ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಷ್ಯಾದ ಕಚ್ಚಾತೈಲದಿಂದ ಭಾರತದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಇಳಿಕೆ!?

|
Google Oneindia Kannada News

ನವದೆಹಲಿ, ಮಾರ್ಚ್ 16: ಉಕ್ರೇನ್ ಮೇಲೆ ಆಕ್ರಮಣ ನಡೆಸಿರುವ ರಷ್ಯಾದ ವಿರುದ್ಧ ಯುರೋಪಿಯನ್ ರಾಷ್ಟ್ರಗಳು ನಿರ್ಬಂಧಗಳನ್ನು ಹೇರಿವೆ. ಯುಎಸ್ ಸೇರಿದಂತೆ ಹಲವು ರಾಷ್ಟ್ರಗಳು ರಷ್ಯಾದಿಂದ ಇಂಧನ ಖರೀದಿಸುವುದಿಲ್ಲ ಎಂದು ಘೋಷಿಸಿವೆ. ಇದರಿಂದ ರಷ್ಯಾದ ಕಚ್ಚಾತೈಲವು ಭಾರತಕ್ಕೆ ವಿನಾಯಿತಿ ದರದಲ್ಲಿ ಸಿಗುತ್ತಿದೆ.

ಭಾರತದ ಅತಿದೊಡ್ಡ ಇಂಧನ ಸಂಸ್ಕಕರಾ ಸಂಸ್ಥೆ ಆಗಿರುವ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಈಗಾಗಲೇ ರಷ್ಯಾದ ಕಚ್ಚಾತೈಲವನ್ನು ಖರೀದಿಸಿದೆ. 3 ಮಿಲಿಯನ್ ಬ್ಯಾರೆಲ್ ಕಚ್ಚಾತೈಲವನ್ನು ಖರೀದಿಸಿದ್ದು, ಮೇ ತಿಂಗಳ ಮೊದಲ ದಿನವೇ ಕಚ್ಚಾತೈಲವು ಭಾರತಕ್ಕೆ ತಲುಪಲಿದೆ ಎಂದು ತಿಳಿದು ಬಂದಿದೆ.

ಭಾರತದಲ್ಲಿ ಬೆಲೆ ಏರಿಕೆಗೆ ರಷ್ಯಾ-ಉಕ್ರೇನ್ ಯುದ್ಧ ಕಾರಣವಾಯಿತೇ?: ಅಸಲಿ ಕಥೆಯೇನು?ಭಾರತದಲ್ಲಿ ಬೆಲೆ ಏರಿಕೆಗೆ ರಷ್ಯಾ-ಉಕ್ರೇನ್ ಯುದ್ಧ ಕಾರಣವಾಯಿತೇ?: ಅಸಲಿ ಕಥೆಯೇನು?

ರಷ್ಯಾದ ವಿರುದ್ಧದ ಪಾಶ್ಚಿಮಾತ್ಯ ನಿರ್ಬಂಧಗಳು ಅನೇಕ ಕಂಪನಿಗಳು ಮತ್ತು ದೇಶಗಳು ಅದರ ತೈಲವನ್ನು ಖರೀದಿಸದಂತೆ ಮಾಡಿದೆ. ಈ ಹಿನ್ನೆಲೆಯಲ್ಲಿ ರಷ್ಯಾ ತನ್ನ ಕಚ್ಚಾ ತೈಲವನ್ನು ಮಾರಾಟ ಮಾಡುವುದಕ್ಕಾಗಿಯೇ ದಾಖಲೆ ಮಟ್ಟದಲ್ಲಿ ವಿನಾಯಿತಿಯನ್ನು ಘೋಷಿಸಿದೆ. ಭಾರತಕ್ಕೆ ರಷ್ಯಾದ ಕಚ್ಚಾತೈಲ ಎಷ್ಟು ರಿಯಾಯತಿಯಲ್ಲಿ ಸಿಗುತ್ತಿದೆ. ರಷ್ಯಾ ತೈಲ ಖರೀದಿ ಮಾಡುವುದರಿಂದ ದೇಶದಲ್ಲಿ ಪೆಟ್ರೋಲ್, ಡೀಸೆಲ್ ದರ ಇಳಿಕೆ ಆಗುತ್ತದೆಯೇ ಎಂಬುದರ ಕುರಿತು ಈ ವರದಿಯಲ್ಲಿ ತಿಳಿದುಕೊಳ್ಳಿ.

ಇಂಧನ ಖರೀದಿಯಲ್ಲಿ ಯಾವುದೇ ತೊಡಕು ಎದುರಾಗದಂತೆ ಎಚ್ಚರಿಕೆ

ಇಂಧನ ಖರೀದಿಯಲ್ಲಿ ಯಾವುದೇ ತೊಡಕು ಎದುರಾಗದಂತೆ ಎಚ್ಚರಿಕೆ

ಭಾರತದ ಅತಿದೊಡ್ಡ ಇಂಧನ ಸಂಸ್ಕರಣಾ ಸಂಸ್ಥೆ ಆಗಿರುವ ಇಂಡಿಯನ್ ಆಯಿಲ್ ಕಾರ್ಪೋರೇಷನ್, ಕಳೆದ ಫೆಬ್ರವರಿ ತಿಂಗಳಿನಲ್ಲಿಯೇ ರಷ್ಯಾದಿಂದ ಕಚ್ಚಾತೈಲವನ್ನು ಖರೀದಿಸಿದೆ. ಇಂಧನ ಖರೀದಿಯಲ್ಲಿ ಕಾನೂನು ಹಾಗೂ ನಿರ್ಬಂಧದ ಸಮಸ್ಯೆ ಇರುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲಾಗಿದೆ. ತದನಂತರ ಯಾವುದೇ ರೀತಿ ತೊಡಕು ಎದುರಾಗದಂತೆ ಹಡಗುಗಳಲ್ಲಿ ಇಂಧನ ಸರಬರಾಜು ಮಾಡಲಾಗುತ್ತಿದೆ. ಮೇ 1ರಂದು ರಷ್ಯಾದ ಕಚ್ಚಾತೈಲವು ಭಾರತಕ್ಕೆ ತಲುಪಲಿದೆ ಎಂದು ತಿಳಿದು ಬಂದಿದೆ.

ರಷ್ಯಾ-ಉಕ್ರೇನ್ ಸಂಘರ್ಷ: ಅತ್ಯಧಿಕ ಮಟ್ಟಕ್ಕೇರಿದ ಕಚ್ಚಾತೈಲ ಬೆಲೆರಷ್ಯಾ-ಉಕ್ರೇನ್ ಸಂಘರ್ಷ: ಅತ್ಯಧಿಕ ಮಟ್ಟಕ್ಕೇರಿದ ಕಚ್ಚಾತೈಲ ಬೆಲೆ

ಭಾರತವು ರಷ್ಯಾದಿಂದ ಆಮದು ಮಾಡಿಕೊಳ್ಳುವ ಕಚ್ಚಾತೈಲ

ಭಾರತವು ರಷ್ಯಾದಿಂದ ಆಮದು ಮಾಡಿಕೊಳ್ಳುವ ಕಚ್ಚಾತೈಲ

ಭಾರತದಲ್ಲಿ ಅಗತ್ಯವಿರುವ ಒಟ್ಟು ಕಚ್ಚಾತೈಲದ ಪೈಕಿ ಶೇ.80ರಷ್ಟು ಕಚ್ಚಾತೈಲವನ್ನು ಹೊರರಾಷ್ಟ್ರಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಆದರೆ ಇದರಲ್ಲಿ ರಷ್ಯಾದ ಪಾಲು ತೀರಾ ಕಡಿಮೆಯಾಗಿದೆ. ರಷ್ಯಾದಿಂದ ಭಾರತವು ಶೇ.2 ರಿಂದ ಶೇ.3ರಷ್ಟು ಕಚ್ಚಾತೈಲವನ್ನು ಮಾತ್ರ ಆಮದು ಮಾಡಿಕೊಳ್ಳುತ್ತದೆ. ಉಳಿದ ಭಾಗವನ್ನು ಅರಬ್ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಆದರೆ ಇತ್ತೀಚಿಗೆ ಅದು ಭಾರತಕ್ಕೆ ದುಬಾರಿ ಆಗುತ್ತಿದೆ. ಕಳೆದ ಒಂದು ವರ್ಷದಲ್ಲಿ ದೇಶದ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಶೇ.40ರಷ್ಟು ಏರಿಕೆ ಆಗಿದೆ. ಹೀಗಾಗಿ ಕಡಿಮೆ ದರದಲ್ಲಿ ಪೆಟ್ರೋಲ್-ಡೀಸೆಲ್ ಅನ್ನು ಪಡೆದುಕೊಳ್ಳುವುದಕ್ಕಾಗಿ ಭಾರತ ಎದುರು ನೋಡುತ್ತಿದೆ.

ರಷ್ಯಾದಿಂದ ಭಾರತಕ್ಕೆ ರಿಯಾಯಿತಿ ದರದಲ್ಲಿ ಕಚ್ಚಾತೈಲ

ರಷ್ಯಾದಿಂದ ಭಾರತಕ್ಕೆ ರಿಯಾಯಿತಿ ದರದಲ್ಲಿ ಕಚ್ಚಾತೈಲ

ಜಾಗತಿಕ ಮಟ್ಟದಲ್ಲಿ ನಿರ್ಬಂಧವನ್ನು ಎದುರಿಸುತ್ತಿರುವ ರಷ್ಯಾ, ಭಾರತಕ್ಕೆ ವಿನಾಯಿತಿ ದರದಲ್ಲಿ ಕಚ್ಚಾತೈಲವನ್ನು ಮಾರಾಟ ಮಾಡಲು ಮುಂದಾಗಿದೆ. ಇಂಡಿಯನ್ ಆಯಿಲ್ ಕಾರ್ಪೋರೇಷನ್ ಮೂಲಗಳ ಪ್ರಕಾರ, ರಷ್ಯಾದಿಂದ ಕಚ್ಚಾತೈಲವನ್ನು ಖರೀದಿಸುವುದು ಭಾರತಕ್ಕೆ ಪ್ರಯೋಜನಕಾರಿ ಆಗಿರುತ್ತದೆ. ಏಕೆಂದರೆ ಒಂದು ಬ್ಯಾರೆಲ್‌ಗೆ 20 ರಿಂದ 25 ಡಾಲರ್ ಹಣ ಉಳಿತಾಯವಾಗಲಿದೆ. ಒಂದು ಬ್ಯಾರೆಲ್‌ಗೆ 140 ಡಾಲರ್ ಇದ್ದರೆ, ಅದನ್ನು ಭಾರತಕ್ಕೆ ಕೇವಲ 115 ರಿಂದ 120 ಡಾಲರ್ ಮೊತ್ತಕ್ಕೆ ಸಿಗಲಿದೆ.

ಪೆಟ್ರೋಲ್, ಡೀಸೆಲ್ ಬೆಲೆ 15 ರಿಂದ 22 ರು ಏರಿಕೆ ಸಾಧ್ಯತೆ!ಪೆಟ್ರೋಲ್, ಡೀಸೆಲ್ ಬೆಲೆ 15 ರಿಂದ 22 ರು ಏರಿಕೆ ಸಾಧ್ಯತೆ!

ಇತರೆ ರಾಷ್ಟ್ರಗಳಿಂದ ಇಂಧನ ಆಮದು ಮಾಡಿಕೊಳ್ಳುವ ಐಓಸಿ

ಇತರೆ ರಾಷ್ಟ್ರಗಳಿಂದ ಇಂಧನ ಆಮದು ಮಾಡಿಕೊಳ್ಳುವ ಐಓಸಿ

ರಷ್ಯಾದಿಂದ 3 ಮಿಲಿಯನ್ ಬ್ಯಾರೆಲ್ ಕಚ್ಚಾತೈಲವನ್ನು ಖರೀದಿಸಿರುವ ಇಂಡಿಯನ್ ಆಯಿಲ್ ಕಾರ್ಪೋರೇಷನ್, ಇತರೆ ರಾಷ್ಟ್ರಗಳಿಂದಲೂ ಕಚ್ಚಾತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಅಬು ದುಬೈನಿಂದ 2 ಮಿಲಿಯನ್ ಬ್ಯಾರೆಲ್ ಮತ್ತು ನೈಜೀರಿಯಾದ ಅಕ್ಪೋ ಮತ್ತು ಫೋರ್ಕಾಡೋಸ್, ಮತ್ತು ಕ್ಯಾಮರೂನ್‌ನ ಕೋಲ್ ನಿಂದ ಒಂದೊಂದು ಮಿಲಿಯನ್ ಬ್ಯಾರೆಲ್ ಕಚ್ಚಾತೈಲವನ್ನು ಆಮದು ಮಾಡಿಕೊಳ್ಳಲಾಗುತ್ತಿದೆ.

ದೇಶದಲ್ಲಿ ಪೆಟ್ರೋಲ್-ಡೀಸೆಲ್ ದರ ಇಳಿಕೆ ಸಾಧ್ಯತೆ

ದೇಶದಲ್ಲಿ ಪೆಟ್ರೋಲ್-ಡೀಸೆಲ್ ದರ ಇಳಿಕೆ ಸಾಧ್ಯತೆ

ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧದಿಂದಾಗಿ ಜಾಗತಿಕ ಮಟ್ಟದಲ್ಲಿ ಕಚ್ಚಾತೈಲದ ಬೆಲೆಯು ಆಕಾಶಕ್ಕೆ ಏರುತ್ತದೆ ಎಂದು ಊಹಿಸಲಾಗಿತ್ತು. ಆದರೆ ಅದು ಭಾರತದ ಮಟ್ಟಿಗೆ ಸುಳ್ಳಾಗುವ ಲಕ್ಷಣಗಳು ಗೋಚರಿಸುತ್ತಿವೆ. ರಷ್ಯಾದಿಂದ ವಿನಾಯಿತಿ ದರದಲ್ಲಿ ಕಚ್ಚಾತೈಲ ಖರೀದಿಸುವುದರಿಂದ ಭಾರತದಲ್ಲಿ ಪೆಟ್ರೋಲ್-ಡೀಸೆಲ್ ದರ ಇಳಿಕೆಯಾಗುವ ಸಾಧ್ಯತೆಗಳು ಹೆಚ್ಚಾಗಿವೆ.

ದೇಶದಲ್ಲಿ ಪ್ರಸ್ತುತ ಪೆಟ್ರೋ ಮತ್ತು ಡೀಸೆಲ್ ದರ ಸ್ಥಿರವಾಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ 100.58 ರೂಪಾಯಿ ಆಗಿದ್ದರೆ, ಡೀಸೆಲ್ 85.01 ರೂಪಾಯಿ ಆಗಿದೆ. ಅದೇ ರೀತಿ ದೆಹಲಿಯಲ್ಲಿ ಪೆಟ್ರೋಲ್ 95.41 ಆಗಿದ್ದರೆ, ಡೀಸೆಲ್ 86.67 ರೂಪಾಯಿ ಆಗಿದೆ. ಮುಂಬೈನಲ್ಲಿ ಪೆಟ್ರೋಲ್ ದರ 109.98 ರೂಪಾಯಿ ಆಗಿದ್ದರೆ, ಡೀಸೆಲ್ ದರ 94.14 ರೂಪಾಯಿ ಆಗಿದೆ. ಚೆನ್ನೈನಲ್ಲಿ ಪೆಟ್ರೋಲ್ ದರ 101.40 ರೂಪಾಯಿ ಆಗಿದ್ದರೆ, ಡೀಸೆಲ್ ದರವು 91.43 ರೂಪಾಯಿಗೆ ಏರಿಕೆಯಾಗಿದೆ.

English summary
Indian Oil Corp buys 3 mln barrels Russian urals crude oil via tender; it Reach india on may 1st.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X