವಿದ್ಯಾರ್ಥಿ ಸಾಹಿಲ್ ಭಾವ್ನಾನಿ ತಮ್ಮ ತಂದೆಯೊಂದಿಗೆ ಹಾಂಗ್ ಕಾಂಗ್‌ಗೆ ವಾಪಸ್ ಆಗಿದ್ದಾನೆ ಎಂದು ತಿಳಿಸಲಾಗಿದೆ. "ದುರದೃಷ್ಟವಶಾತ್ ಸಾಹಿಲ್ ಭವ್ನಾನಿ ಅನ್ನು ಆಕ್ಸ್‌ಫರ್ಡ್ ಬ್ರೂಕ್ಸ್ ವಿಶ್ವವಿದ್ಯಾಲಯ ಮತ್ತು ಅವರು ಓದುತ್ತಿದ್ದ ವಿಶ್ವವಿದ್ಯಾಲಯದಿಂದ ಹಾಗೂ ಅವರು ಓದುತ್ತಿದ್ದ ಪದವಿಯಿಂದ ಹೊರಹಾಕಲಾಗಿದೆ," ಎಂದು ಡಿಫೆನ್ಸ್ ವಕೀಲ ರಿಚರ್ಡ್ ಡೇವಿಸ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಜನವರಿ ತಿಂಗಳಿನಲ್ಲಿ ಮುಂದಿನ ವಿಚಾರಣೆ

ಜನವರಿ ತಿಂಗಳಿನಲ್ಲಿ ಮುಂದಿನ ವಿಚಾರಣೆ

ಆಕ್ಸ್‌ಫರ್ಡ್ ಮೇಲ್ ಪ್ರಕಾರ, ಕಳೆದ ತಿಂಗಳು ಸಾಹಿಲ್ ಭವ್ನಾನಿಗೆ ಶಿಕ್ಷೆ ಆಗಬೇಕಿತ್ತು. ಆದರೆ ಇಂಜಿನಿಯರಿಂಗ್ ವಿದ್ಯಾರ್ಥಿಯನ್ನು ತನ್ನ ಕೋರ್ಸ್‌ನಿಂದ ಹೊರಹಾಕಬಹುದು ಎಂಬುದನ್ನು ನಿರ್ಧರಿಸುವುದಕ್ಕೆ ವಿಶ್ವವಿದ್ಯಾಲಯವು ಆರು ವಾರ ತೆಗೆದುಕೊಳ್ಳುತ್ತದೆ. ಈ ಪ್ರಕರಣವನ್ನು ಜನವರಿ 2022ಕ್ಕೆ ಮುಂದೂಡಲಾಯಿತು. ಆದಾಗ್ಯೂ, ಇದೇ ವಾರ ಪ್ರಕರಣವನ್ನು ಮುಕ್ತಾಯಗೊಳಿಸಲು ವಿಶ್ವವಿದ್ಯಾನಿಲಯವುದಿಂದ ನಿರ್ಧಾರವನ್ನು ಮತ್ತೆ ಮುಂದೂಡಲಾಗಿದೆ.

"ನೀವು ತಡೆ ಆದೇಶವನ್ನು ಉಲ್ಲಂಘಿಸಿದರೆ ಗರಿಷ್ಠ ಐದು ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. ಅವಳ ಮೇಲಿನ ನಿಮ್ಮ ಗೀಳು ಇಲ್ಲಿಗೆ ಅಂತ್ಯವಾಗಿದೆ ಎಂದು ನಾವು ಭಾವಿಸುತ್ತೇನೆ, "ಎಂದು ನ್ಯಾಯಾಧೀಶ ಡಾಲಿ ಭಾವ್ನಾನಿಗೆ ಎಚ್ಚರಿಸಿದರು.

100 ಪುಟಗಳ ಬೆದರಿಕೆ ಪತ್ರದಲ್ಲಿ ಏನಿತ್ತು?

100 ಪುಟಗಳ ಬೆದರಿಕೆ ಪತ್ರದಲ್ಲಿ ಏನಿತ್ತು?

ಕಳೆದ ತಿಂಗಳು ಇದೇ ಸಾಹಿಲ್ ಭವ್ನಾನಿ ಮಹಿಳಾ ನರ್ಸಿಂಗ್ ವಿದ್ಯಾರ್ಥಿನಿಗೆ 100 ಪುಟಗಳ ಬೆದರಿಕೆ ಪತ್ರವನ್ನು ನೀಡಿದ್ದನು ಎಂದು ಕೇಳಿರುವ ಕೋರ್ಟ್, ಕಾನೂನು ಕಾರಣಗಳಿಂದ ಅವರ ಹೆಸರನ್ನು ಹೇಳಲಾಗುವುದಿಲ್ಲ ಎಂದಿದೆ. ಆನ್‌ಲೈನ್‌ನಲ್ಲಿ ಇರುವ ಕವನದಿಂದ ನಕಲಿಸಿ ಬೆದರಿಕೆ ಹಾಕಲಾಗಿದೆ. ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಾನೆ ಎಂಬ ಭಯದಲ್ಲಿದ್ದೇನೆ ಎಂದು ಸಂತ್ರಸ್ತ ವಿದ್ಯಾರ್ಥಿನಿಯು ತಮ್ಮ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ. ಭವ್ನಾನಿ ಹಿಂಬಾಲಿಸಿರುವುದಕ್ಕೆ ಸಂಬಂಧಿಸಿದಂತೆ ತಪ್ಪೊಪ್ಪಿಕೊಂಡಿದ್ದಾರೆ, ಆದರೆ ಗಂಭೀರ ಸ್ವರೂಪದ ತಪ್ಪಿತಸ್ಥರಲ್ಲ. ಅವರು ಈಗಾಗಲೇ ಜಾಮೀನು ಉಲ್ಲಂಘಿಸಿದ ನಂತರ ಒಂದು ತಿಂಗಳು ರಿಮಾಂಡ್‌ನಲ್ಲಿ ಕಳೆದಿದ್ದಾರೆ.

ಆಡಿಯೋ ಸಂದೇಶದಲ್ಲೇ ಆವಾಜ್

ಆಡಿಯೋ ಸಂದೇಶದಲ್ಲೇ ಆವಾಜ್

"ಅವನು ನನ್ನನ್ನು ಪತ್ನಿಯಾಗಿ ಮಾಡಿಕೊಳ್ಳುತ್ತಾನಂತೆ, ಅವನ ಮಕ್ಕಳಿಗೆ ನಾನು ತಾಯಿ ಆಗುವಂತೆ ಮಾಡುತ್ತಾನಂತೆ, ಅವನ ಜೊತೆಗೇ ನಾನು ಬದುಕು ದೂಡುವಂತೆ ಮಾಡುತ್ತಾನಂತೆ," ಹೀಗೆ ಬೆದರಿಕೆ ಹಾಕುವ ಆರು ನಿಮಿಷಗಳ ಆಡಿಯೋ ಸಂದೇಶವು ಬರುತ್ತಿದೆ ಎಂದು ಸಂತ್ರಸ್ತೆಯು ಖಾಸಗಿ ಸುದ್ದಿ ವಾಹಿನಿಗೆ ತಿಳಿಸಿದ್ದಾರೆ. ನಿನ್ನ ಜೊತೆ ಯಾವುದೇ ರೀತಿ ಸಂಪರ್ಕವನ್ನು ಇಟ್ಟುಕೊಳ್ಳುವುದಕ್ಕೆ ನಾನು ಬಯಸುವುದಿಲ್ಲ, ಇದೇ ರೀತಿ ಕಿರುಕುಳ ನೀಡುವುದನ್ನು ಮುಂದುವರಿಸಿದರೆ ಪೊಲೀಸರಿಗೆ ದೂರು ನೀಡುವುದಾಗಿ ಈ ಹಿಂದೆ ಸಾಹಿಲ್ ಭವ್ನಾನಿಗೆ ಪದೇ ಪದೆ ಎಚ್ಚರಿಕೆ ನೀಡಿದ್ದೆನು ಎಂದು ಸಂತ್ರಸ್ತೆ ಹೇಳಿಕೊಂಡಿದ್ದಾರೆ.

ಪುಂಡರಿಗೆ ಯುಕೆ ವಿವಿ ಕೊಟ್ಟ ಖಡಕ್ ಎಚ್ಚರಿಕೆ

ಪುಂಡರಿಗೆ ಯುಕೆ ವಿವಿ ಕೊಟ್ಟ ಖಡಕ್ ಎಚ್ಚರಿಕೆ

ಆಕ್ಸ್‌ಫರ್ಡ್ ಬ್ರೂಕ್ಸ್ ವಿಶ್ವವಿದ್ಯಾನಿಲಯವು "ವಿದ್ಯಾರ್ಥಿಗಳ ಮೇಲೆ ನಡೆಯುವ ಕಿರುಕುಳ, ಹಿಂಸಾಚಾರ ಅಥವಾ ನಿಂದನೆಯ ವರದಿಗಳನ್ನು ಬಹಳ ಗಂಭೀರವಾಗಿ ಪರಿಗಣಿಸಲಾಗುತ್ತದೆ," ಎಂದು ಭರವಸೆ ನೀಡಲು ಬಯಸುತ್ತದೆ. ಹಾಗೆ ನಡೆದುಕೊಳ್ಳುವವರಿಗೆ ತಕ್ಕ ಪಾಠಗಳನ್ನು ಕಲಿಯಲಾಗುವುದು ಎಂದು ಹೇಳಿಕೆಯಲ್ಲಿ ತಿಳಿಸಿದೆ.

"ಈ ವೈಯಕ್ತಿಕ ಪ್ರಕರಣದಲ್ಲಿ, ವಿಶ್ವವಿದ್ಯಾನಿಲಯದ ನಡವಳಿಕೆಯ ವಿಚಾರಣೆಯ ನಂತರ, ಲಭ್ಯವಿರುವ ಅತ್ಯಂತ ತೀವ್ರವಾದ ದಂಡವನ್ನು ವಿಧಿಸಲಾಗುತ್ತದೆ. ವಿದ್ಯಾರ್ಥಿಯನ್ನು ಆಕ್ಸ್‌ಫರ್ಡ್ ಬ್ರೂಕ್ಸ್‌ನಿಂದ ಹೊರಹಾಕಲಾಯಿತು," ಎಂದು ವಿಶ್ವವಿದ್ಯಾಲಯವು ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.

English summary
22-year-old Indian-origin student Sahil Bhavnani, who threatened a female student at Oxford Brookes University, was handed a four months’ imprisonment, suspended for two years and imposed a five-year restraining order. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X