ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಕೆ: ಬ್ಯಾಟ್ ನಿಂದ ಥಳಿಸಿ ಭಾರತೀಯ ಯುವಕನ ಹತ್ಯೆ

ಸತ್ನಾಮ್ ಸಿಂಗ್ ಎಂಬ 45 ವರ್ಷದ ಬಿಲ್ಡರ್ ಒಬ್ಬರನ್ನು ಅಪರಿಚಿತ ವ್ಯಕ್ತಿಯೊಬ್ಬ ಬೇಸ್ ಬಾಲ್ ಕ್ರೀಡೆಯಲ್ಲಿ ಬಳಸುವ ಬ್ಯಾಟ್ ನಿಂದ ಹಲ್ಲೆ ನಡೆಸಿ ಹತ್ಯೆಗೈದಿದ್ದಾನೆಂದು ಸ್ಕಾಟ್ಲೆಂಟ್ ಯಾರ್ಡ್ ಪೊಲೀಸರು ತಿಳಿಸಿದ್ದಾರೆ.

|
Google Oneindia Kannada News

ಲಂಡನ್, ಜೂನ್ 2: ಯುನೈಟೆಡ್ ಕಿಂಗ್ ಡಂ ನಲ್ಲಿ ಭಾರತೀಯ ಯುವಕನೊಬ್ಬನ ಹತ್ಯೆಯಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಸತ್ನಾಮ್ ಸಿಂಗ್ ಎಂಬ 45 ವರ್ಷದ ಬಿಲ್ಡರ್ ಒಬ್ಬರನ್ನು ಅಪರಿಚಿತ ವ್ಯಕ್ತಿಯೊಬ್ಬ ಬೇಸ್ ಬಾಲ್ ಕ್ರೀಡೆಯಲ್ಲಿ ಬಳಸುವ ಬ್ಯಾಟ್ ನಿಂದ ಹಲ್ಲೆ ನಡೆಸಿ ಹತ್ಯೆಗೈದಿದ್ದಾನೆಂದು ಸ್ಕಾಟ್ಲೆಂಟ್ ಯಾರ್ಡ್ ಪೊಲೀಸರು ತಿಳಿಸಿದ್ದಾರೆ.

indian-origin-man-dies-after-being-attacked-with-baseball-bat-in-uk

ಅಂದಹಾಗೆ, ಈ ಘಟನೆ ನಡೆದಿರುವುದು ಇದೇ ವರ್ಷ ಮಾರ್ಚ್ 6ರಂದು. ಅಂದಿನಿಂದ ಗಂಭೀರ ಸ್ಥಿತಿಯಲ್ಲಿದ್ದ ಸತ್ನಾಮ್ ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಕಳೆದ ತಿಂಗಳ 23ರಂದು ಸತ್ನಾಮ್ ಅಸುನೀಗಿದ್ದರು.

ಲಂಡನ್ ನ ನೈರುತ್ಯ ದಿಕ್ಕಿನಲ್ಲಿರುವ ಹಾಯೀಸ್ ನಲ್ಲಿ ಮಾರ್ಚ್ 6ರ ಮುಂಜಾನೆ ಸತ್ನಾಮ್ ಅವರು ತಮ್ಮ ಸ್ನೇಹಿತರೊಬ್ಬರೊಂದಿಗೆ ಜಾಗಿಂಗ್ ಗೆಂದು ತೆರಳಿದ್ದರು. ಆಗ, ಸಿಲ್ವರ್ ಬಣ್ಣದ ಕಾರಿನಲ್ಲಿ ಬಂದಿಳಿದ ವ್ಯಕ್ತಿಯೊಬ್ಬ ಇಬ್ಬರ ಮೇಲೆ ಹಲ್ಲೆ ನಡೆಸಿದ್ದಾನೆ. ಆನಂತರ, ಸತ್ನಾಮ್ ಮೇಲೆಯೇ ತೀವ್ರ ತೆರನಾದ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ.

ಅಂದಿನಿಂದ ಈ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಪೊಲೀಸರು ಈಗ ಆರೋಪಿಯನ್ನು ಶೀಘ್ರವಾಗಿ ಬಂಧಿಸಲು ಮುಂದಾಗಿದ್ದಾರೆ. ಆರೋಪಿಯ ರೇಖಾ ಚಿತ್ರವನ್ನು ರಚಿಸಿರುವ ಅವರು, 10 ಸಾವಿರ ಪೌಂಡ್ (ಸುಮಾರು 8 ಲಕ್ಷದ 30 ಸಾವಿರ ರು.) ಬಹುಮಾನ ಘೋಷಿಸಿದ್ದಾರೆ.

English summary
An Indian-origin man has been killed in the UK by an unidentified person who attacked him with a baseball bat, Scotland Yard said today as it offered a reward of 10,000 pounds for inputs leading to the accused's arrest.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X