• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತ ಮೂಲದ ಅನಿತಾ ಆನಂದ್ ಕೆನಡಾ ರಕ್ಷಣಾ ಸಚಿವರಾಗಿ ಆಯ್ಕೆ

|
Google Oneindia Kannada News

ಟೊರಾಂಟೊ, ಅಕ್ಟೋಬರ್ 27: ಭಾರತ ಮೂಲದ ಅನಿತಾ ಆನಂದ್ ಅವರು ಕೆನಡಾದ ರಕ್ಷಣಾ ಸಚಿವರಾಗಿ ಆಯ್ಕೆಯಾಗಿದ್ದಾರೆ.

ರಕ್ಷಣಾ ಸಚಿವೆಯಾಗಿರುವ 54 ವರ್ಷದ ಅನಿತಾಗೆ ಇಲಾಖೆಯಲ್ಲಿ ಹಲವಾರು ತೊಡಕುಗಳು, ಸಮಸ್ಯೆಗಳಿದ್ದು, ಇದನ್ನೆಲ್ಲಾ ಹೇಗೆ ನಿಭಾಯಿಸಿಕೊಂಡು ಹೋಗುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಒಂಟಾರಿಯೋ ಪ್ರಾಂತ್ಯವನ್ನು ಅನಿತಾ ಆನಂದ್ ಪ್ರತಿನಿಧಿಸುತ್ತಿದ್ದಾರೆ, ಪ್ರಧಾನಿ ಜಸ್ಟಿನ್ ಟ್ರುಡೋ ಸಂಪುಟ ಪುನಾರಚನೆಯಾದ ಕಾರಣ ಅನಿತಾರನ್ನು ರಕ್ಷಣಾ ಸಚಿವ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ.

ಈ ಮೂಲಕ ದೇಶದ ಮೊದಲ ರಕ್ಷಣಾ ಸಚಿವೆ ಎಂಬ ಹೆಗ್ಗಳಿಕೆಗೆ ಅನಿತಾ ಪಾತ್ರರಾಗಿದ್ದಾರೆ. ಕೊರೊನಾ ಸಂದರ್ಭದಲ್ಲಿ ಅನಿತಾ ಆನಂದ್ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿದೆ. ಶೀಘ್ರವಾಗಿ ಕೋವಿಡ್ 19 ಲಸಿಕೆಗಳು ದೇಶಕ್ಕೆ ಲಭ್ಯವಾಗುವಂತೆ ಮಾಡುವುದರಲ್ಲಿ ಅವರ ಪಾತ್ರ ಪ್ರಮುಖವಾಗಿತ್ತು.

ಕೊರೊನಾ ಜಾಗೃತಿ ಅಭಿಯಾನದ ಉಸ್ತುವಾರಿಯನ್ನು ಅವರು ನೋಡಿಕೊಂಡಿದ್ದರು ಎಂದು ವರದಿ ಮಾಡಲಾಗಿದೆ. ರಕ್ಷಣಾ ಇಲಾಖೆಯನ್ನು ಮುನ್ನಡೆಸಲು ಅವರು ಸಮರ್ಥರಾಗಿದ್ದಾರೆ ಎಂದು ವರದಿ ಮಾಡಲಾಗಿದೆ.

ಅನಿತಾ ಆನಂದ್ ಅವರು ದೀರ್ಘಾವಧಿ ರಕ್ಷಣಾ ಸಚಿವರಾಗಿದ್ದ ಭಾರತೀಯ ಮೂಲದ ಹರ್ಜಿತ್ ಸಜ್ಜನ್ ಅವರ ಸ್ಥಾನವನ್ನು ಅಲಂಕರಿಸಲಿದ್ದಾರೆ. ಸಜ್ಜನ್ ಅವರನ್ನು ಅಂತಾರಾಷ್ಟ್ರೀಯ ಅಭಿವೃದ್ಧಿ ಏಜೆನ್ಸಿಗೆ ನೇಮಿಸಲಾಗಿದೆ. ಹೊಸ ಕ್ಯಾಬಿನ್ ಸಮತೋಲವನ್ನು ಕಾಯ್ದುಕೊಳ್ಳುತ್ತದೆ, 38 ಸದಸ್ಯರನ್ನು ಹೊಂದಿದೆ .

English summary
Reacting to former chief minister Lalu Prasad's 'visarjan' comment on Nitish Kumar and NDA govt in the state, chief minister Nitish Kumar said that the RJD supremo could not do anything else apart from getting him shot.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X