ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

UNCDF ಕಾರ್ಯದರ್ಶಿಯಾಗಿ ಭಾರತ ಮೂಲದ ಪ್ರೀತಿ ಸಿನ್ಹಾ ನೇಮಕ

|
Google Oneindia Kannada News

ವಿಶ್ವಸಂಸ್ಥೆ, ಫೆಬ್ರವರಿ 16: ವಿಶ್ವಸಂಸ್ಥೆಯ ಕ್ಯಾಪಿಟಲ್ ಡೆವಲಪ್‌ಮೆಂಟ್ ವಿಭಾಗಕ್ಕೆ ಭಾರತ ಮೂಲದ ಹೂಡಿಕೆ ಹಾಗೂ ಅಭಿವೃದ್ಧಿ ಬ್ಯಾಂಕರ್ ಪ್ರೀತಿ ಸಿನ್ಹಾ ಅವರನ್ನು ಕಾರ್ಯಕಾರಿ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿದೆ. ಪ್ರೀತಿ ಸಿನ್ಹಾ ಅವರು ಕೆಳ ಸಮುದಾಯಗಳ ಮಹಿಳೆಯರು, ಯುವಜನರು, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳಿಗೆ ಸಣ್ಣ ಪ್ರಮಾಣದ ಹಣಕಾಸು ನೆರವು ಒದಗಿಸುವತ್ತ ಅವರು ಗಮನಹರಿಸಲಿದ್ದಾರೆ.

ಯುಎನ್‌ಸಿಡಿಎಫ್ ಕಾರ್ಯಕಾರಿ ಕಾರ್ಯದರ್ಶಿಯಾಗಿ ಪ್ರೀತಿ ಅವರು ಸೋಮವಾರ ಅಧಿಕಾರ ಸ್ವೀಕರಿಸಿದರು. ಇದು ಯುಎನ್‌ಸಿಡಿಎಫ್‌ನ ಎರಡನೆಯ ಉನ್ನತ ಹುದ್ದೆಯಾಗಿದೆ.

ವಿಶ್ವಸಂಸ್ಥೆ ಮುಖ್ಯಸ್ಥರ ಹುದ್ದೆ: ಉಮೇದುವಾರಿಕೆ ಘೋಷಿಸಿದ ಭಾರತ ಮೂಲದ ಆಕಾಂಕ್ಷಾವಿಶ್ವಸಂಸ್ಥೆ ಮುಖ್ಯಸ್ಥರ ಹುದ್ದೆ: ಉಮೇದುವಾರಿಕೆ ಘೋಷಿಸಿದ ಭಾರತ ಮೂಲದ ಆಕಾಂಕ್ಷಾ

ನ್ಯೂಯಾರ್ಕ್‌ನಲ್ಲಿ ಕೇಂದ್ರ ಕಚೇರಿ ಇರುವ ಈ ಸಂಸ್ಥೆಯನ್ನು 1966ರಲ್ಲಿ ಸ್ಥಾಪಿಸಲಾಗಿತ್ತು. ಇದು ಅಭಿವೃದ್ಧಿಯಾಗದ ದೇಶಗಳಲ್ಲಿ ಸಾರ್ವಜನಿಕ ಮತ್ತು ಖಾಸಗಿ ಹಣಕಾಸುಗಳು ಪರಿಣಾಮಕಾರಿ ಬಳಕೆಗಾಗಿ ಸಣ್ಣ ಪ್ರಮಾಣದ ಹಣಕಾಸು ನೆರವನ್ನು ಒದಗಿಸುತ್ತದೆ.

Indian Origin Preeti Sinha Appointed As Executive Secretary Of UNCDF

ವಿಶ್ವಸಂಸ್ಥೆಯಲ್ಲಿ ತಮ್ಮ 30 ವರ್ಷಗಳ ವೃತ್ತಿ ಬದುಕು ನಡೆಸಿ ಫೆಬ್ರವರಿಯ ಆರಂಭದಲ್ಲಿ ನಿವೃತ್ತರಾದ ಜುಡಿತ್ ಕರ್ಲ್ ಅವರ ಸ್ಥಾನವನ್ನು ಪ್ರೀತಿ ತುಂಬಲಿದ್ದಾರೆ. ಹಾರ್ವರ್ಡ್ ಕೆನಡಿ ಸ್ಕೂಲ್ ಆಫ್ ಗವರ್ನ್‌ಮೆಂಟ್‌ನಲ್ಲಿ ಸಾರ್ವಜನಿಕ ಹಣಕಾಸು ನಿರ್ವಹಣೆ ವಿಭಾಗದಲ್ಲಿ ಪದವಿ ಪಡೆದಿದ್ದಾರೆ. ಯಾಲೆ ಸ್ಕೂಲ್ ಆಫ್ ಮ್ಯಾನೇಜ್ಮೆಂಡ್‌ನಿಂದ ಸಾರ್ವಜನಿಕ ಮತ್ತು ಖಾಸಗಿ ನಿರ್ವಹಣೆಯಲ್ಲಿ ಮಾಸ್ಟರ್ಸ್ ಹಾಗೂ ವಿಶ್ವ ಆರ್ಥಿಕ ವೇದಿಕೆಯಿಂದ ಮಾಸ್ಟರ್‌ ಪನ್ ಗ್ಲೋಬಲ್ ಲೀಡರ್‌ಶಿಪ್ ಪದವಿಗಳನ್ನು ಪಡೆದಿದ್ದಾರೆ.

English summary
Indian origin Preeti Sinha has appointed as the Executive Secretary of UN Capital Development Fund.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X