ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆನಡಾದಲ್ಲಿ ಜಸ್ಟಿನ್ ಟ್ರುಡೋಗೆ ಭಾರತೀಯ ಜಗಮೀತ್ ಸಿಂಗ್ ಕಿಂಗ್ ಮೇಕರ್!

|
Google Oneindia Kannada News

ಒಟ್ಟಾವ(ಕೆನಡಾ), ಅಕ್ಟೋಬರ್ 23: ಕೆನಡಾದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಬಹುಮತ ಗಳಿಸಲು ವಿಫಲರಾದ ಹಾಲಿ ಪ್ರಧಾನಿ, ಲಿಬರಲ್ ಪಕ್ಷದ ನಾಯಕ ಜಸ್ಟಿನ್ ಟ್ರುಡೋ ಅವರು ಎರಡನೇ ಅವಧಿಗೂ ಪ್ರಧಾನಿಯಾಗಲು ಭಾರತೀಯರೊಬ್ಬರು ನೆರವಾಗಲಿದ್ದಾರೆ!

ಹೌದು, ಹೌಸ್ ಆಫ್ ಕಾಮನ್ಸ್ ನ 338 ಸೀಟುಗಳಲ್ಲಿ 157 ಸೀಟುಗಳನ್ನು ಗೆದ್ದು ಸಿಂಗಲ್ ಲಾರ್ಜೆಸ್ಟ್ ಪಾರ್ಟಿಯಾಗಿ ಲಿಬರಲ್ ಹೊರಹೊಮ್ಮಿದರೂ ಬಹುಮತಕ್ಕೆ ಅಗತ್ಯವಿದ್ದ 170 ಸೀಟುಗಳನ್ನು ಗೆಲ್ಲುವಲ್ಲಿ ವಿಫಲವಾಗಿತ್ತು. ಇದೀಗ ಸರ್ಕಾರ ರಚಿಸಲು ಇನ್ನೂ 13 ಸೀಟುಗಳ ಅಗತ್ಯವಿದ್ದು, ಭಾರತೀಯ ಮೂಲದ ಕೆನಡಾ ಪ್ರಜೆಯಾಗಿರುವ ಜಗಮೀತ್ ಸಿಂಗ್ ಅವರ ನ್ಯೂ ಡೆಮಾಕ್ರೆಟಿಕ್ ಪಕ್ಷ(ಎನ್ ಡಿಪಿ) ಕಿಂಗ್ ಮೇಕರ್ ಪಾತ್ರ ನಿರ್ವಹಿಸುವುದು ಬಹುತೇಕ ಖಚಿತವಾಗಿದೆ.

'ಲಿಬರಲ್' ಗೆ ಮರುಜೀವ ಕೊಟ್ಟ ಟ್ರುಡೋ, ಪ್ರಬುದ್ಧ ರಾಜಕಾರಣಿಯಾದಾರೆ...?'ಲಿಬರಲ್' ಗೆ ಮರುಜೀವ ಕೊಟ್ಟ ಟ್ರುಡೋ, ಪ್ರಬುದ್ಧ ರಾಜಕಾರಣಿಯಾದಾರೆ...?

Indian Origin Jagmeet Singh Will be Kingmaker For Justin Trudeau In Canada

ಜಗಮೀತ್ ಸಿಂಗ್ ಅವರ ಎನ್ ಡಿಪಿ ಪಕ್ಷವು 24 ಸ್ಥಾನಗಳನ್ನು ಪಡೆದಿದ್ದು, ಇದರೊಟ್ಟಿಗೆ ಮೈತ್ರಿ ಮಾಡಿಕೊಂಡರೆ ಟ್ರುಡೋ ಅವರು ಬಹುಮತದ ಸರ್ಕಾರ ರಚಿಸಬಹುದು.

ಕೊನೆಗೂ ಮೋದಿ-ಟ್ರುಡೋ ಭೇಟಿ: ಊಹಾಪೋಹಗಳಿಗೆ ತೆರೆ!ಕೊನೆಗೂ ಮೋದಿ-ಟ್ರುಡೋ ಭೇಟಿ: ಊಹಾಪೋಹಗಳಿಗೆ ತೆರೆ!

2015 ರಲ್ಲಿ 44 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ, ಹೌಸ್ ಆಫ್ ಕಾಮನ್ಸ್ ನ ಮೂರನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಎನ್ ಡಿಪಿ ಈ ಬಾರಿ ಕೇವಲ 24 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆಯಾದರೂ, ಅಲ್ಪಮತದ ಟ್ರುಡೋ ಸರ್ಕಾರಕ್ಕೆ ಬೆಂಬಲ ಸೂಚಿಸಿ ಕಿಂಗ್ ಮೇಕರ್ ಆಗಲಿದೆ.

English summary
Indian Origin Jagmeet Singh Will be Kingmaker For Justin Trudeau In Canada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X