ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವಸಂಸ್ಥೆ ಮುಖ್ಯಸ್ಥರ ಹುದ್ದೆ: ಉಮೇದುವಾರಿಕೆ ಘೋಷಿಸಿದ ಭಾರತ ಮೂಲದ ಆಕಾಂಕ್ಷಾ

|
Google Oneindia Kannada News

ವಿಶ್ವಸಂಸ್ಥೆ, ಫೆಬ್ರವರಿ 13: ವಿಶ್ವಸಂಸ್ಥೆಯಲ್ಲಿನ ಭಾರತ ಮೂಲದ ಉದ್ಯೋಗಿಯೊಬ್ಬರು ಮುಂಬರುವ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ತಮ್ಮ ಉಮೇದುವಾರಿಕೆ ಪ್ರಕಟಿಸಿದ್ದಾರೆ. ಹಾಲಿ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಅವರ ಅಧಿಕಾರಾವಧಿ 2022ರ ಜನವರಿಯಲ್ಲಿ ಅಂತ್ಯಗೊಳ್ಳಲಿದ್ದು, ಗುಎರಸ್ ಅವರು ಎರಡನೆಯ ಬಾರಿ ಐದು ವರ್ಷಗಳ ಅವಧಿಗೆ ಆಯ್ಕೆಯಾಗುವ ಬಯಕೆ ಹೊಂದಿದ್ದಾರೆ. ಈಗ ಗುಟೆರಸ್ ಅವರಿಗೆ ಮೊದಲ ಅಭ್ಯರ್ಥಿಯೊಬ್ಬರು ಸವಾಲೆಸೆಯುವ ಸೂಚನೆ ನೀಡಿದ್ದಾರೆ.

34 ವರ್ಷದ ಅರೋರಾ ಅಕಾಂಕ್ಷಾ ಅವರು ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮಗಳ (ಯುಎನ್‌ಡಿಪಿ) ಲೆಕ್ಕಪರಿಶೋಧನೆಯ ಸಂಯೋಜಕರಾಗಿ ಕೆಲಸ ಮಾಡುತ್ತಿದ್ದಾರೆ. ಮುಂಬರುವ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಹುದ್ದೆ ಚುನಾವಣೆಯಲ್ಲಿ ತಾವು ಸ್ಪರ್ಧಿಸಲಿರುವುದಾಗಿ ತಿಳಿಸಿರುವ ಆಕಾಂಕ್ಷಾ, #AroraForSG ಎಂಬ ಅಭಿಯಾನ ಆರಂಭಿಸಿದ್ದಾರೆ.

'ನನ್ನ ಸ್ಥಾನದಲ್ಲಿರುವ ಜನರು ಅಧಿಕಾರದಲ್ಲಿ ಇರುವವರ ವಿರುದ್ಧ ನಿಲ್ಲುವಂತಿಲ್ಲ. ನಾವು ನಮ್ಮ ಸರದಿ ಬರುವವರೆಗೂ ಕಾಯಬೇಕು. ಕೆಲಸ ಮಾಡಬೇಕು, ನಮ್ಮ ತಲೆ ಬಗ್ಗಿಸಿಕೊಂಡು ಜಗತ್ತು ಹೇಗೆ ಇದೆಯೋ ಹಾಗೆ ಒಪ್ಪಿಕೊಳ್ಳಬೇಕು' ಎಂದು ಆನ್‌ಲೈನ್‌ನಲ್ಲಿ ಪ್ರಕಟಿಸಿರುವ ಎರಡೂವರೆ ನಿಮಿಷಗಳ ವಿಡಿಯೋದಲ್ಲಿ ಆಕಾಂಕ್ಷಾ ಹೇಳಿದ್ದಾರೆ.

'75 ವರ್ಷಗಳಲ್ಲಿ ವಿಶ್ವಸಂಸ್ಥೆಯು ಜಗತ್ತಿಗೆ ನೀಡಿದ ಭರವಸೆಗಳನ್ನು ಈಡೇರಿಸಿಲ್ಲ. ನಿರಾಶ್ರಿತರಿಗೆ ರಕ್ಷಣೆ ಸಿಕ್ಕಿಲ್ಲ, ಮಾನವೀಯತೆಯ ನೆರವು ತೀರಾ ಕಡಿಮೆ. ತಂತ್ರಜ್ಞಾನ ಮತ್ತು ಆವಿಷ್ಕಾರಗಳು ಹಿನ್ನಡೆ ಅನುಭವಿಸುತ್ತಿವೆ. ಪ್ರಗತಿಯತ್ತ ಕೊಂಡೊಯ್ಯುವ ವಿಶ್ವಸಂಸ್ಥೆ ನಮಗೆ ಬೇಕಿದೆ' ಎಂದಿದ್ದಾರೆ.

 Indian Origin Arora Akanksha Announces Her Candidacy For United Nations Chief

'ಈ ಕಾರಣದಿಂದ ನಾನು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದೇನೆ. ನಾನು ಕೇವಲ ಪ್ರೇಕ್ಷಕಿಯಾಗಿರಲು ನಿರಾಕರಿಸಿದ್ದೇನೆ. ವಿಶ್ವಸಂಸ್ಥೆ ಮಾಡಬಲ್ಲ ಉತ್ತಮ ಕೆಲಸ ಇದು ಎಂಬುದನ್ನು ನಾನು ಒಪ್ಪುವುದಿಲ್ಲ' ಎಂದು ತಿಳಿಸಿದ್ದಾರೆ.

ಆಂಟೋನಿಯೊ ಗುಟೆರಸ್ ಅವರ ಅವಧಿ ಡಿಸೆಂಬರ್ 31ಕ್ಕೆ ಅಂತ್ಯಗೊಳ್ಳಲಿದೆ. ನಂತರದ ಪ್ರಧಾನ ಕಾರ್ಯದರ್ಶಿ ಅವಧಿ ಜನವರಿ 1, 2022ರಲ್ಲಿ ಆರಂಭವಾಗಲಿದೆ. ತಾವು ಮತ್ತೊಂದು ಅವಧಿಗೆ ಮುಂದುವರಿಯಲು ಬಯಸಿರುವುದಾಗಿ ಗುಟೆರಸ್ ಕಳೆದ ತಿಂಗಳು ತಿಳಿಸಿದ್ದರು.

English summary
Indian origin Arora Akanksha has announced her candidacy for next Secretary-General post of United Nations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X