ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೋರ್ಚುಗಲ್ ಪ್ರಧಾನಿಯಾದ ಗೋವಾ ಮೂಲದ ಕೋಸ್ಟಾ

By Mahesh
|
Google Oneindia Kannada News

ಲಿಸ್ಬನ್, ನ.26: ಗೋವಾ ಮೂಲದ ಅಂಟೋನಿಯೊ ಕೋಸ್ಟಾ ಅವರು ಪೋರ್ಚುಗಲ್‌ನ ಹೊಸ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಪೋರ್ಚುಗಲ್ ರಾಷ್ಟ್ರಾಧ್ಯಕ್ಷ ಅನಿಬಲ್ ಕವಾಕೊ ಸಿಲ್ವ ಅವರು ಕೋಸ್ಟಾ ಅವರನ್ನು ಪ್ರಧಾನ ಮಂತ್ರಿಯಾಗಿ ನೇಮಕ ಮಾಡಿದ್ದಾರೆ.

ಫಿಜಿ, ನ್ಯೂಜಿಲ್ಯಾಂಡ್, ಗಯಾನ, ಮಾರಿಷಸ್, ಮಲೇಷಿಯಾ, ಸಿಂಗಪುರ, ದಕ್ಷಿಣ ಆಫ್ರಿಕಾ, ಬ್ರಿಟನ್ ಸೇರಿದಂತೆ ಜಗತ್ತಿನ ಹಲವೆಡೆಗಳಲ್ಲಿ ಉನ್ನತ ರಾಜಕೀಯ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿರುವ ಭಾರತೀಯ ಮೂಲದವರೆಂಬ ಹೆಗ್ಗಳಿಕೆ ಪಾತ್ರರಾಗಿರುವ ಭಾರತೀಯ ಮೂಲದವರ ಪಟ್ಟಿಗೆ ಲಿಸ್ಬನ್‌ನ ಮಾಜಿ ಮೇಯರ್(2007 ರಿಂದ 2015 ರ ತನಕ) 54 ವರ್ಷ ವಯಸ್ಸಿನ ವಕೀಲ ಕೋಸ್ಟಾ ಅವರು ಸೇರ್ಪಡೆಯಾಗಿದ್ದಾರೆ.[ಉಡುಪಿ ಮುದ್ದಣ ಮಂಟಪದಲ್ಲಿ ಕೊಂಕಣಿ ಸಾಹಿತ್ಯ ಸಮಾವೇಶ]

ಪೋರ್ಚುಗಲ್‌ನಲ್ಲಿ ಅಕ್ಟೋಬರ್ 4 ರಂದು ಚುನಾವಣೆ ನಡೆದಿತ್ತು. ಕೋಸ್ಟಾರ ಸೋಶಿಯಲಿಸ್ಟ್ ಪಾರ್ಟಿ(ಎಸ್‌ಪಿ)ಯು ಚುನಾವಣೆಯಲ್ಲಿ ಬಹುಮತ ಪಡೆಯುವಲ್ಲಿ ವಿಫಲವಾಗಿತ್ತು. ಅದರೆ, ಎಡಪಕ್ಷಗಳ ಮೈತ್ರಿಯೊಂದಿಗೆ 230 ಸದಸ್ಯ ಬಲದ ಸಂಸತ್‌ನಲ್ಲಿ ಸರಳ ಬಹುಮತಕ್ಕಿಂತಲೂ ಹೆಚ್ಚಿನ ಸ್ಥಾನಗಳನ್ನು ಪಡೆಯುವಂತಾಗಿತ್ತು. ಅವರ ಪಕ್ಷವು 86 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು.

Indian-origin Antonio Costa is new Portugal Prime Minister

ಗೋವಾ ಮೂಲದಿಂದ ಲಿಸ್ಬನ್‌ಗೆ ವಲಸೆ ಬಂದಿರುವ ಕುಟುಂಬದಲ್ಲಿ ಕೋಸ್ಟಾ ಅವರು 1961ರಲ್ಲಿ ಜನಿಸಿದ್ದಾರೆ. ಬಾಬುಶ್(ಕೊಂಕಣಿಯಲ್ಲಿ ಹುಡುಗ ಎಂದರ್ಥ) ಎಂದು ಪ್ರೀತಿಪಾತ್ರರಿಂದ ಕರೆಸಿಕೊಳ್ಳುವ ಕೋಸ್ಟಾ ಅವರಿಗೆ ಮಾರ್ಗೋವಾದಲಿ ಅನೇಕ ಆಪ್ತಬಂಧುಗಳಿದ್ದಾರೆ. ಕೋಸ್ಟಾ ಅವರು ಪ್ರಧಾನಿಯಾದ ಸುದ್ದಿ ತಿಳಿದು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ.

ರವೀಂದ್ರನಾಥ್ ಠಾಗೂರರ ಬಗ್ಗೆ ಅನೇಕ ಲೇಖನಗಳನ್ನು ರಚಿಸಿರುವ ಖ್ಯಾತ ಕಾದಂಬರಿಕಾರ ಓರ್ಲೆಂಡೊ ಡಿ ಕೋಸ್ಟಾರ ಪುತ್ರರಾಗಿದ್ದಾರೆ. ಪೋರ್ಚುಗೀಸ್ ಆಳ್ವಿಕೆಯ ವೇಳೆ ಕೋಸ್ಟಾರ ತಂದೆ ಗೋವಾದಲ್ಲಿ ನೆಲೆಸಿದ್ದರು. ಕೋಸ್ಟಾ ಅವರ ಅಜ್ಜ ಲೂಯಿಸ್ ಅಲ್ಫಾನ್ಸೋ ಮಾರಿಯಾ ಡಾ ಕೋಸ್ಟಾ ಅವರು ಮೂಲತಃ ಹಿಂದೂ ಧರ್ಮದವರಾಗಿದ್ದರು. ನಂತರ ಪೋರ್ಚುಗೀಸ್ ಆಡಳಿತ ಅವಧಿಯಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದರು.

16ನೆ ಶತಮಾನದ ಆದಿಭಾಗದಿಂದ 1961ರ ಡಿಸೆಂಬರ್ 19ರವರೆಗೂ ಭಾರತದ ವಿವಿಧ ಭಾಗಗಳಲ್ಲಿ ವಸಾಹತುಗಳನ್ನು ಹೊಂದಿದ್ದ ಮೊದಲ ಪಾಶ್ಚಿಮಾತ್ಯ ರಾಷ್ಟ್ರ ಪೋರ್ಚುಗಲ್ ಆಗಿತ್ತು. 1987ರಲ್ಲಿ ಶಿಕ್ಷಕಿ ಮರಿಯಾ ಗೋನ್ಜಾಲ್ವೆಸ್ ಅವರನ್ನು ಮದುವೆಯಾದ ಕೋಸ್ಟಾ ಅವರಿಗೆ ಓರ್ವ ಪುತ್ರ ಹಾಗೂ ಪುತ್ರಿ ಇದ್ದಾರೆ.

English summary
Portugal President Anibal Cavaco Silva has appointed Goa-origin Antonio Costa as the new prime minister after the government formed following the October 4 election lasted barely 11 days – the shortest in the country’s history.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X