ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರುಂಡ-ಮುಂಡ ಬೇರೆಯಾದವನ ಬದುಕಿಸಿದ ವೈದ್ಯ

|
Google Oneindia Kannada News

ಲಂಡನ್, ಮೇ 25 : ಆತ ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಆಕಸ್ಮಿಕವಾಗಿ ಅಪಘಾತದಲ್ಲಿ ಗಾಯಗೊಂಡ ಆತನ ರುಂಡ ಮತ್ತು ಮುಂಡ ಬೇರೆ ಬೇರೆಯಾಗಿ ಬೀಳುವ ಹಂತ ತಲುಪಿತ್ತು. ಕೆಲ ಸ್ನಾಯುಗಳು ಮಾತ್ರ ಹಿಡಿದುಕೊಂಡಿದ್ದವು.

ಇಷ್ಟೆಲ್ಲಾ ಮಾಡಿಕೊಂಡು ಅದು ಹೇಗೋ ಆಸ್ಪತ್ರಗೆ ದಾಖಲಾಗಿದ್ದವನಿಗೆ ಭಾರತ ಮೂಲದ ವೈದ್ಯರೊಬ್ಬರು ಜೀವದಾನ ಮಾಡಿದ್ದಾರೆ. ಮೆದುಳು ಬಳ್ಳಿಯ ಸಂಪರ್ಕ ಸಂಪೂರ್ಣ ಕಡಿದು ಹೋಗಿದ್ದ ಟೋನಿ ಕೋವನ್ ಎಂಬಾತನ ತಲೆ ಮತ್ತು ಬೆನ್ನುಹುರಿಗೆ ಸಂಪರ್ಕವನ್ನು ಮರು ಜೋಡಿಸುವ ಶಸ್ತ್ರಚಿಕಿತ್ಸೆಯನ್ನು ಡಾ.ಅನಂತ್ ಕಾಮತ್ ಯಶಸ್ವಿಯಾಗಿ ನಿಭಾಯಿಸಿದ್ದಾರೆ.[ಪುರುಷರ ಮೆದುಳೇ ಬೇರೆ ಮಹಿಳೆಯ ಮೆದುಳು ಬೇರೆ]

doctor

ಬ್ರಿಟನ್‌ನ ನ್ಯೂಕ್ಯಾಸಲ್ ದಲ್ಲಿ ಗಾರೆ ಕೆಲಸ ಮಾಡುತ್ತಿದ್ದ ಕೊವನ್ 2014ರ ಸೆ.9ರಂದು ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡ. ಕುತ್ತಿಗೆ ಮೂಳೆ (ಸಿ2) ಮುರಿಯಿತು, ಮೆದುಳು ತನ್ನ ಬಳ್ಳಿ ಬೆನ್ನುಹುರಿಯ ಸಂಪರ್ಕ ಕಡಿದುಕೊಂಡಿತು. ಕೃತಕ ಉಸಿರಾಟದ ಮೂಲಕವೇ ಆತನನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಮೆದುಳಿಗೆ ದೇಹದ ಇತರ ಭಾಗಗಳ ಸಕಲ ಸಂಪರ್ಕಗಳು ಹಾದು ಹೋಗುವುದು ಮೆದುಳು ಬಳ್ಳಿಯಿಂದ. ಆದರೆ ಇಲ್ಲಿ ಮೆದುಳು ಬಳ್ಳಿ ಸಂಪರ್ಕವನ್ನೇ ಕಡಿದುಕೊಂಡಿತ್ತು. ಈಗ ಕೊವನ್ ಮತ್ತೆ ಎಲ್ಲರೊಂದಿಗೆ ಮಾತನಾಡುವಂತೆ ಆಗಿದ್ದು ವೈದ್ಯಕೀಯ ಲೋಕದ ಅಚ್ಚರಿ ಎಂದೇ ಹೇಳಲಾಗಿದೆ.[ಮೆದುಳಿನ 'ಜಿಪಿಎಸ್‌' ಶೋಧಕರಿಗೆ ವೈದ್ಯ ನೊಬೆಲ್]

ಡಾ. ಅನಂತ್ ಕಾಮತ್ ಯಾರು?
ಮುಂಬಯಿ ವಿವಿಯಿಂದ ವೈದ್ಯಕೀಯ ಪದವಿ ಪಡೆದ ಡಾ. ಅನಂತ್ ಕಾಮತ್ ನ್ಯೂರೊ ಸರ್ಜರಿಯ ವಿಷಯದಲ್ಲಿ ಅಪಾರ ಅನುಭವ ಪಡೆದವರು. ಬ್ರಿಟನ್‌ನ ಬ್ರಿಸ್ಟಲ್‌ನಲ್ಲಿ ಎಫ್‌ಆರ್‌ಸಿಎಲ್ ಮತ್ತು ಅಮೆರಿಕದ ಯೇಲ್ ವಿವಿಯಲ್ಲಿ ಸ್ಪೈನಲ್ ಬಯೊಮೆಕಾನಿಕ್ಸ್ ವಿಷಯದಲ್ಲಿ ವಿಶೇಷ ತರಬೇತಿ ಹೊಂದಿದವರಾಗಿದ್ದಾರೆ. ಸಾವಿನ ಅಂಚಿಗೆ ತಲುಪಿದ್ದ ವ್ಯಕ್ತಿಗೆ ಪುನರ್ ಜನ್ಮ ನೀಡಿ ಅವನ ಮತ್ತು ಅವರ ಮನೆಯವರ ಮುಖದಲ್ಲಿ ಮಂದಹಾಸ ಮೂಡಲು ಕಾರಣರಾದ ಡಾ. ಅನಂರ ಕಾಮತ್ ಅವರಿಗೆ ಧನ್ಯವಾದ ಹೇಳೋಣ.

English summary
A team of surgeons has helped a British man survive after his head snapped off from his spine in a car crash. They re-attached his skull to his spine in a rare surgery. Neurosurgeon Anant Kamat led the critical surgery, re-attaching Tony Cowan's skull to his spine with a metal plate and bolts in a rare operation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X