ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾರಿಷಸ್ ಪ್ರಧಾನಿಯಾದ ಭಾರತ ಮೂಲದ ಜಗನ್ನಾಥ್

By Mahesh
|
Google Oneindia Kannada News

ಪೋರ್ಟ್ ಲೂಯಿಸ್, ಡಿ. 16: ಮಾಜಿ ಅಧ್ಯಕ್ಷ ಹಾಗೂ ಅಲಯನ್ಸ್ ಲೆಪೆಪ್ ಪಕ್ಷದ ನಾಯಕ ಭಾರತ ಮೂಲದ ಅನಿರುದ್ಧ ಜಗನ್ನಾಥ್‌ರನ್ನು ಅಧಿಕೃತವಾಗಿ ಮಾರಿಷಸ್ ದ್ವೀಪ ರಾಷ್ಟ್ರದ ನೂತನ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.

ಚುನಾವಣೆಯಲ್ಲಿ ಪರಾಭವ ಹೊಂದಿದ ಮಾಜಿ ಪ್ರಧಾನಿ ನವೀನ್ ಚಂದ್ರ ರಾಮ್‌ಗೂಲಮ್ ರಾಜೀನಾಮೆ ನೀಡಿದ ಬಳಿಕ ಈ ಅನಿರುಧ್ ಜಗನ್ನಥ್(Anerood Jugnauth) ನೇಮಕ ನಡೆದಿದೆ.

Anerood Jugnauth Named Mauritius Prime Minister

ಇತ್ತೀಚೆಗೆ ನಡೆದ ಚುನಾವಣೆಯ ಫಲಿತಾಂಶದ ಮಾಹಿತಿಯಂತೆ ಒಟ್ಟು 62 ಸ್ಥಾನಗಳ ಸಂಸತ್ತಿನಲ್ಲಿ ಲೆಪೆಪ್ ಪಕ್ಷ 29 ಸ್ಥಾನಗಳನ್ನು ಗೆದ್ದರೆ, ರಾಮ್‌ಗೂಲಮ್‌ರ ಲೇಬರ್ ಪಕ್ಷ ಕೇವಲ 10 ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು.

84 ವರ್ಷದ ಜಗನ್ನಾಥ್ 2003ರಿಂದ 2012ರವರೆಗೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಅದಕ್ಕೂ ಮೊದಲು ಅವರು 1982ರಿಂದ 1995 ಹಾಗೂ ಮತ್ತೊಮ್ಮೆ 2000ದಿಂದ 2003ರವರೆಗೆ ಮಾರಿಷಸ್ನ ಪ್ರಧಾನಿಯಾಗಿದ್ದರು. ಮಾರಿಷಸ್‌ನ ಒಟ್ಟು ಜನಸಂಖ್ಯೆ 13 ಲಕ್ಷ ಆಗಿದ್ದು, 68 ಶೇ. ಭಾರತೀಯ ಮೂಲದವರಾಗಿದ್ದಾರೆ.

ಕಬ್ಬಿನ ಗದ್ದೆಯಲ್ಲಿ ಕೆಲಸ ಮಾಡಲು ಬಂದ ಭಾರತೀಯ ಮೂಲದವರು ಇಂದು ಇಲ್ಲಿ ಕಬ್ಬು ಬೆಳೆದು ಶ್ರೀಮಂತರಾಗಿದ್ದಾರೆ.ಕಬ್ಬುಬೆಳೆ ಈ ದೇಶದ ಪ್ರಮುಖ ಉತ್ಪನ್ನವಾಗಿದೆ.

English summary
Former President and leader of the Alliance Lepep party, Anerood Jugnauth, who is of Indian origin, has been officially appointed Mauritius' new Prime Minister.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X