ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರು ತಿಂಗಳು ಗಗನಯಾನ ಯಶಸ್ಸಿನ ನಂತರ ಭೂಮಿಗೆ ಮರಳಿದ ರಾಜಾ ಚಾರಿ

|
Google Oneindia Kannada News

ವಾಷಿಂಗ್ಟನ್, ಮೇ 7: ಭಾರತೀಯ ಮೂಲದ ರಾಜಾ ಚಾರಿ (Raja Chari) ಆರು ತಿಂಗಳು ಯಶಸ್ವಿಯಾಗಿ ಗಗನ ಪ್ರಯಾಣ ಮಾಡಿ ವಾಪಸ್ಸಾಗಿದ್ದಾರೆ. ಎಲಾನ್ ಮಸ್ಕ್ ಮಾಲಿಕತ್ವದ ಸ್ಪೇಸ್‌ಎಕ್ಸ್ (SpaceX) ಕಂಪನಿಯ ಗಗನನೌಕೆಯಲ್ಲಿ ಕೂತು ಬಾಹ್ಯಾಕಾಶ ನಿಲ್ದಾಣಕ್ಕೆ ಹೋಗಿ ಆರು ತಿಂಗಳಿದ್ದು ಬಳಿಕ ವಾಪಸ್ ಬಂದಿದ್ದಾರೆ. ಇವರ ಜೊತೆ ಇನ್ನೂ ಮೂವರೂ ಪ್ರಯಾಣಿಸಿ ಬಂದಿದ್ದಾರೆ.

ರಾಜಾ ಚಾರಿ, ಕೇಯ್ಲಾ ಬಾರಾನ್, ಟಾಮ್ ಮಾರ್ಶ್‌ಬರ್ನ್ ಮತ್ತು ಮಥಿಯಾಸ್ ಮೌರರ್ ಈ ನಾಲ್ವರು ಗಗನಯಾತ್ರಿಗಳು ನಾಸಾ ಮತ್ತು ಸ್ಪೇಸ್‌ಎಕ್ಸ್ ಜಂಟಿ ಪ್ರಯೋಗದಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (International Space Station) ಹೋಗಿ ಬಂದಿದ್ದಾರೆ. ಇವರ ಪೈಕಿ ಮಥಿಯಾಸ್ ಮೌರರ್ ಯೂರೋಪಿಯನ್ ಸ್ಪೇಸ್ ಏಜೆನ್ಸಿಯಿಂದ ಬಂದವರಾದರೆ, ಇನ್ನುಳಿದವರು ನಾಸಾದಿಂದ ಆಯ್ಕೆಯಾದವರು. ಇಂದು ಈ ನಾಲ್ವರಿದ್ದ ಗಗನನೌಕೆಯು ಅಮೆರಿಕದ ಫ್ಲೋರಿಡಾ ರಾಜ್ಯದ ಆಚೆ ಇರುವ ಮೆಕ್ಸಿಕೋ ಕೊಲ್ಲಿ ಪ್ರದೇಶದಲ್ಲಿ ಪ್ಯಾರಚ್ಯೂಟ್ ಸಹಾಯದಿಂದ ಧರೆಗಿರಿಳಿದಿದೆ.

ಇಸ್ರೋದಿಂದ ಶುಕ್ರಗ್ರಹಕ್ಕೆ ನೌಕೆ; 2024 ಡಿಸೆಂಬರ್ ದಿನ ಯಾಕೆ? ಇಸ್ರೋದಿಂದ ಶುಕ್ರಗ್ರಹಕ್ಕೆ ನೌಕೆ; 2024 ಡಿಸೆಂಬರ್ ದಿನ ಯಾಕೆ?

ಇದು ನಾಸಾದಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕಳುಹಿಸಲಾದ ಮೂರನೇ ವಾಣಿಜ್ಯಾತ್ಮಕ ಗಗನಯಾನ ಯೋಜನೆಯಾಗಿದೆ. ನವೆಂಬರ್ 10ರಂದು ಫ್ಲೋರಿಡಾದ ಕೆನಡಿ ಸ್ಪೆಸ್ ಸೆಂಟರ್‌ನಲ್ಲಿ ಸ್ಪೇಸ್‌ಎಕ್ಸ್ ನಿರ್ಮಿತ ಫಾಲ್ಕಾನ್-9 ರಾಕೆಟ್ ಮೂಲಕ ಮಿಷನ್ ಉಡಾವಣೆ ಆಗಿದೆ. 24 ಗಂಟೆ ಬಳಿಕ ಗಗನಯಾತ್ರಿಗಳಿದ್ದ ಹಾರ್ಮೋನಿ ಮಾಡ್ಯುಲ್ ಅನ್ನು ಬಾಹ್ಯಾಕಾಶ ನಿಲ್ದಾಣಕ್ಕೆ ಸೇರಿಸಲಾಯಿತು. ಈ ಮೂರನೇ ಮಿಷನ್‌ನಲ್ಲಿ ರಾಜಾಚಾರಿ ಸೇರಿದಂತೆ ನಾಲ್ವರು ಗಗನಯಾತ್ರಿಗಳು ಐಎಸ್‌ಎಸ್‌ನಲ್ಲಿ 177 ದಿನಗಳ ಕಾಲ ಇದ್ದು ಬಂದಿದ್ದಾರೆ.

Indian Origin Astronaut Raja Chari Returns After 6 Months Successful Mission

ಏನಿದು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ?:
ಇಂಟರ್ನ್ಯಾಷನಲ್ ಸ್ಪೇಸ್ ಸ್ಟೇಷನ್ ಎಂಬದು ಅಮೆರಿಕ, ರಷ್ಯಾ, ಜಪಾನ್, ಯೂರೋಪ್ ಮತ್ತು ಕೆನಡಾದ ಬಾಹ್ಯಾಕಾಶ ಸಂಸ್ಥೆಗಳು ಜಂಟಿಯಾಗಿ ಭೂಮಿಯ ಆಚೆ ನಿರ್ಮಿಸಿರುವ ಕೇಂದ್ರವಾಗಿದೆ. ಇದು ಭೂಮಿಗೆ ಸಮೀಪದಲ್ಲೇ ಒಂದು ಕಕ್ಷೆಯಲ್ಲಿದೆ. ಐಎಸ್‌ಎಸ್‌ಗೆ ಮುನ್ನ ಕೆಲವಾರು ಬಾಹ್ಯಾಕಾಶ ಕೇಂದ್ರಗಳು ಇವೆಯಾದರೂ ಐಎಸ್‌ಎಸ್ ಭೂಮಿಯ ಕೆಳ ಕಕ್ಷೆಯಲ್ಲಿರುವ ಅತಿದೊಡ್ಡ ಉಪಗ್ರಹ ರೀತಿಯ ವಸ್ತು ಇದಾಗಿದೆ. ಇದು ಭೂಮಿಯಿಂದ 400 ಕಿಮೀ ಸರಾಸರಿ ಎತ್ತರದಲ್ಲಿನ ಕಕ್ಷೆಯಲ್ಲಿ ನಿಯೋಜಿತವಾಗಿದೆ. ಭೂಮಿಯಿಂದ ಇದು ಬರಿಗಣ್ಣಿಗೂ ಕಾಣುತ್ತದೆ ಎಂದು ಹೇಳಲಾಗುತ್ತದೆ.

ಬಾಹ್ಯಾಕಾಶಕ್ಕೆ ಹಾರಿದ ರಷ್ಯಾದ ರಾಕೆಟ್ ಮೇಲೆಯೂ Z ಅಕ್ಷರ!ಬಾಹ್ಯಾಕಾಶಕ್ಕೆ ಹಾರಿದ ರಷ್ಯಾದ ರಾಕೆಟ್ ಮೇಲೆಯೂ Z ಅಕ್ಷರ!

Indian Origin Astronaut Raja Chari Returns After 6 Months Successful Mission

ಕೇವಲ 93 ಗಂಟೆಯಲ್ಲಿ ಇದು ಭೂಮಿಯನ್ನು ಸುತ್ತು ಹಾಕುತ್ತದೆ. ಅಂದರೆ ದಿನಕ್ಕೆ ಇದು 15.5 ಬಾರಿ ಭೂಮಿಯ ಪ್ರದಕ್ಷಿಣೆ ಹಾಕುತ್ತದೆ. ಐಎಸ್‌ಎಸ್ ಬಾಹ್ಯಾಕಾಶ ಕೇಂದ್ರವನ್ನು ಹಲವು ವೈಜ್ಞಾನಿಕ ಪ್ರಯೋಗಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಚಂದ್ರ, ಮಂಗಳ ಮೊದಲಾದ ದೂರ ದೂರದ ಗ್ರಹಗಳಿಗೆ ಹೋಗಲು ಬೇಕಾದ ಗಗನಹೌಕೆ ವ್ಯವಸ್ಥೆಯನ್ನು ಪರೀಕ್ಷಿಸಲು ಮತ್ತು ಅಭಿವೃದ್ಧಿ ಪಡಿಸಲು ಐಎಸ್‌ಎಸ್ ಬಹಳ ಉಪಯುಕ್ತವೆನಿಸಿದೆ. ಹೀಗಾಗಿ, ಐಎಸ್‌ಎಸ್ ಅತಿ ಹೆಚ್ಚು ಬಳಸಲಾಗುವ ಬಾಹ್ಯಾಕಾಶ ಕೇಂದ್ರವಾಗಿದೆ.

Indian Origin Astronaut Raja Chari Returns After 6 Months Successful Mission

577 ಕೋಟಿ ಕಿಮೀ ಪ್ರಯಾಣಿಸಿದ ಗಗನಯಾತ್ರಿಗಳು:
ರಾಜ ಚಾರಿ ಸೇರಿದಂತೆ ಮೂರನೇ ನಾಸಾ ಮಿಷನ್‌ನಲ್ಲಿದ್ದ ನಾಲ್ವರು ಗಗನಯಾತ್ರಿಗಳು ಐಎಸ್‌ಎಸ್‌ನಲ್ಲಿ ಇದ್ದದ್ದು 175 ದಿನ. ಅಲ್ಲಿಗೆ ತಲುಪಲು ಒಂದು ದಿನ, ಅಲ್ಲಿಂದ ವಾಪಸ್ ಬರಲು ಒಂದು, ಹೀಗೆ ಒಟ್ಟು 177 ದಿನ ಅವರ ಪ್ರಯಾಣ ಇತ್ತು. ಈ ಟೂರ್‌ನಲ್ಲಿ ಅವರು ಸುಮಾರು 577 ಕೋಟಿ ಕಿಮೀ ಪ್ರಯಾಣ ಮಾಡಿದ್ದಾರೆ. ಸ್ಪೇಸ್ ಸ್ಟೇಷನ್ ಜೊತೆ ಇವರು 2832 ಬಾರಿ ಭೂಮಿಯನ್ನ ಪ್ರದಕ್ಷಿಣೆ ಮಾಡಿದ್ದಾರೆ.

ಇವರ ತಂಡ ಭೂಮಿಗೆ ಇಳಿಯುವ ಸ್ವಲ್ಪ ದಿನ ಮುಂಚೆ ನಾಸಾದ ನಾಲ್ಕನೆ ತಂಡ ಗಗನಯಾನ ಕೈಗೊಂಡು ಬಾಹ್ಯಾಕಾಶ ಕೇಂದ್ರದತ್ತ ಧಾವಿಸಿದೆ.

(ಒನ್ಇಂಡಿಯಾ ಸುದ್ದಿ)

English summary
Indian-American astronaut Raja Chari was among the four astronauts aboard a Space X spacecraft which on Friday safely splashed down in the Gulf of Mexico, off the coast of Florida, US after spending nearly six months at the International Space Station.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X